ನನ್ನ ಮತ | ಪವಿತ್ರ ಸಂವಿಧಾನದ ಉದ್ದೇಶವನ್ನು ಅರಿತುಕೊಂಡು ಆಡಳಿತ ನಡೆಸುವ ಸರ್ಕಾರ ಬೇಕು

ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗುತ್ತದೆ. ಇಲ್ಲಿದೆ ಚಿತ್ರಸಾಹಿತಿ ಹೃದಯ ಶಿವ ಅವರ ಅಭಿಪ್ರಾಯ

ಮತ ಚಲಾವಣೆ ಎಷ್ಟು ಮುಖ್ಯ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ರಾಜನಾಗಿರುವಾಗ ತನ್ನ ಮುಂದಿನ ಐದು ವರ್ಷಗಳ ಸೇವಕರನ್ನು, ಮಂತ್ರಿಗಳನ್ನು ಆಯ್ಕೆ ಮಾಡಿಕೊಳ್ಳಲು ತನಗಿರುವ ಒಂದೇ ಅವಕಾಶ ಮತದಾನ.

ಈ ಬಾರಿಯ ಚುನಾವಣೆ ಯಾಕೆ ಮುಖ್ಯ?
ಸಮಾಜದಲ್ಲಿ ಶಾಂತಿ ನೆಲೆಸಲು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು, ಆಡಳಿತದಲ್ಲಿ ಪಾರದರ್ಶಕತೆ ಕಂಡುಕೊಳ್ಳಲು, ಎಲ್ಲ ಧರ್ಮದ, ಎಲ್ಲ ಜಾತಿಯ, ಎಲ್ಲ ವರ್ಗದ ಜನರ ಸರ್ವತೋಮುಖ ಅಭಿವೃದ್ಧಿಗೆ ಈ ಸಾರಿಯ ಚುನಾವಣೆ ಮುಖ್ಯವಾಗುತ್ತದೆ.

ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ಪ್ರಜಾಪ್ರಭುತ್ವದ ಮೂಲ ಆಶಯವನ್ನು ಅರ್ಥ ಮಾಡಿಕೊಂಡು, ಪವಿತ್ರ ಸಂವಿಧಾನದ ಉದ್ದೇಶವನ್ನು ಅರಿತುಕೊಂಡು ಆಡಳಿತ ನಡೆಸುವ ಸರ್ಕಾರ ಬೇಕು. ಮುಂಬರುವ ಐದು ವರ್ಷಗಳಲ್ಲಿ ಕರ್ನಾಟಕ ಎಲ್ಲ ರಂಗದಲ್ಲೂ ಪ್ರಬಲವಾಗಬೇಕು. ನೆಮ್ಮದಿ, ಸಮೃದ್ದಿ, ಸದೃಢತೆ ಕಾಣಬೇಕು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

1 COMMENT

  1. ನಿಮ್ಮ ಸಂದೇಶ ಒಳ್ಳೆಯ ಸಂದೇಶ ಎಲ್ಲರೂ ಜನರಿಗೆ ತಲುಪುವಂತೆ ಮಾಡಿ

LEAVE A REPLY

Please enter your comment!
Please enter your name here