ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಸಿಡ್ನಿಗೆ ಬಂದಿಳಿದ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಸ್ವಾಗತಿಸಲು ಯಾರೊಬ್ಬರು ಬಾರದ ಹಿನ್ನೆಲೆಯಲ್ಲಿ ತಮ್ಮ ಲಗೇಜ್ ಅನ್ನು ತಾವೇ ಟ್ರಿಕ್ನಲ್ಲಿ ತುಂಬಿಸಿ ಹೋಟೆಲ್ಗೆ ತೆರಳಬೇಕಾದ ಪ್ರಸಂಗ ನಡೆದಿದೆ.
ಪಾಕಿಸ್ತಾನ -ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯು ಡಿಸೆಂಬರ್ 14 ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನೂತನ ಟೆಸ್ಟ್ ತಂಡದ ನಾಯಕ ಶಾನ್ ಮಸೂದ್ ನೇತೃತ್ವದ ಪಾಕ್ ತಂಡ, ಲಾಹೋರ್ನಿಂದ ಸಿಡ್ನಿಗೆ ಬಂದಿಳಿದಿತ್ತು. ಈ ವೇಳೆ ಪಾಕ್ ಆಟಗಾರರನ್ನು ಸ್ವಾಗತಿಸಲು ಯಾರೂ ಬಂದಿರಲಿಲ್ಲ. ಅಲ್ಲದೇ, ಸ್ವತಃ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳು ಕೂಡ ಹಾಜರಿರಲಿಲ್ಲ ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಆಟಗಾರರು ತಮ್ಮ ಲಗೇಜ್ಗಳನ್ನು ತಾವೇ ಟ್ರಕ್ನಲ್ಲಿ ತುಂಬಿಸಿ ಹೋಟೆಲ್ಗೆ ತೆರಳಬೇಕಾದ ಪರಿಸ್ಥಿತಿ ಒದಗಿಬಂತು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Pakistan team has reached Australia to play 3 match Test series starting December 14.
Pakistani players loaded their luggage on the truck as no official was present. pic.twitter.com/H65ofZnhlF
— Cricketopia (@CricketopiaCom) December 1, 2023
ಪಾಕ್ ಆಟಗಾರರನ್ನು ಸ್ವಾಗತಿಸಲು ಅಥವಾ ಇವರನ್ನು ಕರೆದೊಯ್ಯುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳ ನಡೆಗೆ ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿಯಾಗಿ ಅಂತಾರಾಷ್ಟ್ರೀಯ ಆಟಗಾರರನ್ನು ನಡೆಸಿಕೊಂಡದ್ದು ಸರಿ ಅಲ್ಲ ಎಂದು ತಿಳಿಸಿದ್ದಾರೆ. ಈ ನಡುವೆ ಕೆಲವರು ಇದು ಪಾಕಿಸ್ತಾನ ಕ್ರಿಕೆಟಿಗರ ಸರಳತೆ ಎಂದು ಮೆಚ್ಚಿಕೊಂಡು, ವ್ಯಂಗ್ಯವಾಡಿ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಆಟಗಾರ ಮೊಹಮ್ಮದ್ ರಿಝ್ವಾನ್ ತನ್ನ ಸಹ ಆಟಗಾರರ ಕಿಟ್ ಬ್ಯಾಗ್ಗಳನ್ನು ಲೋಡ್ ಮಾಡಲು ಟ್ರಕ್ ಒಳಗಡೆ ನಿಂತಿರುವುದು ಕಾಣಬಹುದು. ಬಾಬರ್ ಆಝಂ ಮತ್ತು ಶಾಹೀನ್ ಅಫ್ರಿದಿ ಸೇರಿದಂತೆ ಆಟಗಾರರು ಲಗೇಜ್ಗಳನ್ನು ಟ್ರಕ್ನಲ್ಲಿ ತುಂಬಿಸಲು ನೆರವಾಗಿದ್ದಾರೆ. ಈ ನಡುವೆ ಸ್ಥಳದಲ್ಲಿದ್ದ ಕೆಲವು ಪಾಕ್ ಅಭಿಮಾನಿಗಳು ತಮ್ಮ ಇಷ್ಟದ ಆಟಗಾರರೊಂದಿಗೆ ಸೆಲ್ಫಿ ತೆಗೆಯುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.
Pak Team Reached Australia🤍
Rizwan ne sab ka Saman Load keya👀
So humble and down to earth personality he has ❤#PakistanCricketTeam #PAKvsAUS #AUSvPAK #BabarAzam𓃵 #PakistanCricket #BabarAzam #BabarAzamIsMyCaptain pic.twitter.com/jq2zWAtvOM— Abdullah Zafar (@Arain_417) December 1, 2023
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಪಾಕ್ ಆಟಗಾರರ ವಾಸ್ತವ್ಯ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳಲ್ಲಿ ಪಾಕ್ ಅಭಿಮಾನಿಗಳು ಮನವಿ ಮಾಡಿದ್ದಾರೆ.
ಈ ನಡುವೆ ಟ್ವೀಟ್ ಮಾಡಿರುವ ಭಾರತೀಯ ಕ್ರೀಡಾಭಿಮಾನಿ ಅಂಕುಶ್ ಗೋಯಲ್ ಎಂಬುವವರು, ‘ಅಂತಾರಾಷ್ಟ್ರೀಯ ಕಾರ್ಯಕ್ರಮಕ್ಕಾಗಿ ಆತಿಥೇಯ ರಾಷ್ಟ್ರದಿಂದ ಬಂದವರನ್ನು ಗೌರವಿಸುವುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮೂಲಭೂತ ಸೌಲಭ್ಯವನ್ನು ಒದಗಿಸುವುದು ನಿಮ್ಮ ಕರ್ತವ್ಯ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
Pooor from Host nation for inter national event
Above all its theur duty to provide basic facility
Even hotels/ accommodation provide such service of loading unloading— ANKUSH GOYAL (@ankushg95) December 1, 2023
ಡಿಸೆಂಬರ್ 14ರಂದು ಪರ್ತ್ನಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯು ನಂತರ ಡಿಸೆಂಬರ್ 26 ರಿಂದ 30 ವರೆಗೆ ಮೆಲ್ಬೋರ್ನ್, ಜನವರಿ 3 ರಿಂದ 7 ವರೆಗೆ ಸಿಡ್ನಿಯಲ್ಲಿ ತೃತೀಯ ಟೆಸ್ಟ್ ಆಯೋಜಿಸಲಾಗಿದೆ. ಪಾಕಿಸ್ತಾನವು ಆಸ್ಟ್ರೇಲಿಯಾದಲ್ಲಿ ಈವರೆಗೆ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಆದರೆ ಇದೀಗ ಹೊಸ ನಾಯಕ ಶಾನ್ ಮಸೂದ್ ನೇತೃತ್ವದಲ್ಲಿ ಇತಿಹಾಸ ನಿರ್ಮಿಸುತ್ತಾ ಎಂದು ಕಾದು ನೋಡಬೇಕಿದೆ.
Touchdown Australia 🛬
Travel diary of the Pakistan team as the boys travel from Lahore to Down Under 🇦🇺#AUSvPAK | #BackTheBoysInGreen pic.twitter.com/69Oh8ywhfa
— Pakistan Cricket (@TheRealPCB) December 1, 2023
ವಿಶ್ವಕಪ್ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನೀರಸ ಪ್ರದರ್ಶನದ ನಂತರ, ಪಾಕ್ ಕ್ರಿಕೆಟ್ ಬೋರ್ಡ್ 34 ವರ್ಷದ ಶಾನ್ ಮಸೂದ್ ಅವರನ್ನು ಇತ್ತೀಚೆಗಷ್ಟೆ ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಿತ್ತು. ನಾಯಕನಾಗಿದ್ದ ಆರಂಭಿಕ ಆಟಗಾರ ಬಾಬರ್ ಆಝಂ ಟಿ20 ಸೇರಿದಂತೆ ಎಲ್ಲ ಸ್ವರೂಪಗಳ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
📍 Pakistan team arrives in Canberra from Sydney 🇵🇰#AUSvPAK | #BackTheBoysInGreen pic.twitter.com/WYOectczGa
— Pakistan Cricket (@TheRealPCB) December 1, 2023
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-25ರ ಪಾಯಿಂಟ್ ಟೇಬಲ್ನಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ಎರಡೂ ಟೆಸ್ಟ್ಗಳಲ್ಲಿ ಜಯಗಳಿಸಿ ಅಗ್ರಸ್ಥಾನದಲ್ಲಿದೆ. ಒಂಬತ್ತು ತಂಡಗಳ ಪಟ್ಟಿಯಲ್ಲಿ ಭಾರತ ಎರಡನೇ ಮತ್ತು ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.