ಬೆಂಗಳೂರು | ಬನ್ನೇರುಘಟ್ಟ ಉದ್ಯಾನವನದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆನೆ ಸಾವು

Date:

  • ಆನೆ ಅಗಲಿಕೆಯಿಂದ ಪಾರ್ಕ್​ನಲ್ಲಿ ನೀರವ ಮೌನ ಉಂಟಾಗಿದೆ
  • ಅತಿ ಹೆಚ್ಚು ಆನೆ ಮರಿಗಳಿಗೆ ಜನ್ಮ ನೀಡಿದ್ದ ಸುವರ್ಣ ಆನೆ

ಬೆಂಗಳೂರಿನ ಆನೇಕಲ್‌ ತಾಲೂಕಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಮರಿಆನೆ ಏ.20ರಂದು ತನ್ನ ತಾಯಿಯ ಹೊಟ್ಟೆಯಲ್ಲಿರುವಾಗಲೇ ಮೃತಪಟ್ಟಿತ್ತು. ಇದೀಗ ಏ.21ರಂದು ತಾಯಿ ಆನೆ ಸಾವನ್ನಪ್ಪಿದೆ.

47 ವರ್ಷದ ಸುವರ್ಣ ಎಂಬ ಹೆಸರಿನ ಆನೆ ಏ.21 ಮಧ್ಯಾಹ್ನ 12:13ಕ್ಕೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ. ಆನೆಗೆ ಪ್ರಸವ ವೇದನೆ ಮುಗಿದರೂ ಮರಿ ಜನನವಾಗದ ಹಿನ್ನೆಲೆ, ವೈದ್ಯರು ಆನೆ ಹೊಟ್ಟೆ ತಪಾಸಣೆ ಮಾಡಿದ್ದರು. ಈ ವೇಳೆ ಭ್ರೂಣದಲ್ಲೇ ಮರಿ ಆನೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಪ್ರಾಣಿ‌ ಶಸ್ತ್ರ ‌ಚಿಕಿತ್ಸೆ ತಜ್ಞರ ನೇತೃತ್ವದಲ್ಲಿ ಆಪರೇಶನ್ ಮಾಡುವ ಮೂಲಕ ಮೃತಪಟ್ಟ ಮರಿಯನ್ನು ಪಶುವೈದ್ಯರು ತೆಗೆದಿದ್ದರು. ಆದರೆ, ಮರಿ ಮೃತಪಟ್ಟಿದ್ದರಿಂದ ಆನೆ ದೇಹದಲ್ಲಿ ಇನ್ಫೆಕ್ಷನ್ ಹರಡಿಕೊಂಡು ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಆನೆ ಮೃತಪಟ್ಟಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಟೆಕ್ ಕಾರಿಡಾರ್‌ನಲ್ಲಿ ವಸತಿ ಬಾಡಿಗೆ ಶೇ. 24 ರಷ್ಟು ಏರಿಕೆ

ಉದ್ಯಾನವನದಲ್ಲಿ ಆನೆ ಸಾವಿಗೆ ಕಂಬನಿ ಮಿಡಿದ ಸಿಬ್ಬಂದಿ

ಕಳೆದ ರಾತ್ರಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಆನೆಯ ಸ್ಥಿತಿ ಕಂಡು ಪಾರ್ಕ್ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ಆನೆಯ ಅಗಲಿಕೆಯಿಂದ ಪಾರ್ಕ್​ನಲ್ಲಿ ನೀರವ ಮೌನ ಉಂಟಾಗಿದೆ.

ಅತಿ ಹೆಚ್ಚು ಆನೆ ಮರಿಗಳಿಗೆ ಜನ್ಮ ನೀಡಿದ್ದ ಸುವರ್ಣಳನ್ನು ಬನ್ನೇರುಘಟ್ಟ ‌ಬಯಲಾಜಿಕಲ್ ಪಾರ್ಕ್ ಒಳಗಡೆ‌ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾವೇರಿ | ಸಂಸದರ ಭಾವಚಿತ್ರಗಳಿಗೆ ಹಾರ ಹಾಕಿ, ಧಿಕ್ಕಾರ ಕೂಗಿದ ಕರವೇ ಮಹಿಳಾ ಹೋರಾಟಗಾರರು

"ರಾಜ್ಯದ ಜನತೆಯಿಂದ ಆಯ್ಕೆಯಾಗಿ ದೆಹಲಿಗೆ ಹೋದ 28 ಸಂಸದರು ತಾವು ಕರ್ನಾಟಕದ...

ಕರ್ನಾಟಕ ಬಂದ್ | ನಾಳೆ ಎಂದಿನಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸಂಚಾರ

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಸಂಘ-ಸಂಸ್ಥೆಗಳು ಸೇರಿದಂತೆ ನೂರಾರು...

ಬೆಂಗಳೂರು | ಸಾಲು ಸಾಲು ರಜೆ; ಮೂರು ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್‌ನಲ್ಲಿ ಸಿಲುಕಿದ ಜನ

ರಾಜ್ಯ ರಾಜಧಾನಿ ಬೆಂಗಳೂರಿಗೆ ಹಲವಾರು ಜನ ಕೆಲಸ ಅರಸಿ ಬಂದು ನಗರದಲ್ಲಿರುವ...

ಬೆಂಗಳೂರು | ಪ್ರತಿಭಟನೆ ಹೆಸರಿನಲ್ಲಿ ಹೋಟೆಲ್‌ಗೆ ನುಗ್ಗಿ ದಾಂಧಲೆ; ಬಿಜೆಪಿ ಕಾರ್ಯಕರ್ತರ ಬಂಧನ

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಸೆ.26 ರಂದು ಹಲವಾರು...