ಅಪರಿಚಿತರ ಅನಾಮಿಕ ಸ್ಪ್ಯಾಮ್ ಕರೆಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ವಾಟ್ಸಾಪ್ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಈ ಪೀಚರ್ನಿಂದ ವಾಟ್ಸಾಪ್ ಬಳಕೆದಾರರು ಅಪರಿಚಿತ ಒಳಬರುವ ಕರೆಗಳು ಬಾರದಂತೆ ತಡೆಯಬಹುದಾಗಿದೆ. ಈ ಫೀಚರ್ ಈಗಾಗಲೇ ವಾಟ್ಸಾಪ್ಗೆ ಅಳವಡಿಸಲಾಗಿದ್ದು, ಸೆಟ್ಟಿಂಗ್ಗೆ ಹೋಗಿ ಈಗಲೇ ಚಾಲ್ತಿಗೊಳಿಸಿಕೊಳ್ಳಬಹುದು.
ವಾಟ್ಸಪ್, ಇಷ್ಟು ದಿನ ಈ ಫೀಚರ್ ಅನ್ನು ಟೆಸ್ಟಿಂಗ್ ಹಂತದಲ್ಲಿರಿಸಿತ್ತು. ಇದೀಗ ಅಂತಿಮವಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ದೊರಕುವಂತೆ ಮಾಡಲಾಗಿದೆ. ಇದನ್ನು ಪ್ರೈವೆಸಿ ಸೆಟ್ಟಿಂಗ್ ಮೆನುವಿನಲ್ಲಿ ಆನ್ ಮಾಡಿಕೊಳ್ಳಬಹುದು. ಈ ರೀತಿ ಆನ್ ಮಾಡಿದ ಬಳಿಕ ಅಪರಿಚಿತ ನಂಬರ್ಗಳಿಂದ ಬರುವ ಕರೆಗಳು ಸ್ವಯಂಚಾಲಿತವಾಗಿ ಬ್ಲಾಕ್ ಆಗಲಿವೆ. ನೀವು ಆಂಡ್ರಾಯ್ಡ್ ಅಥವಾ ಐಫೋನ್ನಲ್ಲಿ ಇತ್ತೀಚಿನ ವಾಟ್ಸಾಪ್ ಅಪ್ಡೇಟ್ ಮಾಡಿದ್ದರೆ. ಸುಲಭವಾಗಿ ಸೆಟ್ಟಿಂಗ್ ಮಾಡಿಕೊಳ್ಳಬಹುದು.
ಈ ಸುದ್ದಿ ಓದಿದ್ದೀರಾ? ಸಂದೇಶಗಳನ್ನು ಎಡಿಟ್ ಮಾಡುವ ಆಯ್ಕೆ ಪರಿಚಯಿಸಿದ ವಾಟ್ಸ್ಆ್ಯಪ್
- ಈ ಪೀಚರ್ ಅನ್ನು ಅಳವಡಿಸಿಕೊಳ್ಳುವ ವಿಧಾನ ಈ ರೀತಿಯಿದೆ.
- ಮೊದಲಿಗೆ ವಾಟ್ಸಾಪ್ ಓಪನ್ ಮಾಡಿ.
- ಮೇಲ್ಬಾಗದಲ್ಲಿ ಬಲಭಾಗದಲ್ಲಿರುವ ಮೂರು ಚುಕ್ಕಿಯ ಮೆನು ಬಟನ್ ಕ್ಲಿಕ್ ಮಾಡಿ
- ತದನಂತರ ಸೆಟ್ಟಿಂಗ್ಸ್ ಆಯ್ಕೆ ಕ್ಲಿಕ್ ಮಾಡಿ
- ಅನಂತರ ಪ್ರೈವೆಸಿ ಆಯ್ಕೆ ಕ್ಲಿಕ್ ಮಾಡಿ
- ಆಮೇಲೆ ಕಾಲ್ಸ್ ಆಯ್ಕೆ ಕ್ಲಿಕ್ ಮಾಡಿ
- Silence Unknown Callers ಎಂಬ ಆಯ್ಕೆಯನ್ನು ಸಕ್ರಿಯಗೊಳಿಸಿ.
ಈ ರೀತಿ ಮಾಡಿದ ಬಳಿಕ ಸ್ಪ್ಮಾಮ್ ಕರೆಗಳು ವಾಟ್ಸಾಪ್ನಲ್ಲಿ ನಿಂತು ಹೋಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಸೇವ್ ಮಾಡಿದ ನಂಬರ್ಗಳ ಕರೆಗಳನ್ನು ಮಾತ್ರ ಸ್ವೀಕರಿಸಬಹುದು.
