- ನೀತಿ ಸಂಹಿತೆ ಉಲ್ಲಂಘಿಸಿ ಕಾರ್ಯಕ್ರಮ ಆಯೋಜನೆ
- ಸಚಿವೆ ಸಹಿತ ಇಬ್ಬರ ಮೇಲೆ ನಿಪ್ಪಾಣಿ ಠಾಣೆಗೆ ದೂರು
ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲಾಗಿದೆ. ನಿಪ್ಪಾಣಿ ಪಟ್ಟಣದ ಮುನ್ಸಿಪಲ್ ಆವರಣದಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಅರಿಶಿನ-ಕುಂಕುಮ ಕಾರ್ಯಕ್ರಮ ವೇಳೆ ಚುನಾವಣಾ ನಿಯಮ ಉಲ್ಲಂಘಿಸಿದ ಆರೋಪ ಸಚಿವೆ ಹೆಗಲೇರಿದೆ.
ಈ ಹಿನ್ನೆಲೆಯಲ್ಲಿ ಸಚಿವರನ್ನೂ ಒಳಗೊಂಡಂತೆ ಸೇರಿ ಇಬ್ಬರ ವಿರುದ್ಧ ನಿಪ್ಪಾಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಿಶಿನ ಕುಂಕುಮ ಕಾರ್ಯಕ್ರಮದಲ್ಲಿ ಶಶಿಕಲಾ ಜೊಲ್ಲೆ ಸಭಿಕರೊಂದಿಗೆ ಕುಳಿತುಕೊಂಡಿದ್ದರು. ಈ ವೇಳೆ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ ಇರುವ ಹಾಡಿನ ವಿಡಿಯೋ ಅನ್ನು ಬಿತ್ತರಿಸಲಾಗಿತ್ತು.
ಅದರಲ್ಲಿ ಬಿಜೆಪಿ ಚಿಹ್ನೆಯನ್ನೂ ಪ್ರದರ್ಶಿಸಲಾಗಿತ್ತು. ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? :ಬಿಜೆಪಿಗೆ ʼಮಾರಿ ಹಬ್ಬʼಮಾಡಲು ಜನ ʼಮತದಾನದ ದೊಣ್ಣೆʼಹಿಡಿದು ಕಾಯುತ್ತಿದ್ದಾರೆ: ಕೃಷ್ಣ ಬೈರೇಗೌಡ
ನಿಪ್ಪಾಣಿ ನಗರಸಭೆ ಪೌರಾಯುಕ್ತ ಜಗದೀಶ ಹುಲಗಜ್ಜೆ ಈ ಸಂಬಂಧ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಇತ್ತ ಚುನಾವಣಾ ಅಧಿಕಾರಿಗಳು ನೀಡಿದ ಅನುಮತಿ ಉಲ್ಲಂಘಿಸಿದ್ದರಿಂದ ನಿಪ್ಪಾಣಿ ಠಾಣೆಯಲ್ಲಿ ಸಚಿವರ ದೂರು ದಾಖಲಾಗಿದೆ.