ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ದಳದುಳಿ
ಕಾಡಿ ಬೇಡಿ ಉಂಬವರೆಲ್ಲರು
ಬ್ರಹ್ಮನ ಸಂಪ್ರದಾಯ.
ಕುಟ್ಟಿ ಕುಟ್ಟಿ ಉಂಬವರೆಲ್ಲರು
ವಿಷ್ಣುವಿನ ಸಂಪ್ರದಾಯ.
ದಳದುಳಿಯಲಿ ಉಂಬವರೆಲ್ಲರು
ಯಮನ ಸಂಪ್ರದಾಯ.
ಇವಾವವನೂ ಹೊದ್ದದೆ
ಭಕ್ತಿಭಿಕ್ಷವನು ಉಂಬವರೆಲ್ಲ
ನಿಮ್ಮ ಸಂಪ್ರದಾಯ
ಕಾಣಾ ಗುಹೇಶ್ವರಾ.
ಪದಾರ್ಥ:
ಉಂಬವ = ಉಣ್ಣುವವ
ದಳದುಳಿ = ಕೊಳ್ಳೆಹೊಡಿ
ವಚನಾರ್ಥ:
ಸಂಪ್ರದಾಯ ಎಂಬ ಪದವನ್ನು ವಿಡಂಬನಾತ್ಮಕವಾಗಿ ಬಿಂಬಿಸಿರುವ ಈ ವಚನದಲ್ಲಿ ಮೂರು ವಿಭಿನ್ನ ರೀತಿಯ ಮನೋಧರ್ಮಗಳನ್ನು ವಿಶ್ಲೇಶಿಸಿ ಕೊನೆಯಲ್ಲಿ ಶರಣ ಸಂಪ್ರದಾಯವನ್ನು ವ್ಯಾಖ್ಯಾನಿಸಲಾಗಿದೆ. ಈ ಜಗತ್ತಿನಲ್ಲಿ ಬ್ರಹ್ಮನಿಂದ ಸೃಷ್ಟಿಯಾಗಿ ಸಹಜ ಜೀವನ ನಡೆಸುವವರೆಲ್ಲ ತಮ್ಮ ಅಸ್ತಿತ್ವಕ್ಕಾಗಿ ತಮ್ಮ ಉಳಿವಿಗಾಗಿ ಇನ್ನೊಬ್ಬರಲ್ಲಿ ಕಾಡಿ ಬೇಡಿ ಉಣ್ಣುವವರೇ. ಕಾಡಿ ಬೇಡುವ ಪ್ರಕ್ರಿಯೆ ನ್ಯಾಯಬದ್ಧವೂ ಆಗಿರಬಹುದು ಅಥವಾ ಅಕ್ರಮವೂ ಆಗಿರಬಹುದು. ವಿಷ್ಣುವಿನ ಸಂಪ್ರದಾಯವೆಂದರೆ ತಮ್ಮ ಪಾವಿತ್ರತೆಯನ್ನು ತಮ್ಮ ಶ್ರೇಷ್ಠತೆಯನ್ನು ಮುಂದಿಟ್ಟುಕೊಂಡು ಅಧಿಕಾರಯುತವಾಗಿ ಕುಟ್ಟಿ ಕುಟ್ಟಿ ಕೇಳಿ ಪಡೆದು ಉಣ್ಣುವುದು. ಇನ್ನು ಯಮನ ಸಂಪ್ರದಾಯ. ದಳದುಳಿಯಲಿ ಅಂದರೆ ದೌರ್ಜನ್ಯ ಮಾಡಿ ಕೊಳ್ಳೆ ಹೊಡೆದು ಇನ್ನೊಬ್ಬರಿಂದ ಕಸಿದುಕೊಂಡು ಉಣ್ಣುವುದು. ಇವೆಲ್ಲದರಿಂದ ಹೊರತಾಗಿ ಭಕ್ತಿ ಭಾವದಿಂದ ಸತ್ಯ ಮಾರ್ಗದಿಂದ ಸಂಪಾದಿಸಿ ಉಣ್ಣುವುದು ಶರಣ ಸಂಪ್ರದಾಯ.
ಪದ ಪ್ರಯೋಗಾರ್ಥ:
ದಳದುಳಿ ಅಂದರೆ ಕೊಳ್ಳೆಹೊಡಿ ಎಂಬ ಅರ್ಥ ಬರುತ್ತದೆ. ಈ ವಚನದ ಸಂದರ್ಭದಲ್ಲಿ ಅಲ್ಲಮನು ಕೊಳ್ಳೆಹೊಡಿ, ಲೂಟಿ ಮಾಡು, ಸೂರೆ ಮಾಡು ಎಂಬ ಯಾವುದೇ ಪರಿಚಿತ ಶಬ್ದವನ್ನು ಬಳಸದೆ ದಳದುಳಿ ಎಂಬ ವಿರಳವಾದ ಪದ ಬಳಸಿರುವುದು ಅಲ್ಲಮನಿಗಿದ್ದ ಕನ್ನಡ ಭಾಷಾ ಪ್ರೌಢಿಮೆಗೆ ನಿದರ್ಶನವಾಗಿದೆ. ದಳದುಳಿ ಇತ್ತೀಚಿನ ಕನ್ನಡ ಬರವಣಿಗೆಯಲ್ಲಿ ಅಷ್ಟಾಗಿ ಬಳಕೆ ಆಗದಿರುವ ಪದ. ಈ ವಚನದಲ್ಲಿ ಅಲ್ಲಮ ಬಳಸಿರುವ ಬೇರೆ ಎಲ್ಲಾ ಪದಗಳು ಸುಲಭದಲ್ಲಿ ಅರ್ಥವಾಗುವಂತಹ ಪದಗಳೇ. ಆದರೆ ದಳದುಳಿ ಎಂಬ ಪದ ಮಾತ್ರ ಕ್ಲಿಷ್ಟವಾದದ್ದು ಮತ್ತು ಅನನ್ಯವಾದದ್ದು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.