ಉಡುಪಿ

ಹವಾಮಾನ | ರಾಜ್ಯದಲ್ಲಿ ಮುಂದಿನ 24 ಗಂಟೆಯೊಳಗೆ ಗಾಳಿ ಸಹಿತ ಮಳೆ ಸೂಚನೆ

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡಿನ ಹಲವೆಡೆ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ ಮತ್ತು...

ಉಡುಪಿ | ಡೇವಿಡ್ ಡಿಸೋಜ ಶೂಟ್‌ಔಟ್ ಪ್ರಕರಣ: ಆರೋಪಿಗಳೊಂದಿಗೆ ಸ್ಥಳ ಮಹಜರು ನಡೆಸಿದ ಪೊಲೀಸರು

ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟ್‌ಔಟ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿರುವ ಇಬ್ಬರು ಆರೋಪಿಗಳೊಂದಿಗೆ ಪೊಲೀಸರು ಮಂಗಳವಾರ ಸ್ಥಳ ಮಹಜರು ನಡೆಸಿದರು. ಪ್ರಕರಣದ ಆರೋಪಿಗಳಾದ ಉತ್ತರಾಖಂಡದ ಆಕಾಶ್...

ಉಡುಪಿ | ಪ.ಜಾತಿ/ಪ.ಪಂಗಡ ಜಿಲ್ಲಾ ಮಟ್ಟದ ಜಾಗೃತ ಸಮಿತಿಗೆ ಅರ್ಜಿ ಆಹ್ವಾನ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅನುಷ್ಠಾನ, ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ವಿಚಾರಣೆ, ದೌರ್ಜನ್ಯ ಪ್ರಕರಣಗಳ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ಹಾಗೂ ಪುನರ್ವಸತಿ ಸೇರಿದಂತೆ ವಿವಿಧ ವಿಷಯಗಳ...

ಉಡುಪಿ | ಕೆಳಪರ್ಕಳದಲ್ಲಿ ಮತ್ತೆ ಅಪಘಾತ: ರಸ್ತೆ ಬದಿಯ ಮರಕ್ಕೆ ಬುಲೆಟ್ ಢಿಕ್ಕಿ, ಯುವಕ ಸಾವು

ರಸ್ತೆ ಬದಿಯ ಮರಕ್ಕೆ ಬುಲೆಟ್ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಹೆರ್ಗ ಗ್ರಾಮದ ಕೆಳಪರ್ಕಳ ಇಳಿಜಾರಿನಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿ ಆ.11ರಂದು ನಸುಕಿನ ಜಾವ ಸುಮಾರು 1.25ಕ್ಕೆ...

ಉಡುಪಿ| ಹೆಬ್ರಿಯಲ್ಲಿ ಅಪಾಯಕಾರಿ ಮರಗಳ ತೆರವಿಗೆ ಆಗ್ರಹ; ಸದಾನಂದ ಪ್ರಭು ಕುಟುಂಬಕ್ಕೆ ಪರಿಹಾರ ನೀಡುವಂತೆ ಮನವಿ

ಇತ್ತೀಚೆಗೆ ಮರ ಬಿದ್ದು ಮೃತಪಟ್ಟ ಸದಾನಂದ ಪ್ರಭು ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಅರಣ್ಯ ಇಲಾಖೆ ಹಾಗೂ ತಹಶೀಲ್ದಾರ್ ಕಚೇರಿಗೆ ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಕುಚ್ಚೂರು ಮನವಿ ಸಲ್ಲಿಸಿದರು. ಹೆಬ್ರಿ...

ಉಡುಪಿ | ಮುಂದುವರಿದ ಆನ್‌ಲೈನ್ ಹೂಡಿಕೆ ಫ್ರಾಡ್: ರೂ. 32.68 ಲಕ್ಷ ಲಪಟಾಯಿಸಿದ ವಂಚಕರು

ಷೇರು ಮತ್ತು ಐಪಿಒ ಹೂಡಿಕೆ ಯೋಜನೆಗಳಲ್ಲಿ ಹಣ ದ್ವಿಗುಣಗೊಳಿಸುವ ಆಮಿಷ ನೀಡಿ ಅಪರಿಚಿತರು ಉಡುಪಿ ಜಿಲ್ಲೆಯ ಕಾರ್ಕಳದ ವ್ಯಕ್ತಿಯೊಬ್ಬರನ್ನು ವಂಚಿಸಿ, 32.68 ಲಕ್ಷ ರೂಪಾಯಿ ಹಣ ಲಪಟಾಯಿಸಿದ ಪ್ರಕರಣ ಬೆಳಕಿಗೆ ಬಂದಿದೆ. ದೂರುದಾರರಾದ ಲಕ್ಷ್ಮಣ್...

ಉಡುಪಿ | ಕಸ್ತೂರಿ ರಂಗನ್ ವರದಿ ಜಾರಿ ಪ್ರಕಟ ಸಭೆ: ಅಧಿಕಾರಿಗಳ ವಿರುದ್ಧ ವಿಕಾಸ್ ಹೆಗ್ಡೆ ಅಸಮಾಧಾನ

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಜಾರಿಯಾಗಲಿರುವ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವಾಲಯ 7 ನೇ ಕರಡು ಅಧಿಸೂಚನೆ ಪ್ರಕಟಿಸಿರುವಾಗ ಇದರ ಬಗ್ಗೆ...

ಉಡುಪಿ | ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ: ಇಬ್ಬರು ಆರೋಪಿಗಳಿಗೆ 10 ದಿನ ಪೊಲೀಸ್ ಕಸ್ಟಡಿ

ಉಡುಪಿಯ ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಅವರ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಇಬ್ಬರು ಆರೋಪಿಗಳನ್ನು ಉಡುಪಿ ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್...

ಕಾರ್ಕಳ : ಭೂಕುಸಿತದ ಅಪಾಯದಲ್ಲಿರುವ 15 ದಲಿತ ಕುಟುಂಬಗಳಿಗೆ ಪುನರ್ವಸತಿಗೆ ಆಗ್ರಹ

ಕಾರ್ಕಳ ತಾಲೂಕಿನ ರೇಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ಯಾರಲ್ ಬೆಟ್ಟು, ಹೆಡ್ಮೆ ಎಂಬಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಸುಮಾರು 15 ದಲಿತ ಕುಟುಂಬಗಳ ಮನೆಗಳು ಅಪಾಯದ ಅಂಚಿನಲ್ಲಿವೆ. ಈ ಹಿನ್ನೆಲೆಯಲ್ಲಿ ಅಪಾಯದಲ್ಲಿರುವ ಕುಟುಂಬಗಳಿಗೆ...

ಉಡುಪಿ | ರೈತ ಕಾರ್ಮಿಕ ಕೂಲಿಕಾರರ ಜೈಲ್ ಭರೋ ಹೋರಾಟ, ಬಂಧನ ಬಿಡುಗಡೆ

ಕೇಂದ್ರ ಸರಕಾರದ ಕಾರ್ಮಿಕ ರೈತ ಕೂಲಿಕಾರರ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ನಗರದ ಅಂಚೆ ಕಚೇರಿ ಎದುರು ಪ್ರತಿಭಟನೆ, ರಸ್ತೆ ತಡೆ ನಡೆಸಿ ಬಂಧನಕ್ಕೊಳಗಾದರು. ನಾಲ್ಕು ಲೇಬರ್ ಕೋಡ್ ಜಾರಿಯಿಂದ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳಲಾಗುತ್ತಿದೆ....

ಉಡುಪಿ | ಜಂತುಹುಳು ನಿವಾರಣಾ ಮಾತ್ರೆ ಸೇವಿಸಿ – ಆರೋಗ್ಯಯುತ ಜೀವನ ನಡೆಸಿ : ಶಾಸಕ ಯಶ್‌ಪಾಲ್ ಎ ಸುವರ್ಣ

ಮಕ್ಕಳಲ್ಲಿ ಜಂತುಹುಳುಗಳ ಭಾದೆಯಿಂದ ಅಪೌಷ್ಟಿಕತೆ ಹಾಗೂ ರಕ್ತಹೀನತೆ ಉಂಟಾಗಿ ಅವರುಗಳ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಈ ಜಂತುಹುಳು ನಿವಾರಣೆಗಾಗಿ ವರ್ಷದಲ್ಲಿ ಎರಡು ಬಾರಿ ಜಂತುಹುಳು ನಿವಾರಣಾ...

ಉಡುಪಿ | ರೇಂಜಾಳದಲ್ಲಿ ಭೂಕುಸಿತ; ನಾಲ್ಕು ದಲಿತ ಕುಟುಂಬಗಳ ಸ್ಥಳಾಂತರ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರೇಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ರೇಂಜಾಳ ಪ್ಯಾರಲ್ ಬೆಟ್ಟುವಿನ ಹೆಡ್ಮೇ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಸುಮಾರು 15 ದಲಿತ ಕುಟುಂಬಗಳು ವಾಸಿಸುತ್ತಿರುವ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ....

ಈ ಹೊತ್ತಿನ ಪ್ರಮುಖ ಸುದ್ದಿ