ಕಲಬುರಗಿ | ಅಂತರರಾಷ್ಟ್ರೀಯ ಬೌದ್ಧ ಧಮ್ಮ ದೀಕ್ಷಾ ಯಾತ್ರೆಗೆ ತೆರೆ; ಸನ್ನತಿಯಲ್ಲಿ ಸಾವಿರಾರು ಜನರಿಂದ ಬೌದ್ಧ ದೀಕ್ಷೆ ಸ್ವೀಕಾರ!

Date:

ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣ, ಬೌದ್ಧ ಧಮ್ಮದ ಪ್ರಸಾರ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 5ರಂದು ಕಲಬುರಗಿಯಿಂದ ಆರಂಭಗೊಂಡ ಅಂತರರಾಷ್ಟ್ರೀಯ ಬೌದ್ಧ ಧಮ್ಮ ದೀಕ್ಷಾ ಹಾಗೂ ಕರ್ನಾಟಕ ರಾಜ್ಯ ಧಮ್ಮ ಜನಜಾಗೃತಿ ಯಾತ್ರೆಯ ಸಮಾರೋಪ ಸಮಾರಂಭವು ಭಾನುವಾರ ಚಿತ್ತಾಪುರ ತಾಲೂಕಿನ ಸನ್ನತಿ (ಕನಗನಹಳ್ಳಿ) ಗ್ರಾಮದಲ್ಲಿ ನಡೆಯಿತು.

- Advertisement -

ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆ, ಭಾರತ ಗ್ಲೋಬಲ್, ಡಾ. ಅಂಬೇಡ್ಕರ್ ಬೌದ್ಧ ಮಿಷನ್ ಯುಎಸ್‌ಎ, ಅಖಿಲ ಭಾರತ ಡಾ. ಅಂಬೇಡ್ಕರ್ ಭಿಕ್ಕು ಸಂಘ ಹಾಗೂ ಬೌದ್ಧ ಮಹಾಸ್ತೂಪ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ, ಸನ್ನತಿ ಇವರ ಸಂಯುಕ್ತ ಆಶ್ರಯದಲ್ಲಿ 70ನೇ ಬೌದ್ಧ ಧಮ್ಮ ದೀಕ್ಷಾ ವರ್ಷಾಚರಣೆ ಪ್ರಯುಕ್ತ ಈ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ 31 ಜಿಲ್ಲೆಗಳಲ್ಲಿ ಸಂಚರಿಸಿದ ಯಾತ್ರೆ 26 ದಿನಗಳಲ್ಲಿ ಸುಮಾರು 5 ಸಾವಿರ ಕಿ.ಮೀ. ದೂರ ಕ್ರಮಿಸಿ ಸನ್ನತಿಯಲ್ಲಿ ಸಮಾಪನಗೊಂಡಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ ಅಗತ್ಯಗಳಲ್ಲೊಂದು. ಏಕೆಂದರೆ ನಮ್ಮಲ್ಲಿ ಓದು ಎನ್ನುವುದು ಬಹುಪಾಲು ಸಾಹಿತ್ಯಕವಾದ ಓದೇ ಆಗಿದೆ. ಸಾಹಿತ್ಯದಲ್ಲಿ ಸಹಜವಾಗಿ ಕಾಣಬರುವ ಒಂದು ಬಗೆಯ ಎಲ್ಲವೂ...

ಕಾರ್ಯಕ್ರಮದಲ್ಲಿ ಮಾತನಾಡಿದ ಭಂತೆ ಧಮ್ಮತಿಸ್ಸಾ, “ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಕಂಡ ಪ್ರಬುದ್ಧ ಭಾರತದ ಕನಸನ್ನು ನನಸು ಮಾಡುವ ಉದ್ದೇಶದಿಂದ ಈ ಧಮ್ಮ ಯಾತ್ರೆ ಕೈಗೊಳ್ಳಲಾಗಿದೆ. ಬುದ್ಧನ ಮಾರ್ಗದಲ್ಲಿ ನಡೆಯುವ ಮೂಲಕ ಸಮಾಜದಲ್ಲಿನ ಅಜ್ಞಾನ, ಅಂಧಕಾರ, ಮೌಢ್ಯತೆ ಹಾಗೂ ಮಾನಸಿಕ ಗುಲಾಮಗಿರಿಯನ್ನು ತೊಡೆದುಹಾಕಬೇಕು” ಎಂದು ಹೇಳಿದರು.

“ಭಗವಾನ್ ಬುದ್ಧರು 35ನೇ ವಯಸ್ಸಿನಲ್ಲಿ ಜ್ಞಾನೋದಯ ಪಡೆದು, ಬಹುಜನರ ಹಿತಕ್ಕಾಗಿ ಹಾಗೂ ಸುಖಕ್ಕಾಗಿ ಧಮ್ಮದ ಸಂದೇಶವನ್ನು ಜನರಿಗೆ ತಲುಪಿಸಲು ಮುಂದಾದರು. ಬುದ್ಧನ ಆಶಯದಂತೆ ಧಮ್ಮವನ್ನು ಜನಸಾಮಾನ್ಯರ ನಡುವೆ ಪಸರಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. 2003ರಿಂದ ಆರಂಭವಾದ ಧಮ್ಮ ಸಮ್ಮೇಳನಗಳ ಮೂಲಕ ಧಮ್ಮ ಜಾಗೃತಿಯ ಆಶಯವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ” ಎಂದರು.

3521898

“70 ವರ್ಷಗಳ ಹಿಂದೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಲಕ್ಷಾಂತರ ಜನರೊಂದಿಗೆ ಬೌದ್ಧ ಧಮ್ಮ ಸ್ವೀಕರಿಸುವ ಮೂಲಕ ಸಾಮಾಜಿಕ ಪರಿವರ್ತನೆಗೆ ಹೊಸ ದಿಕ್ಕು ತೋರಿದರು. ಮಾನಸಿಕ ಗುಲಾಮಗಿರಿಯಿಂದ ಮುಕ್ತರಾಗಿ ಸ್ವಾಭಿಮಾನ ಮತ್ತು ಸಮಾನತೆಯ ಬದುಕು ಕಟ್ಟಿಕೊಳ್ಳಲು ಧಮ್ಮ ಅತ್ಯಂತ ಮಹತ್ವದ ಶಕ್ತಿಯಾಗಿದೆ. ಜೀವ ನೀಡಿದ್ದು ತಂದೆ-ತಾಯಿಯಾದರೆ, ಬದುಕಿಗೆ ಅರ್ಥ ಮತ್ತು ಸ್ವಾಭಿಮಾನದ ದಾರಿ ತೋರಿಸಿದ್ದು ಬಾಬಾಸಾಹೇಬ್ ಅಂಬೇಡ್ಕರ್. ಅವರ ಕೊಡುಗೆಯನ್ನು ಎಂದಿಗೂ ಮರೆಯಬಾರದು” ಎಂದು ಕರೆ ನೀಡಿದರು.

ಝೆನ್ ಮಾಂಕ್ ಡಾ. ಶಾಕು ಬೋಧಿದಮ್ಮ ಅವರು ಧಮ್ಮ ದೀಕ್ಷೆ ನೀಡಿ ಮಾತನಾಡಿ, “ಬುದ್ಧನ ಸಂದೇಶಗಳು ಜಗತ್ತಿನಲ್ಲಿ ಶಾಂತಿ ಮತ್ತು ಪರಿವರ್ತನೆ ತರಬಲ್ಲವು. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟದ ಜತೆಗೆ ಬೌದ್ಧ ಧಮ್ಮದ ಮಾನವೀಯ ಮೌಲ್ಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಧಮ್ಮ ಜನಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ” ಎಂದರು.

“ಭಾರತದ ತ್ರಿವರ್ಣ ಧ್ವಜದಲ್ಲಿರುವ ಅಶೋಕ ಚಕ್ರವು ಬೌದ್ಧ ಧಮ್ಮದ ಮೌಲ್ಯಗಳನ್ನು ನೆನಪಿಸುತ್ತದೆ. ಆದರೆ ಅದರ ಮಹತ್ವದ ಕುರಿತು ಹೆಚ್ಚಿನ ಚರ್ಚೆ ನಡೆಯುತ್ತಿಲ್ಲ. ರಾಜಕೀಯ ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ; ಆದರೆ ಬುದ್ಧನ ಸಂದೇಶಗಳು ಎಂದಿಗೂ ಬದಲಾಗುವುದಿಲ್ಲ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಜನರು ಭಾರತವನ್ನು ಬುದ್ಧನ ನಾಡು ಎಂದು ಗುರುತಿಸುತ್ತಾರೆ. ನಾವೆಲ್ಲರೂ ಬುದ್ಧನ ಮಾನವೀಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಕಲಬುರಗಿ SIR | ಬದುಕಿದ್ದರೂ ಮತದಾರರ ಪಟ್ಟಿಯಲ್ಲಿ ಅಸ್ತಿತ್ವವೇ ಇಲ್ಲ; ಅರ್ಹರ ಮತದಾನದ ಹಕ್ಕಿಗೆ ಕತ್ತರಿ!

ಸಮಾರಂಭದಲ್ಲಿ ಸಾವಿರಾರು ಉಪಾಸಕರು ಹಾಗೂ ಉಪಾಸಕಿಯರು ಬೌದ್ಧ ಧಮ್ಮ ದೀಕ್ಷೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಟೋಪಣ್ಣ ಕೋಮಟೆ, ಬಸವರಾಜ ಬೆಣ್ಣೂರಕರ್, ರಮೇಶ ಪಟ್ಟಿದಾರ್, ಸೂರ್ಯಕಾಂತ ನಿಂಬಾಳಕರ್, ಸುರೇಶ್ ಕಾನೇಕರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಬೌದ್ಧ ಭಿಕ್ಕುಗಳು ಹಾಗೂ ಧಮ್ಮ ಅನುಯಾಯಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಶಾಸಕ ಸುಬ್ಬಾರೆಡ್ಡಿಯ ಎಲ್ಲಾ ಹಗರಣಗಳ ವಿರುದ್ದ ನ.11 ರಂದು ಬೃಹತ್ ಹೋರಾಟ

ಸರ್ಕಾರಿ ಅಧಿಕಾರಿಗಳಿಂದ, ಕ್ರಷರ್ ಮಾಲೀಕರಿಂದ ವಸೂಲಿ ಮಾಡಿರುವ ಹಾಗೂ ಬಡ ರೈತರಿಂದ...

ವಿಜಯಪುರ | ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ ಕಾಳಜಿ: ಹೊನವಾಡದಲ್ಲಿ ಸರ್ಕಾರಿ ಶಾಲೆಗೆ ನೂತನ ಕಟ್ಟಡ

ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ, ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ...

ಕೋಲಾರ | ನಾನು ಮುಂದೆ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ‌, ಸಚಿವರಾಗುವುದು ಖಚಿತ : ವರ್ತೂರ್ ಪ್ರಕಾಶ್

ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಬಿಜೆಪಿ ಗೆಲುವು ಸಾಧಿಸುವ...

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು...