ಐಪಿಎಲ್‌ 2023 | ಸ್ವಂತ ವೈಫಲ್ಯ ಮುಚ್ಚಿಟ್ಟು ಸೋಲಿಗೆ ತಂಡವನ್ನು ದೂರಿದ ರೋಹಿತ್‌ ಶರ್ಮಾ

Date:

Advertisements

ಐಪಿಎಲ್‌ನಲ್ಲಿ ಐದು ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿರುವ ಮುಂಬೈ ಇಂಡಿಯನ್ಸ್ ತಂಡ ಕಳೆದ ಋತುವಿನಿಂದ ಅತೀ ಹೆಚ್ಚು ಕಳಪೆ ಪ್ರದರ್ಶನ ನೀಡುತ್ತಿದೆ. 2023ರ 16ನೇ ಆವೃತ್ತಿಯಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ಎದುರಿನ ಸತತ ಎರಡು ಸೋಲುಗಳು ತಂಡದ ವೈಫಲ್ಯಕ್ಕೆ ಮುನ್ನುಡಿಯಾಗಿದೆ.

2022ರ ಐಪಿಎಲ್‌ ಋತುವಿನಲ್ಲಿ ಹತ್ತು ಪಂದ್ಯಗಳನ್ನು ಸೋತು ಕೇವಲ ನಾಲ್ಕು ಗೆಲುವುಗಳೊಂದಿಗೆ ಕೊನೆಯ ಸ್ಥಾನ ಅಲಂಕರಿಸಿತ್ತು. ಕೀರನ್ ಪೊಲಾರ್ಡ್, ಜಸ್‌ಪ್ರೀತ್‌ ಬುಮ್ರಾ, ಇಶಾನ್‌ ಕಿಶನ್‌, ಜೋಫ್ರಾ ಅರ್ಚರ್‌ನಂಥ ಸ್ಟಾರ್‌ ಆಟಗಾರರಿದ್ದರೂ ಕ್ವಾಲಿಫೈ ಹಂತಕ್ಕೆ ಬರಲು ಸಾಧ್ಯವಾಗಲಿಲ್ಲ.

ಇದೇ ರೀತಿ ಕಳಪೆ ಪ್ರದರ್ಶನ ನೀಡುತ್ತಿದ್ದರೆ ಮುಂಬೈ ತಂಡವೇ ಸಂಪೂರ್ಣ ಬದಲಾಗಬಹುದು ಅಥವಾ ಸೋಲುವ ತಂಡಗಳ ಪಟ್ಟಿಯಲ್ಲಿ ಈ ತಂಡವು ಸೇರ್ಪಡೆಯಾಗಬಹುದು ಎನ್ನುತ್ತಿದ್ದಾರೆ ಕ್ರಿಕೆಟ್ ಪಂಡಿತರು.     

Advertisements

ಸ್ಫೋಟಕ ಆಟಗಾರನಾಗಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮೂರು ದ್ವಿಶತಕ ಹೊಂದಿರುವ ದಾಖಲೆ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್‌ ಶರ್ಮಾ 2022ರ ವರ್ಷದ ಟಿ20 ಪಂದ್ಯಗಳಲ್ಲಿ ನಿರಾಶಾದಾಯಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಆಡಿದ 14 ಪಂದ್ಯಗಳಲ್ಲಿ ಸರಾಸರಿ 50ಕ್ಕಿಂತ ಕಡಿಮೆ ರನ್‌ ಗಳಿಸಿ ಕೇವಲ 268 ರನ್ ಬಾರಿಸಿದ್ದರು. ಈ ಋತುವಿನಲ್ಲಿ ಕೂಡ ಮುಂಬೈ ಇಂಡಿಯನ್ಸ್ ನಾಯಕ ಕಳೆದ ಎರಡು ಪಂದ್ಯಗಳಿಂದ ಸ್ಕೋರ್‌ ಮಾಡಿರುವುದು 22 ರನ್ ಮಾತ್ರ.

ಸೋಲುಗಳಿಗೆ ರೋಹಿತ್‌ ಶರ್ಮಾ ತನ್ನ ವೈಫಲ್ಯ ಮುಚ್ಚಿಟ್ಟು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳದೆ ತಂಡದ ಇತರ ಆಟಗಾರರನ್ನು ಟೀಕಿಸುತ್ತಿರುವುದು ಯಾವ ರೀತಿ ಸರಿ ಎಂದು ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಮಧ್ಯಮ ಕ್ರಮಾಂಕ ದೂಷಿಸಿದ ರೋಹಿತ್‌ ಶರ್ಮಾ

ಏಪ್ರಿಲ್​ 8ರ ರಾತ್ರಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್​ ಶರ್ಮಾ, ಸೋಲಿಗೆ ಕೆಲವು ಆಟಗಾರರ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ವಿಫಲವಾದ್ದರಿಂದ ಪಂದ್ಯ ಸೋಲಬೇಕಾಯಿತು. ಮೊದಲು ಉತ್ತಮ ಆರಂಭ ಪಡೆದೆವು. ರನ್​ ಗಳಿಸಲು ಪಿಚ್​ ಕೂಡ ಉತ್ತಮವಾಗಿತ್ತು. ಆದರೆ ಮಧ್ಯಮ ಕ್ರಮಾಂಕದ​​ ಬ್ಯಾಟ್ಸ್​​ಮನ್​​​ಗಳು ಪಿಚ್‌ನ ಲಾಭ ಪಡೆಯಲಿಲ್ಲ. ಮಧ್ಯಮ ಓವರ್​ಗಳಲ್ಲಿ 30ರಿಂದ 40 ರನ್​ಗಳು ಕಡಿಮೆಯಾದವು. ಇವೆಲ್ಲದರ ಜೊತೆಗೆ ಚೆನ್ನೈ ತಂಡದ ಸ್ಪಿನ್ನರ್​ಗಳು ಪರಿಣಾಮಕಾರಿ ಬೌಲಿಂಗ್​​​ ಮೂಲಕ ನಮ್ಮನ್ನು ಒತ್ತಡಕ್ಕೆ ಸಿಲುಕಿಸಿದರು” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಐಪಿಎಲ್ 2023 |ರಹಾನೆ ಸ್ಫೋಟಕ ಆಟ, ಮುಂಬೈಗೆ ಸೋಲಿನ ಪಾಠ

“ತಂಡದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿದ ಅನುಭವವಿರುವ ಹಿರಿಯ ಆಟಗಾರರು ಇದ್ದಾರೆ. ವಿಭಿನ್ನವಾಗಿ ಆಡಲು ಪ್ರಯತ್ನಿಸಿ ಬೌಲರ್​​ಗಳ ಮೇಲೆ ದಾಳಿ ನಡೆಸುವ ಮೂಲಕ ಹೋರಾಟ ನಡೆಸಬೇಕು. ಪ್ರತಿಭಾವಂತ ಯುವ ಆಟಗಾರರಿದ್ದು, ಅದ್ಭುತ ಸಾಮರ್ಥ್ಯ ತೋರಿಸುವ ವಿಶ್ವಾಸ ಹೊಂದಿದ್ದಾರೆ. ಆದರೆ ಆಟದಲ್ಲಿ ವೇಗ ಪಡೆಯಬೇಕು. ಇಲ್ಲವಾದಲ್ಲಿ ಮುಂದೆ ಕಠಿಣ ಸಮಯ ಎದುರಿಸಬೇಕಾಗುತ್ತದೆ” ಎಂದು ರೋಹಿತ್​ ಹೇಳಿದ್ದಾರೆ.

ಮಾನಸಿಕವಾಗಿ ಬಲಿಷ್ಠರಾಗಲು ಸಲಹೆ

“ಕಳೆದ ಐಪಿಎಲ್ ಋತುವಿನಲ್ಲಿ ನಾವು ತುಂಬಾ ನಿರಾಶಾದಾಯಕ ಪ್ರದರ್ಶನ ನೀಡಿದ್ದೆವು ಎಂಬುದು ನಮಗೆ ತಿಳಿದಿದೆ. ಆದರೆ ನಾವು ಯಾವಾಗಲೂ ಹೊಸತನದಿಂದ ಪ್ರಾರಂಭಿಸುತ್ತೇವೆ. ನಾವು 5 ಟ್ರೋಫಿಗಳನ್ನು ಗೆದ್ದಿರುವ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ. ಪ್ರತಿ ಅಂಶವನ್ನೂ ಗಮನದಲ್ಲಿಡಬೇಕು. ಎದುರಾಳಿ ತಂಡವನ್ನು ಸೋಲಿಸಲು ಮಾನಸಿಕರಾಗಿ ಬಲಿಷ್ಠರಾಗಬೇಕು” ಎಂದು ತಂಡದ ಆಟಗಾರರಿಗೆ ಸಲಹೆ ನೀಡಿದ್ದಾರೆ.

ಆಡಿರುವುದು ಎರಡೇ ಪಂದ್ಯ. ಈಗ ನಾವು ಏನನ್ನೂ ಕಳೆದುಕೊಂಡಿಲ್ಲ. ಮುಂದಿನ ಪಂದ್ಯಗಳಲ್ಲಿ ಸೋಲುಗಳಲ್ಲಿ ಆಗಿರುವ ತಪ್ಪುಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ. ಯಾವ ವಿಭಾಗದಲ್ಲಿ ತಪ್ಪುಗಳು ನಡೆಯುತ್ತಿವೆ ಎಂಬುದನ್ನು ಕೂಲಂಕಶವಾಗಿ ಚರ್ಚಿಸಿ ಮುನ್ನಡೆಯುತ್ತೇವೆ ಎಂದು ರೋಹಿತ್​ ಶರ್ಮಾ ಹೇಳಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್, 8 ವಿಕೆಟ್‌ ಕಳೆದುಕೊಂಡು 157 ರನ್‌ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ಆರಂಭಿಸಿದ ಚೆನ್ನೈ, ಅಜಿಂಕ್ಯಾ ರಹಾನೆ ವೇಗದ ಅರ್ಧಶತಕದ ನೆರವಿನಿಂದ, ಕೇವಲ 18.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 159 ರನ್‌ ಗಳಿಸಿ ಗುರಿ ತಲುಪಿತು. ಆ ಮೂಲಕ ಇನ್ನೂ 11 ಎಸೆತಗಳು ಬಾಕಿ ಇರುವಂತೆ ಗೆಲುವಿನ ಪತಾಕೆ ಹಾರಿಸಿತು.

ಮುಂಬೈ ಇಂಡಿಯನ್ಸ್ ತಂಡವು ಏಪ್ರಿಲ್ 11ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೂರನೇ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

Download Eedina App Android / iOS

X