ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಜುಲೈ 29 ರಂದು ಬಿಎ, ಬಿ ಕಾಂ, ಬಿ ಬಿ ಎಂ ಪದವಿ ಪರೀಕ್ಷೆ ನಡೆಯುವ ಮುನ್ನ ಮಧ್ಯಾಹ್ನ 12:30ಕ್ಕೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ತಿಳಿದ ತಕ್ಷಣ ಜನತಾ ಪರಿವಾರದ ಮೊಹಮ್ಮದ್ ಸಿರಾಜುದ್ದಿನ್ ಶಾಹಬಾದಿ ವಾಟ್ಸಪ್ ಮೂಲಕ ಪೋಲಿಸರಿಗೆ ತಿಳಿಸಿದ್ದಾರೆ. ನಂತರ ಜುಲೈ 30ರಂದು ಸಂಜೆ 7ಗಂಟೆಗೆ ಪೊಲೀಸ್ ಠಾಣೆಗೆ ಹಾಜರಾಗಿ ಪ್ರಶ್ನೆ ಪತ್ರಿಕೆ ಸೂ
ಸೋರಿಕೆಯಾಗಿರುವುದರ ಕುರಿತು ವಿವಿ ಸಿಬ್ಬಂದಿಯೋರ್ವರ ಮೇಲೆ ಲಿಖಿತವಾಗಿ ದೂರು ನೀಡಿದ್ದಾರೆ.
ವಿಶ್ವವಿದ್ಯಾಲಯ ಸಿಬ್ಬಂದಿಯೋರ್ವನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೀಡಿರುವ ದೂರಿನ ಮೇರೆಗೆ ಬ್ರಹ್ಮಪುರ ಠಾಣೆಯ ಪೊಲೀಸರು ವಿವಿಯ ಸಿಬ್ಬಂದಿ ವಿರುದ್ಧ ಪ್ರಕರಣ ಬಿಎನ್‌ಎಸ್ ಅಡಿಯಲ್ಲಿ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
