ಪುನೀತ್ ಕೆರೆಹಳ್ಳಿಗೆ ವೇಶ್ಯಾವೃತ್ತಿಯೇ ಹಣ ಗಳಿಕೆಯ ಮೂಲ ! ನ್ಯಾಯಾಲಯದ ಮುಂದೆ ಇನ್ಸ್‌ಪೆಕ್ಟರ್ ಹೇಳಿಕೆ

Date:

Advertisements
 ವೇಶ್ಯಾವೃತ್ತಿಯಲ್ಲಿ ಹಣ ಮಾಡುವ ಉದ್ದೇಶದಿಂದಲೇ ಫ್ಲಾಟ್ ಬಾಡಿಗೆಗೆ ಪಡೆದು ಹುಡುಗಿಯರನ್ನು ಕರೆತಂದು, ಬಂಧನದಲ್ಲಿರಿಸಿ ಬಲವಂತದ ವೇಶ್ಯಾವಾಟಿಕೆ ಮಾಡಿಸುತ್ತಿದ್ದ ಗ್ಯಾಂಗ್ ನ ಪ್ರಮುಖ ಸದಸ್ಯ ಪುನೀತ್ ಕೆರೆಹಳ್ಳಿ ! ಹಾಗಂತ ನಾವು ಹೇಳುತ್ತಿಲ್ಲ. ಡಿಜೆಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಹೇಳಿಕೆಯಲ್ಲಿ ಸ್ಪಷ್ಟವಾಗಿ ಇದನ್ನು ನಮೂದಿಸಿದ್ದಾರೆ.

ನ್ಯಾಯಾಲಯಕ್ಕೆ ಡಿಜೆ ಹಳ್ಳಿ ಪೊಲೀಸ್ ನಿರೀಕ್ಷಕರು ಸಲ್ಲಿಸಿರುವ ಯಥಾವತ್ತು ಹೇಳಿಕೆ ಇಲ್ಲಿದೆ : “ನಾನು ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಸೇವೆಯನ್ನು ಮಾಡುತ್ತಿದ್ದು, ದಿನಾಂಕ 20/03/2013ರ ಮಧ್ಯರಾತ್ರಿ ಸುಮಾರು 02:15 ಗಂಟೆಯ ಸಮಯದಲ್ಲಿ ನನಗೆ ನನ್ನ ಬಾತ್ಮೀದಾರರಿಂದ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ ವಾಸದ ಫ್ಲಾಟ್ ನಂ. ಸಿ/17[12], 3 ನೇ ಮಹಡಿ, ಅನ್ಸಿಆಲ್ಫಾ ಅಪಾರ್ಟ್‌ಮೆಂಟ್, ರಾಜಾರಾಮಣ್ಣ ರಸ್ತೆ, ಗುರುಕೃಪ ಹೋಟೆಲ್ ಹತ್ತಿರ, ಕೆ.ಬಿ.ಸಂದ್ರ, ಆರ್.ಟಿ. ನಗರ ಅಂಚೆ ಇಲ್ಲಿ 3 ನೇ ಮಹಡಿಯಲ್ಲಿರುವ ಫ್ಲಾಟ್ ನಂ ಸಿ/17(12) ರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ ಬಂದಿರುತ್ತದೆ. ಸದರಿ ಮನೆಯು ರಾಜಶೇಖರ್‌ರವರಿಗೆ ಸೇರಿದ್ದು ಸದರಿ ಮನೆಯನ್ನು ಮಂಜುಳಾ ಮತ್ತು ಮದನ್‌ಮೋಹನ್‌ರವರು ರಾಜಶೇಖರ್‌ರವರಿಂದ ಬಾಡಿಗೆಗೆ ಪಡೆದುಕೊಂಡು ವಾಸವಿದ್ದಾರೆ. ಮಂಜುಳಾ ಮತ್ತು ಮದನ್‌ಮೋಹನ್‌ರವರು ಪಿಂಪ್‌ಗಳಾಗಿ ಕೆಲವು ಹುಡುಗಿಯನ್ನು ಬೇರೆ ಬೇರೆ ಕಡೆಗಳಿಂದ ಕರೆಸಿಕೊಂಡು ಅವರಿಗೆ ಹಣದ ಆಸೆಯನ್ನು ತೋರಿಸಿ, ಅವರನ್ನು ಇರಿಸಿಕೊಂಡು ವೇಶ್ಯಾವೃತ್ತಿಗೆ ಪ್ರಚೋದಿಸಿ ಈ ಮಾರ್ಗದಲ್ಲಿ ಹಣವನ್ನು ಸಂಪಾದನೆ ಮಾಡುತ್ತಿರುವುದಾಗಿ ನನಗೆ ಬಾತ್ಮೀದಾರರು ಖಚಿತವಾದ ಮಾಹಿತಿ ನೀಡಿದರು. ಈ ಆಧಾರದ ಮೇರೆಗೆ ನಾನು ರಾತ್ರಿ ಕೂಡಲೇ ಠಾಣೆಗೆ ಇಬ್ಬರು ಪಂಚರುಗಳನ್ನು ಕರೆಸಿಕೊಂಡು ಅವರಿಗೆ ವಿಷಯ ತಿಳಿಸಿ ಅವರ ಸಮಕ್ಷಮದಲ್ಲಿ ಠಾಣೆಯಲ್ಲಿ ರೆಕಾರ್ಡ್ ಆಪ್ ರಿಜನ್ ಅನ್ನು ಸಿದ್ದಪಡಿಸಿಕೊಂಡು ಅವರಿಗೆ ದಾಳಿಯ ಸಮಯದಲ್ಲಿ ಸಹ ಹಾಜರಿದ್ದು ಸಹಕರಿಸುವಂತೆ ಕೋರಿದ ಮೇರೆಗೆ ಅದಕ್ಕೆ ಅವರುಗಳು ಒಪ್ಪಿದ್ದಾರೆ.

ಠಾಣೆಯಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ಹೊಯ್ಸಳ-38 ರ ಸಿಬ್ಬಂದಿ ಹೆಚ್.ಸಿ. ರಾಮಕೃಷ್ಣಗೌಡ, ಪಿ ಗುರುಮೂರ್ತಿ, ಭೀಮರಾವ್‌ ಮುಚ್ಚಂಡಿ, ಬಸವರಾಜ್ ಪೂಜಾರಿ, ಪಿಎಸ್ಐ ಅಜಯ್‌ ಸಾರಥಿ, ಪಿಎಸ್ಐ ಎಸ್. ಶಿವಪ್ರಕಾಶ್‌, ಸಂತೋಷ್, ಮಹಿಳಾ ಪಿಎಸ್ಐ ಕು. ಸುನೀತಾ ಇವರೆಲ್ಲರನ್ನು ಸಹ ಠಾಣೆಗೆ ಕೂಡಲೇ ಕರೆಸಿಕೊಂಡು ಅವರಿಗೆ ವಿಷಯ ತಿಳಿಸಿ ದಾಳಿಗೆ ಸಿದ್ಧರಾಗಿರುವಂತೆ ಸೂಚಿಸಲಾಯಿತು‌.

ಬಳಿಕ ಪಂಚರು ಮತ್ತು ಸಿಬ್ಬಂದಿಗಳೆಲ್ಲರೂ ಎರಡು ಗುಂಪುಗಳಾಗಿ ವಿಭಾಗವಾಗಿ ಮಧ್ಯರಾತ್ರಿ ಸುಮಾರು 02:50 ಗಂಟೆಯ ಸಮಯದಲ್ಲಿ ನಮ್ಮ ವಾಹನಗಳ ಸಮೇತ ರಾಜಾರಾಮಣ್ಣ ರಸ್ತೆಯ ಗುರುಕೃಪ ಹೋಟೆಲ್ ಹತ್ತಿರ ಬಂದು ವಾಹನವನ್ನು ನಿಲ್ಲಿಸಿ ಅಲ್ಲಿಂದ ಹತ್ತಿರದಲ್ಲಿಯೇ ಇರುವ ಸದರಿ ಫ್ಲಾಟ್ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿ ಆರೋಪಿಗಳೆಲ್ಲರೂ ಅರೆಬೆತ್ತಲಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು ಅಲ್ಲಿದ್ದ ಎಲ್ಲಾ ವ್ಯಕ್ತಿಗಳನ್ನು ಹಿಡಿದುಕೊಂಡು ಅವರೆಲ್ಲರನ್ನು ವಿವರವಾಗಿ ವಿಚಾರಣೆ ಮಾಡಿ ಮನೆಯಲ್ಲಿ ದೊರೆತ ಕೃತ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಯಿತು.

Advertisements

ಇನ್ಸ್ ಪೆಕ್ಟರ್

ನಂತರ ಆರೋಪಿಗಳು ಮತ್ತು ವಶಪಡಿಸಿಕೊಂಡ ವಸ್ತುಗಳ ಪಂಚನಾಮೆಯನ್ನು ಸಹ ಸ್ಥಳದಲ್ಲಿಯೇ ಬರೆದುಕೊಂಡಿದ್ದು ಅದನ್ನು ಪಿರ್ಯಾದಿಯ ಮುಖ್ಯಭಾಗವೆಂದು ಪರಿಗಣಿಸಿಕೊಂಡು, ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕೆ. ಮದನ್‌ ಮೋಹನ್, ಮಂಜುಳಾ, ಕೆರೆಹಳ್ಳಿ ಗ್ರಾಮದ ಪು‌ನೀತ್ ಕುಮಾರ್, ಸಿ. ರವಿ, ಭರತ್, ಹೆಚ್.ಡಿ. ಚಂದ್ರಶೇಖರ್, ಜಿ.ಎಸ್. ಪುನೀತ್ ಕುಮಾರ್ ಅವರನ್ನು ಅಪರಾಧಿಗಳೆಂದು ಬಂಧಿಸಲಾಯಿತು.

ಸದರಿ ದಾಳಿಯ ಸಮಯದಲ್ಲಿ ಸ್ಥಳದಲ್ಲಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ಮತ್ತು ಅವರಿಂದ ವಶಪಡಿಸಿಕೊಂಡ ಮಾಲುಗಳ ಸಮೇತ ಠಾಣೆಗೆ ಕರೆ ತರಲಾಯಿತು. ಬಂಧಿತ ಆರೋಪಿಗಳಾದ ಕೆ. ಮದನ್‌ ಮೋಹನ್, ಮಂಜುಳಾ, ಕೆರೆಹಳ್ಳಿ ಗ್ರಾಮದ ಪು‌ನೀತ್ ಕುಮಾರ್, ಸಿ. ರವಿ, ಭರತ್, ಹೆಚ್.ಡಿ. ಚಂದ್ರಶೇಖರ್, ಜಿ.ಎಸ್. ಪುನೀತ್ ಕುಮಾರ್ ಇವರುಗಳೆಲ್ಲರೂ ಅಪರಾಧಿಗಳಾಗಿದ್ದು ವೇಶ್ಯಾವೃತ್ತಿಯ ಗಳಿಕೆಯಿಂದ ಜೀವನ ನಡೆಸುತ್ತಿರುವುದಾಗಿ, ಸ್ಥಳವನ್ನು ಬಾಡಿಗೆಗೆ ಪಡೆದುಕೊಂಡು ಈ ಉದ್ದೇಶಕ್ಕಾಗಿ ಬೇರೆ ಬೇರೆ ಸ್ಥಳಗಳಿಂದ ಹುಡುಗಿಯರನ್ನು ಕರೆತಂದು ಹಣದ ಆಮಿಷ ಒಡ್ಡಿ ಅವರುಗಳಿಗೆ ಆರೋಪಿಗಳು ಪ್ರಚೋದನೆ ನೀಡಿ ಅವರನ್ನು ಈ ವೃತ್ತಿಯಲ್ಲಿ ತೊಡಗಿಸಿದ್ದು ಅಲ್ಲದೇ, ಹುಡುಗಿಯರನ್ನು ನಿರ್ಬಂಧಿಸಿಟ್ಟುಕೊಂಡಿದ್ದು, ಹುಡುಗಿಯರೆಲ್ಲರನ್ನು ದುರ್ಮಾರ್ಗಕ್ಕೆ ಎಳೆದು ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

ಇವರೆಲ್ಲರನ್ನು ಠಾಣೆಗೆ ಮುಂಜಾನೆ 05-00 ಗಂಟೆಗೆ ಕರೆತಂದು ಅವರ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ದಿನಾಂಕ: 21/03/13 ರಂದು ಬೆಳಿಗ್ಗೆ 05.00 ಗಂಟೆಗೆ ಠಾಣಾ ಮೊ.ಸಂ. 77,13 ಕಲಂ 3, 4, 5, 6, ಅನೈತಿಕ ವ್ಯವಹಾರ (ನಿಷೇದ) ಅದಿನಿಯಮ 1956 ಪ್ರಕಾರ ದೂರನ್ನು ಸರ್ಕಾರದ ಪರವಾಗಿ ದಾಖಲಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿ ತನಿಖೆಯನ್ನು ಕೈಗೊಂಡಿರುತ್ತೇನೆ”.

ಸಹಿ/
ಪೊಲೀಸ್ ಇನ್ಸ್ ಪೆಕ್ಟರ್
ಡಿಜೆ ಹಳ್ಳಿ ಪೊಲೀಸ್ ಠಾಣೆ

(ಚಾರ್ಜ್‌ಶೀಟ್‌ನಲ್ಲಿರುವ ಪೊಲೀಸ್ ನಿರೀಕ್ಷಕರ ಹೇಳಿಕೆಯ ಯಥಾವತ್ತನ್ನು ಅರ್ಥ ವ್ಯತ್ಯಾಸವಾಗದಂತೆ, ಆದರೆ ಕಾನೂನು ಭಾಷೆಯು ಜನಸಾಮಾನ್ಯರಿಗೆ ಅರ್ಥವಾಗುವಂತೆ ಬದಲಾವಣೆ ಮಾಡಿಕೊಂಡು ಅಕ್ಷರ ರೂಪಕ್ಕೆ ಇಳಿಸಲಾಗಿದೆ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X