ಯಾದಗಿರಿ | 20 ವರ್ಷಗಳಿಂದ ನೀರು, ವಿದ್ಯುತ್ ಇಲ್ಲದೆ ನರಳಾಟ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

Date:

ಹುಣಸಗಿ ತಾಲೂಕಿನ ವಜ್ಜಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜಲಾಪುರಳ್ಳಿ ಗ್ರಾಮದ ಹೊಲಗಳಲ್ಲಿ ವಾಸಿಸುತ್ತಿರುವ 15ರಿಂದ 20 ಕುಟುಂಬಗಳು ಕಳೆದ 20 ವರ್ಷಗಳಿಂದ ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯವಿಲ್ಲದೆ ಸಂಕಷ್ಟ ಎದುರಿಸುತ್ತಿವೆ. ಹಲವು ಬಾರಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ಸಮಸ್ಯೆ ತಂದರೂ ಯಾವುದೇ ಪರಿಹಾರ ದೊರಕದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇದೀಗ ಪತ್ರಿಕೆಗಳ ಮೊರೆ ಹೋಗಿದ್ದಾರೆ.

- Advertisement -

ಗ್ರಾಮದಲ್ಲಿ ವಾಸಿಸುವ ಕುಟುಂಬಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ದೂರದ ಸ್ಥಳಗಳಿಂದ ನೀರು ತರುವ ಅನಿವಾರ್ಯತೆ ಎದುರಾಗಿದೆ. ವಿದ್ಯುತ್ ಸಂಪರ್ಕವೂ ಇಲ್ಲದ ಕಾರಣ ದೈನಂದಿನ ಜೀವನ ನಡೆಸುವುದು ಕಷ್ಟಕರವಾಗಿದೆ. ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಅಧಿಕಾರಿಗಳು ಸಮಸ್ಯೆ ಪರಿಹರಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Quockerwodger’: ಶಶಿ ತರೂರ್ ಸೂಚಿಸಿದ ಹೊಸ ರಾಜಕೀಯ ಪದ!

ಇದು 19ನೇ ಶತಮಾನದ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಪರೂಪದ ಪದ. ಮೂಲತಃ ದಾರಗಳ ಮೂಲಕ ನಿಯಂತ್ರಿಸಲ್ಪಡುವ ಮರದ ಗೊಂಬೆಯನ್ನು ಸೂಚಿಸುತ್ತಿತ್ತು. ಗೊಂಬೆಯಾಟದಲ್ಲಿ ಸೂತ್ರಧಾರ ದಾರ ಎಳೆದಂತೆ ಗೊಂಬೆ ಕೈಕಾಲು ಆಡಿಸುತ್ತದೆ. ಗೊಂಬೆ ಚಲಿಸುತ್ತದೆಯೇ...

ರಾಷ್ಟ್ರೀಯವಾದ ಹೊಟ್ಟೆ ತುಂಬಿಸುವುದಿಲ್ಲ; ಟ್ರಂಪ್‌ಗೆ ಅಮೆರಿಕನ್ನರು ಕಲಿಸಿದ ಪಾಠ...

ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ...

ಕ್ಯಾಂಪಸ್ ರಾಜಕಾರಣದ ಹರಣ: ಎಎಂಯು, ಜಾಮಿಯಾದಲ್ಲಿ ಸೊಲ್ಲಡಗಿದ್ದರ ಆಂತರ್ಯವೇನು?

ಸ್ವಾತಂತ್ರ್ಯ ಸಂಗ್ರಾಮದ ಗರಡಿಯಾಗಿ, ದೇಶಕ್ಕೆ ಕ್ರಾಂತಿಕಾರಿ ನಾಯಕರನ್ನು ನೀಡಿದ್ದ ಅಲೀಗಢ ಮತ್ತು ಜಾಮಿಯಾ ಅಂಗಳಗಳು ಇಂದು ಮೌನಕ್ಕೆ ಜಾರಿವೆ. 2006ರ ನಿರ್ಬಂಧಗಳಿಂದ ಹಿಡಿದು ಮೋದಿ ಸರ್ಕಾರದ ಅವಧಿಯ ತನಿಖೆಗಳವರೆಗೆ - ಮುಸ್ಲಿಂ ವಿಶ್ವವಿದ್ಯಾಲಯಗಳ...

ಪತ್ರಿಕೆಯ ಮೂಲಕ ತಮ್ಮ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಕುಟುಂಬಗಳು ವಾಸಿಸುವ ಪ್ರದೇಶದ ಮಧ್ಯಭಾಗದಲ್ಲಿ ಬೋರ್‌ವೆಲ್ ಕೊರೆಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ತಾಲೂಕು ವಿದ್ಯುತ್ ಅಧಿಕಾರಿಗಳಿಗೂ ಮನವಿ ಸಲ್ಲಿಸಿ, ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ತಕ್ಷಣ ಸಮಸ್ಯೆ ಪರಿಹರಿಸದಿದ್ದರೆ ಸಂಬಂಧಪಟ್ಟ ಜಿಲ್ಲಾ ಕೇಂದ್ರಕ್ಕೆ ತೆರಳಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿದ್ದೀರಾ? ಯರಗೋಳ ಸರ್ಕಾರಿ ಪ್ರೌಢಶಾಲೆಯಲ್ಲಿ ‘ನನ್ನ ಕನಸು’ ವಿನೂತನ ಕಾರ್ಯಕ್ರಮ: ಯುಪಿಎಸ್‌ಸಿ ಸಾಧಕರೊಂದಿಗೆ ವಿದ್ಯಾರ್ಥಿಗಳ ಸಂವಾದ

ಈ ಸಂದರ್ಭದಲ್ಲಿ ಜುಮ್ಮಣ್ಣ, ಕಂಬಳಿ ಬಾಲಪ್ಪ, ಕಂಬಳಿ ಭೀಮಪ್ಪ, ಹಾದಿಮನಿ ಹನುಮಂತ, ಕಾಶಿನಾಥ ಹಾದಿಮನಿ, ಗಂಗಪ್ಪ ಹಾದಿಮನಿ, ಮಲ್ಲಮ್ಮ, ಚೌಡಮ್ಮ, ಪಾರ್ವತಿ, ದುರ್ಗಮ್ಮ, ಮುದಕಮ್ಮ, ಲಕ್ಷ್ಮಿ, ಆರತಿ, ನೀಲಮ್ಮ, ಮಂಜುನಾಥ, ಚಿರಂಜೀವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ರಾಜ್ಯ ಸರ್ಕಾರ ಸಾರಿಗೆ ಬಸ್ ದರ ಹೆಚ್ಚಳ; ಸಿಪಿಐ(ಎಂ) ಖಂಡನೆ

"ಈಗಾಗಲೇ ಹಾಲಿನ ಬೆಲೆ ಏರಿಕೆ, ಅಕ್ಕಿ ಬೆಳೆ ಮತ್ತಿತರ ಜೀವನಾಗತ್ಯ ಸಾಮಗ್ರಿಗಳ...

ಉಡುಪಿ | ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗೆ ನ.7ರಂದು ಸಾಲಿಡಾರಿಟಿ ಸಮಾವೇಶ

ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿ ಬಲಪಡಿಸುವುದು ಪ್ರತಿಯೊಬ್ಬ ನಾಗರಿಕನ...

ಚಿಂತಾಮಣಿ ನಗರದ ಭವಿಷ್ಯ ಬದಲು ಮಾಡಲಿದೆ 850 ಎಕರೆ ಟೌನ್‌ಶಿಪ್ ಯೋಜನೆ!

ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ನಗರಾಭಿವೃದ್ಧಿ ಚಿಂತಾಮಣಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ...

ಉಡುಪಿ | ಅಲ್ ಫಲಾಹ್ ಮಸೀದಿ ಉದ್ಘಾಟನೆ; ಸರ್ವಧರ್ಮೀಯರ ಸಂಗಮಕ್ಕೆ ಸಾಕ್ಷಿಯಾದ ಗೋಳಿಕಟ್ಟೆ

ಹಾವಂಜೆ ಗೋಳಿಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಲ್ ಫಲಾಹ್ ಜುಮ್ಮಾ ಮಸೀದಿಯ ಉದ್ಘಾಟನೆ,...