ಬಿಜೆಪಿಗೆ ಮತ ನೀಡದವರಿಗೆ ಕುಡಿಯುವ ನೀರು ನಿರಾಕರಣೆ!

Date:

Advertisements

ಮಧ್ಯ ಪ್ರದೇಶ ರಾಜ್ಯದಲ್ಲಿ ಶಾಂತಿಯುತವಾಗಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಎರಡು ದಿನಗಳ(ನ.17) ನಂತರ ರಾಜ್ಯದ ಅಶೋಕನಗರ ಜಿಲ್ಲೆಯಿಂದ ಕೆಲವು ಆಘಾತಕಾರಿ ವರದಿಗಳು ಹೊರಬಿದ್ದಿವೆ.

ಈ ಜಿಲ್ಲೆಯ ಕೆಲವು ಗ್ರಾಮಗಳ ಗ್ರಾಮಸ್ಥರು ಆಡಳಿತಾರೂಢ ಬಿಜೆಪಿಗೆ ಮತ ಹಾಕಿದ್ದೇವೆ ಎಂದು ಪ್ರಮಾಣ ವಚನ ಸ್ವೀಕರಿಸದ ಹೊರತು ಸರ್ಕಾರ ನಿರ್ಮಿಸಿದ ಕೊಳವೆಬಾವಿಗಳಿಂದ ನೀರನ್ನು ನಿರಾಕರಿಸಲಾಗುತ್ತಿದೆ ಎಂಬ ಸುದ್ದಿ ವರದಿಯಾಗುತ್ತಿದೆ.

ಮಧ್ಯ ಪ್ರದೇಶ ರಾಜ್ಯ ಸಚಿವ ಬ್ರಿಜೇಂದ್ರ ಸಿಂಗ್ ಯಾದವ್ ಅವರ ಮುಂಗಾವಲಿ ವಿಧಾನಸಭಾ ಕ್ಷೇತ್ರದ ನಯಖೇಡಾ ಗ್ರಾಮದಿಂದ ಡಿಸೆಂಬರ್ 3 ರವರೆಗೆ ಫಲಿತಾಂಶ ಪ್ರಕಟವಾಗುವವರೆಗೆ ಗ್ರಾಮಸ್ಥರಿಗೆ ನೀರು ಬಿಡಬೇಡಿ ಎಂದು ನಿರಾಕರಿಸಿರುವ ವರದಿಗಳು ದಾಖಲಾಗಿವೆ.

Advertisements

“ನಾನು ಗ್ರಾಮದಲ್ಲಿ ಎಲ್ಲರಿಗೂ ನೀರು ಒದಗಿಸುವ ಸಲುವಾಗಿ ನಾಲ್ಕು ಕೊಳವೆ ಬಾವಿಗಳನ್ನು ಸರ್ಕಾರದ ವತಿಯಿಂದ ಕೊರೆಸಿದ್ದೇನೆ. ಆದರೆ ಚುನಾವಣೆ ನಂತರ ಇಂತಹ ಘಟನೆಗಳು ಏಕೆ ನಡೆಯುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದು ಸಚಿವರಾದ ಬ್ರಿಜೇಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ದೇವಸ್ಥಾನಗಳಲ್ಲಿ ಅನ್ಯ ಧರ್ಮದವರಿಗೆ ಉದ್ಯೋಗಾವಕಾಶವಿಲ್ಲ: ಆಂಧ್ರ ಹೈಕೋರ್ಟ್

ಆದಾಗ್ಯೂ, ಸಚಿವರ ಹೇಳಿಕೆಯನ್ನು ಹಲವಾರು ಗ್ರಾಮಸ್ಥರು ಒಪ್ಪುವುದಿಲ್ಲ. ಕೆಲವು ಗ್ರಾಮದ ಮುಖಂಡರು ಗ್ರಾಮಸ್ಥರನ್ನು ಬಿಜೆಪಿಗೆ ಮತ ಹಾಕಿದ್ದಾರೋ ಇಲ್ಲವೋ ಎಂದು ಕೇಳಿ ಅವರು ವಾಸವಾಗಿರುವ ಪ್ರದೇಶಗಳಿಗೆ ಕೊಳವೆ ಬಾವಿಯ ಮೋಟರ್‌ ಬಂದ್‌ ಮಾಡಿಸಿದ್ದಾರೆ ಎಂದು ಹೇಳುತ್ತಾರೆ.

“ಮತದಾನದ ನಂತರ ಬಿಜೆಪಿ ಮುಖಂಡರು ಕೊಳವೆ ಬಾವಿ ಮೋಟರ್‌ಗಳನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಕೇವಲ ಕಾಟಾಚಾರಕ್ಕೆಂದು ಸಾರ್ವಜನಿಕರಿಗೆ ಅನುಕೂಲವಾಗದ ರಾತ್ರಿ ವೇಳೆ ಸ್ವಿಚ್‌ ಆನ್‌ ಮಾಡುತ್ತಾರೆ” ಎಂದು ಅದೇ ಗ್ರಾಮದ ಮಹಿಳೆಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ನಯಖೇಡಾ ಗ್ರಾಮದ ಇತರೆ ನಿವಾಸಿಗಳು ಕೂಡ ಬಿಜೆಪಿಗೆ ಮತ ಹಾಕದಿದ್ದರೆ ನೀರು ಬಿಡುವುದಿಲ್ಲ ಎಂದು ದೂರಿದ್ದಾರೆ.

ಈ ಘಟನೆಯ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಈ ವರದಿಯ ಕುರಿತು ಸುದ್ದಿ ಕ್ಲಿಪ್ಪಿಂಗ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು, “ಬಿಜೆಪಿಯ ಡಬಲ್ ಎಂಜಿನ್‌ನ ನಕಲಿ ಭರವಸೆಗಳು ಸುಳ್ಳಿನ ಗದ್ದಲದಲ್ಲಿ ಅಡಗಿಕೊಂಡಿವೆ. ಬಿಜೆಪಿಯ ಕ್ರೌರ್ಯದ ಪರಮಾವಧಿ ನೋಡಿ, ಮತ ಹಾಕದವರನ್ನು ನೀರಿಲ್ಲದೆ ಕೊಲ್ಲಲು ಮುಂದಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“18 ವರ್ಷಗಳ ನಂತರ ದುಷ್ಕೃತ್ಯಗಳ ಎಲ್ಲ ಮಿತಿಗಳನ್ನು ದಾಟಿದ ಬಿಜೆಪಿಗೆ ಇನ್ನೂ ಸಮಾಧಾನವಾಗಿಲ್ಲ. ಭ್ರಷ್ಟಾಚಾರ, ದುರಾಡಳಿತ ಮತ್ತು ದೌರ್ಜನ್ಯಗಳಿಗೆ ಮಧ್ಯಪ್ರದೇಶದ ಜನರು ತಮ್ಮ ಉತ್ತರವನ್ನು ಮತಪೆಟ್ಟಿಗೆಯಲ್ಲಿ ನೀಡಿದ್ದಾರೆ!” ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ. ರಾಜ್ಯದ ಚುನಾವಣಾ ಕದನವು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹೋರಾಟವೆಂದು ಪರಿಗಣಿಸಲ್ಪಟ್ಟಿದೆ. 2018 ರ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರವನ್ನು ಸದ್ಯ ಬಿಜೆಪಿಯಲ್ಲಿ ಕೇಂದ್ರ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ ಬಣ ಬಂಡಾಯವೆದ್ದು ಸರ್ಕಾರವನ್ನು ಉರುಳಿಸಿತ್ತು. ಡಿ.3ರಂದು ಫಲಿತಾಂಶ ಹೊರಬೀಳಲಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X