ಬಿಜೆಪಿಗೆ ʼಮಾರಿ ಹಬ್ಬʼ ಮಾಡಲು ಜನ ʼಮತದಾನದ ದೊಣ್ಣೆʼ ಹಿಡಿದು ಕಾಯುತ್ತಿದ್ದಾರೆ: ಕೃಷ್ಣ ಬೈರೇಗೌಡ

Date:

  • ಅಕ್ರಮಕ್ಕೆ ಸಹಕರಿಸಲು ಅಧಿಕಾರಿಳಿಗೆ ಸಿಎಂ ಸೂಚಿಸಿದ್ದಾರೆನ್ನುವ ಆರೋಪ
  • ಚುನಾವಣಾ ಆಯೋಗಕ್ಕೆ ದೂರು ನೀಡಿದ ಮಾಜಿ ಸಚಿವ ಕೃಷ್ಣ ಬೈರೇಗೌಡ

ಅಕ್ರಮ ಅನ್ಯಾಯದ ಮೂಲಕವೇ ಅಧಿಕಾರ ಹಿಡಿದು ಆಡಳಿತ ಮಾಡಿದ್ದ ಬಿಜೆಪಿ ಗೆ ಜನ ಮುಂದಿನ ಬಾರಿ ʼಮಾರಿ ಹಬ್ಬʼ ಮಾಡಲು ಕಾಯುತ್ತಿದ್ದಾರೆ ಎಂದು ಕಾಂಗ್ರೆಸ್‌ ಮಾಜಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನನ್ನ ಕ್ಷೇತ್ರದಲ್ಲಿ ಬಿಜೆಪಿಯ ಚುನಾವಣಾ ಅಕ್ರಮಗಳಿಗೆ ಅಧಿಕಾರಿಗಳು ಸಹಕರಿಸುತ್ತಿದ್ದಾರೆ. ದಾಖಲೆ ಸಲ್ಲಿಸಿದರೂ ಆ ಪಕ್ಷದ ವಿರುದ್ಧ ತನಿಖಾ ಜವಾಬ್ದಾರಿ ಹೊತ್ತವರು ಕ್ರಮ ತೆಗೆದುಕೊಳ್ಳುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಕಮಲ ಪಕ್ಷದ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆಯೋಗ ಕಚೇರಿ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಚುನಾವಣಾ ಅಕ್ರಮಗಳನ್ನು ನಡೆಸುತ್ತಿದೆ. ಇದಕ್ಕೆ ಅಧಿಕಾರಿಗಳು ಸಹಕರಿಸುತ್ತಿದ್ದಾರೆ.

ಬಿಜೆಪಿ ಮತದಾರರಿಗೆ ಹಂಚುತ್ತಿರುವ ವಸ್ತುಗಳನ್ನು ಅಧಿಕಾರಿಗಳು ವಶ ಪಡಿಸಿಕೊಳ್ಳುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಕ್ಷೇತ್ರದಲ್ಲಿ ದಾಖಲೆ ಸಹಿತ ಸಿಕ್ಕ 3.6 ಕೋಟಿ ಮೌಲ್ಯದ ಬಿಜೆಪಿಯ ಅಕ್ರಮ ಹಂಚಿಕೆಯ ಸಾಮಗ್ರಿಗಳನ್ನು ದಾಖಲೆ ಸಹಿತ ಹಿಡಿದುಕೊಡಲಾಗಿದೆ. ಇಷ್ಟಾದರೂ ಚುನಾವಣಾಧಿಕಾರಿಗಳು ತಾರತಮ್ಯ ಮಾಡುತ್ತಾ ಕಾನೂನು ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ.

ಪೂರ್ವಗ್ರಹ ಪೀಡಿತರಾಗಿ ಕಾಂಗ್ರೆಸ್ ವಿರುದ್ಧವೇ ಶಿಸ್ತುಕ್ರಮ ಜರುಗಿಸುತ್ತಿದ್ದಾರೆ. ಇಂತಹ ಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹ ಮಾಡಿರುವುದಾಗಿ ಕೃಷ್ಣ ಬೈರೇಗೌಡ ಹೇಳಿದರು.

ಬಿಜೆಪಿಯ ಅಭ್ಯರ್ಥಿ ಮೇಲೆ ಇಲ್ಲಿಯವರೆಗೆ ಎಫ್ಐಆರ್ ಆಗಿಲ್ಲ. ಅವರ ಹೆಸರು ಪ್ರಕರಣದಲ್ಲಿ ಬರುವುದಿಲ್ಲ, ಅಧಿಕಾರಿಗಳು ಬಿಜೆಪಿ ಅಕ್ರಮಕ್ಕೆ ರಕ್ಷಣೆ ಕೊಡುತ್ತಿದ್ದಾರೆ.

ಕಮಲ ಪಕ್ಷದ ಏಜೆಂಟರುಗಳಂತೆ ಕೆಲಸ ಮಾಡುತ್ತಿದ್ದಾರೆ. ಮಂತ್ರಿ, ಮುಖ್ಯಮಂತ್ರಿ, ಸಂತೋಷ್ ಅವರುಗಳ ಒತ್ತಡದಿಂದ ಆ ರೀತಿ ಮಾಡುತ್ತಿದ್ದಾರೆ ಎಂದು ಕೃಷ್ಣ ಬೈರೇಗೌಡ ಕಿಡಿಕಾರಿದರು.ಕೆಬಿಜಿ ಎಲೆಕ್ಷನ್‌ ಕಮಿಷನ್‌

ಸಿದ್ದರಾಮಯ್ಯ ಎರಡೂ ಕ್ಷೇತ್ರಗಳಲ್ಲೂ ಗೆಲ್ಲುತ್ತಾರೆ :

ನಮ್ಮ ನಾಯಕರಾದ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವುದನ್ನು ವರಿಷ್ಠ ನಾಯಕರು ತೀರ್ಮಾನಿಸುತ್ತಾರೆ.

ಕೋಲಾರದಲ್ಲಿ ಅವರು ಸ್ಪರ್ಧೆ ಮಾಡಬೇಕೆನ್ನುವುದು ಅಲ್ಲಿನ ಜನರ ಅಭಿಪ್ರಾಯ. ಅವರು ವರುಣಾದಲ್ಲೂ ಕೋಲಾರದಲ್ಲೂ ಗೆದ್ದೇ ಗೆಲ್ಲುತ್ತಾರೆ ಎಂದು ಕೃಷ್ಣ ಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ದ ವಾಗ್ದಾಳಿ :
ನಮ್ಮ ಬಗ್ಗೆ ಕನಿಕರದ ಮಾತನಾಡುವ ಬಿಜೆಪಿಯವರು ಈ ಬಾರಿಯ ಚುನಾವಣೆಯಲ್ಲಿ ಧೂಳೀಪಟ ಆಗುವುದನ್ನ ತಡೆಯುವುದರ ಬಗ್ಗೆ ಗಮನ ಹರಿಸಲಿ. ನಾಲ್ಕು ವರ್ಷಗಳಿಂದ 40% ಹೇಸಿಗೆ ತಿಂದಿರುವ ಇವರು 60 ಸ್ಥಾನ ಗೆಲ್ಲುವುದೂ ಕಷ್ಟ ಎಂದು ಬೈರೇಗೌಡ ಅಣಕವಾಡಿದರು.

ಈ ಸುದ್ದಿ ಓದಿದೀರಾ? : ರಾಜಕೀಯ ಅನುಭದಿಂದ ಹೇಳುವೆ, ಮುಂದಿನ ಬಾರಿ ಕಾಂಗ್ರೆಸ್ ಪಕ್ಷದ್ದೇ ಸರ್ಕಾರ: ಸಿದ್ದರಾಮಯ್ಯ

ಕಮಲ ಪಕ್ಷದ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಇವರಿಗೆ ಮಾರಿ ಹಬ್ಬ ಮಾಡಬೇಕು ಎಂದು ಜನ ಮತದಾನದ ದೊಣ್ಣೆ ಹಿಡಿದು ಕಾಯುತ್ತಾ ಕೂತಿದ್ದಾರೆ. ಯಡಿಯೂರಪ್ಪ ಅವರನ್ನು ಮೂಲೆ ಗುಂಪು ಮಾಡಿರುವ ಪಕ್ಷಕ್ಕೆ ಮಂಗಳಾರತಿ ಎತ್ತಲು ಕಾದು ನಿಂತಿದ್ದಾರೆ ಎಂದು ಮಾಜಿ ಸಚಿವರು ಚಾಟಿ ಬೀಸಿದರು.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಾಮರಾಜನಗರ | ಮತದಾನ ಬಹಿಷ್ಕಾರ; ಮನವೊಲಿಸಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ

ರಾಜ್ಯ 14 ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ಕೆಲವೆಡೆ ಮತದಾನ ಬಹಿಷ್ಕಾರ...

ಮೋದಿಯವರ ‘ಚಾರ್‌ ಸವ್ ಪಾರ್’ ಘೋಷಣೆ ಹಿಂದಿನ ಉದ್ದೇಶವೇನು? ಅರಿತಿದ್ದಾರೆಯೇ ‘ಒಬಿಸಿ’ಗಳು!

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದಿಲ್ಲ. ಮೀಸಲಾತಿಯನ್ನು...

ಭಯಗೊಂಡಿರುವ ಪ್ರಧಾನಿ ವೇದಿಕೆಯಲ್ಲೇ ಕಣ್ಣೀರು ಹಾಕಬಹುದು: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ನಡೆಸಿರುವ ವಾಗ್ದಾಳಿಗೆ ತಿರುಗೇಟು ನೀಡಿರುವ...

ಉಡುಪಿ | ನಾನು ಮತ ಹಾಕಿರುವ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ: ನಟ ರಕ್ಷಿತ್ ಶೆಟ್ಟಿ

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ರಾಜಕಾರಣಿಗಳು,...