ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಖಾನಾಪುರ ಗ್ರಾಮದಲ್ಲಿ ನಡೆದ ವಾಲ್ಮೀಕಿ ವೃತ್ತದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಮಾಯಕ ಯುವಕರನ್ನು ಬಂಧಿಸಿದ್ದು, ದೈಹಿಕವಾಗಿ ಹಲ್ಲೆ ಮಾಡಿರುವ ಪೊಲೀಸರ ಅಮಾನತು ಮಾಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ ನಿತೀಶ್ ಕೆ ಅವರಿಗೆ ಮನವಿ ಸಲ್ಲಿಸಿದರು.
“ದೇವದುರ್ಗ ತಾಲೂಕಿನ ಗಬ್ಬೂರು ವ್ಯಾಪ್ತಿಯ ಖಾನಾಪುರ ಗ್ರಾಮದಲ್ಲಿ ಜನವರಿ 07ರಂದು ವಾಲ್ಮೀಕಿ ವೃತ್ತಕ್ಕೆ ಧಕ್ಕೆ ಮಾಡಿದ ಕುರಿತು ಮಾದಿಗ ಸಮುದಾಯದ ಇಬ್ಬರನ್ನು ಬಂಧಿಸಿ ದೈಹಿಕವಾಗಿ ಹಲ್ಲೆ ಮಾಡಿದ್ದು, ಪ್ರಕರಣವನ್ನು ತಾವೇ ಮಾಡಿದ್ದಾಗಿ ಒಪ್ಪಿಕೊಳ್ಳಬೇಕೆಂದು ಕಾನ್‌ಸ್ಟೆಬಲ್‌ಗಳಾದ ಹನುಮಂತ ಹಾಗೂ ಬಂದಯ್ಯ ಸ್ವಾಮಿ ಇಬ್ಬರೂ ಸೇರಿ ಯುವಕರನ್ನು ಬೆದರಿಸಿದ್ದಾರೆ. ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಪೊಲೀಸರು ಎಂದು ಆರೋಪಿಸಿದರು.
“ಸಿಡಿಆರ್ ವರದಿಯಂತೆ 14 ಜನರ ಮೇಲೆ ಮೊಬೈಲ್ ಸಂಖ್ಯೆಗಳು ಕಂಡುಬಂದಿವೆ. ಆದರೆ ಇಬ್ಬರನ್ನು ಬಂಧಿಸಿ ಇನ್ನು 12 ಜನರನ್ನು ಬಂಧಿಸಿಲ್ಲ. ಯಾವುದೇ ಕ್ರಮ ಕೈಗೊಂಡಿಲ್ಲ, ತನಿಖೆ ನಡೆಸಿಲ್ಲ. ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸಿ ತನಿಖೆ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿದರು.
“ಹಾಲುಮತ ಸಮಾಜಕ್ಕೂ ವಾಲ್ಮೀಕಿ ಸಮಾಜದವರಿಗೂ ಬಹಳ ವರ್ಷಗಳಿಂದ ದ್ವೇಷ ಇದೆ. ಇಷ್ಟೇ ಅಲ್ಲದೆ ನಾಯಕ ಜನಾಂಗದವರಿಗೆ ಈಗಾಗಲೇ ವೃತ್ತವನ್ನು ಬೇರೆ ಬೇರೆ ರೀತಿಯಲ್ಲಿ ಬದಲಾಯಿಸಬೇಕಾದ ಕಾರಣ ಹೆಚ್ಚಿನ ಕಾಮಗಾರಿ ಮಾಡುವುದಕ್ಕಾಗಿ ಸಾಮಗ್ರಿಗಳನ್ನು ಹಾಕಿದ್ದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ಎರಡೂ ಜನಾಂಗದವರನ್ನು ಬಿಟ್ಟು, ಉದ್ದೇಶ ಪೂರ್ವಕವಾಗಿ ಅಮಾಯಕರಾದ ಮಾದಿಗ ಯುವಕರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಪೊಲೀಸರಿಂದಲೇ ದೌರ್ಜನ್ಯ; ಚಿನ್ನ-ಬೆಳ್ಳಿ ವ್ಯಾಪಾರಸ್ಥರ ಸಂಘದಿಂದ ಪ್ರತಿಭಟನೆ
“ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಕ್ರಮ ಜರುಗಿಸಿ ಹಾಗೂ ದೈಹಿಕವಾಗಿ ಹಲ್ಲೆ ಮಾಡಿರುವ ಇಬ್ಬರು ಪೊಲೀಸರನ್ನು ಅಮಾನತು ಮಾಡಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಶಾಂತಕುಮಾರ ಹೊನ್ನಟಗಿ, ಎಂ ಆರ್ ಭೇರಿ, ಮುತ್ತುರಾಜ್, ಬಸವರಾಜ್, ನಾಗಪ್ಪ, ರಮೇಶ್ ಖಾನಾಪುರ, ಮಲ್ಲಯ್ಯ ಖಾನಾಪುರ ಸೇರಿದಂತೆ ಇತರರು ಇದ್ದರು.
