ಸಾಮಾಜಿಕ ಜಾಲತಾಣದಲ್ಲಿ ‘ಕಿಲ್ ಡಿಕೆ ಬ್ರದರ್ಸ್’ ಎಂದು ಪೋಸ್ಟ್ ಹಾಕಿದ್ದವವನ್ನು ಬೆಂಗಳೂರಿನ ಜಯನಗರ ಪೊಲೀಸರು ಬಂಧಿಸಿದ್ದಾರೆ.
ರಂಜಿತ್ ಆರ್ ಎಂ ಬಂಧಿತ ವ್ಯಕ್ತಿ. ಈತನು ತನ್ನನ್ನು ತಾನು ಸೈಬರ್ ಕ್ರೈಂ ಡಿಟೆಕ್ಟಿವ್ ಆಟ್ ಬೆಂಗಳೂರು ಸಿಟಿ ಪೊಲೀಸ್ ಎಂದು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾನೆ.
ಈತನು ಸಾಮಾಜಿಕ ಜಾಲತಾಣದಲ್ಲಿ ತನ್ನ ಅಕೌಂಟ್ ಮೂಲಕ ಸತತವಾಗಿ ಕಾಂಗ್ರೆಸ್, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮುಸ್ಲಿಂ ಸಮುದಾಯದ ಬಗ್ಗೆ ಕಮೆಂಟ್ ಹಾಕಿ ಪೋಸ್ಟ್ ಮಾಡುತ್ತಿದ್ದನು ಎನ್ನುವ ವಿಚಾರ ತಿಳಿದುಬಂದಿದೆ.
‘ಬ್ರದರ್ಸ್ ಅಂದ್ರೆ ಸುಮ್ನೆನಾ’ ಎಂಬ ಪೋಸ್ಟ್‌ನ್ನು ಶೇರ್ ಮಾಡಿ ಈತ ‘ಕಿಲ್ ಡಿಕೆ ಬ್ರದರ್ಸ್’ ಎಂದು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಅಕ್ಟೋಬರ್ 4 ಬರೆದುಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಹಿಳೆ ಮೇಲೆ ನಾಯಿ ದಾಳಿ; ವಿಚಾರಣೆಗೆ ಹಾಜರಾದ ನಟ ದರ್ಶನ್
ಈ ಹಿನ್ನೆಲೆ, ರಂಜಿತ್ ಆರ್ ಎಂ ವಿರುದ್ಧ ಜಯನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಶರತ್ ಮತ್ತು ಉಪಾಧ್ಯಕ್ಷರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿ ರಂಜಿತ್ ಆರ್.ಎಂ.ನನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಈತ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ತಿಳಿದುಬಂದಿದೆ.