ಯಾದಗಿರಿ | ಬರಗಾಲದ ನಡುವೆಯೂ ಹರಾಜು ಪ್ರಕ್ರಿಯೆ ಮುಂದುವರಿಕೆ; ಜಿಲ್ಲಾಧಿಕಾರಿ ವಿರುದ್ಧ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಆಕ್ರೋಶ

Date:

ಒಂದು ಕಡೆ ಮಳೆ ಕೊರತೆಯಿಂದ ತೀವ್ರ ಬರಗಾಲ, ಮತ್ತೊಂದೆಡೆ ಕೃಷಿಯನ್ನೇ ನಂಬಿರುವ ರೈತಾಪಿ ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಭಕ್ತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬೇಕಾದ ಆಡಳಿತವೇ ಜನರ ಮನವಿಗೆ ಸ್ಪಂದಿಸುತ್ತಿಲ್ಲವೇ? ಎಂಬ ಪ್ರಶ್ನೆ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಎದ್ದಿದೆ.

- Advertisement -

ಕೊಡೇಕಲ್ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಗುಡಾರ ಅಂಗಡಿಗಳ ಹರಾಜು ಹಾಗೂ ತೆಂಗಿನಕಾಯಿ ಟೆಂಡರ್ ಪ್ರಕ್ರಿಯೆಯನ್ನು ಈ ಬಾರಿ ರದ್ದುಗೊಳಿಸಬೇಕು ಎಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆ. ಬರಗಾಲದಿಂದ ರೈತರು, ಕೂಲಿ ಕಾರ್ಮಿಕರು ಹಾಗೂ ಸಾಮಾನ್ಯ ಭಕ್ತಾದಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಜಾತ್ರೆಯ ಹರಾಜು ಪ್ರಕ್ರಿಯೆ ಕೈಬಿಟ್ಟು ಭಕ್ತರ ಹಿತ ಕಾಪಾಡಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ ನೇತೃತ್ವದಲ್ಲಿ ಗ್ರಾಮಸ್ಥರು ನವೆಂಬರ್ 17ರಂದು ಹುಣಸಗಿ ತಹಶೀಲ್ದಾರ್ ಎಂ. ಬಸವರಾಜ ಅವರಿಗೆ ಮನವಿ ಸಲ್ಲಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನ್ಯಾಯಕ್ಕಾಗಿ ಬಿಲ್ಕಿಸ್ ಬಾನೋ 22 ವರ್ಷಗಳ ಅಲೆದಾಟ: ಇಂದಿಗೂ...

2002ರ ಗುಜರಾತ್ ಗಲಭೆಯ ಕರಾಳ ನೆನಪುಗಳನ್ನು ಹೊತ್ತು, ತಮ್ಮವರನ್ನೆಲ್ಲಾ ಕಳೆದುಕೊಂಡು, ಅತ್ಯಾಚಾರದ ಘೋರ ಕ್ರೌರ್ಯಕ್ಕೆ ತುತ್ತಾದ ಬಿಲ್ಕಿಸ್ ಬಾನೋ ಬದುಕು ಇಂದಿಗೂ ನೆಮ್ಮದಿ ಕಂಡಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಇಬ್ಬರು ಅಪರಾಧಿಗಳ ಜೀವಾವಧಿ...

ಡಿಪಿಡಿಪಿ ಕಾಯ್ದೆ: ನಾಗರಿಕರ ಖಾಸಗಿತನದ ರಕ್ಷಣೆಯೋ, ಪತ್ರಿಕಾ ಸ್ವಾತಂತ್ರ್ಯದ...

ಡಿಪಿಡಿಪಿ ಕಾಯ್ದೆ ನಾಗರಿಕರ ಗೌಪ್ಯತೆಯನ್ನು ಕಾಪಾಡುವ ಭರವಸೆ ನೀಡುತ್ತಿದೆ. ಆದರೆ, ಇದೇ ಕಾಯ್ದೆಯು ಪತ್ರಕರ್ತರ ಮೂಲಭೂತ ಹಕ್ಕು ಮತ್ತು ತನಿಖಾ ಪತ್ರಿಕೋದ್ಯಮದ ಮೇಲೆ ಕರಿನೆರಳು ಬೀರಲಿದೆಯೇ? ಆರ್‌ಟಿಐ ದುರ್ಬಲಗೊಳ್ಳುತ್ತಿದೆಯೇ? ಒಂದೆಡೆ ವ್ಯಕ್ತಿಯ ಖಾಸಗಿತನದ...

ಉಳಿತಾಯದ ಪಾಠ ಹೇಳಿದ ಮೋದಿ: ಬೆಲೆ ಏರಿಕೆ, ನಿರುದ್ಯೋಗ;...

ಮಕ್ಕಳ ಶಿಕ್ಷಣ, ಮದುವೆ ಮತ್ತು ಮುಪ್ಪಿನ ಕಾಲಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ ಮಾಡುವುದು ಭಾರತೀಯರ ಸಂಸ್ಕೃತಿಯಲ್ಲೇ ಬಂದಿದೆ. ಅವರಿಗೆ ಉಳಿತಾಯದ ಪಾಠ ಕಲಿಸುವ ಅಗತ್ಯವಿಲ್ಲ; ಬದಲಾಗಿ ಬಡತನದಿಂದ ಹೊರಬಂದ ಕುಟುಂಬಗಳು ಮತ್ತೆ ಸಂಕಷ್ಟಕ್ಕೆ...

ಮನವಿ ಸ್ವೀಕರಿಸಿದ್ದ ತಹಶೀಲ್ದಾರ್, ಗ್ರಾಮಸ್ಥರ ಬೇಡಿಕೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಚರ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಮನವಿಗೆ ಸೂಕ್ತ ಸ್ಪಂದನೆ ದೊರೆಯದೆ ಹರಾಜು ಪ್ರಕ್ರಿಯೆ ಮುಂದುವರಿದಿದೆ ಎಂಬ ಆಕ್ರೋಶ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ.

ಇದರಿಂದ ಬೇಸರಗೊಂಡ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ ಹಾಗೂ ಗ್ರಾಮಸ್ಥರು ಗುರುವಾರ (ನ.19) ಯಾದಗಿರಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳನ್ನು ನೇರವಾಗಿ ಭೇಟಿಯಾಗಿ ತಮ್ಮ ಅಳಲು ತೋಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಜಿಲ್ಲಾಧಿಕಾರಿಗಳು ಭೇಟಿಗೆ ಅವಕಾಶ ನೀಡದೆ ನಂತರ ಮನವಿ ಸ್ವೀಕರಿಸುವುದಾಗಿ ತಿಳಿಸಿದ್ದರಿಂದ ಹಿರಿಯರು ಸಂಜೆಯವರೆಗೂ ಜಿಲ್ಲಾಧಿಕಾರಿಗಳ ಚೇಂಬರ್ ಎದುರು ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಿರಿಯ ಜೀವಗಳ ಮನವಿಗೂ ಸಮಯವಿಲ್ಲವೇ?

ಸಾರ್ವಜನಿಕರ ಸಂಕಷ್ಟವನ್ನು ಜಿಲ್ಲಾಡಳಿತದ ಗಮನಕ್ಕೆ ತರಲು ಬಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಕನಿಷ್ಠ ಭೇಟಿಯ ಅವಕಾಶವನ್ನೂ ನೀಡದೆ ಗಂಟೆಗಟ್ಟಲೆ ಕಾಯಿಸಿರುವುದು ಖಂಡನೀಯ. ಜನರ ಸಮಸ್ಯೆ ಆಲಿಸುವುದೇ ಆಡಳಿತದ ಮೊದಲ ಕರ್ತವ್ಯವಾಗಿದ್ದರೂ, ಜನಪರ ಮನವಿಗೆ ಈ ರೀತಿಯ ನಿರ್ಲಕ್ಷ್ಯ ತೋರಿರುವುದು ನೋವಿನ ಸಂಗತಿ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿದ್ದೀರಾ? ಕಲಬುರಗಿ | ನ.21ರಂದು ಐದು ಜೆಸ್ಕಾಂ ಉಪವಿಭಾಗಗಳಲ್ಲಿ ವಿದ್ಯುತ್ ಸುರಕ್ಷತಾ ದಿನ, ಗ್ರಾಹಕರ ಕುಂದುಕೊರತೆ ಸಭೆ

ಬರಗಾಲದ ಸಂದರ್ಭದಲ್ಲಿ ಜಾತ್ರೆಯ ಹೆಸರಿನಲ್ಲಿ ಭಕ್ತಾದಿಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳದಂತೆ ಹರಾಜು ಪ್ರಕ್ರಿಯೆ ರದ್ದುಗೊಳಿಸಬೇಕು. ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿ ನ್ಯಾಯ ಒದಗಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಕನಕದಾಸರ ಜಯಂತಿಯನ್ನು ಅಚ್ಚುಕಟ್ಟಾಗಿ ಆಚರಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ

"ಸಂತ ಕನಕದಾಸರ ಜಯಂತಿಯನ್ನು ನವಂಬರ್ 27 ರಂದು ನಗರದ ಹಾತ್ತಲಗೇರಿ ನಾಕಾದ...

ಕಲಬುರಗಿ | ವಿವಾಹಿತೆ ಮೇಲೆ ಅತ್ಯಾಚಾರ ಆರೋಪ; ಪೊಲೀಸ್ ಕಾನ್‌ಸ್ಟೇಬಲ್ ವಿರುದ್ಧ ಪ್ರಕರಣ ದಾಖಲು

ವಿವಾಹಿತ ಮಹಿಳೆಯೊಬ್ಬರ ಮನೆಗೆ ತಡರಾತ್ರಿ ನುಗ್ಗಿ ಚಾಕು ತೋರಿಸಿ ಜೀವ ಬೆದರಿಕೆ...

ಬಾಗಲಕೋಟೆ |ರಾಜ್ಯಮಟ್ಟದ ಮಿನಿ ಒಲಿಂಪಿಕ್ಸ್‌ನಲ್ಲಿ 14 ಪದಕ ಗೆದ್ದ ಕ್ರೀಡಾಪಟುಗಳು

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಬಾಗಲಕೋಟೆ ಜಿಲ್ಲೆಯ ಕ್ರೀಡಾಪಟುಗಳು 14 ಪದಕಗಳನ್ನು ಗೆಲ್ಲುವ ಮೂಲಕ...

ಕಲಬುರಗಿ | ಲಾರಿ, ಬೈಕ್ ಡಿಕ್ಕಿ; ಮೂವರು ಯುವಕರ ದಾರುಣ ಸಾವು!

ಸ್ನೇಹಿತನ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮನೆಯಿಂದ ಹೊರಟಿದ್ದ ಯುವಕ ಸೇರಿದಂತೆ ಮೂವರು...