‘ಕಲಿಕಾ ಚೇತರಿಕಾ’ ಕ್ರಮ; ಶೈಕ್ಷಣಿಕ ಕೌಶಲ್ಯಗಳಲ್ಲಿ ಸುಧಾರಣೆ

Date:

Advertisements
  • ಕಲಿಕಾ ಸಾಮರ್ಥ್ಯದಲ್ಲಿ ಸುಧಾರಣೆಯಾಗಿದೆ ಎಂದ ಶೇ.87ರಷ್ಟು ಶಿಕ್ಷಕರು
  • ಭಾಷೆ, ಸಂಖ್ಯಾಶಾಸ್ತ್ರಗಳಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಮುಂದು

ಕೋವಿಡ್ ಕಾಲದಲ್ಲಿ ಶಾಲಾ ಕಲಿಕೆ ಅರ್ಧಕ್ಕೆ ನಿಂತ ಕಾರಣ 2022-23ನೇ ಶೈಕ್ಷಣಿಕ ಸಾಲಿನಲ್ಲಿ ‘ಕಲಿಕಾ ಚೇತರಿಕಾ’ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಆರಂಭಿಸಿತ್ತು. ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಕೌಶಲ್ಯ ಸುಧಾರಣೆಯಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಕೋವಿಡ್ ಉಲ್ಬಣಗೊಂಡಿದ್ದ ಸಮಯದಲ್ಲಿ ಲಾಕ್‌ಡೌನ್ ಹೇರಿದ್ದ ಕಾರಣ, ಇಡೀ ದೇಶವೇ ಜೈಲಿನಂತಾಗಿತ್ತು. ಶಾಲಾ–ಕಾಲೇಜುಗಳಲ್ಲಿ ಭೋದನೆಯೂ ಮೊಟಕುಗೊಂಡಿತ್ತು. ಈ ವೇಳೆ, ಆನ್‌ಲೈನ್ ತರಗತಿ ಆರಂಭವಾದುದರಿಂದ ವಿದ್ಯಾರ್ಥಿಗಳ ಕಲಿಕೆ ಹಿಂದುಳಿದೆ ಎಂದು ಹಲವು ಶಿಕ್ಷಣ ತಜ್ಞರು ಆಕ್ಷೇಪಿಸಿದ್ದರು. ಇದನ್ನು ಸುಧಾರಿಸುವ ಸಲುವಾಗಿ ‘ಕಲಿಕಾ ಚೇತರಿಕೆ’ ಎಂಬ ಕಾರ್ಯಕ್ರಮ ಆರಂಭಿಸಲಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದಾಗುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಎರಡು ವರ್ಷ ಮಕ್ಕಳು ಪುಸ್ತಕ ಹಿಡಿದಿರಲಿಲ್ಲ. ಜೊತೆಗೆ ಭೌತಿಕವಾಗಿ ತರಗತಿಗಳಿಗೂ ಹಾಜರಾಗಿರಲಿಲ್ಲ. ಇದರಿಂದಾಗಿ ಎಲ್ಲರ ಕಲಿಕಾ ಮಟ್ಟ ಕುಸಿತ ಕಂಡಿತ್ತು. ಇದನ್ನು ಸರಿದೂಗಿಸಲು ಶಿಕ್ಷಣ ಇಲಾಖೆ 2022-23 ಶೈಕ್ಷಣಿಕ ಸಾಲನ್ನು ಕಲಿಕಾ ಚೇತರಿಕೆ ಎಂದು ಘೋಷಿಸಲಾಯಿತು.

Advertisements

ಕಲಿಕಾ ಚೇತರಿಕೆಯ ಸಮೀಕ್ಷೆಯೊಂದಕ್ಕೆ ಪ್ರತಿಕ್ರಿಯಿಸಿರುವ ಶಿಕ್ಷಕರಲ್ಲಿ ಶೇ.87ರಷ್ಟು ಮಂದಿ ಮತ್ತು ಸಮೀಕ್ಷೆಗೆ ಒಳಪಟ್ಟಿದ್ದ ಪೋಷಕರಲ್ಲಿ ಶೇ.88ರಷ್ಟು ಮಂದಿ ಕಲಿಕಾ ಚೇತರಿಕೆಯಿಂದ ಮಕ್ಕಳು ಉತ್ತಮವಾಗಿ ಕಲಿಯುತ್ತಿದ್ದಾರೆ ಎಂದಿದ್ದಾರೆ. ಶೇ.89ರಷ್ಟು ವಿದ್ಯಾರ್ಥಿಗಳು ಮತ್ತು ಶೇ.84ರಷ್ಟು ಶಿಕ್ಷಕರು ಶಾಲೆಗೆ ಬರಲು ಹೆಚ್ಚಿನ ಆಸಕ್ತಿ ಮತ್ತು ಸುಧಾರಿತ ಹಾಜರಾತಿ ಕುರಿತು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಅನೇಕ ಸರ್ಕಾರಿ ಶಾಲೆಗಳಲ್ಲಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ವಿಮರ್ಶೆಯ ಫಲಿತಾಂಶಗಳ ಪ್ರಕಾರ ತರಗತಿ ಎರಡರಿಂದ ಒಂಭತ್ತನೆ ತರಗತಿ ವಿದ್ಯಾರ್ಥಿಗಳಲ್ಲಿ ಭಾಷೆ, ಸಂಖ್ಯಾಶಾಸ್ತ್ರ ಮತ್ತು ಇತರ ಕೌಶಲ್ಯಗಳಲ್ಲಿ ಸುಧಾರಣೆ ಕಂಡುಬಂದಿದೆ.

ಈ ಸುದ್ದಿ ಓದಿದ್ದೀರಾ?: ವೇದಗಣಿತ, ಜ್ಯೋತಿಷ್ಯ ಪರಿಚಯಿಸಲು ಮುಂದಾದ ಯುಜಿಸಿ; ಎಐಡಿಎಸ್‌ಒ ಕಿಡಿ

ಕಲಿಕಾ ಚೇತರಿಕಾ ಎಂದರೇನು?

ಕಲಿಕಾ ಚೇತರಿಕಾ ಕಾರ್ಯಕ್ರಮವನ್ನು ಸರ್ಕಾರ ಆರಂಭಿಸಿತ್ತು. ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು ಕಲಿಕಾ ಚೇತರಿಕಾ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿತ್ತು.

ಕೋವಿಡ್‌ನಿಂದಾಗಿ ಕಳೆದ ಎರಡು ಮೂರು ವರ್ಷಗಳಿಂದ ಶಾಲೆಗಳಲ್ಲಿ ಭೌತಿಕ ತರಗತಿಗಳು ನಡೆಯದೆ, ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ಅಂತರವನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಈ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ರೂಪಿಸಿತ್ತು.

ಫಲಕಗಳು ಮತ್ತು ಕಲಿಕಾ ಹಾಳೆ ಆಧರಿಸಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಾರೆ. ಪ್ರತಿ ತರಗತಿಯಲ್ಲೂ ಹಿಂದಿನ ಎರಡು ವರ್ಷಗಳ ಅಗತ್ಯ ಕಲಿಕಾ ಫಲಗಳು, ಪ್ರಸ್ತುತ ತರಗತಿಯ ಅಗತ್ಯ ಕಲಿಕಾ ಫಲಗಳನ್ನು ಆಧರಿಸಿ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ವಿಷಯದ ಕಲಿಕಾ ಹಾಳೆ ಪುಸ್ತಕವು 150 ಪುಟಗಳನ್ನು ಒಳಗೊಂಡಿದೆ. ಕಲಿಕಾ ಹಾಳೆಯಲ್ಲಿ ಹಿಂದಿನ ಎರಡು ವರ್ಷಗಳ ವಿಷಯಗಳು ಮಕ್ಕಳಿಗೆ ಎಷ್ಟು ಅರ್ಥವಾಗಿವೆ ಎಂಬುದನ್ನು ಮೌಲ್ಯಮಾಪನ ಮಾಡಿ ಶಿಕ್ಷಕರು ಅಂಕ ನೀಡುತ್ತಾರೆ.

bfe5ebf00de2b670976597f37a6d2b77?s=150&d=mp&r=g
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸರ್ಕಾರಿ ಶಾಲೆ ಮುಚ್ಚುವಿಕೆ ವಿರೋಧಿಸಿ ಎಐಡಿಎಸ್‍ಒ 50 ಲಕ್ಷ ಸಹಿ ಸಂಗ್ರಹ; ಮುಖ್ಯಮಂತ್ರಿಗಳಿಗೆ ಸಲ್ಲಿಕೆ

ಕರ್ನಾಟಕ ರಾಜ್ಯ ಸರ್ಕಾರವು 6,200 ಸರ್ಕಾರಿ ಶಾಲೆಗಳನ್ನು "ವಿಲೀನ"ಗೊಳಿಸುವ ಹೆಸರಿನಲ್ಲಿ ಮುಚ್ಚಲು...

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

ದಾವಣಗೆರೆ | ಭಾರತದ ಗ್ರಂಥಾಲಯ ಪಿತಾಮಹ ರಂಗನಾಥ್ ಜನ್ಮದಿನ; ವಿವಿಯಲ್ಲಿ ಗ್ರಂಥಾಲಯ ಕಾರ್ಯಾಗಾರ

ಭಾರತದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಅವರ 133ನೇ ಜನ್ಮದಿನದ ಅಂಗವಾಗಿ...

Download Eedina App Android / iOS

X