ಉಡುಪಿ | ಹಾಲಿನ ಬೆಲೆ ಏರಿಕೆ: ಮಹಿಳೆಯರ ಅಡುಗೆ ಮನೆಯ ಲೆಕ್ಕಾಚಾರಕ್ಕೆ ಸರ್ಕಾರದ ಹೊಡೆತ !

Date:

ಬೆಲೆ ಏರಿಕೆಯ ಬಿಸಿ ಈಗ ಜನಸಾಮಾನ್ಯರ ಅಡುಗೆ ಮನೆಯನ್ನೂ ತಟ್ಟಿದೆ. ಅಡುಗೆ ಅನಿಲ, ತರಕಾರಿ, ಆಹಾರ ಧಾನ್ಯಗಳ ಬೆಲೆ ಏರಿಕೆಯಿಂದಲೇ ತತ್ತರಿಸಿರುವ ಕುಟುಂಬಗಳಿಗೆ ಇದೀಗ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಮತ್ತೊಂದು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಪ್ರತಿಯೊಂದು ಮನೆಯಲ್ಲೂ ದಿನನಿತ್ಯ ಬಳಕೆಯಾಗುವ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚಳವು ಕೇವಲ ಗ್ರಾಹಕರ ಜೇಬಿಗೆ ಬೀಳುವ ಹೊಡೆತವಲ್ಲ, ಕುಟುಂಬದ ಆಹಾರ ಪದ್ಧತಿ ಹಾಗೂ ಮಕ್ಕಳ ಪೌಷ್ಟಿಕತೆಯ ಮೇಲೂ ಪರಿಣಾಮ ಬೀರುವ ವಿಚಾರವಾಗಿದೆ.

- Advertisement -

ರಾಜ್ಯ ಸರ್ಕಾರ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಸಿರುವುದನ್ನು ವಿರೋಧಿಸಿ ವುಮೆನ್ ಇಂಡಿಯಾ ಮೂವ್‌ಮೆಂಟ್‌ನ ಉಡುಪಿ ಜಿಲ್ಲಾ ಘಟಕವು ನಗರದ ಜೋಡುಕಟ್ಟೆ ಬಳಿ ಪ್ರತಿಭಟನಾ ಧರಣಿ ನಡೆಸಿ, ಬೆಲೆ ಏರಿಕೆ ನಿರ್ಧಾರವನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Quockerwodger’: ಶಶಿ ತರೂರ್ ಸೂಚಿಸಿದ ಹೊಸ ರಾಜಕೀಯ ಪದ!

ಇದು 19ನೇ ಶತಮಾನದ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಪರೂಪದ ಪದ. ಮೂಲತಃ ದಾರಗಳ ಮೂಲಕ ನಿಯಂತ್ರಿಸಲ್ಪಡುವ ಮರದ ಗೊಂಬೆಯನ್ನು ಸೂಚಿಸುತ್ತಿತ್ತು. ಗೊಂಬೆಯಾಟದಲ್ಲಿ ಸೂತ್ರಧಾರ ದಾರ ಎಳೆದಂತೆ ಗೊಂಬೆ ಕೈಕಾಲು ಆಡಿಸುತ್ತದೆ. ಗೊಂಬೆ ಚಲಿಸುತ್ತದೆಯೇ...

ರಾಷ್ಟ್ರೀಯವಾದ ಹೊಟ್ಟೆ ತುಂಬಿಸುವುದಿಲ್ಲ; ಟ್ರಂಪ್‌ಗೆ ಅಮೆರಿಕನ್ನರು ಕಲಿಸಿದ ಪಾಠ...

ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ...

ಕ್ಯಾಂಪಸ್ ರಾಜಕಾರಣದ ಹರಣ: ಎಎಂಯು, ಜಾಮಿಯಾದಲ್ಲಿ ಸೊಲ್ಲಡಗಿದ್ದರ ಆಂತರ್ಯವೇನು?

ಸ್ವಾತಂತ್ರ್ಯ ಸಂಗ್ರಾಮದ ಗರಡಿಯಾಗಿ, ದೇಶಕ್ಕೆ ಕ್ರಾಂತಿಕಾರಿ ನಾಯಕರನ್ನು ನೀಡಿದ್ದ ಅಲೀಗಢ ಮತ್ತು ಜಾಮಿಯಾ ಅಂಗಳಗಳು ಇಂದು ಮೌನಕ್ಕೆ ಜಾರಿವೆ. 2006ರ ನಿರ್ಬಂಧಗಳಿಂದ ಹಿಡಿದು ಮೋದಿ ಸರ್ಕಾರದ ಅವಧಿಯ ತನಿಖೆಗಳವರೆಗೆ - ಮುಸ್ಲಿಂ ವಿಶ್ವವಿದ್ಯಾಲಯಗಳ...

ಅಡುಗೆ ಮನೆಯ ಬಜೆಟ್‌ಗೆ ಹೆಚ್ಚುವರಿ ಹೊರೆ

Advertisements

ಮನೆಯ ಆರ್ಥಿಕ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಸೀಮಿತ ಆದಾಯದಲ್ಲಿ ಕುಟುಂಬದ ಆಹಾರ, ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಇತರ ಅಗತ್ಯಗಳನ್ನು ಸರಿದೂಗಿಸುವ ಜವಾಬ್ದಾರಿ ಮಹಿಳೆಯರ ಮೇಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕುಟುಂಬದ ಮಾಸಿಕ ಬಜೆಟ್ ಏರುಪೇರಾಗಿರುವ ಸಂದರ್ಭದಲ್ಲಿ ಹಾಲಿನ ಬೆಲೆ ಹೆಚ್ಚಳ ಮಹಿಳೆಯರ ಮೇಲಿನ ಆರ್ಥಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ.

Advertisements

ಹಾಲು ಪ್ರತಿಯೊಂದು ಮನೆಯಲ್ಲೂ ದಿನನಿತ್ಯ ಬಳಕೆಯಾಗುವ ಅಗತ್ಯ ಆಹಾರ ಪದಾರ್ಥ. ಬೆಳಗಿನ ಉಪಾಹಾರದಿಂದ ಹಿಡಿದು ಮಕ್ಕಳ ಆಹಾರ, ಚಹಾ ಹಾಗೂ ಇತರ ಆಹಾರ ಪದಾರ್ಥಗಳ ತಯಾರಿಕೆಯವರೆಗೆ ಹಾಲಿನ ಬಳಕೆ ವ್ಯಾಪಕವಾಗಿದೆ. ಹೀಗಿರುವಾಗ ಹಾಲಿನ ಬೆಲೆ ಏರಿಕೆಯ ಪರಿಣಾಮ ಒಂದು ದಿನದ ಖರ್ಚಿಗೆ ಮಾತ್ರ ಸೀಮಿತವಾಗದೆ ತಿಂಗಳ ಕೊನೆಯವರೆಗೂ ಕುಟುಂಬದ ಲೆಕ್ಕಾಚಾರದಲ್ಲಿ ಕಾಣಿಸಿಕೊಳ್ಳುತ್ತದೆ.

WhatsApp Image 2026 11 05 at 9.42.49 PM

ಮಕ್ಕಳ ಪೌಷ್ಟಿಕತೆಯ ಮೇಲೂ ಪರಿಣಾಮದ ಆತಂಕ

ಹಾಲು ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್, ಕ್ಯಾಲ್ಸಿಯಂ ಸೇರಿದಂತೆ ಹಲವು ಪೌಷ್ಟಿಕಾಂಶಗಳನ್ನು ಒದಗಿಸುವ ಆಹಾರವಾಗಿದೆ. ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹಾಗೂ ವೃದ್ಧರ ಆಹಾರದಲ್ಲಿಯೂ ಹಾಲು ಪ್ರಮುಖ ಸ್ಥಾನ ಹೊಂದಿದೆ. ಇಂತಹ ಅಗತ್ಯ ಆಹಾರ ಪದಾರ್ಥದ ಬೆಲೆ ಹೆಚ್ಚಾದಾಗ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಮಕ್ಕಳಿಗೆ ಅಗತ್ಯ ಪ್ರಮಾಣದ ಹಾಲು ಒದಗಿಸಲು ತೊಂದರೆ ಅನುಭವಿಸುವ ಸಾಧ್ಯತೆಯಿದೆ.

ಮೊಸರು, ತುಪ್ಪ, ಬೆಣ್ಣೆ, ಮಜ್ಜಿಗೆ ಹಾಗೂ ಪನೀರ್ ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಳವೂ ಕುಟುಂಬಗಳ ಆಹಾರ ವೆಚ್ಚವನ್ನು ಹೆಚ್ಚಿಸುತ್ತದೆ. ಹೀಗಾಗಿ ಹಾಲಿನ ಬೆಲೆ ಏರಿಕೆಯನ್ನು ಕೇವಲ ವ್ಯಾಪಾರ ಅಥವಾ ಮಾರುಕಟ್ಟೆಯ ವಿಚಾರವಾಗಿ ನೋಡದೆ, ಆಹಾರ ಭದ್ರತೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದಲೂ ಪರಿಗಣಿಸಬೇಕಾಗಿದೆ ಎಂಬುದು ಸಂಘಟನೆಯ ವಾದವಾಗಿದೆ.

ರೈತರ ಹಿತಾಸಕ್ತಿ ಮತ್ತು ಗ್ರಾಹಕರ ಹೊಣೆ ಎರಡೂ ಸರ್ಕಾರದ ಮೇಲಿದೆ

ಹಾಲು ಉತ್ಪಾದಿಸುವ ರೈತರಿಗೆ ನ್ಯಾಯಯುತ ಬೆಲೆ ದೊರೆಯಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ರೈತರ ಹಿತಾಸಕ್ತಿಯನ್ನು ಕಾಪಾಡುವ ಹೆಸರಿನಲ್ಲಿ ಗ್ರಾಹಕರಾದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ನಿರಂತರ ಆರ್ಥಿಕ ಹೊರೆ ಹೇರುವುದು ಸರಿಯಲ್ಲ ಎಂಬುದು ಪ್ರತಿಭಟನಾಕಾರರ ಅಭಿಪ್ರಾಯ.

ರೈತರಿಗೆ ಅನುಕೂಲವಾಗುವಂತೆ ಸಾಲಮನ್ನಾ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳನ್ನು ರೂಪಿಸುವುದು, ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ನೆರವು ನೀಡುವುದು ಹಾಗೂ ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಹಾಲು ದೊರೆಯುವಂತೆ ಸಮತೋಲಿತ ಬೆಲೆ ನೀತಿ ರೂಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಂಘಟನೆ ಪ್ರತಿಪಾದಿಸಿದೆ.

WhatsApp Image 2026 11 05 at 9.42.47 PM 1

ಬೆಲೆ ಏರಿಕೆ ಹಿಂಪಡೆಯಲು ಆಗ್ರಹ

ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು. ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಹಾಲು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆಹಾರ ಭದ್ರತೆ ಹಾಗೂ ಮಕ್ಕಳ ಪೌಷ್ಟಿಕತೆಯನ್ನು ಕಾಪಾಡಲು ವಿಶೇಷ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ವುಮೆನ್ ಇಂಡಿಯಾ ಮೂವ್‌ಮೆಂಟ್ ಆಗ್ರಹಿಸಿದೆ.

ಅಲ್ಲದೆ, ಹಾಲಿನ ಬೆಲೆ ನಿಗದಿಪಡಿಸುವ ಸಂದರ್ಭದಲ್ಲಿ ಗ್ರಾಹಕರು, ಮಹಿಳಾ ಸಂಘಟನೆಗಳು ಮತ್ತು ರೈತರ ಅಭಿಪ್ರಾಯಗಳಿಗೆ ಆದ್ಯತೆ ನೀಡಬೇಕು. ರೈತರಿಗೆ ನ್ಯಾಯಯುತ ಆದಾಯ ದೊರೆಯುವ ಜೊತೆಗೆ ಗ್ರಾಹಕರಿಗೂ ಹೊರೆಯಾಗದಂತಹ ನೀತಿಯನ್ನು ಸರ್ಕಾರ ರೂಪಿಸಬೇಕು ಎಂದು ಒತ್ತಾಯಿಸಿದೆ.

WhatsApp Image 2026 11 05 at 10.21.30 PM

ಈ ದಿನ.ಕಾಮ್‌ ಜೊತೆ ಮಾತನಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ನಸೀಮ್ ಸುರಯ್ಯ, “ಹಾಲು ಮತ್ತು ಮೊಸರು ಜನಸಾಮಾನ್ಯರು ಹಾಗೂ ಬಡ ಕುಟುಂಬಗಳ ದೈನಂದಿನ ಬಳಕೆಯ ಅತ್ಯಗತ್ಯ ಆಹಾರ ಪದಾರ್ಥಗಳಾಗಿವೆ. ಇಂತಹ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿರುವುದು ತೀವ್ರ ಖಂಡನೀಯ. ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 8 ರೂ. ಹಾಗೂ ಮೊಸರಿನ ಬೆಲೆಯನ್ನು 14 ರೂ. ಹೆಚ್ಚಿಸಲಾಗಿದೆ. ಉತ್ತಮ ಗುಣಮಟ್ಟದ ಹಾಲಿನ ಬೆಲೆಯನ್ನು 55 ರೂ.ನಿಂದ 70 ರೂ.ಗೆ ಏರಿಸಿರುವುದು ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಲು ಮಹಿಳೆಯರು, ಮಕ್ಕಳು ಸೇರಿದಂತೆ ಪ್ರತಿಯೊಂದು ಕುಟುಂಬಕ್ಕೂ ಅಗತ್ಯವಾಗಿದ್ದು, ಬೆಲೆ ಏರಿಕೆಯಿಂದಾಗಿ ಅದನ್ನು ಬಳಕೆಯಿಂದ ದೂರವಿಡಲು ಸಾಧ್ಯವಿಲ್ಲ. ಆದ್ದರಿಂದ ರಾಜ್ಯ ಸರಕಾರ ತಕ್ಷಣವೇ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದಾದ್ಯಂತ ವುಮೆನ್ ಇಂಡಿಯಾ ಮೂವ್‌ಮೆಂಟ್ ವತಿಯಿಂದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದ್ದು, ಅದರ ಭಾಗವಾಗಿ ಉಡುಪಿಯಲ್ಲಿಯೂ ಪ್ರತಿಭಟನೆ ನಡೆಸಲಾಗಿದೆ ಎಂದರು.

ಹಾಲಿನ ಬೆಲೆ ಏರಿಕೆಯಿಂದ ಹೆಚ್ಚುವರಿಯಾಗಿ ಸಂಗ್ರಹವಾಗುವ 8 ರೂ.ಗಳಲ್ಲಿ 7 ರೂ. ರೈತರಿಗೆ ಹಾಗೂ 1 ರೂ. ಉತ್ಪಾದಕರಿಗೆ ನೀಡಲಾಗುತ್ತದೆ ಎಂದು ಸರಕಾರ ಸಮರ್ಥಿಸಿಕೊಳ್ಳುತ್ತಿದೆ. ರೈತರ ಅಭಿವೃದ್ಧಿಯೇ ಸರಕಾರದ ಉದ್ದೇಶವಾಗಿದ್ದರೆ, ಅವರಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ರಸಗೊಬ್ಬರ, ಜಾನುವಾರುಗಳಿಗೆ ಪೌಷ್ಟಿಕ ಆಹಾರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೇರವಾಗಿ ಒದಗಿಸಬಹುದು. ಅದನ್ನು ಬಿಟ್ಟು ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುವುದು ಸರಿಯಲ್ಲ ಎಂದು ಟೀಕಿಸಿದರು.

ಹಾಲಿನ ಬೆಲೆ ಏರಿಸುವುದರಿಂದ ರೈತರಿಗೆ ನಿಜವಾದ ಪ್ರಯೋಜನವಾಗುತ್ತದೆಯೇ ಎಂಬುದನ್ನು ಸರಕಾರ ಪರಿಶೀಲಿಸಬೇಕು. ರೈತರ ಅಭಿವೃದ್ಧಿಗೆ ಪೂರಕವಾದ ಪರ್ಯಾಯ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವತ್ತ ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದರು.

ಈ ಹಿನ್ನೆಲೆಯಲ್ಲಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ನಿರ್ಧಾರವನ್ನು ತಕ್ಷಣ ಹಿಂಪಡೆಯುವಂತೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ನಸೀಮ್ ಸುರಯ್ಯ ತಿಳಿಸಿದರು.

eedina
ಈ ದಿನ ಡೆಸ್ಕ್‌
Website | + posts
Advertisements

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮೋದಿ–ಅಮಿತ್ ಶಾ ಸರ್ಕಾರದ ಅಂತ್ಯ ಸಮೀಪಿಸುತ್ತಿದೆ: ಲಕ್ಷ್ಮೀಶ ಗಬ್ಬಲಡ್ಕ

ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ಆಶಯಗಳು ಹಾಗೂ ಮತದಾನದ ಪಾವಿತ್ರ್ಯತೆಯನ್ನು ರಕ್ಷಿಸುವ ಉದ್ದೇಶದಿಂದ...

ಬಾಗಲಕೋಟೆ |ಕಬ್ಬು ಟನ್ಗೆ ₹3,600 ದರ ನಿಗದಿ: ಬಾಗಲಕೋಟೆಯಲ್ಲಿ 8 ಗಂಟೆಗಳ ಸಭೆಯ ಬಳಿಕ ಒಮ್ಮತ

ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ...

ಕಬ್ಬು ಬೆಳೆ ಹೋರಾಟಗಾರರ ಬಂಧನಕ್ಕೆ ರೈತ ಸಂಘ ಖಂಡನೆ

ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಸೌಹಾರ್ದಯುತವಾಗಿ ಮತ್ತು ಸಮಾಧಾನಕರವಾಗಿ ಬಗೆಹರಿಸದೆ ಹೋರಾಟಗಾರರನ್ನು ಬಂಧಿಸಿರುವ...

ಉಡುಪಿ | ಪರಶುರಾಮ ಪ್ರತಿಮೆ ವಿವಾದಕ್ಕೆ ತೆರೆ ಎಳೆಯಲು ಸರಕಾರದ ಹೆಜ್ಜೆ: ಹೊಸ ಟೆಂಡರ್‌ಗೆ ನಿರ್ಧಾರ

ಕಾರ್ಕಳ ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿ ಹಾಗೂ...