ಖಾಸಗಿ ಫೈನಾನ್ಸ್ ಸಂಸ್ಥೆಗಳಿಂದ ಪಡೆದ ಸಾಲದ ಕಂತು ಪಾವತಿ ವಿಚಾರದಲ್ಲಿ ಉಂಟಾದ ಆರ್ಥಿಕ ಹಾಗೂ ಮಾನಸಿಕ ಒತ್ತಡದಿಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸಗಿ ತಾಲ್ಲೂಕಿನ ಬೈಲಾಪುರ ತಾಂಡಾದಲ್ಲಿ ನಡೆದಿದೆ.
ತಾಂಡಾದ ನಿವಾಸಿ ಅನೀಲ ಕುಮಾರ್ ಚೌಹಾಣ್ (40) ಮೃತ ವ್ಯಕ್ತಿ. ಅವರು ಹುಣಸಗಿ ಮತ್ತು ತಾಳಿಕೋಟೆಯ ಖಾಸಗಿ ಫೈನಾನ್ಸ್ ಸಂಸ್ಥೆಗಳಲ್ಲಿ ಒಟ್ಟು ₹79 ಸಾವಿರ ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲದ ಕಂತುಗಳನ್ನು ಪಾವತಿಸಲು ಇತರರಿಂದಲೂ ಹಣ ಸಾಲವಾಗಿ ಪಡೆದಿದ್ದರೂ, ಆರ್ಥಿಕ ಪರಿಸ್ಥಿತಿ ಸುಧಾರಿಸದ ಕಾರಣ ಸಾಲದ ಹೊರೆ ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ.
ಇದರ ನಡುವೆ ಫೈನಾನ್ಸ್ ಸಂಸ್ಥೆಯ ಪ್ರತಿನಿಧಿಗಳು ಪದೇಪದೇ ಮನೆಗೆ ಬಂದು ಕಂತು ಪಾವತಿಸುವಂತೆ ಒತ್ತಡ ಹೇರುತ್ತಿದ್ದರು. ಈ ಬೆಳವಣಿಗೆಯಿಂದ ತೀವ್ರ ಮನನೊಂದು ಅನೀಲ ಕುಮಾರ್ ತಮ್ಮ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಕಸ್ತೂರಿಬಾಯಿ ಚೌಹಾಣ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಬೆಳೆ ವಿಮೆ ಹಣ ಬಿಡುಗಡೆಗೆ ಆಗ್ರಹ; ಟಾಟಾ ಪವರ್ ಪರವಾನಿಗೆ ವಿರೋಧಿಸಿ ರೈತ ಸಂಘ ಪ್ರತಿಭಟನೆ
ಘಟನೆ ಕುರಿತು ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣವಾದ ಅಂಶಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




