ಬೆಳಗಾವಿ ಜಿಲ್ಲೆಯ ಬೈಲೂರಿನ ನಿಷ್ಕಲ ಮಂಟಪ ಮಠದ ನಿಜಗುಣಾನಂದ ಸ್ವಾಮೀಜಿಗೆ ಪದೇ-ಪದೇ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಬಿಗಿ ಭದ್ರತೆ ಒದಗಿಸಬೇಕು. ದುಷ್ಕರ್ಮಿಗಳನ್ನು ಪತ್ತೆಮಾಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ನಿಜಗುಣಾನಂದರ ಅನುಯಾಯಿಗಳು ಆಗ್ರಹಿಸಿದ್ದಾರೆ.
ಕಿತ್ತೂರಿನಲ್ಲಿ ಪ್ರತಿಭಟನೆ ನಡೆಸಿದ ಅನುಯಾನಿಗಳು ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಇತ್ತೀಚೆಗೆ ನಿಜಗುಣಾನಂದರಿಗೆ ಜೀವಬೇದರಿಕೆ ಪತ್ರ ಬಂದಿದೆ. ಸರ್ಕಾರ ಈ ಬಗ್ಗೆ ಶೀಘ್ರಗತಿಯಲ್ಲಿ ತನಿಖೆ ನಡೆಸಿ, ತಪ್ಪಿತಸ್ಥ ದುಷ್ಕರ್ಮಿಗಳನ್ನು ಬಂಧಿಸಬೇಕು. ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಬುದ್ದ, ಬಸವ ಅಂಬೇಡ್ಕರ ಅವರ ತತ್ವ ಸಿದ್ದಾಂತಗಳನ್ನು ಜನರಲ್ಲಿ ಬಿತ್ತರಿಸುವ, ಸಮಾಜದಲ್ಲಿಯ ಮೂಢನಂಬಿಕೆಗಳ ವಿರುದ್ಧ ಜನರನ್ನು ಜಾಗೃತಗೊಳಿಸುತ್ತಿರುವ, ವಚನ ಸಾಹಿತ್ಯದೊಂದಿಗೆ ಸಮಾಜದಲ್ಲಿ ಏಕತೆ ಮೂಡಿಸುತ್ತಿರುವ ನಿಜಗುಣಾನಂದರಿಗೆ ಜೀವ ಬೆದರಿಕೆ ಹಾಕುವುದು ಹೇಯ ಸಂಸ್ಕೃತಿ ಎಂದು ಕಿಡಿಕಾರಿದರು.