ಯುಪಿ ಮೂಲಕ ಅಧಿಕಾರಕ್ಕೆ ಬಂದವರನ್ನು ಅಲ್ಲೇ ಬೀಳ್ಕೊಡುತ್ತೇವೆ: ದೆಹಲಿ ಸಮಾವೇಶದಲ್ಲಿ ‘ಮೋದಿ ಸರ್ಕಾರ’ದ ವಿರುದ್ಧ ಅಖಿಲೇಶ್ ವಾಗ್ದಾಳಿ

Date:

ಉತ್ತರ ಪ್ರದೇಶದಲ್ಲಿ ಚುನಾವಣಾ ಮತದಾರರ ಪಟ್ಟಿಯನ್ನು ತಿರುಚುವ ಮೂಲಕ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪ್ರಜಾಪ್ರಭುತ್ವವನ್ನು ವಂಚಿಸುತ್ತಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಕಿಡಿಕಾರಿದ್ದಾರೆ.

- Advertisement -

ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ‘ಇಂಡಿಯಾ’ ಮೈತ್ರಿಕೂಟ ಆಯೋಜಿಸಿದ್ದ ‘ಚಲೋ ದೆಹಲಿ’ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ರಾಮಲೀಲಾ ಮೈದಾನವನ್ನು ‘ಪ್ರಜಾಪ್ರಭುತ್ವದ ಹಳದೀಘಾಟಿ’ ಎಂದು ಬಣ್ಣಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ ಅಗತ್ಯಗಳಲ್ಲೊಂದು. ಏಕೆಂದರೆ ನಮ್ಮಲ್ಲಿ ಓದು ಎನ್ನುವುದು ಬಹುಪಾಲು ಸಾಹಿತ್ಯಕವಾದ ಓದೇ ಆಗಿದೆ. ಸಾಹಿತ್ಯದಲ್ಲಿ ಸಹಜವಾಗಿ ಕಾಣಬರುವ ಒಂದು ಬಗೆಯ ಎಲ್ಲವೂ...

“ಉತ್ತರ ಪ್ರದೇಶ ಒಂದರಲ್ಲೇ ಸುಮಾರು 1.27 ಲಕ್ಷ ಹಿಂದು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಿಹಾಕಲಾಗಿದೆ. ಇದು ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ 31,000 ಮತಗಳನ್ನು ಕಡಿತಗೊಳಿಸಿದಂತೆ. ಬಿಜೆಪಿ ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗುವ ಮೂಲಕವೇ ಚುನಾವಣೆಯಲ್ಲಿ ಗೆಲ್ಲಲು ಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.

“ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮತ್ತು ಸ್ಥಳೀಯ ಎಂಎಲ್‌ಸಿ ಚುನಾವಣೆಗಳ ವೇಳೆಯೂ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಹೆಸರಿನಲ್ಲಿ ಬೃಹತ್ ಅಕ್ರಮ ಎಸಗಿ ಗೆಲುವನ್ನು ಕಸಿದುಕೊಳ್ಳಲಾಗಿದೆ” ಎಂದು ಅವರು ದೂರಿದ್ದಾರೆ

ಉತ್ತರ ಪ್ರದೇಶದ ಎಂಎಲ್‌ಸಿ ಚುನಾವಣೆಯ ಉದಾಹರಣೆ ನೀಡಿದ ಅವರು, “ಕಾಶಿ (ವಾರಣಾಸಿ) ಜನರು ಬಿಜೆಪಿಯ ‘ಡಬಲ್ ಎಂಜಿನ್’ ಸರ್ಕಾರವನ್ನು ‘ಡಬಲ್ ಝೀರೋ’ ಮಾಡಿದ್ದಾರೆ. 2022ರ ಚುನಾವಣೆಯಲ್ಲಿ ತಮಗೆ ಸರ್ಕಾರ ರಚಿಸಲು ಸಾಧ್ಯವಾಗದಿರಲು ಬಿಜೆಪಿ ಎಸಗಿದ ಈ ‘ವೋಟ್ ಚೋರಿ’ಯೇ ಕಾರಣವಾಗಿತ್ತು. ಆದರೆ, ಈ ಬಾರಿ ಇಂಡಿಯಾ ಮೈತ್ರಿಕೂಟ ಯಾವುದೇ ಕಾರಣಕ್ಕೂ ಸುಮ್ಮನೆ ಕುಳಿತುಕೊಳ್ಳುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

“ಒಮ್ಮೆ ಭಾರತವನ್ನು ‘ವಿಶ್ವಗುರು’ ಮಾಡುತ್ತೇವೆ ಎಂದು ಜಪಿಸುತ್ತಿದ್ದ ಬಿಜೆಪಿಯವರು, ಇಂದು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ತೆಗೆದುಹಾಕುವ ಮತ್ತು ತಿರುಚುವ ಕಾಯಕದಲ್ಲಿ ಬ್ಯುಸಿಯಾಗಿದ್ದಾರೆ. ಬಿಜೆಪಿ ತನ್ನ ಅಸ್ತಿತ್ವದ ಬಗ್ಗೆ ಮರುಚಿಂತನೆ ನಡೆಸಬೇಕಾದ ಕಾಲ ಹತ್ತಿರವಾಗಿದೆ. ಉತ್ತರ ಪ್ರದೇಶದ ಮೂಲಕ ಅಧಿಕಾರಕ್ಕೆ ಬಂದವರನ್ನು ಅದೇ ರಾಜ್ಯದ ಜನರೇ ಹೊರದಬ್ಬಲಿದ್ದಾರೆ. ಏಕೆಂದರೆ ಉತ್ತರ ಪ್ರದೇಶದ ಜನರಿಗೆ ಆತಿಥ್ಯ ನೀಡಿ ಸ್ವಾಗತಿಸುವುದು ಎಷ್ಟು ಚೆನ್ನಾಗಿ ಗೊತ್ತಿದೆಯೋ, ಅದಕ್ಕಿಂತಲೂ ಚೆನ್ನಾಗಿ ಬೀಳ್ಕೊಡುಗೆ ನೀಡುವುದು ಗೊತ್ತಿದೆ,” ಎಂದಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರತಿ ಅಂಗಡಿಯನ್ನೂ BJP ಬಲವಂತವಾಗಿ ಮುಚ್ಚಿಸಿದೆ, ಕನ್ನಾಟ್ ಪ್ಲೇಸ್ ವ್ಯಾಪಾರಿಗಳ ನಷ್ಟಕ್ಕೆ ಬಿಜೆಪಿಯೇ ಕಾರಣ: ರಾಹುಲ್ ಗಾಂಧಿ ಕಿಡಿ

ದೆಹಲಿಯ ಕನ್ನಾಟ್ ಪ್ಲೇಸ್‌ನ ಪ್ರತಿಯೊಂದು ಅಂಗಡಿಯನ್ನೂ ಬಿಜೆಪಿ ಬಲವಂತವಾಗಿ ಮುಚ್ಚಿಸಲಾಗಿದೆ. ಸ್ಥಳೀಯ...

‘ಮತ ಕಳ್ಳರೆ ಅಧಿಕಾರ ಬಿಟ್ಟು ತೊಲಗಿ’: SIR ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಆಕ್ರೋಶ

ಪ್ರಜಾಪ್ರಭುತ್ವದ ಜೀವಾಳವಾಗಿರುವ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದ್ದು, "ಮತ ಕಳ್ಳರೆ ಅಧಿಕಾರ ಬಿಟ್ಟು...

ವಾಣಿಜ್ಯ ಗ್ಯಾಸ್ ದರ 10 ರೂ. ಏರಿಕೆ, ಜೆಟ್ ಇಂಧನ ದರ ಮತ್ತೆ ದುಬಾರಿ

ದೀಪಾವಳಿ ಹಬ್ಬದ ಹೊಸ್ತಿಲಲ್ಲೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. 19...