ಬೆಂಗಳೂರು | ಕೋ-ಲಿವಿಂಗ್‌ ಪಿಜಿಯಲ್ಲಿ ಮಹಿಳೆಯ ಖಾಸಗಿ ದೃಶ್ಯ ಸೆರೆಗೆ ಯತ್ನ: ಆರೋಪಿ ಪೊಲೀಸ್‌ ವಶ

Date:

ಬೆಳ್ಳಂದೂರಿನ ಭೋಗನಹಳ್ಳಿಯ ಕೋ-ಲಿವಿಂಗ್‌ ಪಿಜಿಯಲ್ಲಿ ಸ್ನಾನಗೃಹದಲ್ಲಿ ಫೋನ್‌ ಅಡಗಿಸಿಟ್ಟು ಮಹಿಳೆಯರ ಖಾಸಗಿ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಆರೋಪ ಕೇಳಿ ಬಂದಿದೆ. ಪಿಜಿಯಲ್ಲಿ ವಾಸಿಸುತ್ತಿದ್ದ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿ ಈ ಕುರಿತು ಬೆಳ್ಳಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ಎರಡು ತಿಂಗಳಿನಿಂದ ಕೋ-ಲಿವಿಂಗ್‌ ಪಿಜಿಯಲ್ಲಿ ವಾಸಿಸುತ್ತಿರುವ ಮಹಿಳೆ, ಜೂನ್‌ 14 ರ ಸಂಜೆ ಸ್ನಾನಕ್ಕೆ ತೆರಳಿದಾಗ ಸ್ನಾನಗೃಹದ ಕಿಟಕಿಯ ಮೇಲೆ ಬಿಳಿ ಬಣ್ಣದ ಐ ಫೋನ್‌ ಇರುವುದು ಗಮನಿಸಿದ್ದಾರೆ. ತಕ್ಷಣವೇ ಪಿಜಿ ಕೇರ್‌ ಟೇಕರ್‌ ಗಮನಕ್ಕೆ ವಿಷಯ ತರಲಾಗಿ, ದೂರುದಾರೆಯ ಕೋಣೆಯ ಪಕ್ಕದ ಕೋಣೆ ಬಾಗಿಲು ತಟ್ಟಿದಾದ ಪಿಜಿ ಕೇರ್‌ ಟೇಕರ್‌ ಹೊರಬಂದಿದ್ದಾನೆ. ಸಿಕ್ಕಿಬಿದ್ದ ಆರೋಪಿ ಮೊದಲು ಆರೋಪವನ್ನು ತಳ್ಳಿಹಾಕಿದ್ದು, ಗಂಭಿರವಾಗಿ ವಿಚಾರಿಸಿದಾಗ ಫೋನ್‌ ಕಿಟಕಿಯ ಮೇಲಿಟ್ಟಿರುವುದು ತಾನೇ ಎಂದು ಆತ ಒಪ್ಪಿಕೊಂಡಿದ್ದಾನೆ ಎಂದು ದೂರದಾರೆ ಪೊಲೀಸರಿಗೆ ತಿಳಿಸಿದ್ದಾರೆ.

ಆರೋಪಿಯನ್ನು ಬೆಳ್ಳಂದೂರು ಪೊಲೀಸ್‌ ಠಾಣೆಗೆ ವಿಚಾರಣೆಗೆ ಕರೆದೊಯ್ದು, ಫೋನ್‌ ಪರಿಶೀಲಿಸಿದಾಗ ದೂರುದಾರೆ ಮಹಿಳೆಯ ವಿಡಿಯೊ, ಫೋಟೊ ಪತ್ತೆಯಾಗಿರುವುದಿಲ್ಲ. ಆರೋಪಿ ಚಿತ್ರೀಕರಿಸುವ ಮುನ್ನ ಕೃತ್ಯ ಬೆಳಕಿಗೆ ಬಂದಿದೆ ಅಥವಾ ವಿಡಿಯೊ ಡಿಲೀಟ್‌ ಮಾಡಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSI) ಫೋನ್‌ ಹಸ್ತಾಂತರಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ...

ಬರಗಾಲದಿಂದ ನಾಡಿಗೆ ಮುಕ್ತಿ ಸಿಗಲಿ: ಗಾಣಗಾಪುರ ದತ್ತಾತ್ರೇಯನ ಮೊರೆ ಹೋದ ಸಿಎಂ ಡಿ.ಕೆ. ಶಿವಕುಮಾರ್

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ ಜನತೆಗೆ ಶೀಘ್ರವೇ ಮುಕ್ತಿ ಸಿಗಲಿ ಹಾಗೂ...

ಧಾರವಾಡ | 50 ಲಕ್ಷ ಲಂಚ ಪಡೆಯುವಾಗ ಲೋಕಾ ಬಲೆಗೆ ರೆಡ್ ಹ್ಯಾಂಡ್ ಸಿಕ್ಕ ತಹಶೀಲ್ದಾರ

ಭೂಮಿ ಅ ಖರಾಬ್ ತೆಗೆಯಲು ಒಂದು‌ ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ...

ಕಾನೂನುಬಾಹಿರ ನೇಮಕದ ಆರೋಪ: ಚಂದ್ರಶೇಖರನ್ ಬೆನ್ನಿಗೆ ನಿಂತ ಮಂಡಳಿ, ವಿರೋಧಿಸಿದ ನೊಯೆಲ್ ಟಾಟಾ

ಟಾಟಾ ಸನ್ಸ್ ಕಂಪನಿಯ ಆಡಳಿತ ಮಂಡಳಿಯು ಎನ್. ಚಂದ್ರಶೇಖರನ್ ಅವರನ್ನು ಅಧ್ಯಕ್ಷರನ್ನಾಗಿ...