ಜಗತ್ತನ್ನು ಬೆಚ್ಚಿ ಬೀಳಿಸಿದ ಚೀನಾದ ಡೀಪ್‌ಸೀಕ್, ಅಮೆರಿಕದ ಅಹಂಕಾರಕ್ಕೆ ಪೆಟ್ಟು ಕೊಟ್ಟಿತೇ?

Date:

Advertisements
ಎಐ ತಂತ್ರಜ್ಞಾನದಲ್ಲಿ ಚೀನಾ ಅಮೆರಿಕಕ್ಕಿಂತ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎಂಬುದನ್ನು ಡೀಪ್‌ಸೀಕ್ ಸ್ಪಷ್ಟಪಡಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ ಹೊಂದಿದ್ದ ಸಾರ್ವಭೌಮತ್ವವನ್ನು ಚೀನಾ ಹೊಡೆದುಹಾಕಿದೆ. ಎರಡು ದೈತ್ಯದೇಶಗಳು ವಿಜ್ಞಾನದಲ್ಲಿ ಮುಂಚೂಣಿಯಲ್ಲಿವೆ. ಮೋದಿ ಭಾರತ ಅಜ್ಞಾನದ- ಕುಂಭಮೇಳವೆಂಬ ಸಂಗಮದಲ್ಲಿ- ಮುಳುಗುತ್ತಿದೆ!

ಜಾಗತಿಕ ಮಟ್ಟದಲ್ಲಿ ಅಮೆರಿಕ ಎಂದರೆ ಬಿಗ್ ಬ್ರದರ್ ಎಂಬ ಮಾತಿದೆ. ಆದರೆ ಈಗಿಲ್ಲ. ದೊಡ್ಡಣ್ಣನ ಪಟ್ಟ ಈಗ ಪಲ್ಟಿ ಹೊಡೆಯುತ್ತಿದೆ. ಟ್ರಂಪ್‌ನಂತಹ ತಿಕ್ಕಲು ಆಸಾಮಿ ಅಧ್ಯಕ್ಷನಾದ ಮೇಲೆ, ಸಣ್ಣಪುಟ್ಟ ದೇಶಗಳನ್ನು ತನ್ನ ಅಂಕುಶದಲ್ಲಿಟ್ಟುಕೊಳ್ಳಬೇಕೆಂಬ ಆಸೆಗೆ, ಅಹಂಗೆ ಪೆಟ್ಟು ಬಿದ್ದಿದೆ.

ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹೊಸ ಆವಿಷ್ಕಾರವಾದ ಓಪನ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್(ಎಐ)ನಲ್ಲೂ ತನ್ನ ಪ್ರಾಬಲ್ಯ ಮೆರೆದಿದ್ದ ಅಮೆರಿಕ, ಚ್ಯಾಟ್ ಜಿಪಿಟಿ, ಚ್ಯಾಟ್ ಬಾಟ್, ಗೂಗಲ್ ಜೆಮಿನಿಗಳನ್ನು ಸೃಷ್ಟಿಸಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿತ್ತು. ಸಾರ್ವಭೌಮತ್ವ ಸಾಧಿಸಿತ್ತು. ನಮ್ಮನ್ನು ಬಿಟ್ಟರೆ ಮತ್ತೊಬ್ಬರಿಲ್ಲ ಎಂದು ಮೆರೆಯುತ್ತಿತ್ತು.

ಇಂತಹ ದೊಡ್ಡಣ್ಣನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲು, ಪ್ರಪಂಚದ ಸಣ್ಣಪುಟ್ಟ ದೇಶಗಳ ಮೇಲೆ ಮತ್ತಷ್ಟು ಹಿಡಿತ ಸಾಧಿಸಲು, ಅಮೆರಿಕದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡಿದ ಓಪನ್ ಎಐನ ಆಲ್ಟ್ ಮನ್- ಸಾಫ್ಟ್ ಬ್ಯಾಂಕ್ ಮತ್ತು ಒರಾಕಲ್ ಎಂಬ ದೈತ್ಯ ಕಂಪನಿಗೊಂದಿಗೆ ಸೇರಿ, ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಭೇಟಿ ಮಾಡಿ, ‘ಸ್ಟಾರ್ ಗೇಟ್’ ಎಂಬ ಬೃಹತ್ ಕಂಪನಿಯನ್ನು ಹುಟ್ಟುಹಾಕಿದ್ದರು. ಅದರ ಅಭಿವೃದ್ಧಿಗಾಗಿ ಸರ್ಕಾರ 600 ಬಿಲಿಯನ್ ಡಾಲರ್ ವಿನಿಯೋಗಿಸುವುದಾಗಿ ಹೇಳಿಕೊಂಡಿತ್ತು. ಹಾಗೆಯೇ ಇದರಿಂದ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆಂದು ಟ್ರಂಪ್ ಹೇಳಿದ್ದು, ಅಮೆರಿಕನ್ನರಲ್ಲಿ ಆಸೆ ಹುಟ್ಟಿಸಿತ್ತು.

Advertisements

ಅಮೆರಿಕದ ಅತ್ಯಂತ ಪ್ರಭಾವಿಗಳು, ಪ್ರತಿಷ್ಠಿತರು ಮತ್ತು ಪ್ರಸಿದ್ಧರೆಲ್ಲ ಒಂದಾಗಿ, ಬಿಲಿಯನ್ ಡಾಲರ್‍‌ಗಳ ಹೊಸ ಕಂಪನಿ ಘೋಷಿಸುವ ಮುನ್ನಾದಿನ, ಇತ್ತ ಚೈನಾದಲ್ಲಿ ಒಂದು ಸಣ್ಣ ಸ್ಟಾರ್ಟ್ಅಪ್ ಕಂಪನಿ ಹೈ-ಫ್ಲೈಯರ್ ಮಾಲೀಕ ಲಿಯಾಂಗ್ ವೆಂಗ್‌ಫೆನ್ ಎಂಬ ವ್ಯಕ್ತಿ ಡೀಪ್‌ಸೀಕ್ ಬಿಡುಗಡೆ ಮಾಡಿದ್ದ. ಅಮೆರಿಕದ ಚಿಪ್‌ಮೇಕರ್ ಎನ್‌ವಿಡಿಯಾದ ಕೇವಲ 2 ಸಾವಿರ ಕಂಪ್ಯೂಟರ್ ಚಿಪ್‌ಗಳನ್ನು ಬಳಸಿ, ಕೇವಲ 5.5 ಮಿಲಿಯನ್ ಅತಿ ಕಡಿಮೆ ಖರ್ಚಿನಲ್ಲಿ ಓಪನ್ ಎಐಗಿಂತ ಹೆಚ್ಚು ಪರಿಣಾಮಕಾರಿಯಾದ ಎಐ ಮಾದರಿ ಸೃಷ್ಟಿಸಿ, ಮಾರುಕಟ್ಟೆಗೆ ಬಿಟ್ಟಿದ್ದ.

ಅಂದರೆ, ಪ್ರಪಂಚದಲ್ಲಿ ಹೊಸದನ್ನು ಸೃಷ್ಟಿಸಲು ಸಾಧ್ಯವಿರುವವರು ಮತ್ತು ಎಲ್ಲರಿಗಿಂತ ಮುಂಚೆ ಜಗತ್ತಿನ ಮುಂದಿಡುವ ಮೊದಲಿಗರು ನಾವೆಂಬ ಅಮೆರಿಕದ ಸ್ಥಾಪಿತ ಚಹರೆಯನ್ನೇ, ಚೀನಾದ ವ್ಯಕ್ತಿಯೊಬ್ಬ ಹೊಡೆದುರುಳಿಸಿಬಿಟ್ಟಿದ್ದ. ಇದರ ಪರಿಣಾಮವಾಗಿ ತಂತ್ರಜ್ಞಾನ ಕ್ಷೇತ್ರದ ಮೂವರು ದೈತ್ಯರು ಮತ್ತು ಬಲಿಷ್ಠ ಅಮೆರಿಕ ಸರ್ಕಾರ ಸೇರಿ ಹುಟ್ಟುಹಾಕಿದ್ದ ‘ಸ್ಟಾರ್ ಗೇಟ್’ ಕಂಪನಿ ದಿನಬೆಳಗಾಗುವುದರೊಳಗೆ ಕಣ್ಮರೆಯಾಗಿದೆ.

ಅಮೆರಿಕವಷ್ಟೇ ಅಲ್ಲ, ಪ್ರಪಂಚದ ಎಐ ತಜ್ಞರಾರೂ ಚೀನಾ ಇಂತಹದೊಂದು ಕೆಲಸ ಮಾಡಬಹುದೆಂದು ಊಹಿಸಿರಲಿಲ್ಲ. ಚೀನಾ ಅಭಿವೃದ್ಧಿಪಡಿಸಿದ ಎಐ ತಂತ್ರಜ್ಞಾನ ಡೀಪ್‌ಸೀಕ್ ಈಗ ಕೆಲವೇ ದಿನಗಳಲ್ಲಿ ಜಗತ್ತಿನ ಜನರ ನಾಲಗೆಯ ಮೇಲೆ ನಲಿದಾಡುತ್ತಿದೆ. ಬಿಡುಗಡೆಯಾಗಿ ಕೇವಲ 20 ದಿನಗಳಲ್ಲಿ ವಿಶ್ವದಾದ್ಯಂತ ವ್ಯಾಪಿಸಿದೆ. ಚ್ಯಾಟ್ ಜಿಪಿಟಿಯನ್ನೂ ಮೀರಿ ಡೀಪ್‌ಸೀಕ್ ಡೌನ್‌ಲೋಡ್ ಮಾಡಲಾಗಿದೆ. ಇಡೀ ಪ್ರಪಂಚದ ತಂತ್ರಜ್ಞಾನ ತಜ್ಞರನ್ನು ಬೆಚ್ಚಿಬೀಳಿಸಿದೆ. ಈಗ ಅಮೆರಿಕದ ಸ್ಥಾನದಲ್ಲಿ ಚೀನಾ ಬಂದು ಕೂತಿದೆ.

ಇದನ್ನು ಓದಿದ್ದೀರಾ?: ದೇಶದ ಶ್ರೀಮಂತ ಪಕ್ಷ ಬಿಜೆಪಿ: 7,113 ಕೋಟಿ ರೂ. ನಿಧಿ, ಕಾಂಗ್ರೆಸ್ ಬಳಿ ಎಷ್ಟಿದೆ?

ಇತ್ತೀಚಿನ ದಿನಗಳಲ್ಲಿ ಚೀನಿಯರು ಮಾಡುವ ಪ್ರತಿಯೊಂದು ಕೆಲಸಗಳು ಜಗತ್ತನ್ನು ಅಲ್ಲೋಲ ಕಲ್ಲೋಲ ಮಾಡುತ್ತಿವೆ. ಚೀನಾದವರ ಡೀಪ್‌ಸೀಕ್ ಎನ್ನುವ ಎಐ ಟೂಲ್ ಒಂದೇ ದಿನದಲ್ಲಿ ಅಮೆರಿಕದ ಒಂದು ಟ್ರಿಲಿಯನ್ ಡಾಲರ್ ಮೌಲ್ಯವನ್ನು ಮಾರುಕಟ್ಟೆಯಿಂದ ಕಣ್ಮರೆ ಮಾಡಿದೆ. ತಂತ್ರಜ್ಞಾನಾಧಾರಿತ ಕಂಪನಿಗಳು ಇನ್ನಿಲ್ಲದ ಕುಸಿತ ಕಂಡಿವೆ. ಇದಷ್ಟೇ ಅಲ್ಲ, ಜಾಗತಿಕ ಷೇರು ಮಾರುಕಟ್ಟೆ ಕುಸಿತಕ್ಕೂ ಕಾರಣವಾಗಿದೆ. ಜಗತ್ತು ಮತ್ತೊಂದು ಬದಲಾವಣೆಗೆ ಮಗ್ಗಲು ಬದಲಾಯಿಸಲು ಸಜ್ಜಾಗುತ್ತಿದೆ.

ವಸ್ತುವಿನ ಗುಣಮಟ್ಟ ಮತ್ತು ಕನಿಷ್ಠ ಬೆಲೆಯಿಂದ ಜಾಗತಿಕ ಮಾರುಕಟ್ಟೆಯನ್ನು ಆವರಿಸಿಕೊಂಡಿರುವ ಚೀನಾ, ಜಾಗತಿಕ ಉತ್ಪಾದಕ ರಾಷ್ಟ್ರ ಎಂಬ ಹೆಸರು ಪಡೆದಿದೆ. ಇದೀಗ ಚ್ಯಾಟ್ ಜಿಪಿಟಿಯನ್ನೂ ಮೀರಿಸುವ ಡೀಪ್‌ಸೀಕ್ ಸೃಷ್ಟಿಸಿ, ಬಿಡುಗಡೆ ಮಾಡಿದೆ. ಅಮೆರಿಕಾದ ಎಐ ಟೂಲ್‌ಗಳಿಗೆ ನೀಡುವ ಬೆಲೆಗೆ ಹೋಲಿಸಿದರೆ, ಚೀನಿ ಎಐ ಟೂಲ್‌ಗಳು ಸಂಪೂರ್ಣ ಉಚಿತ. ಅಷ್ಟೇ ಅಲ್ಲ, ಇದನ್ನು ಬಳಸಿ, ಇನ್ನಷ್ಟು ಉತ್ತಮ, ಉತ್ಕೃಷ್ಟ ಮಟ್ಟದ ಎಐ ಸೃಷ್ಟಿಸುವ ಸಾಧ್ಯತೆಗಳನ್ನು ತೆರೆದಿಟ್ಟಿದೆ.

ಚೀನಾದ ಡೀಪ್‌ಸೀಕ್ ಇತರ ಹಲವು ಕಂಪನಿಗಳಂತೆ ಎಐ ವ್ಯವಸ್ಥೆಯನ್ನು ‘ಓಪನ್ ಸೋರ್ಸ್’ ಮಾಡಿದೆ. ಅಂದರೆ ಅದು ಆಧಾರವಾಗಿರುವ ಕಂಪ್ಯೂಟರ್ ಕೋಡ್ ಅನ್ನು ಬೇರೆ ಸಂಶೋಧಕರು ಕೂಡ ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ. ಬಳಸಿಕೊಂಡು ತಮ್ಮದೇ ಆದ ಉತ್ಪನ್ನಗಳನ್ನು ಸೃಷ್ಟಿಸಲು ಮತ್ತು ವಿತರಿಸಲು ಅನುವು ಮಾಡಿಕೊಡಲಾಗಿದೆ. ಇದು ವಿಶ್ವದ ವಿಜ್ಞಾನಿಗಳಿಂದ ಮುಕ್ತಕಂಠದ ಹೊಗಳಿಕೆಗೆ ಪಾತ್ರವಾಗಿದೆ. ಸುಲಭವಾಗಿ ಒಗ್ಗಿಸಿಕೊಳ್ಳಬಹುದಾದ ವಿಧಾನದಿಂದಾಗಿ ಎಳೆಯ ಸಂಶೋಧಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಹಾಗೂ ರೊಬೋಟಿಕ್ ಕ್ಷೇತ್ರದಲ್ಲಿ ಭಾರೀ ಬದಲಾವಣೆಗೆ ಬಳಕೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.  

ಅದನ್ನು ಪ್ರಮಾಣೀಕರಿಸಲು ಚೀನಾದ ಡೀಪ್‌ಸೀಕ್ ಮತ್ತು ಅಮೆರಿಕಾದ ಎಐಗಳನ್ನು ಪರೀಕ್ಷೆಗೊಡ್ಡಲಾಗಿದೆ. ಉದಾಹರಣೆಗೆ ಎಐಎಂಇ 2024ರ ಗಣಿತದ ವಿಷಯದಲ್ಲಿ ಓಪನ್ ಎಐ 79.2% ಸ್ಕೋರ್ ಮಾಡಿದರೆ, ಡೀಪ್‌ಸೀಕ್ 79.8% ಮಾಡಿದೆ. ಗಣಿತ-500 ವಿಷಯದಲ್ಲಿ ಓಪನ್ ಎಐ 96.4% ಗಳಿಸಿದರೆ, ಡೀಪ್‌ಸೀಕ್ 97.3% ಗಳಿಸಿದೆ. ಇನ್ನು ಕೋಡಿಂಗ್ ಕೆಲಸಗಳಲ್ಲಿ, ತರ್ಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಮೆರಿಕದ ಎಐಗಿಂತ ಆಧುನಿಕವಾಗಿದೆ, ಸಿಕ್ಕಾಪಟ್ಟೆ ಮುಂದಿದೆ.

deep

ಚ್ಯಾಟ್ ಜಿಪಿಟಿಗೆ ಹೋಲಿಸಿದರೆ ಡೀಪ್‌ಸೀಕ್ ಅಷ್ಟು ಪರಿಣಾಮಕಾರಿಯಾಗಿಲ್ಲ ಎಂಬುದು ಬಹುತೇಕ ಭಾರತೀಯ ಬಳಕೆದಾರರ ಅಭಿಪ್ರಾಯವಾಗಿದೆ. ಡೀಪ್‌ಸೀಕ್‌ನಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರವೇ ಸಿಗುತ್ತಿಲ್ಲ ಎಂಬ ಆರೋಪವಿದೆ. ಸೋಷಿಯಲ್ ಮೀಡಿಯಾದಲ್ಲಿ ಡೀಪ್‌ಸೀಕ್ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದು ಚೀನಾದ ಆ್ಯಪ್ ಆಗಿರುವುದರಿಂದ ನಂಬಲರ್ಹವಲ್ಲ ಎನ್ನುವವರೂ ಇದ್ದಾರೆ. ಕೆಲವೊಂದು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವೇ ಸಿಗುತ್ತಿಲ್ಲ ಎಂದು ಮೂದಲಿಸುವವರೂ ಇದ್ದಾರೆ. ಒಟ್ಟಿನಲ್ಲಿ ಹಲವು ಡ್ರಾಬ್ಯಾಕ್‌ಗಳು ಈ ಡೀಪ್‌ಸೀಕ್ ತಂತ್ರಜ್ಞಾನದಲ್ಲಿದೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.

ಇವುಗಳ ನಡುವೆಯೇ, ಎಐ ತಂತ್ರಜ್ಞಾನದಲ್ಲಿ ಚೀನಾ ಅಮೆರಿಕಕ್ಕಿಂತ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎಂಬುದನ್ನು ಡೀಪ್‌ಸೀಕ್ ಮೂಲಕ ಸ್ಪಷ್ಟಪಡಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ ಹೊಂದಿದ್ದ ಸಾರ್ವಭೌಮತ್ವವನ್ನು ಚೀನಾ ಹೊಡೆದುಹಾಕಿದೆ. ಕಮ್ಯುನಿಸ್ಟ್ ಪ್ರಭುತ್ವ ಬಂಡವಾಳಶಾಹಿ ಪ್ರಭುತ್ವಕ್ಕೆ ಪುಕ್ಕಟೆಯಾಗಿ ತಂತ್ರಜ್ಞಾನವನ್ನು ಹಂಚುತ್ತಿರುವುದು, ಬದಲಾದ ಜಾಗತಿಕ ವಿದ್ಯಮಾನವಾಗಿ ಕಾಣುತ್ತಿದೆ. ಸದ್ಯಕ್ಕೆ ಈ ಎರಡು ದೈತ್ಯದೇಶಗಳು ವಿಜ್ಞಾನದಲ್ಲಿ ಮುಂಚೂಣಿಯಲ್ಲಿವೆ. ಮೋದಿ ಭಾರತ ಅಜ್ಞಾನದಲ್ಲಿ- ಕುಂಭಮೇಳವೆಂಬ ಸಂಗಮದಲ್ಲಿ- ಮುಳುಗುತ್ತಿದೆ!

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

2 COMMENTS

  1. ೧. ಅದ್ಯಕ್ಷನನ್ನು ತಿಕ್ಕಲು ಎಂದು ಕರೆಯುವುದು ಸರಿಯಲ್ಲ
    ೨. ಡೀಪ್ ಸೀಕ್ ಬಗ್ಗೆ ಮೊದಲು ಹೊಗಳಿ ಅಟ್ಟಕ್ಕೇರಿಸಿ ನಂತರ ಡ್ರಾ ಬ್ಯಾಕ್ ಗಳನ್ನು ಅಪೂರ್ಣವಾಗಿಸಿದ್ದಾರೆ
    ೩. ಸರಿಯಾದ ಕಂಪ್ಯಾರಿಸನ್ ಕೊಟ್ಟಿಲ್ಲ.
    ಮುಂದಿನ ಬರಹಗಳಲ್ಲಿ ಬಸವರಾಜ್ ಅವರು ಎಲ್ಲಾ ಓದುಗರನ್ನು ಗಮನದಲ್ಲಿಟ್ಟುಕೊಂಡು ಅಂಶಗಳನ್ನು ವ್ಯಕ್ತಪಡಿಸಬೇಕು.

  2. ಮಾಧ್ಯಮ ಕ್ಷೇತ್ರದಲ್ಲಿ ಇಂದಿನ ಪರಿಸ್ಥಿತಿ ನೋಡಿದರೆ ಬಹಳಷ್ಟು ಬೂಟುನೆಕ್ಕುವ ಜನರಿಗೆ ಯಾವಸುದ್ದಿ ಸರಿಯಾಗಿ ತಲುಪಬೇಕು ಯಾವ ಸುದ್ದಿ ಅವಶ್ಯ ಅಲ್ಲ ಅನ್ನೋ ಪರಿಜ್ಞಾನನೇ ಇಲ್ಲವಾಗಿದೆ ಅಂತಹದರಲ್ಲಿ ಈದಿನ. ಕಂ ಅನ್ನೋ ಮಾಧ್ಯಮ ದ ಸುದ್ದಿಗಳು ನೈಜಸುದ್ದಿಗಳನ್ನು ನೋಡ ಬಹುದು keepit up ಹೆಮ್ಮೆ ಇದೆ ನಿಮ್ಮ ಕೆಲಸಕ್ಕೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

Download Eedina App Android / iOS

X