ಮಂಡ್ಯ ಜಿಲ್ಲೆ, ಕೃಷ್ಣರಾಜ ಪೇಟೆ ತಾಲ್ಲೂಕು ಕತ್ತರಘಟ್ಟ ಗ್ರಾಮದಲ್ಲಿ ಅಮಾನುಷವಾಗಿ ಸವರ್ಣಿಯ ಯುವಕನೋರ್ವನಿಂದ ದಲಿತ ಯುವಕನ ಸಜೀವ ದಹನ ಪ್ರಕರಣದ ಸಂಭಂದ ಸಿಐಡಿ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.
ಸಿಐಡಿ ಡಿವೈಎಸ್ಪಿ ಉಮೇಶ್ ರವರ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ದೇವರಾಜ್ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಗಳು ಮೃತ ಜಯಕುಮಾರ್ ಪತ್ನಿ ಹಾಗೂ ಕುಟುಂಬದವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಕೃಷ್ಣರಾಜ ಪೇಟೆಗೆ ತೆರಳಿ ಪ್ರಕರಣಕ್ಕೆ ಸಬಂಧಪಟ್ಟವರ ಹೇಳಿಕೆ ಪಡೆದುಕೊಳ್ಳುತಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ಅನಿಲ್ ಕುಮಾರ್ ಐದಾರು ವರ್ಷಗಳಿಂದ ಮೃತ ಜಯಕುಮಾರ್ ಜಮೀನಿನಲ್ಲಿ ಹುಲ್ಲು ಮೆದೆ ಹಾಕಿದಲ್ಲದೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡುತಿದ್ದ ಸಂಭಂದ ಮೇ. 16 ರಂದು ಕೃಷ್ಣರಾಜ ಪೇಟೆ ಪೊಲೀಸ್ ಠಾಣೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಅದಾದ ಮರುದಿನವೇ ದಲಿತ ಯುವಕ ಜಯಕುಮಾರ್ ನನ್ನು ಬೆಂಕಿ ಹಚ್ಚಿದ ಹುಲ್ಲು ಮೆದೆಗೆ ದೂಡಿ ಸಜೀವ ದಹನದ ಆರೋಪದಡಿ ಅನಿಲ್ ಕುಮಾರ್ ನನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಅತ್ತೂರು ಕೊಲ್ಲಿ ಬುಡಕಟ್ಟು ಜನರನ್ನು ಕಾಡಿನಿಂದ ತೆರವುಗೊಳಿಸಲು ಮುಂದಾದ ಅರಣ್ಯ ಇಲಾಖೆ
ಮೇ. 27 ರಂದು ಪ್ರಗತಿಪರ ಸಂಘಟನೆಗಳು ಬೃಹತ್ ಕೆ ಆರ್ ಪೇಟೆ ಚಲೋ ನಡೆಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣದ ಹಾದಿ ತಪ್ಪಿಸಲು ನೇರವಾಗಿದ್ದ ಪೊಲೀಸ್ ರನ್ನು ಅಮಾನಗೊಳಿಸಲಾಗಿತ್ತು.