ಬಳ್ಳಾರಿ | ಪೊಲೀಸರಿಂದಲೇ ದೌರ್ಜನ್ಯ; ಚಿನ್ನ-ಬೆಳ್ಳಿ ವ್ಯಾಪಾರಸ್ಥರ ಸಂಘದಿಂದ ಪ್ರತಿಭಟನೆ

Date:

ಬಳ್ಳಾರಿ ಜಿಲ್ಲೆಯಲ್ಲಿ ಆಭರಣಗಳ ಕಳವು ಪ್ರಕರಣಗಳ ತನಿಖೆಯ ನೆಪದಲ್ಲಿ ಪೊಲೀಸರೇ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆಂದು ಆರೋಪಿಸಿ ‘ಚಿನ್ನ-ಬೆಳ್ಳಿ ವ್ಯಾಪಾರಸ್ಥರ ಸಂಘ’ದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಜನರು ಸೇರಿ ಎರಡು ದಿನಗಳ ಪ್ರತಿಭಟನೆ ಆರಂಭಿಸಿದರು.

- Advertisement -

ಸಂಘದ ಮುಖಂಡ ಮೊಹಮದ್ ಫಾರೂಕ್ ಮಾತನಾಡಿ, “ಮೊದಲಿನಿಂದಲೂ ನಾವು ಚಿನ್ನ, ಬೆಳ್ಳಿ ಆಭರಣ ತಯಾರಕ ಕೆಲಸವನ್ನೇ ಮಾಡಿಕೊಂಡು ಬಂದಿದ್ದೇವೆ. ಇದೇ ನಮಗೆ ಜೀವನಾಧಾರ. ಇತ್ತೀಚಿನ ದಿನಗಳಲ್ಲಿ ಕೆಲಸಗಳು ಕಡಿಮೆಯಾಗಿವೆ. ಈ ಮಧ್ಯೆ, ಕಳ್ಳತನ ಪ್ರಕರಣಗಳಲ್ಲಿ ನಮ್ಮನ್ನು ಅನುಮಾನಿಸಿ, ಅಪಮಾನಿಸಲಾಗುತ್ತಿದೆ. ಹೀಗಾಗಿ ಈ ಕೆಲಸವನ್ನೇ ತೊರೆಯುವ ಸ್ಥಿತಿಗೆ ಬಂದು ತಲುಪಿದ್ದೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟಿರ್ಕಿ...

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

“ನಮ್ಮ ಕಷ್ಟವನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆಲಿಸಬೇಕು. ನಮ್ಮ ಕಸುಬೇ ಚಿನ್ನದ ಆಭರಣ ತಯಾರಿಸುವುದು. ಯಾರೋ ತಮ್ಮ ಕಷ್ಟಕ್ಕೆ ಚಿನ್ನ ಮಾರಾಟ ಮಾಡಿರುತ್ತಾರೆ. ಅವರ ಕಷ್ಟಕ್ಕೆ ಹಣ ಬಳಸಿಕೊಂಡಿರುತ್ತಾರೆ. ಆದರೆ, ಪೊಲೀಸರು ನೀವು ಕಳ್ಳತನದ ಮಾಲು ಖರೀದಿ ಮಾಡಿದ್ದೀರಿ, ಠಾಣೆಗೆ ಬನ್ನಿರೆಂದು ಕರೆಯುತ್ತಾರೆ. ಹೀಗಾಗಿ ಕೆಲಸ ಮಾಡುವುದೇ ಕಷ್ಟವಾಗಿದೆ” ಎಂದರು.

ಶ್ರವಣಕುಮಾರ ಮಾರನಾಡಿ ಮಾತನಾಡಿ, “ಬದುಕಿಗೆ ಇರುವುದು ಇದು ಒಂದೇ‌ ಕಸುಬು, ಪೊಲೀಸರ ಕಿರುಕುಳದಿಂದ ಈ ಕೆಲಸ ಬಿಟ್ಟು ವಲಸೆ ಹೋಗುತ್ತಿದ್ದೆವೆ. ಅನಾವಶ್ಯಕವಾಗಿ ನಮ್ಮ ಮೇಲೆ ಕಳ್ಳತನದ ಆರೋಪ ಮಾಡಿ ಠಾಣೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಬಟ್ಟೆ ಬಿಚ್ಚಿ ನಿಲ್ಲಸಿ ಹೇಳಿ ಅವಮಾನ ಮಾಡುತ್ತಾರೆ. ನಾವೇ ಕಳ್ಳರು ಎಂಬಂತೆ ಬಿಂಬಿಸಿ ನಮ್ಮಿಂದ‌ ಬಂಗಾರ, ಬೆಳ್ಳಿ ವಸೂಲಿ ಮಾಡುತ್ತಾರೆ” ಎಂದರು.

ವ್ಯಾಪಾರಿ ಕುಬೇರ ಮಾತನಾಡಿ, “ನಮ್ಮನ್ನು ಠಾಣೆಗೆ ಕರೆಸುತ್ತಾರೆ ನಮ್ಮ ಅಂಗಡಿಯ ಮಾಲೀಕರು ಬಂದರೆ, ಪಿಎಸ್‌ಐ, ಪೋಲೀಸರು ಬೇರೆ ಠಾಣೆಗೆ ಕರೆದುಕೊಂಡು ಹೋಗುತ್ತಾರೆ. ಮಾಲೀಕರ ಎದುರು ‘ನಾವು ಯಾರನ್ನೂ ಕರಕೊಂಡು ಬಂದಿಲ್ಲ’ವೆಂದು ಸುಳ್ಳು ಹೇಳುತ್ತಾರೆ” ಎಂದು ಆರೋಪಿಸಿದರು.

“ಜೀವನೋಪಾಯಕ್ಕಾಗಿ ಕೆಲಸ ಮಾಡುವವರು ಕೆಜಿಗಟ್ಟಲೆ ಚಿನ್ನ ಖರೀದಿ ಮಾಡಲು ಹೇಗೆ ಸಾಧ್ಯ. ಸುಳ್ಳು ಆರೋಪ ಮಾಡಿ ನಮಗೆ ಚಿತ್ರಹಿಂಸೆ ನೀಡಲಾಗುತ್ತಿದೆ” ಎಂದು ದೂರಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕೇಂದ್ರ ಬಜೆಟ್‌ ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ

“ಜಿಲ್ಲಾಧಿಕಾರಿ ಅಥವಾ ಪೊಲೀಸ್ ವರಿಷ್ಠಾಧಿಕಾರಿಗಳು ಬಂದು ನಮ್ಮ ಮನವಿ ಆಲಿಸಿದರೆ ಪ್ರತಿಭಟನೆಯನ್ನು ಹಿಂಪಡೆಯುತ್ತೇವೆ. ಇಲ್ಲವಾದರೆ, ಎರಡು ದಿನ ಪ್ರತಿಭಟನೆ ಮುಂದುವರಿಯಲಿದೆ” ಎಂದು ಸಂಘದ ಮುಖಂಡರು ತಿಳಿಸಿದರು.

ವಿಜಯ ಆಚಾರ್ಯ ಮಾತನಾಡಿ, “ಪೊಲೀಸರ ತನಿಖೆಗೆ ನಮ್ಮದು ಯಾವುದೇ ಆಕ್ಷೇಪವಿಲ್ಲ ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ನಮ್ಮ‌ ಸಂಘದ ಮುಖಂಡರ ಗಮನಕ್ಕೆ ತಂದರೆ ನಾವು ಅವರ ವಿಚಾರಣೆಗೆ ಸಹಕರಿಸುತ್ತೇವೆ. ಯಾವುದೇ ಮುನ್ಸೂಚನೆ ಇಲ್ಲದೆ ಬಂದು ವಿಚಾರಣೆ ನೆಪದಲ್ಲಿ ಕೆಲಸಗಾರರನ್ನು ಕರೆದುಕೊಂದು ಹೋಗುವುದು‌ 20, 30 ಗ್ರಾಮ ಚಿನ್ನ, ಬೆಳ್ಳಿ ವಸೂಲಿ ಮಾಡಿದರೆ, ನಮ್ಮ ಕುಟುಂಬ ಸಹಿತ ವಿಷ ಸೇವಿಸುವುದೊಂದೇ ದಾರಿ ಉಳಿದಿರುವುದು” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೀರು, ತ್ಯಾಜ್ಯ, ಬೀದಿ ನಾಯಿಗಳ ಸಮಸ್ಯೆಗೆ ಕಡಿವಾಣ: ಕಲಬುರಗಿ ನೂತನ ಮಹಾಪೌರರ ಭರವಸೆ

ನಗರದ ಮೂಲಭೂತ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವುದರ ಜೊತೆಗೆ ಆಡಳಿತ ವ್ಯವಸ್ಥೆಯನ್ನು...

ಕಲಬುರಗಿ | ಶಿಕ್ಷಕರು ಪೀಳಿಗೆಯ ಭವಿಷ್ಯ ರೂಪಿಸುವ ಜವಾಬ್ದಾರಿ ಹೊಂದಿದ್ದಾರೆ: ಪ್ರಿಯಾಂಕ್ ಖರ್ಗೆ

ಶಿಕ್ಷಕರು ಕೇವಲ ಪಠ್ಯಕ್ರಮ ಬೋಧಿಸುವವರಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವ ಹಾಗೂ ಭವಿಷ್ಯ ರೂಪಿಸುವ...

ಕಲಬುರಗಿ | ಶರಣರ ಸಮಾನತೆಯ ತತ್ವಕ್ಕೆ ಹಿಂದೂತ್ವದ ಬಣ್ಣ : ಸೆ.25ರಂದು ಬೃಹತ್ ಹೋರಾಟ

ಬಸವಾದಿ ಶರಣರ ಸಮಾನತೆ, ಜಾತಿ ವಿರೋಧಿ ಹಾಗೂ ಮಾನವೀಯ ಮೌಲ್ಯಗಳನ್ನು ತಿರುಚಿ,...

ಕಲಬುರಗಿ | ಸಿದ್ದರಾಮೇಶ್ವರ ಜಯಂತಿ ಪ್ರಯುಕ್ತ ಉಚಿತ ಆರೋಗ್ಯ, ನೇತ್ರ ತಪಾಸಣಾ ಶಿಬಿರ

ಜಿಡಾಗಾ ಮುಗಳಖೋಡ ಮಠದ ಪೂಜ್ಯ ಷಡಕ್ಷರಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಅವರ...