ಬಸವಕಲ್ಯಾಣ ಕ್ಷೇತ್ರ | ‘ಕಲ್ಯಾಣ’ ಕದನದಲ್ಲಿ ಪಕ್ಷಾಂತರ ಪರ್ವ; ಬಿಜೆಪಿ ಮಣಿಸಲು ‘ಕೈ’ ತಂತ್ರ

Date:

Advertisements
ಲಿಂಗಾಯತ ಸಮುದಾಯದ ಬಹುತೇಕ ಬಿಜೆಪಿ ಕಾರ್ಯಕರ್ತರ ಪಡೆ ಇದೀಗ ಕೈ ಸೇರಿದ ಕಾರಣ ಲಿಂಗಾಯತ ಸಮುದಾಯದ ಶರಣು ಸಲಗರ ಅವರಿಗೆ ಹೊಡೆತ ಬೀಳುವ ಸಾಧ್ಯತೆಯಿದೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ, ಬಿಎಸ್‌ಸಿ ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಈ ಬಾರಿಯ ಕಲ್ಯಾಣ ಕದನದಲ್ಲಿ ಬಿಜೆಪಿ- ಕಾಂಗ್ರೆಸ್ ಮಧ್ಯೆ ಹಣಾಹಣಿ ನಡೆಯುವುದು ಬಹುತೇಕ ನಿಶ್ಚಿತ ಎನ್ನುವಂತಿದೆ.

2021 ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಕಣದಲ್ಲಿದ್ದ ಮಾಜಿ ಶಾಸಕ ಬಿ.ನಾರಾಯಣ ಅವರ ಪತ್ನಿ ಮಾಲಾ ಬಿ ನಾರಾಯಣ ವಿರುದ್ಧ ಸ್ಪರ್ಧಿಸಿದ ಬಿಜೆಪಿಯ ಶರಣು ಸಲಗರ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡಿದ್ದರು. ಇದೀಗ 2023 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಪಕ್ಷ ಸಂಘಟಿಸಿದ ಕಾಂಗ್ರೆಸ್ಸಿನ ವಿಜಯ ಸಿಂಗ್ ಬಿಜೆಪಿ ಕಟ್ಟಿಹಾಕಲು ರಣತಂತ್ರ ಹೆಣೆಯುತ್ತಿದ್ದಾರೆ.

ಬಸವಕಲ್ಯಾಣ ಕ್ಷೇತ್ರ ಜನತಾ ಪರಿವಾರದ ಭದ್ರಕೋಟೆ ಎಂದೇ ಹೆಸರಾಗಿದೆ. ಹಾಗೆಯೇ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಮಹಿಳೆ ಗೆಲ್ಲಿಸಿದ ಜಿಲ್ಲೆಯ ಏಕೈಕ ಕ್ಷೇತ್ರವೂ ಹೌದು. ಬಸವಾದಿ ಶರಣರ ಸ್ತ್ರೀ ಸಮಾನತೆ ತತ್ವವನ್ನು ಕಲ್ಯಾಣ ನೆಲದಲ್ಲಿ ಅನುಷ್ಠಾನಗೊಳಿಸಿದ್ದು ಕ್ಷೇತ್ರದ ಮತದಾರರ ಪ್ರಜ್ಞಾವಂತಿಕೆಗೆ ಸಾಕ್ಷಿ. ತದನಂತರ ಇಲ್ಲಿ ಮಹಿಳೆ ಅಭ್ಯರ್ಥಿಗಳು ಗೆಲ್ಲಲಿಲ್ಲ. ಎಲ್ಲಾ ಪಕ್ಷಗಳಿಗೂ ಒಮ್ಮೊಮ್ಮೆ ಅಧಿಕಾರ ಕೊಟ್ಟು ಕಸಿದುಕೊಳ್ಳುವ ಕ್ಷೇತ್ರದ ಮತದಾರರ ಪ್ರಜ್ಞಾವಂತಿಕೆ ಮೆಚ್ಚಲೇಬೇಕು.

Advertisements

ಇದನ್ನು ಓದಿದ್ದೀರಾ?: ಪ್ರಧಾನಿ ಮೋದಿ ವಿಷ ಸರ್ಪವಿದ್ದಂತೆ : ಮಲ್ಲಿಕಾರ್ಜುನ ಖರ್ಗೆ

ಬಸವಕಲ್ಯಾಣದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಧರ್ಮಸಿಂಗ್ ಪುತ್ರ ವಿಜಯ ಸಿಂಗ್ ಹಾಗೂ ಬಿಜೆಪಿ ಶಾಸಕ ಶರಣು ಸಲಗರ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆ ಎಂದು ಶರಣು ಸಲಗರ ಮತದಾರರನ್ನು ಸೆಳೆಯಲು ಪ್ರಯತ್ನಿಸಿ ಎರಡೆರಡು ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿ.ಎಸ್. ಯಡಿಯೂರಪ್ಪ ಅವರನ್ನು ಕರೆಸಿ ಶಕ್ತಿ ಪ್ರದರ್ಶಿಸಿದ್ದಲ್ಲದೆ ಬಿಜೆಪಿ ಭದ್ರಕೋಟೆಯಾಗಿ ಕಟ್ಟಲು ಕಸರತ್ತು ನಡೆಸಿದರು. ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಎಂಬ ಕೂಗು ಕೇಳಿ ಬಂದರೂ ಮತ್ತೆ ಶರಣು ಸಲಗರ ಅವರಿಗೇ ಬಿಜೆಪಿ ಕಣಕ್ಕಿಳಿಸಿದೆ.

ಪಕ್ಷಾಂತರ ಪರ್ವ ಜೋರು

ಬಸವಕಲ್ಯಾಣದಲ್ಲಿ ಬಿಜೆಪಿ ಆಡಳಿತದ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಬೇಸತ್ತು ಬಂಡಾಯವೆದ್ದು ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಈ ಹಿಂದೆ ಜರುಗಿತು. ಹಾಲಿ ಶಾಸಕರು ಬಿಜೆಪಿ ಕಾರ್ಯಕರ್ತರಿಗೆ ತಾರತಮ್ಯ ನೀತಿ ಅನುಸರಿಸಿ ಅಗೌರವ ನೀಡುತ್ತಿದ್ದಾರೆ ಎಂದು ಆರೋಪಿಸಿ “ಶರಣು ಸಲಗರ ಹಠಾವೋ- ಬಿಜೆಪಿ ಬಚಾವೋ” ಎಂದು ಖುದ್ದು ಬಿಜೆಪಿ ಕಾರ್ಯಕರ್ತರೇ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿ ಹೈಕಮಾಂಡ್ ಗೆ ಚುರುಕು ಮುಟ್ಟಿಸಿದರು.

ಈ ಬಾರಿ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಜಿ.ಪಂ. ಸದಸ್ಯ ಗುಂಡು ರೆಡ್ಡಿ ಕಮಲ ಬಿಟ್ಟು ಕೈ ಹಿಡಿದು ಪಕ್ಷಕ್ಕೆ ಬಲ ತುಂಬಿದ್ದಾರೆ. ತದನಂತರ ಬಿಜೆಪಿಯ ಮಾಜಿ ಜಿ.ಪಂ.ಸದಸ್ಯೆ ಲತಾ ಹಾರಕೂಡೆ, ಮಾಜಿ ನಗರಸಭೆ ಸದಸ್ಯ ರವೀಂದ್ರ ಕೊಳಕೂರ್, ಸ್ವಾಭಿಮಾನ ಬಳಗದ ಶಿವಕುಮಾರ್ ಬಿರಾದಾರ ಸೇರಿದಂತೆ ಪ್ರತಿದಿನವೂ ಬಿಜೆಪಿ ಪಾಳಯದ ಕಾರ್ಯಕರ್ತರು ಒಬ್ಬೊಬ್ಬರಾಗಿ ಬಿಜೆಪಿ ತೊರೆದು ಕೈಗೆ ಜೈ ಎನ್ನುತ್ತಿದ್ದಾರೆ. ಈ ಪಕ್ಷಾಂತರ ಪರ್ವ ಬಿಜೆಪಿ ಪಾಲಿಗೆ ತಲೆನೋವಾಗಿ ಪರಿಣಮಿಸಿದರೆ ‘ಕೈ’ ಅಭ್ಯರ್ಥಿಗೆ ಮತ್ತಷ್ಟು ಬಲ ಬಂದಂತಾಗಿದೆ.

ಬಿಜೆಪಿಯ ಶರಣು ಸಲಗರ ಹಾಗೂ ಕಾಂಗ್ರೆಸ್ಸಿನ ವಿಜಯ ಸಿಂಗ್ ಮೂಲತಃ ಕಲಬುರಗಿ ಜಿಲ್ಲೆಯವರು, ಇಬ್ಬರೂ ಅನ್ಯ ಜಿಲ್ಲೆಯ ಅಭ್ಯರ್ಥಿಗಳು ಎನ್ನುವ ಮಾತು ಸಹಜವಾಗಿ ಕೇಳಿಬರುತ್ತಿವೆ.‌ ಆದರೆ ಬಿಜೆಪಿ ಅಭ್ಯರ್ಥಿ ಸೋಲಿಸಲು ಬಿಜೆಪಿಯ ಮಾಜಿ ಪದಾಧಿಕಾರಿಗಳ ಪಡೆಯೇ ಸಿದ್ಧವಾದ ಕಾರಣ ಉಳಿದ ಚರ್ಚೆಗಳು ಹಿಂದೆ ಸರಿದಿವೆ.

ಶರಣು ಸಲಗರ ಅವರಿಗೆ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬೀದರ್ ಸಂಸದ ಕೇಂದ್ರ ಮಂತ್ರಿ ಭಗವಂತ ಖೂಬಾ ಹಾಗೂ ಶಾಸಕ ಶರಣು ಸಲಗರ ನಡುವೆ ನಂತರದ ದಿನಗಳಲ್ಲಿ ಬಾಂಧವ್ಯ ಹಳಸಿ ಬಹಿರಂಗವಾಗಿ ದೊಡ್ಡ ರಂಪಾಟ ನಡೆದಿತ್ತು. ಇದನ್ನು ಕಣ್ಣಾರೆ ಕಂಡಿದ್ದ ಕ್ಷೇತ್ರದ ಜನರು ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದರು. ಬಿಜೆಪಿ ಟಿಕೆಟ್ ಕೈತಪ್ಪಿದಕ್ಕೆ ಮಾಜಿ ಜಿ.ಪಂ. ಸದಸ್ಯ ಗುಂಡು ರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.‌ ‘ಜಿಲ್ಲೆಯಲ್ಲಿ ಬಿಜೆಪಿ ಸೋಲಿಸುವುದೇ ನನ್ನ ಗುರಿ’ ಎಂದು ವಿಜಯ ಸಿಂಗ್ ಕೈ ಬಲಪಡಿಸಿದ್ದಾರೆ.

ಕ್ಷೇತ್ರದಲ್ಲಿ ಪಕ್ಷಾಂತರ ಹೊಸತೇನಲ್ಲ

ಬಸವಕಲ್ಯಾಣ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಹೊಸತೇನಲ್ಲ. ಈ ಹಿಂದೆ ಮಾಜಿ ಶಾಸಕ ಎಂ.ಜಿ. ಮುಳೆ ಕಾಂಗ್ರೆಸ್ ದಿಂದ ಸ್ಪರ್ಧಿಸಿ ಸೋತಿದ್ದರು, ನಂತರ ಜೆಡಿಎಸ್ ದಿಂದ ಒಮ್ಮೆ ಶಾಸಕರಾಗಿದ್ದರು. ನಂತರ ಕಾಂಗ್ರೆಸ್ ದಿಂದ ಸ್ಪರ್ಧಿಸಿ ಸತತವಾಗಿ ಸೋಲುಂಡಿದ್ದರು. ಕಳೆದ ಉಪಚುನಾವಣೆಯಲ್ಲಿ ಮತ್ತೆ ಬಿಜೆಪಿ ಸೇರಿದ್ದಾರೆ. ಎರಡು ಬಾರಿ ಜೆಡಿಎಸ್ ದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಖೂಬಾ ಅವರು 2018 ರಲ್ಲಿ ಬಿಜೆಪಿ ಸೇರಿ ಸೋಲಬೇಕಾಯಿತು. ನಂತರ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷದಿಂದ ಉಚ್ಚಾಟನೆಗೊಂಡರು. ಇದೀಗ ಮತ್ತೆ ಜೆಡಿಎಸ್ ಸೇರಿದ್ದಾರೆ. ಜೆಡಿಎಸ್ ಟಿಕೆಟ್ ಕೈತಪ್ಪಿದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ವಾಪಸ್ ಪಡೆದಿದ್ದಾರೆ. ಹೀಗೆ ಬಸವಕಲ್ಯಾಣದಲ್ಲಿ ಪ್ರತಿ ಚುನಾವಣೆಯಲ್ಲೂ ಪಕ್ಷಾಂತರ ಪರ್ವ ಜೋರಾಗಿ ನಡೆಯುವುದು ಮಾಮೂಲಿ. ಹೀಗಾಗಿಯೇ ಇಲ್ಲಿಯ ಚುನಾವಣೆ ಪೂರ್ವ ಬೆಳವಣಿಗೆಗಳ ಮೇಲೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುತ್ತದೆ.

ಕ್ಷೇತ್ರದಲ್ಲಿ ಲಿಂಗಾಯತ, ಮರಾಠ, ಎಸ್ಟಿ, ಎಸ್ಸಿ ಹಾಗೂ ಮುಸ್ಲಿಂ ಮತಗಳು ಅಧಿಕವಾಗಿವೆ. ಆದರೆ ಲಿಂಗಾಯತ ಸಮುದಾಯದ ಬಹುತೇಕ ಬಿಜೆಪಿ ಕಾರ್ಯಕರ್ತರ ಪಡೆ ಇದೀಗ ಕೈ ಸೇರಿದ ಕಾರಣ ಲಿಂಗಾಯತ ಸಮುದಾಯದ ಶರಣು ಸಲಗರ ಅವರಿಗೆ ಹೊಡೆತ ಬೀಳುವ ಸಾಧ್ಯತೆಯಿದೆ.

ಕೆಲವು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಮನವೊಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ವಿಜಯ ಸಿಂಗ್ ಸಫಲರಾಗಿದ್ದಾರೆ. ಇದರಿಂದ ಕೈಗೆ ಸಹಜವಾಗಿ ಬಲ ಬಂದಂತಾಗಿದೆ. ಬಿಜೆಪಿ ಶಾಸಕ ಶರಣು ಸಲಗರ ಅವರ ಆಡಳಿತ ಬೇಸತ್ತು ಕಾಂಗ್ರೆಸ್ ಸೇರಿದ ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು ಕೈಗೆ ವರವಾಗುವುದೋ ಎಂಬುದು ಕಾದು ನೋಡಬೇಕು. ಪಕ್ಷಾಂತರ ಪೂರ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರುವುದು, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಭರ್ಜರಿಯಾಗಿ ನಡೆಯುತ್ತಿದೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರದೇಶ ಚುನಾವಣೆ | ಆಡಳಿತ ವಿರೋಧಿ ಅಲೆಯ ನಡುವೆಯೂ ಬಿಜೆಪಿ ಜಯಭೇರಿ

ಮಧ್ಯಪ್ರದೇಶದಲ್ಲಿ ಬಿಜೆಪಿ ಉಗ್ರ ಹಿಂದುತ್ವ ಪ್ರತಿಪಾದಿಸಿದರೆ, ಕಾಂಗ್ರೆಸ್‌ನ ಕಮಲನಾಥ್ ಸಾಫ್ಟ್ ಹಿಂದುತ್ವದ...

ಛತ್ತೀಸ್‌ಗಡ: ಹಗರಣಗಳ ಆರೋಪಕ್ಕೆ ಸಿಲುಕಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್

ಛತ್ತೀಸ್‌ಗಢ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರ...

ಕಾಂಗ್ರೆಸ್‌ ಕೈ ಜಾರಿದ ರಾಜಸ್ಥಾನ- ವಾಡಿಕೆ ತಪ್ಪಿಸದೆ ಪಕ್ಷ ಬದಲಿಸಿದ ಮತದಾರರು

ರಾಜಸ್ಥಾನದಲ್ಲಿ ಪ್ರತಿ ಅವಧಿಗೂ ಸರ್ಕಾರ ಬದಲಾಯಿಸುವ ರೂಢಿಯಿದೆ ಹಾಲಿ ಚುನಾವಣೆಯಲ್ಲಿ...

ತೆಲಂಗಾಣ ಫಲಿತಾಂಶ: ಕೆಸಿಆರ್ ಸರ್ವಾಧಿಕಾರಕ್ಕೆ ಏಟು; ಕಾಂಗ್ರೆಸ್ ಗ್ಯಾರಂಟಿಗಳಿಗೆ ಓಟು

2014ರಿಂದಲೂ ಕಾಂಗ್ರೆಸ್ ತೆಲಂಗಾಣದ ಗದ್ದುಗೆ ಮೇಲೆ ಕಣ್ಣಿಟ್ಟಿತ್ತು. ಈ ಬಾರಿ ಕರ್ನಾಟಕದಲ್ಲಿ...

Download Eedina App Android / iOS

X