ರಾಯಚೂರು | ಮನೆಯ ಮೇಲಿಂದ ಬಿದ್ದು ಮಹಿಳೆ ಸಾವು; ಕೊಲೆ ಶಂಕೆ

Date:

ಗೃಹಣಿಯೊಬ್ಬರು ಮನೆಯ ಮೇಲಿಂದ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ರಾಯಚೂರಿನ ಜವಾಹರ ನಗರದಲ್ಲಿ ನಡೆದಿದೆ.

ಮೃತ ಗೃಹಿಣಿ ಶಿಲ್ಪಾ(28) ಎಂದು ತಿಳಿದುಬಂದಿದೆ. ಶಿಲ್ಪಾ ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಆಕೆಯ ಪೋಷಕರು ಆರೋಪಿಸಿದ್ದಾರೆ.

“ಮೃತಳ ಪತಿ ಶರತ್, ತಾಯಿ ಶಶಿಕಲಾ ಹಾಗೂ ತಂದೆ ಸುರೇಶ್‌ ಸೇರಿ ಹತ್ಯೆ ಮಾಡಿದ್ದಾರೆ. ನಿನ್ನೆ ರಾತ್ರಿ ಪತಿ ಹಾಗೂ ಪೋಷಕರು ಶಿಲ್ಪಾಳನ್ನು ಕೊಂದು, ಬಳಿಕ ಎರಡನೇ ಮಹಡಿಯಿಂದ ತಳ್ಳಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲೆಯ ವಿವಿಧ ಗ್ರಾ.ಪಂ.ಗಳ ‘ಪಿಡಿಒ’ಗಳ ವರ್ಗಾವಣೆ

ಆಂಧ್ರ ಮೂಲದ ಶಿಲ್ಪಾ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಪರಾರಿಯಾಗಿರುವ ಪತಿ ಶರತ್ ಸ್ಥಳಕ್ಕೆ ಬರುವವರೆಗೂ ಮೃತದೇಹ ತೆಗೆದುಕೊಂಡು ಹೋಗಲು ಬಿಡುವುದಿಲ್ಲವೆಂದು ಮೃತಳ ಪೋಷಕರು ಪಟ್ಟು ಹಿಡಿದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಟಿಜನ್ ಜರ್ನಲಿಸ್ಟ್ : ಹಫೀಜುಲ್ಲ ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬೀದಿ ನಾಯಿ ಕಡಿತಕ್ಕೆ ಒಳಗಾಗಿದ್ದ ಬಾಲಕಿ ಸಾವು

ಬೀದಿನಾಯಿ ದಾಳಿಗೆ ಒಳಗಾಗಿದ್ದ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ರಾಯಚೂರು...

ರಾಯಚೂರು | ಕೋವಿಡ್‌ ಲಸಿಕೆಯ ಅಡ್ಡಪರಿಣಾಮ; ಗೆಜ್ಜಲಗಟ್ಟಾ ಗ್ರಾಮದ ಹುಸೇನಪ್ಪ ರಿಮ್ಸ್‌ಗೆ ದಾಖಲು

ಕೋವಿಡ್ ಸೋಂಕು ಲಸಿಕೆಯಿಂದ ಅಡ್ಡಪರಿಣಾಮವಾಗಿ ಗೆಜ್ಜಲಗಟ್ಟಾ ಗ್ರಾಮದ ಹುಸೇನಪ್ಪ ಎಂಬುವವರು ರಿಮ್ಸ್...

ರಾಯಚೂರು | ಬಸ್‌ ನಿಲುಗಡೆಗೆ ಆಗ್ರಹಿಸಿ ಜವಳಗೇರಾ ಗ್ರಾಮಸ್ಥರ ಪ್ರತಿಭಟನೆ

ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಸಾರಿಗೆ ಇಲಾಖೆಯ ಎಲ್ಲ ಬಸ್‌ಗಳ ನಿಲುಗಡೆಗೆ...

ಐಪಿಎಲ್ ಬೆಟ್ಟಿಂಗ್ | ಸಾಲಕ್ಕೆ ತುತ್ತಾಗಿ ರಾಯಚೂರಿನ ಯುವಕ ಆತ್ಮಹತ್ಯೆ

ಐಪಿಎಲ್‌ ಬೆಟ್ಟಿಂಗ್ ದಂಧೆ ತಡೆಯಲು ಕರ್ನಾಟಕ ಪೊಲೀಸರು ಎಷ್ಟೇ ಕ್ರಮವಹಿಸಿದರೂ ತಡೆಯಲಾಗುತ್ತಿಲ್ಲ....