ಜಿ-ಮೇಲ್‌ ಸ್ಥಗಿತಗೊಳ್ಳಲಿದೆಯೇ? ಜಿ-ಮೇಲ್ ಬಗ್ಗೆ ನಿಮಗೆ ಗೊತ್ತಿರದ ಹಲವು ಕುತೂಹಲಕರ ವಿಶೇಷತೆಗಳು

Date:

Advertisements

ಇಂದಿನ ಆಧುನಿಕ ವಿದ್ಯುನ್ಮಾನ ಯುಗದಲ್ಲಿ ಪ್ರತಿಯೊಂದು ರೀತಿಯ ಸಂವಹನಕ್ಕೆ ಇಮೇಲ್‌ ಅಥವಾ ಮಿಂಚಂಚೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಮುಖ್ಯವಾಗಿದೆ. ಕಚೇರಿಯ ಅಧಿಕೃತ ವಿಷಯವಾಗಲಿ, ಸಾಮಾನ್ಯ ಮಾಹಿತಿಯಾಗಲಿ, ಕುಶಲೋಪರಿ, ಶೈಕ್ಷಣಿಕ ಮಾಹಿತಿಗಳನ್ನು ಚುಟುಕಾಗಿ ಒಳಗೊಂಡು ದೊಡ್ಡ ಮಟ್ಟದಲ್ಲಿಯೂ ಇಮೇಲ್ ಮೂಲಕ ಮಾಹಿತಿ ಸಂವಹನ ನಡೆಸಬಹುದು. ಅಲ್ಲದೆ ಅಧಿಕೃತ ಸಂವಹನಕ್ಕೆ ಇಮೇಲ್‌ ಅತೀ ಮುಖ್ಯವಾದುದು. ವಿಶ್ವದ ಹಲವು ದೇಶಗಳಲ್ಲಿ ಬಳಸುವ ಇಮೇಲ್‌ಗಳಲ್ಲಿ ಗೂಗಲ್‌ ಸಂಸ್ಥೆ ಒಡೆತನದ ಜಿಮೇಲ್‌ ಬಳಕೆದಾರರ ಅಕೌಂಟ್‌ಗಳ ಸಂಖ್ಯೆ ಸರಿ ಸುಮಾರು 200 ಕೋಟಿಯಷ್ಟಿದ್ದು, ಶೇಕಡಾವಾರು 80ರಷ್ಟು ಮಂದಿ ಅವಲಂಬಿತರಾಗಿದ್ದಾರೆ. ಇನ್ನುಳಿದ ಶೇ. 20 ರಲ್ಲಿ ಯಾಹೂ, ಔಟ್‌ಲುಕ್‌ ಮತ್ತಿತರ ಇಮೇಲ್‌ಗಳನ್ನು ಬಳಸುತ್ತಾರೆ.

ಹಲವು ವೈಶಿಷ್ಟತೆಗಳಿರುವ ಬಹು ಉಪಯುಕ್ತ ಜಿಮೇಲ್‌ನಲ್ಲಿ ವಿವಿಧ ರೀತಿಯ ಅನುಕೂಲಗಳಿವೆ. ಸಾಮಾನ್ಯ ಬಳಕೆದಾರರಿಗೆ ಜಿಮೇಲ್‌ನಲ್ಲಿರುವ ಹಲವು ವಿಶಿಷ್ಟತೆಗಳ ಬಗ್ಗೆ ತಿಳಿದಿಲ್ಲ. ದಿನನಿತ್ಯ ಬಳಸುವ ಬಳಕೆದಾರರು ಕೂಡ ಆಗಾಗ ಪರಿಚಯವಾಗುವ ಮುಖ್ಯವಾದ ವಿಶೇಷತೆಗಳ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಅಂತಹ ಕೆಲವೊಂದು ಪ್ರಮುಖ ಮಾಹಿತಿಗಳು ಇಂತಿವೆ.

ಜಿಮೇಲ್‌ನಲ್ಲಿ ತಪ್ಪಾಗಿ ಇಮೇಲ್ ಮಾಡಿದರೆ ರದ್ದುಗೊಳಿಸುವ ಆಯ್ಕೆ

Advertisements

ಜಿಮೇಲ್‌ನಲ್ಲಿ, ಬಳಕೆದಾರರು ಕೆಲವು ಬಾರಿ ಗಡಿಬಿಡಿಯಲ್ಲಿ ಅಥವಾ ಆಕಸ್ಮಿಕವಾಗಿ ತಪ್ಪಾಗಿ ಇಮೇಲ್‌ ಕಳುಹಿಸುತ್ತಾರೆ. ಆಗ ಹೇಗಾದರೂ ಸರಿ ತಪ್ಪಾಗಿ ಕಳುಹಿಸಿದ ಇಮೇಲ್‌ಅನ್ನು ಡಿಲೀಟ್ ಮಾಡಲು/ ರದ್ದುಪಡಿಸಲು ಚಡಪಡಿಸುತ್ತಾರೆ. ಆದರೆ ತಪ್ಪಾಗಿ ಕಳುಹಿಸಿದ ಜಿಮೇಲ್‌ ಅನ್ನು ಸ್ವೀಕರಿಸುವವರಿಗೆ ತಲುಪದಂತೆ ತಡೆಯಬಹುದಾಗಿದೆ.

ತಪ್ಪಾಗಿ ಕಳುಹಿಸಿದ ಜಿಮೇಲ್‌ಅನ್ನು ರದ್ದುಪಡಿಸಲು ಬಳಕೆದಾರರಿಗೆ 30 ಸೆಕೆಂಡ್‌ಗಳ ಕಾಲಾವಕಾಶ ಇರುತ್ತದೆ. ಅನ್‌ಡೂ (Undo Send) ಎಂಬ ಆಯ್ಕೆಯು ಎಲ್ಲ ಬಳಕೆದಾರರಿಗೆ ಪೂರ್ವನಿಯೋಜಿತವಾಗಿ ಲಭ್ಯವಿದೆ. ಜಿಮೇಲ್ ಬಳಕೆದಾರರು ಬಫರ್(ತಾತ್ಕಾಲಿಕ) ಸಮಯವನ್ನು 5 ರಿಂದ 30 ಸೆಕೆಂಡುಗಳ ನಡುವೆ ಹೊಂದಿಸಿ, ತಪ್ಪಾಗಿ ಕಳುಹಿಸಿದ ಇಮೇಲ್‌ ಅನ್ನು ರದ್ದುಗೊಳಿಸಬಹುದು.

  • ಡೆಸ್ಕ್‌ಟಾಪ್‌ನಲ್ಲಿ/ಲ್ಯಾಪ್‌ಟಾಪ್‌ನಲ್ಲಿ ಜಿಮೇಲ್ ತೆರೆಯಿರಿ
  • ನಂತರ ಸೆಟ್ಟಿಂಗ್ಸ್‌ಗೆ ಹೋಗಿ, ಬಳಿಕ ಜನರಲ್ ಸೆಟ್ಟಿಂಗ್‌ಅನ್ನು ಆಯ್ಕೆ ಮಾಡಿ
  • ಕಳುಹಿಸುವಿಕೆಯನ್ನು ರದ್ದುಮಾಡು ಆಯ್ಕೆಮಾಡಿ, ಅಲ್ಲಿ ಡ್ರಾಪ್‌ಡೌನ್ ಪಟ್ಟಿ ಕಾಣಿಸುತ್ತದೆ
  • (UNDO)ಇಲ್ಲಿಂದ, ಕಳುಹಿಸಿದ ಇಮೇಲ್‌ ರದ್ದುಗೊಳಿಸಲು (UNDO) ನೀವು 5, 10, 20 ಅಥವಾ 30 ಸೆಕೆಂಡುಗಳ ನಡುವಿನ ಸಮಯವನ್ನು ಆಯ್ಕೆ ಮಾಡಬಹುದು
  • ನೀವು 30 ಸೆಕೆಂಡ್‌ ಕಾಲಮಿತಿಯನ್ನು ಆಯ್ಕೆ ಮಾಡಿ
  • ಡೆಸ್ಕ್‌ಟಾಪ್‌ನಲ್ಲಿರುವ ಜಿ-ಮೇಲ್‌ ಬಳಕೆದಾರರು ಡೆಸ್ಕ್‌ಟಾಪ್‌ನಲ್ಲಿ ಸ್ಕ್ರೀನ್‌ನ ಕೆಳಗಿನ ಎಡಭಾಗದಲ್ಲಿ ಮತ್ತು ಮೊಬೈಲ್‌ನಲ್ಲಿ ಕೆಳಗಿನ ಬಲಭಾಗದಲ್ಲಿ ಕಪ್ಪು ಪೆಟ್ಟಿಗೆಯಲ್ಲಿ ರದ್ದುಗೊಳಿಸುವ (UNDO) ಲಿಂಕ್ ಕಾಣಿಸುತ್ತದೆ
  • 30 ಸೆಕೆಂಡ್‌ಗಳ ಸಮಯ ಮುಗಿಯುವಷ್ಟರಲ್ಲಿ ಬಳಕೆದಾರರು UNDO ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಇಮೇಲ್‌ ತಲುಪುವುದಿಲ್ಲ.
  • ನಂತರದಲ್ಲಿ ಬಳಕೆದಾರರು ಇಮೇಲ್ ಅನ್ನು ಮರಳಿ ಎಡಿಟ್ ಮಾಡಬಹುದು ಅಥವಾ ಅದನ್ನು ಸಂಪೂರ್ಣವಾಗಿ ಅಳಿಸಬಹುದು ಮತ್ತು ರದ್ದುಗೊಳಿಸಬಹುದು ಅಥವಾ ಮೊದಲಿನಿಂದ ಬರೆಯಬಹುದು.

ಈ ಸುದ್ದಿ ಓದಿದ್ದೀರಾ? ಭಾರತದ ಸಾಮಾಜಿಕ ಮಾಧ್ಯಮ ಆಪ್ ‘ಕೂ’ ಶೀಘ್ರದಲ್ಲೇ ಸ್ಥಗಿತ

ಇಮೇಲ್‌ ಶೆಡ್ಯೂಲ್‌ ಮಾಡುವ ಅವಕಾಶ

ಇಮೇಲ್ ಅನ್ನು ಯಾರಿಗಾದರೂ ನಿರ್ದಿಷ್ಟ ಅವಧಿಯಲ್ಲಿ(ಶೆಡಯೂಲ್‌) ಇಮೇಲ್ ತಲುಪಿಸಬೇಕು ಎಂಬ ಆಯ್ಕೆಗೆ ಜಿಮೇಲ್​ನಲ್ಲಿ ಅವಕಾಶವಿದೆ. ನಿಮ್ಮ ಕಂಟ್ಯೂಟರ್‌ನಲ್ಲಿ ಜಿಮೇಲ್​ ಸೈಟ್/ಆಪ್​ ತೆರೆದು ನೀವು ಕಳುಹಿಸುವ ಸಂದೇಶ, ಫ್ರಂ ಹಾಗೂ ಟು ವಿಳಾಸವನ್ನು ನಮೂದಿಸಿ. ನಂತರ ಅಲ್ಲಿ ಚಿಕ್ಕದಾಗಿ ಕಾಣುವ ಕೆಳಮುಖ ಬಾಣದ ಗುರುತು ಒತ್ತಿದರೆ ಅಲ್ಲಿ ಶೆಡ್ಯೂಲ್ ಸೆಂಡ್ (Schedule Send) ಆಯ್ಕೆ ಸಿಗುತ್ತದೆ. ನಂತರ ನಿಮಗೆ ಇಮೇಲ್ ಯಾವಾಗ/ ಎಷ್ಟೊತ್ತಿಗೆ ಕಳಿಸಬೇಕು ಎಂಬ ವಿವರ ಕಾಣಿಸುತ್ತದೆ. ನಿಮಗೆ ಬೇಕಾದ ಆಯ್ಕೆಯನ್ನು ಬಳಸಿಕೊಳ್ಳಿ. ಆಂಡ್ರಾಯ್ಡ್​ ಅಥವಾ ಐಫೋನ್​ನಲ್ಲಿ ಜಿಮೇಲ್ ಆ್ಯಪ್ ಮೂಲಕವೂ ಈ ಆಯ್ಕೆ ಲಭ್ಯವಿದೆ. ಆ್ಯಪ್​ನ ಬಲತುದಿಯಲ್ಲಿರುವ ಮೂರು ಚುಕ್ಕೆಗಳನ್ನು ಕ್ಲಿಕ್ಕಿಸಿದರೆ ಡ್ರಾಪ್​ಡೌನ್ ಮೆನುವಿನಲ್ಲಿ ಶೆಡ್ಯೂಲ್ ಸೆಂಡ್ ಆಯ್ಕೆ ಕಾಣಿಸುತ್ತದೆ. ಅಲ್ಲಿಂದ ಕಳಿಸಬಹುದು.

ಹೆಚ್ಚು ಮೇಲ್‌ಗಳು ಕಾಣ ಸಿಗುವ ಆಯ್ಕೆ

ಒಂದೇ ಪೇಜ್​ನಲ್ಲಿ ಹೆಚ್ಚು ಇಮೇಲ್‌ಗಳು ಬಂದರೆ ನೀವು ಗಮನ ಕೊಡಬೇಕಾದ ಇಮೇಲ್​ಗಳ ಸಂಖ್ಯೆ ಹೆಚ್ಚಾಗಿದ್ದಾಗ ಪದೇಪದೆ ರೀಡ್​ ಮೋರ್​ ಆಯ್ಕೆಯನ್ನು ಕ್ಲಿಕ್ ಮಾಡುತ್ತಿರಬೇಕಾಗುತ್ತದೆ. ಇದು ನಿಮಗೆ ಕಾಣಸಿಗಬೇಕಾದರೆ ನೀವು ಜಿಮೇಲ್​ ವೆಬ್​ಸೈಟ್​ನ ಜನರಲ್ ಟ್ಯಾಬ್​ ಸೆಟ್ಟಿಂಗ್‌​ನಲ್ಲಿ ಮ್ಯಾಕ್ಸಿಮಮ್ ಪೇಜ್​ ಸೈಜ್ ಆಯ್ಕೆ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ನೀವು ಒಂದು ಪೇಜ್​ನಲ್ಲಿ 100 ಇಮೇಲ್ ನೋಡುತ್ತೀರಿ. ಡಿಫಾಲ್ಟ್​ ಸೆಟ್ಟಿಂಗ್​ನಲ್ಲಿ ಒಂದು ಪೇಜ್​ಗೆ 50 ಇಮೇಲ್​ಗಳು ಕಾಣಿಸುತ್ತವೆ.

ಹಳೆಯ ಇಮೇಲ್‌ಗಳನ್ನು ಹುಡುಕುವ ಸುಲಭ ಆಯ್ಕೆ

ಹಳೆಯ ಇಮೇಲ್‌ಗಳನ್ನು ಹುಡುಕುವ ಆಯ್ಕೆ ಜಿಮೇಲ್‌ನಲ್ಲಿದೆ. ದಿನಾಂಕದ ಆಧಾರದ ಮೇಲೆ ಇಮೇಲ್ ನೋಡಿ ಹಳೆಯ ಇಮೇಲ್ ಹುಡುಕುವ ಅನಿವಾರ್ಯತೆ ಸೃಷ್ಟಿಯಾದರೆ ನಿಮ್ಮ ಹುಡುಕಾಟಕ್ಕೆ ದಿನಾಂಕವನ್ನು ನಮೂದಿಸಿ. ಉದಾಹರಣೆಗೆ Before 5/5/2020 ಅಥವಾ after: 5/15/2018 ಎಂದು ನಮೂದಿಸಿ ಇಮೇಲ್​ಗಳನ್ನು ಹುಡುಕಿ. ಇದು ಹುಡುಕಾಟವನ್ನು ಸುಲಭ ಮತ್ತು ವೇಗವಾಗಿಸಿ ನಿಮಗೆ ಬೇಕಾದ ಇಮೇಲ್‌ಗಳು ಕಾಣಸಿಗುತ್ತವೆ.

ಮುಂದಿನ ವಾಕ್ಯ ಊಹಿಸುವ ‘ಸ್ಮಾರ್ಟ್ ಕಂಪೋಸ್’ ಆಯ್ಕೆ

ನೀವು ಮೇಲ್‌ ಮಾಡುವ ಸಂದರ್ಭದಲ್ಲಿ ಟೈಪಿಸುವ ಮುಂದಿನ ಪದ ಅಥವಾ ವಾಕ್ಯವನ್ನು ಸ್ವಯಂಚಾಲಿತವಾಗಿ ಊಹಿಸುವ ಆಯ್ಕೆ ಜಿಮೇಲ್‌ನಲ್ಲಿದೆ. ಸ್ಮಾರ್ಟ್​ ಕಂಪೋಸ್ ಆಯ್ಕೆ ನೀವು ಟೈಪ್ ಮಾಡಬಹುದಾದ ಮುಂದಿನ ಪದ ಅಥವಾ ವಾಕ್ಯವನ್ನು ಸ್ಮಾರ್ಟ್​ ಕಂಪೋಸ್​ ಊಹಿಸುತ್ತದೆ. ಕಂಪ್ಯೂಟರ್​ ಕೀಬೋರ್ಡ್​​ನಲ್ಲಿ ಟ್ಯಾಬ್​ ಕೀ ಮೂಲಕ ಅಥವಾ ಮೊಬೈಲ್​ನಲ್ಲಿ ಸ್ಪೇಸ್​ ಕೀ ಬಳಸುವ ಮೂಲಕ ಸ್ಮಾರ್ಟ್​ ಕಂಪೋಸ್ ನೀಡಿರುವ ಆಯ್ಕೆಗಳನ್ನು ಬಳಸಬಹುದು. ಜಿಮೇಲ್ ಸೆಟ್ಟಿಂಗ್‌ನಲ್ಲಿ ಜನರಲ್ ಟ್ಯಾಬ್ ಮೂಲಕ ನೀವು ‘ರೈಟಿಂಗ್​ ಸಜೆಷನ್ಸ್’​ ಅಂದರೆ ‘ಸ್ಮಾರ್ಟ್​ ಕಂಪೋಸ್’’ ಆಯ್ಕೆಯನ್ನು ಸಕ್ರಿಯ (ಎನೇಬಲ್) ಮಾಡಿಕೊಳ್ಳಬಹುದು.

ಸ್ಟೋರೇಜ್‌ ಗಾತ್ರ ಕಡಿಮೆಗೊಳಿಸುವ ಆಯ್ಕೆ

ಹಲವು ವರ್ಷಗಳಿಂದ ನಿರಂತರವಾಗಿ ಬಳಸುತ್ತಿದ್ದ ಜಿಮೇಲ್‌ ಖಾತೆದಾರರಿಗೆ ಸ್ಥಳಾವಕಾಶದ ತೊಂದರೆ ಕಾಡಬಹುದು. ನಿಮ್ಮ ಸ್ಟೋರೇಜ್‌ ತುಂಬಿದೆ. ಸ್ಟೋರೇಜ್‌ ಖರೀದಿಸಿಕೊಳ್ಳಿ, ತಿಂಗಳಿಗೆ 130 ರೂಪಾಯಿ ಪಾವತಿಸಿ ಇತ್ಯಾದಿ ಸಂದೇಶಗಳನ್ನು ನೋಡಿದಾಗ ಕೆಲವರಿಗೆ ಬೇಸರ ಉಂಟಾಗಬಹುದು. ಈ ಸಂದರ್ಭದಲ್ಲಿ ಜಿಮೇಲ್‌ನಲ್ಲಿರುವ ಇಮೇಲ್‌ಗಳಲ್ಲಿ ಯಾವುದನ್ನು ಉಳಿಸಿಕೊಳ್ಳುವುದು ಯಾವುದನ್ನು ಡಿಲೀಟ್‌ ಮಾಡೋದು ಎಂಬ ಸಂದೇಹ ಕಾಡಬಹುದು. ಅದಲ್ಲದೆ ಸಾವಿರಾರು ಅನಗತ್ಯ ಇಮೇಲ್‌ಗಳು ನಿಮ್ಮ ಇನ್‌ಬಾಕ್ಸ್‌ನಲ್ಲಿ ತುಂಬಿರಬಹುದು. ಜಿಮೇಲ್‌ ಬಳಕೆದಾರರಿಗೆ 15 ಜಿಬಿ ಕ್ಲೌಡ್‌ ಸ್ಟೋರೇಜ್‌ ಆಯ್ಕೆ ನೀಡುತ್ತದೆ. ಈ 15 ಜಿಬಿ ಕ್ಲೌಡ್‌ ಸ್ಟೋರೇಜ್‌ಅನ್ನು ಉಳಿಸಿಕೊಳ್ಳಲು ಕೆಲವೊಂದು ಸುಲಭದ ವಿಧಾನದ ಮೂಲಕ ಇಮೇಲ್‌ನಲ್ಲಿರುವ ಅನಗತ್ಯ ಮೇಲ್‌ಗಳನ್ನು ಡಿಲೀಟ್‌ ಮಾಡಿ ಸ್ಥಳಾವಕಾಶ ಹೆಚ್ಚಿಸಿಕೊಳ್ಳಬಹುದು.

  • ಗೂಗಲ್‌ ಸ್ಟೋರೇಜ್‌ಗೆ ಹೋಗಿ ಯಾವ ಖಾತೆ ಹೆಚ್ಚು ಸ್ಥಳಾವಕಾಶ ಬಳಸಿಕೊಂಡಿದೆ ಎಂದು ತಿಳಿಯಿರಿ. ಮೊದಲಿಗೆ ಗೂಗಲ್‌ ಫೋಟೋಸ್‌ಗೆ ಹೋಗಿ ಅನಗತ್ಯ ಫೋಟೋಗಳು ಸಿಂಕ್‌ ಆಗಿದ್ದರೆ ಡಿಲೀಟ್‌ ಮಾಡಿ. ಈಗ ಸ್ಮಾರ್ಟ್‌ಫೋನ್‌ಗಳು ಗೂಗಲ್‌ ಖಾತೆಗೆ ಲಿಂಕ್‌ ಆಗಿರುವುದರಿಂದ ಸಾಕಷ್ಟು ಫೋಟೋಗಳು ನಿಮಗೆ ತಿಳಿಯದೆ ಗೂಗಲ್‌ ಸ್ಟೋರೇಜ್‌ನಲ್ಲಿ ಸಿಂಕ್‌ ಆಗಿರಬಹುದು. ಅವುಗಳನ್ನು ಪರಿಶೀಲಿಸಿ.
  • ಗೂಗಲ್‌ ಡ್ರೈವ್‌ನಲ್ಲಿರುವ ಅನಗತ್ಯ ಫೈಲ್‌ಗಳನ್ನು ಡಿಲೀಟ್‌ ಮಾಡಿ. ಗೂಗಲ್‌ನಲ್ಲಿ ಹಲವು ದೊಡ್ಡ ಗಾತ್ರದ ಪಿಡಿಎಫ್‌ ಫೈಲ್‌ಗಳು, ವಿಡಿಯೋ ಕ್ಲಿಪ್‌ಗಳು ತುಂಬಿರಬಹುದು. ಅವುಗಳನ್ನು ಅಳಿಸಿಹಾಕಿ.
  • ಜಿಮೇಲ್‌ನಲ್ಲಿರುವ ಅನಗತ್ಯ ಇಮೇಲ್‌ಗಳನ್ನು ಡಿಲೀಟ್‌ ಮಾಡಿ. ಅನ್‌ ರೀಡ್‌ (ಓದದೆ ಇರುವ) ಇಮೇಲ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಸೆಲೆಕ್ಟ್‌ ಮಾಡಿ ಡಿಲೀಟ್‌ ಮಾಡಿ. ಇದಕ್ಕಾಗಿ ಅನ್‌ರೀಡ್‌ ಇಮೇಲ್‌ ಆಯ್ಕೆಯನ್ನು ಬಳಸಿಕೊಳ್ಳಿ.
  • ಇಮೇಲ್‌ನಲ್ಲಿರುವ ರಾಶಿರಾಶಿ ಮೇಲ್‌ಗಳಲ್ಲಿ ದೊಡ್ಡ ಗಾತ್ರದ ಇಮೇಲ್‌ಗಳನ್ನು ಸುಲಭವಾಗಿ ಹುಡುಕಲು ‘has:attachment larger:10M’ ಎಂದು ಹುಡುಕಿ. ಆಗ ದೊಡ್ಡ ಗಾತ್ರದ ಇಮೇಲ್‌ಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಅನಗತ್ಯ ಇಮೇಲ್‌ಗಳನ್ನು ಡಿಲೀಟ್‌ ಮಾಡಿ. ಇದೇ ರೀತಿ, 10M, 5M, 2M ಎಂದು ವಿವಿಧ ಗಾತ್ರದ ಮೇಲ್‌ ಹುಡುಕುತ್ತ ರದ್ದುಗೊಳಿಸಿ. ಈ ಮೂಲಕ ನಿಮ್ಮ ಇಮೇಲ್‌ನಲ್ಲಿ ಸ್ಥಳಾವಕಾಶ ಹೆಚ್ಚಿಸಿಕೊಳ್ಳಬಹುದು.

ಇಂಟರ್‌ನೆಟ್‌ ಇಲ್ಲದೆ ಇಮೇಲ್‌ ಕಳುಹಿಸುವ ಆಯ್ಕೆ

  • ಜಿಮೇಲ್‌ನಲ್ಲಿ ಇಂಟರ್‌ನೆಟ್‌ ಇಲ್ಲದೆ ಇಮೇಲ್‌ ಕಳುಹಿಸುವ ವಿಧಾನ ಲಭ್ಯವಿದೆ
  • ಇಂಟರ್‌ನೆಟ್‌ ಇಲ್ಲದೆ ಇಮೇಲ್‌ ಕಳುಹಿಸಬೇಕಾದರೆ ಬಳಕೆದಾರರು mail.google.com ಗೆ ಭೇಟಿ ನೀಡಬೇಕು
  • ಸೆಟ್ಟಿಂಗ್‌ ಐಕಾನ್‌ನಲ್ಲಿ ‘See all settings’ ಆಯ್ಕೆಮಾಡಿ
  • ಅಲ್ಲಿ ‘Offline’ ಆಯ್ಕೆಯನ್ನು ಕ್ಲಿಕ್‌ ಮಾಡಿ ನಂತರ ‘Enable offline mail’ ಕ್ಲಿಕ್‌ ಮಾಡಿ, ‘Save changes’ ಸಕ್ರಿಯಗೊಳಿಸಿ
  • ನಂತರದಿಂದ ಇಂಟರ್‌ನೆಟ್‌ ಇಲ್ಲದೆ ಆಫ್‌ಲೈನ್‌ ಮೂಲಕ ಮೇಲ್‌ ಕಳಿಸಬಹುದು
  • ಇನ್ನೊಂದು ವಿಚಾರವೆಂದರೆ ಈ ಸೌಲಭ್ಯವು ಗೂಗಲ್‌ ಕ್ರೋಮ್‌ ಬ್ರೌಸರ್‌ನಲ್ಲಿ ಮಾತ್ರ ಲಭ್ಯವಿದೆ

ಸ್ವೀಕರಿಸಿದ ಇಮೇಲ್‌ಗಳ ಅನುವಾದಿಸುವ ಆಯ್ಕೆ

ಜಿಮೇಲ್ ಹಲವು ವಿಭಿನ್ನ ಭಾಷಾ ವೈಶಿಷ್ಟ್ಯಗಳನ್ನು ಹೊಂದಿದೆ. ಕನ್ನಡ, ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳಿಗೆ ಇಮೇಲ್‌ಗಳನ್ನು ಅನುವಾದಿಸಿಕೊಂಡು ಓದಬಹುದು.

ಜಿಮೇಲ್‌ನ ಈ ಹೊಸ ಫೀಚರ್​ ಮೊದಲು ಡೆಸ್ಕ್‌ಟಾಪ್​ನಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ಸಹ ಅನ್ವಯಿಸಲಾಗಿದೆ. ಇದು ನಿಮ್ಮ ಇಮೇಲ್‌ಅನ್ನು 100 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲು ನಿಮಗೆ ಅನುಮತಿಸುತ್ತದೆ.

ನೀವು ಮೊದಲು ಜಿಮೇಲ್ ಅಪ್ಲಿಕೇಶನ್ ಅನ್ನು ತೆರೆಯಬೇಕು. ಅದರ ನಂತರ, ನೀವು ಓದಲು ಬಯಸುವ ನಿರ್ದಿಷ್ಟ ಇಮೇಲ್ ಅನ್ನು ತೆರೆಯಿರಿ. ಮೇಲಿನ ಬಲಭಾಗದಲ್ಲಿರುವ ಮೂರು ಡಾಟ್​ಗಳ ಮೇಲೆ ಕ್ಲಿಕ್ ಮಾಡಿ.

ಆ ನಂತರ ಕಾಣಿಸಿಕೊಳ್ಳುವ ಆಯ್ಕೆಗಳಿಂದ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿ. ನಂತರ ನೀವು ವಿವಿಧ ಭಾಷಾ ಆಯ್ಕೆಗಳನ್ನು ನೋಡುತ್ತೀರಿ. ನೀವು ಈ ಮೇಲ್ ಅನ್ನು ಭಾಷಾಂತರಿಸಲು ಬಯಸುವ ಭಾಷೆಯನ್ನು ಆಯ್ಕೆಮಾಡಿ. ಇದರ ನಂತರ, ಇದು ಕ್ಷಣಾರ್ಧದಲ್ಲಿ ಅನುವಾದಗೊಳ್ಳುತ್ತದೆ. ಈ ಫೀಚರ್​ನಲ್ಲಿ ಒಂದು ಸಮಯದಲ್ಲಿ ಒಂದು ಇಮೇಲ್ ಅನ್ನು ಮಾತ್ರ ಅನುವಾದಿಸಬಹುದು.

ಜಿಮೇಲ್‌ ಸ್ಥಗಿತಗೊಳ್ಳುವ ಊಹಾಪೋಹಕ್ಕೆ ಕಂಪನಿ ಸ್ಪಷ್ಟೀಕರಣ

ಕೆಲವು ತಿಂಗಳ ಹಿಂದೆ ಜಿಮೇಲ್ ಸೇವೆ ಆಗಸ್ಟ್‌ 2024ರಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ ಎಂಬ ಸಂದೇಶಗಳು ಸಾಮಾಜಿಕ ಮಾಧ್ಯಮದಾದ್ಯಂತ ಹರಿದಾಡಿದ್ದವು. ಇದರಿಂದ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದರು. ಈ ಊಹಾಪೋಹಗಳ ನಡುವೆ ಟ್ವಿಟರ್‌ ಸಂಸ್ಥಾಪಕ ಎಲಾನ್‌ ಮಸ್ಕ್‌, ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಾನೊಂದು ಇಮೇಲ್‌ ಸೇವೆ ಆರಂಭಿಸುವುದಾಗಿ ತಿಳಿಸಿದ್ದರು. ಇದಕ್ಕೆ ಸ್ವತಃ ಸ್ಪಷ್ಟೀಕರಣ ನೀಡಿದ್ದ ಸಂಸ್ಥೆ ಜಿಮೇಲ್‌ ಮುಂದುವರಿಯಲಿದೆ ಎಂದು ತಿಳಿಸಿತ್ತು.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X