ದೇಶ

ಬ್ರೇಕಿಂಗ್ ನ್ಯೂಸ್ | ಪ್ರಧಾನಿ ಭಾಷಣದ ಮಧ್ಯೆಯೇ ಪ್ರತಿಪಕ್ಷಗಳಿಂದ ಸಭಾತ್ಯಾಗ

ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರ ನೀಡುವಾಗ ವಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದ್ದಾರೆ. ಭಾಷಣ ಆರಂಭಿಸಿ ಒಂದೂವರೆ ಗಂಟೆಯಾದರೂ ಮಣಿಪುರದ ಬಗ್ಗೆ ಒಂದೂ ಮಾತನಾಡದ್ದಕ್ಕೆ...

ಒಂದೂವರೆ ಗಂಟೆಯಾದರೂ ಮಣಿಪುರದ ಬಗ್ಗೆ ತುಟಿ ಬಿಚ್ಚದ ಪ್ರಧಾನಿ ನರೇಂದ್ರ ಮೋದಿ

ಎನ್‌ಡಿಎ ಸರ್ಕಾರದ ಸಾಧನೆಗಳ ಪಟ್ಟಿ... ವಿಪಕ್ಷಗಳನ್ನು ತೆಗಳಿದ್ದು... ಸ್ವಯಂ ಹೊಗಳುವಿಕೆ... ರಾಹುಲ್ ಗಾಂಧಿಯವರ ವಿಡಿಯೋಗಳ ಬಗ್ಗೆ ಅಣಕ… ಮತ್ತೆ 2024ಕ್ಕೆ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ… 'ಇಂಡಿಯಾ' ಮೈತ್ರಿಕೂಟದ ಬಗ್ಗೆ ವ್ಯಂಗ್ಯ... ಆಡಳಿತ...

ಲೈಂಗಿಕ ಉದ್ದೇಶವಿಲ್ಲದೆ ಅಪ್ಪಿಕೊಳ್ಳುವುದು ಅಪರಾಧವಲ್ಲ ಎಂದ ಬ್ರಿಜ್ ಭೂಷಣ್ ಸಿಂಗ್

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದ ಆರೋಪಿಯಾಗಿರುವ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ದೆಹಲಿ ನ್ಯಾಯಾಲಯದಲ್ಲಿ ''ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯರನ್ನು...

ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಶಾಸಕನ ಸಹಾಯ; ವರದಿ ಮಾಡಿದ ಪತ್ರಕರ್ತನ ಮೇಲೆ ಗೂಂಡಾಗಳಿಂದ ಹಲ್ಲೆ

ಎಂಟು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಭೀಕರ ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದ ವಿಷಯವನ್ನು ವರದಿ ಮಾಡಿದ ಪತ್ರಕರ್ತನ ಮೇಲೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣದ ಶಿವಸೇನಾ ಶಾಸಕನ ...

ಅವಿಶ್ವಾಸ ನಿರ್ಣಯ : ಕೊನೆಗೂ ಸಂಸತ್ತಿಗೆ ಆಗಮಿಸಿದ ಪ್ರಧಾನಿ ಮೋದಿ

ಸಂಸತ್ತಿನ ಮುಂಗಾರು ಅಧಿವೇಶನವು ಕಳೆದ ಜುಲೈ 20ರಂದು ಆರಂಭವಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಣಿಪುರದ ಬಗ್ಗೆ ಮಾತನಾಡುವಂತೆ ವಿಪಕ್ಷಗಳ ಮೈತ್ರಿಕೂಟವು ಅವಿಶ್ವಾಸ ನಿರ್ಣಯ ಮಂಡಿಸಿತ್ತು. ...

ಪ್ರಧಾನಿ ದೇವರಲ್ಲ, ಸದನಕ್ಕೆ ಬಂದು ಮಾತನಾಡಲಿ: ಮಲ್ಲಿಕಾರ್ಜುನ ಖರ್ಗೆ

ರಾಜ್ಯಸಭೆಯಲ್ಲಿ ಇಂದು (ಆಗಸ್ಟ್ 10) ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. "ಮಣಿಪುರ ಹಿಂಸಾಚಾರದ ಬಗ್ಗೆ ಉತ್ತರ ನೀಡಲು ಪ್ರಧಾನಿ...

ಕೇಂದ್ರದಿಂದ ಶೀಘ್ರದಲ್ಲೇ ಚುನಾವಣಾ ಆಯುಕ್ತರ ನೇಮಕಾತಿ ನಿಯಂತ್ರಣ ಮಸೂದೆ: ಸಮಿತಿಯಲ್ಲಿ ಸಿಜೆಐಗೆ ಕೋಕ್

ಕೇಂದ್ರ ಕಾನೂನು ಸಚಿವಾಲಯವು , ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ, ಸೇವಾ ಶರತ್ತುಗಳು ಮತ್ತು ಅಧಿಕಾರದ ಅವಧಿಯನ್ನು ನಿಯಂತ್ರಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ. ಸಚಿವಾಲಯ ಬಿಡುಗಡೆ ಮಾಡಿರುವ...

ಟಿಕೆಟ್ ಇಲ್ಲದ ಪ್ರಯಾಣಿಕನಿಂದ ರೈಲಿನಲ್ಲಿ ಧೂಮಪಾನ : ದಟ್ಟ ಹೊಗೆಗೆ ಬೆಚ್ಚಿಬಿದ್ದ ಪ್ರಯಾಣಿಕರು!

ತಿರುಪತಿಯಿಂದ ಸಿಕಂದರಾಬಾದ್​ಗೆ ಹೊರಟಿದ್ದ ವಂದೇ ಭಾರತ್ ರೈಲು ಘಟನೆಗೆ ಕಾರಣರಾದ ಪ್ರಯಾಣಿಕನನ್ನು ಬಂಧಿಸಿದ ರೈಲ್ವೆ ಪೊಲೀಸರು ಮೇಕ್ ಇನ್ ಇಂಡಿಯಾದ ಭಾಗವಾಗಿ ದೇಶದಲ್ಲಿ ಚಾಲ್ತಿಯಲ್ಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಉದ್ಘಾಟನೆಯಾದಂದಿನಿಂದ ಒಂದಲ್ಲ ಒಂದು ಕಾರಣಕ್ಕೆ...

ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಚರ್ಚೆ: ಮೋದಿ ವಿರುದ್ಧ ರಾಹುಲ್‌ ವಾಗ್ದಾಳಿ; ನಾಳೆ ಪ್ರಧಾನಿ ಉತ್ತರ

ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯ ಕುರಿತು ಮಂಗಳವಾರದಿಂದ ಲೋಕಸಭೆಯಲ್ಲಿ ಚರ್ಚೆ ಆರಂಭವಾಗಿದೆ. ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಚರ್ಚೆಯ ಕುರಿತು ಉತ್ತರ ನೀಡಲಿದ್ದು, ಬಳಿಕ ಮತದಾನ ನಡೆಯಲಿದೆ. ಮಣಿಪುರ...

ಕಾಂಗ್ರೆಸ್‌ನಿಂದ ಎರಡನೇ ಹಂತದ ಭಾರತ್‌ ಜೋಡೋ: ಈ ಬಾರಿ ಗುಜರಾತ್‌ನಿಂದ ಆರಂಭ

ಎರಡನೇ ಹಂತದ ಭಾರತ್‌ ಜೋಡೋ ಯಾತ್ರೆ ಹಮ್ಮಿಕೊಳ್ಳಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ರಾಹುಲ್‌ ಗಾಂಧಿಯ ನಾಯಕತ್ವದಲ್ಲಿ ನಡೆಯಲಿರುವ ಈ ಬಾರಿಯ ಯಾತ್ರೆ ಗುಜರಾತ್‌ನಿಂದ ಆರಂಭಗೊಂಡು ಮೇಘಾಲಯದಲ್ಲಿ ಅಂತ್ಯಗೊಳ್ಳಲಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ...

‘ಕೇರಳ’ವನ್ನು ‘ಕೇರಳಂ’ ಎಂದು ಹೆಸರು ಬದಲಾಯಿಸಲು ಕೇಂದ್ರಕ್ಕೆ ಒತ್ತಾಯಿಸುವ ನಿರ್ಣಯ ಅಂಗೀಕಾರ

ರಾಜ್ಯದ ಅಧಿಕೃತ ಹೆಸರನ್ನು 'ಕೇರಳ'ದಿಂದ 'ಕೇರಳಂ' ಎಂದು ಎಲ್ಲ ಭಾಷೆಗಳಲ್ಲಿ ಬದಲಾಯಿಸುವಂತೆ ಕೇಂದ್ರಕ್ಕೆ ಮನವಿ ಮಾಡುವ ನಿರ್ಣಯವನ್ನು ಕೇರಳ ವಿಧಾನಸಭೆ ಬುಧವಾರ ಸರ್ವಾನುಮತದಿಂದ ಅಂಗೀಕರಿಸಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸದನದಲ್ಲಿ ನಿರ್ಣಯವನ್ನು ಮಂಡಿಸಿದರು...

ಪಶ್ಚಿಮ ಬಂಗಾಳ: ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಬಂಗಾಳಿ ಎರಡನೇ ಕಡ್ಡಾಯ ಭಾಷೆ

ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಬಂಗಾಳಿ ಭಾಷೆಯನ್ನು ಎರಡನೇ ಭಾಷೆಯಾಗಿ ಕಡ್ಡಾಯಗೊಳಿಸುವ ಪ್ರಸ್ತಾವನೆಗೆ ಪಶ್ಚಿಮ ಬಂಗಾಳದ ಸಂಪುಟ ಸೋಮವಾರ(ಆಗಸ್ಟ್ 7) ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು...

ಈ ಹೊತ್ತಿನ ಪ್ರಮುಖ ಸುದ್ದಿ