ಪ್ರವೀಣ್ ಪತ್ನಿ ಉದ್ಯೋಗ ರದ್ದು | ಬಿಜೆಪಿ ಕೀಳು ಮಟ್ಟದ ರಾಜಕೀಯ ಮಾಡಿದೆ: ಕಾಂಗ್ರೆಸ್‌ ಮುಖಂಡ

Date:

  • ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ
  • ನೂತನ’ಗೆ ಶಾಶ್ವತ ಉದ್ಯೋಗ ಮಾಡಿಸಿಕೊಡಲು ಬಿಜೆಪಿ ಯಾಕೆ ಪ್ರಯತ್ನಿಸಲಿಲ್ಲ

ಹತ್ಯೆಗೀಡಾದ ಪ್ರವೀಣ್ ನೆಟ್ಟಾರ್ ಪತ್ನಿಗೆ ಬಿಜೆಪಿ ತನ್ನ ಆಡಳಿತದ ಅವಧಿಯಲ್ಲಿ ತಾತ್ಕಾಲಿಕ ಉದ್ಯೋಗ ನೀಡಿದ್ದು, ಸಹಜವಾಗಿ ಸರ್ಕಾರ ಬದಲಾದಾಗ ನೇಮಕಾತಿ ರದ್ದಾಗಿದೆ. ಇದರಿಂದ ಬಿಜೆಪಿ ಎಷ್ಟು ಕೀಳುಮಟ್ಟದ ರಾಜಕೀಯ ಮಾಡಿದೆ ಎಂಬ ಬಗ್ಗೆ ತಿಳಿಯುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ತಿಳಿಸಿದ್ದಾರೆ.

“ಬಿಜೆಪಿ ಸರ್ಕಾರ ಕೀಳುಮಟ್ಟದ ರಾಜಕೀಯ, ನಾಟಕ ಮಾಡುವುದನ್ನು ನಿಲ್ಲಿಸಲಿ. ಸಾಮಾನ್ಯ ಜನರಿಗೆ ಬಿಜೆಪಿಯವರ ಕಪಟ ನಾಟಕದ ಬಗ್ಗೆ ತಿಳಿದಿದೆ. ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ ಎಂಬ ಬಗ್ಗೆ ಬಿಜೆಪಿಯ ಶಾಸಕರು, ಸಂಸದರಿಗೆ ಸಾಮಾನ್ಯ ತಿಳಿವಳಿಕೆಯೂ ಇಲ್ಲವೆ” ಎಂದು ಪ್ರಶ್ನಿಸಿದ್ದಾರೆ.

“ಇದೆಲ್ಲ ಅರಿತಿದ್ದರೂ ಕೂಡಾ ಪ್ರವೀಣ್ ನೆಟ್ಟಾರ್ ಅವರ ಪತ್ನಿಗೆ ಮುಖ್ಯಮಂತ್ರಿಯವರ ವಿಶೇಷ ಅಧಿಕಾರ ಬಳಸಿ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಿದ್ದಾರೆ. ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ. ಅದೇ ರೀತಿ ನೂತನ ಕುಮಾರಿ ಅವರ ಕೆಲಸ ರದ್ದಾಗಿದೆ. ಬಿಜೆಪಿಗೆ ಪ್ರವೀಣ ನೆಟ್ಟಾರು ಹಾಗೂ ಅವರ ಪತ್ನಿ ಮೇಲೆ ಕರುಣೆ ಇದ್ದರೆ ಅಭಿಮಾನ ಇದ್ದಿದ್ದರೆ ಈ ಮೊದಲೇ ಅವರಿಗೆ ಯಾಕೆ ಶಾಶ್ವತ ಉದ್ಯೋಗ ನೀಡಲಿಲ್ಲ. ಶಾಶ್ವತ ಉದ್ಯೋಗ ಮಾಡಿಸಿಕೊಡಲು ಯಾಕೆ ಪ್ರಯತ್ನಿಸಿಲ್ಲ” ಎಂದು ಹೇಳಿದ್ದಾರೆ.

“ಬಿಜೆಪಿ ಸರ್ಕಾರ ಇಷ್ಟು ದಿನ ಮಾಡಿದೆಲ್ಲ ನಾಟಕ ಎಂಬುದು ಈ ವಿಚಾರದಿಂದ ಬಹಿರಂಗವಾಗಿದೆ. ನೂತನರವರಿಗೆ ಉದ್ಯೋಗ ನೀಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಈಗಾಗಲೇ ನೂತನ ಅವರ ಜೊತೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಮಾತುಕತೆ ನಡೆಸಿದ್ದೇವೆ. ಅವರಿಗೆ ಕೂಡಲೇ ಉದ್ಯೋಗ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಾಡಿಗೆ ನೆಪ | ಮಾಲೀಕನ ತಲೆಗೆ ಹೊಡೆದು ಚಿನ್ನ ದೋಚಿದ ಮಹಿಳೆಯರು

“ಬಿಜೆಪಿಯವರು ಕೀಳುಮಟ್ಟದ ರಾಜಕೀಯದ ಮೂಲಕ ಜನರನ್ನು ಮತ್ತೆ ಮೂರ್ಖರನ್ನಾಗಿಸುವ ಕೆಲಸವನ್ನು ಬಿಡಲಿ. ಇಂತಹ ಕೀಳು ರಾಜಕೀಯ ಮುಂದೆ ನಡೆಯುವುದಿಲ್ಲ” ಎಂದು ಪದ್ಮರಾಜ್ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂದಿನ ಒಂದು ವಾರ ಹಗಲು, ರಾತ್ರಿ ಸಾಧಾರಣ ಮಳೆ ಸಾಧ್ಯತೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಏಳು ದಿನ ಹಗಲು ಮತ್ತು ರಾತ್ರಿ...

ಅಕ್ಟೋಬರ್ 5ರಂದು ಸಾರಿಗೆ ನೌಕರರ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು...

ಬೆಂಗಳೂರು | ಸೆ.21 ರಂದು ಮೆಟ್ರೋ ಸೇವೆಯಲ್ಲಿ ವ್ಯತ್ಯಯ; ಎಲ್ಲೆಲ್ಲಿ? ಇಲ್ಲಿದೆ ನೋಡಿ

ಕೃಷ್ಣರಾಜಪುರದಿಂದ ಗರುಡಾಚಾರ್‌ಪಾಳ್ಯ ನಡುವೆ ಸೆ.21 ರಂದು ಇಡೀ ದಿನ ನಮ್ಮ ಮೆಟ್ರೋ...

ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ; ತಂಬಾಕು ಉತ್ಪನ್ನ ಖರೀದಿ ವಯೋಮಿತಿ 21 ವರ್ಷಕ್ಕೆ ಏರಿಕೆ: ದಿನೇಶ್ ಗುಂಡೂರಾವ್

ರಾಜ್ಯಾದ್ಯಂತ ಹುಕ್ಕಾ ಬಾರ್‌ಗಳನ್ನು ನಿಷೇಧಿಸಲು ಮತ್ತು ತಂಬಾಕು ಉತ್ಪನ್ನಗಳನ್ನು ಖರೀದಿಸುವ ವಯಸ್ಸಿನ...