ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗಲಿದೆ. ಇಂದಿನ ನನ್ನ ಮತದಲ್ಲಿ ಹಿರಿಯ ರಂಗಕರ್ಮಿ ಚಿಂತಕ ಮ ಶ್ರೀ ಮುರಳಿಕೃಷ್ಣ ಅವರ ಮಾತುಗಳು
ಮತ ಚಲಾವಣೆ ಎಷ್ಟು ಮುಖ್ಯ?
ಉತ್ತಮ ಸರ್ಕಾರವನ್ನು ಸ್ಥಾಪಿಸಲು, ಕೆಟ್ಟದ್ದನ್ನು ಕಿತ್ತೊಗೆಯಲು ಮತದಾನವೊಂದೇ ನಾಗರಿಕರಿಗೆ ಇರುವ ಏಕೈಕ ಅಸ್ತ್ರ. ಆದುದರಿಂದ ಅದನ್ನು ಝಳಪಿಸಲೇಬೇಕು!
ಈ ಬಾರಿಯ ಚುನಾವಣೆ ಏಕೆ ಮುಖ್ಯ?
ಅನೈತಿಕ ಮಾರ್ಗದಿಂದ ಆಡಳಿತ ಗದ್ದುಗೆಗೆ ಏರಿದ ಮತಾಂಧ, ಜನವಿರೋಧಿ ಸರ್ಕಾರ ಪತನಗೊಳ್ಳಬೇಕು. ಆದುದರಿಂದ ಈ ಚುನಾವಣೆ ಮುಖ್ಯ.
ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ಮುಂಬರುವ ಸರ್ಕಾರ ನಿಜಾರ್ಥದಲ್ಲಿ ಜನಪರವಾಗಿರಬೇಕು. ಯಾವುದೇ ಕಾರಣಕ್ಕೂ ಮತ, ಜಾತಿ ಮತ್ತಿತರ ಭಾವನಾತ್ಮಕ ವಿಷಯಗಳ ಬೆಂಕಿ ಹಚ್ಚಿ, ಜನತೆಯ ನಡುವೆ ಒಡಕನ್ನುಂಟು ಮಾಡಬಾರದು.