ಜುಲೈ 1 ರಿಂದ ಹೊಸ ಜಿಎಸ್‌ಟಿ ನಿಯಮ; ಹಳೆಯ ಬಾಕಿ ಸಲ್ಲಿಸಲು ಜೂ.30 ಕೊನೆಯ ದಿನ

Date:

ಮೂರು ವರ್ಷಕ್ಕಿಂತ ಹಳೆಯ ಜಿಎಸ್​​ಟಿ ಸಲ್ಲಿಸದೇ ಬಾಕಿ ಉಳಿಸಿಕೊಂಡಿರುವವರಿಗೆ ಈ ತಿಂಗಳ ಕೊನೆಯವರೆಗೆ ಅವಕಾಶ ಕೊಡಲಾಗಿದೆ. ಇಷ್ಟು ಹಳೆಯ ಜಿಎಸ್​​ಟಿ ಸಲ್ಲಿಸಲು ಜೂನ್ 30ಕ್ಕೆ ಅಂತಿಮ ದಿನವಾಗಿದೆ.

- Advertisement -

ಜುಲೈ 1ರಿಂದ ಹಳೆಯ ಮೂರು ವರ್ಷದ ಹಿಂದಿನ ಜಿಎಸ್​​ಟಿ ರಿಟರ್ನ್ಸ್ ಸಲ್ಲಿಸಲು ಆಗುವುದಿಲ್ಲ. ಒಂದು ವೇಳೆ, ಪಾವತಿದಾರರು ಜೂನ್ 30ರೊಳಗೆ ಜಿಎಸ್​​ಟಿ ಸಲ್ಲಿಸದೇ ಇದ್ದರೆ ಆ ತೆರಿಗೆಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ಸಿಗುವುದಿಲ್ಲ. ಇದರ ಜೊತೆಗೆ, ತೆರಿಗೆ ಅಧಿಕಾರಿಗಳು ನಿಮ್ಮ ಮೇಲೆ ಕ್ರಮಕ್ಕೆ ಮುಂದಾಗಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಜುಲೈ 1ರಿಂದ ಪಾವತಿದಾರರಿಗೆ ಮೂರು ವರ್ಷದವರೆಗೆ ಮಾತ್ರ ಜಿಎಸ್​​ಟಿ ಸಲ್ಲಿಸಲು ಅವಕಾಶ ಇರುತ್ತದೆ. ಅದಕ್ಕೂ ಹಿಂದಿನ ತೆರಿಗೆಗೆ ರಿಟರ್ನ್ ಫೈಲ್ ಮಾಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಮೂರು ವರ್ಷದ ವಿಂಡೋವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಂದರೆ, ಅದು ಎರಡು ವರ್ಷಕ್ಕೆ ಸೀಮಿತಗೊಳ್ಳಬಹುದು. ಅಥವಾ ಒಂದು ವರ್ಷಕ್ಕೂ ಸೀಮಿತಗೊಳ್ಳಬಹುದು.

ಇದನ್ನು ಓದಿದ್ದೀರಾ? ಮಣಿಪುರದಲ್ಲಿ ಹೆಚ್ಚಾದ ಪ್ರತಿಭಟನೆ: 5 ದಿನ ಇಂಟರ್‌ನೆಟ್ ಸೇವೆ ಸ್ಥಗಿತ

ಒಂದು ವೇಳೆ ಎರಡು ವರ್ಷಕ್ಕೆ ಈ ವಿಂಡೋ ಸೀಮಿತಗೊಳಿಸಲು ನಿರ್ಧರಿಸಿದರೆ, ಎರಡು ವರ್ಷದಷ್ಟು ಹಿಂದಿನ ಜಿಎಸ್​​ಟಿ ರಿಟರ್ನ್ ಫೈಲ್ ಮಾಡಲು ಆಗುವುದಿಲ್ಲ. ಸದ್ಯ ಇದು ಮೂರು ವರ್ಷ ಇದೆ. ಇಂದಿನ (2025ರ ಜೂನ್) ಜಿಎಸ್​​ಟಿ ರಿಟರ್ನ್ ಅನ್ನು ಸಲ್ಲಿಸಲು ಪಾವತಿದಾರರು 2028ರ ಜೂನ್​​ವರೆಗೂ ಸಮಯಾವಕಾಶ ಹೊಂದಿರುತ್ತಾರೆ.

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಎಂದರೇನು?

ನೀವು ಒಂದು ಉತ್ಪನ್ನ ತಯಾರಿಸಬೇಕಾದರೆ ಕಚ್ಛಾ ವಸ್ತುಗಳನ್ನು ಖರೀದಿಸುವಾಗ ತೆರಿಗೆ ಪಾವತಿಸಿರುತ್ತೀರಿ. ಆದರೆ, ನಿಮ್ಮ ಉತ್ಪನ್ನ ಮಾರುವಾಗಲೂ ನೀವು ತೆರಿಗೆ ಪಾವತಿಸುತ್ತೀರಿ. ಒಂದೇ ಉತ್ಪನ್ನಕ್ಕೆ ನೀವು ಎರಡೆರಡು ಬಾರಿ ಟ್ಯಾಕ್ಸ್ ಕಟ್ಟಿದಂತಾಗುತ್ತದೆ. ಇದನ್ನು ತಪ್ಪಿಸಲು ಸರ್ಕಾರವು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ಒದಗಿಸಿದೆ. ನೀವು ಕಚ್ಛಾ ವಸ್ತುಗಳ ಖರೀದಿ ವೇಳೆ ಪಾವತಿಸಿದ ತೆರಿಗೆ ಮೊತ್ತವನ್ನು ಮರಳಿ ಪಡೆಯಬಹುದು. ಇದನ್ನೇ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಎನ್ನಲಾಗುತ್ತದೆ. ಇದನ್ನು ಪಡೆಯಬೇಕಾದರೆ ನೀವು ಜಿಎಸ್​​ಟಿ ರಿಟರ್ನ್ ಫೈಲ್ ಮಾಡಬೇಕು.

ವ್ಯವಹಾರ ನಡೆಸುವವರಿಗೆ ಜಿಎಸ್​​ಟಿ ಅನ್ವಯ ಆಗುತ್ತದೆ. ಜಿಎಸ್​​ಟಿ ನೊಂದಾವಣಿ ಮಾಡಿಸಿರಬೇಕು. ಹೀಗಿದ್ದಾಗ, ನೀವು ಈ ಕ್ರಮ ಅನುಸರಿಸಿ ಜಿಎಸ್​​ಟಿ ರಿಟರ್ನ್ ಫೈಲ್ ಮಾಡಬಹುದು. ಅದಕ್ಕೆ ಮುನ್ನ ಎಲ್ಲ ಇನ್ವಾಯ್ಸ್ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಜಿಎಸ್‌ಟಿ ವೆಬ್‌ಸೈಟ್‌ಗೆ ಹೋಗಿ ಸಲ್ಲಿಸಬೇಕು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ.20ರಿಂದ ದೆಹಲಿಯಲ್ಲಿ SCO ಸಭೆ; ಹದಗೆಟ್ಟಿರುವ ಸಂಬಂಧದ ನಡುವೆಯೇ ಪಾಕ್‌ ಸಚಿವರಿಗೆ ಭಾರತದ ಆಹ್ವಾನ

ಆಪರೇಷನ್ ಸಿಂಧೂರ್ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಸೇನಾ ಸಂಘರ್ಷ...

ಔಷಧ ಮಾರಾಟದಲ್ಲಿ ಲೂಟಿ! MRP-ಮಾರಾಟ ದರದ ನಡುವೆ ಇಷ್ಟೊಂದು ಅಂತರವೇಕೆ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಭಾರತದಲ್ಲಿ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಮತ್ತು ಚಿಲ್ಲರೆ ವ್ಯಾಪಾರಿಗಳು...

ಯುಪಿ ಚುನಾವಣೆ | ಮತದಾರರ ಮನಗೆಲ್ಲಲು ಯೋಗಿ ಸಂಪುಟದ ಮೆಗಾ ಪ್ಲ್ಯಾನ್; ಹಸು ಖರೀದಿಗೆ ಸಬ್ಸಿಡಿ, ಉಚಿತ ಕೋಳಿ ಮರಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ (2027ರ ಫೆಬ್ರವರಿ–ಮಾರ್ಚ್‌ನಲ್ಲಿ ನಡೆಯುವ ನಿರೀಕ್ಷೆಯಿದೆ)...

ಪ್ರಶಾಂತ್ ಕಿಶೋರ್ ಆಪ್ತ, ‘ಜನ್ ಸುರಾಜ್’ ಡಿಜಿಟಲ್ ಮ್ಯಾನೇಜರ್ ರೈಲಿನಿಂದ ನಾಪತ್ತೆ, ನಿಗೂಢ ಸಾವು

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ 'ಜನ್ ಸುರಾಜ್ ಪಾರ್ಟಿ'ಯ (ಜೆಎಸ್‌ಪಿ)...