ದೇಶ

ಕನಿಷ್ಠ ಜನರ ಈ ಪ್ರಶ್ನೆಗಳಿಗಾದರೂ ಉತ್ತರ ನೀಡುವರೇ ಪ್ರಧಾನಿ ಮೋದಿ?

ದೇಶದ ಅಭಿವೃದ್ಧಿಯ ಬಗ್ಗೆ, ನಿರುದ್ಯೋಗದ ಬಗ್ಗೆ, ಅತ್ಯಂತ ಗಂಭೀರ ವಿಚಾರಗಳ ಬಗ್ಗೆ ಮೋದಿ ಉದ್ದಕ್ಕೂ ತುಟಿ ಬಿಚ್ಚಿದವರೇ ಅಲ್ಲ. ಪ್ರಧಾನಿ ತಮ್ಮ ಪ್ರಶ್ನೆಗಳಿಗೆ ಉತ್ತರಿಸುವಂತೆ ಮಾಡಲು ವಿಪಕ್ಷಗಳು ನಾನಾ ಕಸರತ್ತು ಮಾಡಿದವು. ಸಂಸತ್ತಿನಿಂದ...

ಅಮಾನತುಗೊಂಡ 141 ಸಂಸದರಲ್ಲಿ ಕರ್ನಾಟಕದ ನಾಲ್ವರು

ಸಂಸತ್ತಿನ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಹಾಗೂ ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ರಾಜೀನಾಮೆಗೆ ಆಗ್ರಹಿಸಿ ಪ್ರತಿಪ್ರಕ್ಷದ ಸಂಸದರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಳೆದ 3 ದಿನದಲ್ಲಿ...

‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪ

ದೆಹಲಿಯ ಅಶೋಕ ಹೋಟೆಲ್‌ನಲ್ಲಿ ಇಂದು ಸಂಜೆ ಇಂಡಿಯಾ ಮೈತ್ರಿಕೂಟದ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪವಾಗಿರುವುದಾಗಿ ವರದಿಯಾಗಿದೆ. ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಬೇಕಾದರೆ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು...

ಭಾರತದ ಕೃಷಿ ಜಿಡಿಪಿ ಶೇ.35 ರಿಂದ ಶೇ.15ಕ್ಕೆ ಕುಸಿತ: ಕೇಂದ್ರದ ಹೇಳಿಕೆ

ಕೈಗಾರಿಕಾ ಮತ್ತು ಸೇವಾ ವಲಯದಲ್ಲಿನ ಕ್ಷಿಪ್ರ ಬೆಳವಣಿಗೆಯಿಂದಾಗಿ 1990-91ರಲ್ಲಿ ಶೇ.35ರಷ್ಟಿದ್ದ ಭಾರತದ ಜಿಡಿಪಿಯಲ್ಲಿನ ಕೃಷಿ ಪಾಲು ಕಳೆದ 2022-23ರ ಹಣಕಾಸು ವರ್ಷದಲ್ಲಿ ಶೇ.15ಕ್ಕೆ ಕುಸಿದಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಮಾಹಿತಿ ನೀಡಿದೆ. "ಆರ್ಥಿಕತೆಯ...

ಎಲ್ಗಾರ್ ಪರಿಷತ್ ಪ್ರಕರಣ: ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವ್ಲಾಖಾಗೆ ಬಾಂಬೆ ಹೈಕೋರ್ಟ್ ಜಾಮೀನು

ಎಲ್ಗಾರ್ ಪರಿಷತ್ ಪ್ರಕರಣದಲ್ಲಿ 2018 ರಲ್ಲಿ ಬಂಧನಕ್ಕೊಳಗಾಗಿದ್ದ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ. ಪ್ರಸ್ತುತ ಗೌತಮ್ ನವ್ಲಾಖಾ ಗೃಹಬಂಧನದಲ್ಲಿದ್ದಾರೆ. 2017 ರ ಡಿಸೆಂಬರ್‌ನಲ್ಲಿ ಪುಣೆಯಲ್ಲಿ ನಡೆದ...

ಮಧ್ಯಪ್ರದೇಶ ವಿಧಾನಸಭೆಯಲ್ಲಿ ನೆಹರು ಭಾವಚಿತ್ರ ತೆಗೆದು ಅಂಬೇಡ್ಕರ್‌ಗೆ ಸ್ಥಾನ

ನೂತನ ಬಿಜೆಪಿ ಮಧ್ಯಪ್ರದೇಶ ಸರ್ಕಾರವು ವಿಧಾನಸಭೆ ಅಧಿವೇಶನದ ಮೊದಲ ದಿನದಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಭಾವಚಿತ್ರವನ್ನು ತೆಗೆದು ಸಂವಿಧಾನ ಶಿಲ್ಪಿ ಡಾ. ಬಿ. ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಅಳವಡಿಸಿದೆ. ಸಭಾಧ್ಯಕ್ಷರ...

ಸೋಲಿನ ಹತಾಶೆಯಿಂದ ಕಲಾಪಕ್ಕೆ ಅಡ್ಡಿ: ನರೇಂದ್ರ ಮೋದಿ

ಇತ್ತೀಚಿನ ವಿಧಾನಸಭಾ ಚುನಾವಣೆಯ ಸೋಲಿನಿಂದ ವಿಪಕ್ಷಗಳು ಕಂಗೆಟ್ಟಿದ್ದು, ಹತಾಶೆಯಿಂದ ಸಂಸತ್ತಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸಂಸತ್ತಿನಲ್ಲಿ...

ಇಂದು 49 ಸಂಸದರ ಅಮಾನತು; 141ಕ್ಕೆ ಏರಿದ ಅಮಾನತುಗೊಂಡವರ ಸಂಖ್ಯೆ

ಅಶಿಸ್ತಿನ ವರ್ತನೆ ಮತ್ತು ಸ್ಪೀಕರ್ ನಿರ್ದೇಶನಗಳನ್ನು ಕಡೆಗಣಿಸಿದ ಕಾರಣಕ್ಕಾಗಿ ಇಂದು ಕೂಡ ಲೋಕಸಭೆಯಲ್ಲಿ ವಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಲಾಯಿತು. ಇಂದು(ಡಿ.19) ಶಶಿ ತರೂರ್, ಡಿಂಪಲ್ ಯಾದವ್, ಸುಪ್ರಿಯಾ ಸುಳೆ ಮತ್ತು ಡ್ಯಾನಿಶ್ ಅಲಿ, ಫಾರೂಕ್ ಅಬ್ದುಲ್ಲಾ...

ವಾಯವ್ಯ ಚೀನಾದಲ್ಲಿ ಭೂಕಂಪ: 116 ಸಾವು, 400ಕ್ಕೂ ಹೆಚ್ಚು ಗಾಯ

ವಾಯವ್ಯ ಚೀನಾದಲ್ಲಿ ಉಂಟಾದ ಭೂಕಂಪದಿಂದಾಗಿ ಕನಿಷ್ಠ 111 ಜನರು ಸಾವನ್ನಪ್ಪಿ, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಎಂದು ಸ್ಥಳೀಯ ಭೂಕಂಪ ಪರಿಹಾರ ಪ್ರಧಾನ ಕಚೇರಿ ಮಂಗಳವಾರ ತಿಳಿಸಿದೆ. ಗನ್ಸು ಪ್ರಾಂತ್ಯದಲ್ಲಿ ಸುಮಾರು 100...

ಕೊರೋನಾ ರೂಪಾಂತರಿಯ ಬಗ್ಗೆ ಆತಂಕ ಬೇಡ: ಜಿನೋಮ್ ಒಕ್ಕೂಟದ ಮುಖ್ಯಸ್ಥ ಡಾ. ಎನ್.ಕೆ. ಅರೋರಾ

ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ವರದಿಯ ನಡುವೆಯೇ ದೇಶದಲ್ಲಿ ಮತ್ತೆ ಕೊರೋನಾ ಆತಂಕ ಆವರಿಸಿದೆ. ಈ ನಡುವೆ ಹೇಳಿಕೆ ನೀಡಿರುವ ಭಾರತೀಯ ಸಾರ್ಸ್-ಕೋವ್-2 ಜಿನೋಮ್ ಒಕ್ಕೂಟದ (ಐಎನ್‌ಎಎಸಿಒಜಿ) ಮುಖ್ಯಸ್ಥ ಡಾ. ಎನ್.ಕೆ. ಅರೋರಾ,...

ಪತಿ ಎಸಗಿದರೂ ಅದು ಅತ್ಯಾಚಾರವೇ; ಲೈಂಗಿಕ ದೌರ್ಜನ್ಯದ ಬಗ್ಗೆ ಮೌನ ಮುರಿದ ಗುಜರಾತ್ ಹೈಕೋರ್ಟ್

ವಿವಿಧ ದೇಶಗಳು ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಿದ್ದು ಸಂತ್ರಸ್ತೆಯ ಮೇಲೆ ಆಕೆಯ ಪತಿಯೇ ಬಲಾತ್ಕಾರ ಮಾಡಿದರೂ ಅದು ಅತ್ಯಾಚಾರ ಎನಿಸಿಕೊಳ್ಳುತ್ತದೆ ಎಂದು ಗುಜರಾತ್‌ ಹೈಕೋರ್ಟ್‌ ಇತ್ತೀಚಿಗೆ ನೀಡಿದ ತೀರ್ಪಿನಲ್ಲಿ ಹೇಳಿದೆ. ಅಮೆರಿಕಾದ ಐವತ್ತು...

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ 2ನೇ ಬಾರಿ ಇಡಿಯಿಂದ ಸಮನ್ಸ್

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸಿದೆ. ಡಿಸೆಂಬರ್ 21, ಗುರುವಾರದಂದು ಇಡಿಯ ಮುಂದೆ ಹಾಜರಾಗುವಂತೆ ಸಿಎಂ ಅವರಿಗೆ...

ಈ ಹೊತ್ತಿನ ಪ್ರಮುಖ ಸುದ್ದಿ