- ಜಮ್ಮು ಮತ್ತು ಕಾಶ್ಮೀರದ ಪಾಕಿಸ್ತಾನದ ಗಡಿ ಪೂಂಛ್ ಬಳಿ ಸೇನಾ ಕಾರ್ಯಾಚರಣೆ
- ಸೇನಾ ಗುಂಡಿನ ದಾಳಿಯಲ್ಲಿ ಒಬ್ಬ ಶಂಕಿತ ಉಗ್ರ ಮೃತ, ಉಳಿದವರು ಪರಾರಿ
ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಮೂವರು ಶಂಕಿತ ಪಾಕಿಸ್ತಾನ ಒಳ ನುಸುಳುಕೋರ ಪೈಕಿ ಒಬ್ಬನನ್ನು ಸೇನಾಪಡೆ ಗುಂಡಿಕ್ಕಿ ಹತ್ಯೆಗೈದಿದೆ.
ಭಾನುವಾರ (ಏಪ್ರಿಲ್ 9) ಜಮ್ಮು-ಕಾಶ್ಮೀರದಲ್ಲಿ ಸೇನೆ ಶಂಕಿತ ಭಯೋತ್ಪಾದಕರ ಒಳ ನುಸುಳುವ ಪ್ರಯತ್ನವನ್ನು ವಿಫಲಗೊಳಿಸಿದೆ. ಎಲ್ಒಸಿ ಬಳಿಯ ಶಾಹಪುರ ಸೆಕ್ಟರ್ ಬಳಿ ಒಳನುಸುಳುವಿಕೆ ಪ್ರಯತ್ನ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶನಿವಾರ ರಾತ್ರಿ 2.15 ವೇಳೆಯಲ್ಲಿ ಮೂವರು ಶಂಕಿತ ಭಯೋತ್ಪಾದಕರು ಜಮ್ಮು-ಕಾಶ್ಮೀರ ಗಡಿಯಲ್ಲಿ ಒಳ ನುಸುಳಲು ಪ್ರಯತ್ನ ಮಾಡಿದ್ದರು. ಈ ಪ್ರಯತ್ನವನ್ನು ಸೇನಾಪಡೆ ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಪೂಂಛ್ ಜಿಲ್ಲೆಯ ಭಾರತ- ಪಾಕಿಸ್ತಾನ ಗಡಿಯ ಬಳಿ ಏಪ್ರಿಲ್ 8 ಮತ್ತು 9ರಂದು ಅನುಮಾನಸ್ಪದ ಚಲನವಲಗಳು ಕಂಡುಬಂದಿದ್ದವು. ಶನಿವಾರ ತಡರಾತ್ರಿ ಶಂಕಿತ ಭಯೋತ್ಪಾದಕರು ಒಳನುಸುಳುವ ಪ್ರಯತ್ನ ಮಾಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸೇನಾಪಡೆ ಗುಂಡಿನ ದಾಳಿ ನಡೆಸಿದೆ” ಎಂದು ಸೇನಾ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ಜಮ್ಮುವಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೆಟ್ಟ ಬಟ್ಟೆ ಧರಿಸುವ ಹುಡುಗಿಯರು ಶೂರ್ಪನಖಿಯಂತೆ ಕಾಣುತ್ತಾರೆ : ಬಿಜೆಪಿ ನಾಯಕ ಕೈಲಾಶ್
“ಸೇನಾಪಡೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಒಬ್ಬ ನುಸುಳುಕೋರ ಗುಂಡಿಗೆ ಬಲಿಯಾಗಿರುವುದು ತಿಳಿದಿದೆ. ಉಳಿದ ಶಂಕಿತ ಭಯೋತ್ಪಾದಕರು ಅರಣ್ಯದೊಳಗೆ ಪಲಾಯನ ಮಾಡಿರಬಹುದು ಎಂದು ಶಂಕಿಸಲಾಗಿದೆ. ಶೋಧ ಕಾರ್ಯ ಮುಂದುವರಿದಿದೆ” ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮಿರ ಗಡಿಯಲ್ಲಿ ಶಂಕಿತ ಪಾಕಿಸ್ತಾನ ಭಯೋತ್ಪಾದಕರ ಬಗ್ಗೆ ಸೇನಾಪಡೆ ನಿಗಾವಹಿಸಿದ್ದು ಗಡಿಯಲ್ಲಿ ಗಸ್ತು ತಿರುಗುತ್ತಿದೆ.