ದೇಶ

ದೇವಿ ಪ್ರತ್ಯಕ್ಷವಾಗಲಿಲ್ಲ ಎಂದು ಅರ್ಚಕ ಆತ್ಮಹತ್ಯೆ

ತಾವು ಪೂಜಿಸುತ್ತಿದ್ದ ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲವೆಂದು ಅರ್ಚಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ. ಮೃತ ಅರ್ಚಕನನ್ನು ಅಮಿತ್ ಶರ್ಮಾ ಎಂದು ಗುರುತಿಸಲಾಗಿದ್ದು, ಆತ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ....

ಆ್ಯಪ್ ಮೂಲಕ 2,000 ರೂ. ಸಾಲ ಪಡೆದ ಯುವಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ

ತ್ವರಿತ ಸಾಲವನ್ನು ನೀಡುವ ಆ್ಯಪ್ ಮೂಲಕ 2,000 ರೂಪಾಯಿ ಸಾಲ ಪಡೆದ 27 ವರ್ಷದ ಯುವಕರೊಬ್ಬರು ಆ್ಯಪ್‌ನ ಸಿಬ್ಬಂದಿಗಳ ನಿರಂತರ ಕಿರುಕುಳದಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ಘಟನೆ...

ಒತ್ತುವರಿ ಆರೋಪ: 185 ವರ್ಷ ಹಳೆಯದಾದ ಮಸೀದಿಯ ಗೋಡೆ ಕೆಡವಿದ ಯುಪಿ ಸರ್ಕಾರ

ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪದ ಮೇಲೆ 185 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಮಸೀದಿಯ ಗೋಡೆಯನ್ನು ಅಧಿಕಾರಿಗಳು ಕಡೆವಿರುವ ಘಟನೆ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿ ನಡೆದಿದೆ. ಫತೇಪುರದ ಲಲೌಲಿ ಪಟ್ಟಣದಲ್ಲಿ 1839ರಲ್ಲಿ ನೂರಿ...

ಮೋದಾನಿ | ಮಹಾರಾಷ್ಟ್ರ ಸಿಎಂ ಫಡ್ನವೀಸ್ ಭೇಟಿಯಾದ ಅದಾನಿ

ಪ್ರಧಾನಿ ಮೋದಿ ಅವರ ಅತ್ಯಾಪ್ತ ಎಂದೇ ಗುರುತಿಸಿಕೊಂಡಿರುವ, ಅಮೆರಿಕದಲ್ಲಿ ದಾಖಲಾಗಿರುವ ಲಂಚ ಪ್ರಕರಣದ ಆರೋಪಿಯೂ ಆಗಿರುವ ಉದ್ಯಮಿ ಗೌತಮ್ ಅದಾನಿ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದಾರೆ....

ಬಿಜೆಪಿಗಾಗಿ ಉಪ ರಾಷ್ಟ್ರಪತಿ ಪಟ್ಟ ಕಳೆದುಕೊಳ್ತಾರಾ ಧನಕರ್?

ಇಂಡಿಯಾ ಮೈತ್ರಿಕೂಟದ ರಾಜ್ಯಸಭಾ ಸದಸ್ಯರು ಉಪ ರಾಷ್ಟ್ರಪತಿ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ವಿರುದ್ಧ ಮಂಗಳವಾರ ಅವಿಶ್ವಾಸ ನಿರ್ಣಯ ಮಂಡಿದ್ದಾರೆ. ಧನಕರ್ ಅವರು ಪಕ್ಷಪಾತ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯಸಭಾ ವಿರೋಧ ಪಕ್ಷದ...

ಅತ್ತೆ-ಮಾವ ‘ಬೈಕ್‌ ಇಎಂಐ’ ಕಟ್ಟಿಲ್ಲವೆಂದು ಅಳಿಯ ಆತ್ಮಹತ್ಯೆ

ಸಾಲದ ಮೇಲೆ ಖರೀದಿಸಲಾಗಿದ್ದ ಬೈಕ್‌ಗೆ 'ಇಎಂಐ' ಕಂತು ಕಟ್ಟಿಲ್ಲವೆಂದು ಫೈನಾನ್ಸ್‌ ಕಂಪನಿಯ ಸಿಬ್ಬಂದಿ ಬೈಕ್‌ಅನ್ನು ತೆಗೆದುಕೊಂಡು ಹೋಗಿದ್ದಾರೆ. ಬೈಕ್‌ನ ಇಎಂಐ ಕಂತನ್ನು ತಮ್ಮ ಅತ್ತೆ-ಮಾವ ಕಟ್ಟಿಲ್ಲವೆಂದು ಕೋಪಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ...

ರಾಜ್ಯಸಭಾ ಸ್ಪೀಕರ್ ಜಗದೀಪ್​ ಧನಕರ್​ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ರಾಜ್ಯಸಭಾ ಸ್ಪೀಕರ್, ಉಪರಾಷ್ಟ್ರಪತಿ ಜಗದೀಪ್​ ಧನಕರ್​ ವಿರುದ್ಧ ವಿಪಕ್ಷ ಇಂಡಿಯಾ ಒಕ್ಕೂಟದ ಸಂಸದರು ರಾಜ್ಯಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ವಿಪಕ್ಷದ ಸುಮಾರು 60 ಸಂಸದರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ....

ಹಿರಿಯ ಸಾಹಿತಿ ದೇವನೂರ ಮಹಾದೇವರಿಗೆ ವೈಕಂ ಪ್ರಶಸ್ತಿ

ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ತಮಿಳುನಾಡು ಸರ್ಕಾರವು ವೈಕಂ ಪ್ರಶಸ್ತಿ ಘೋಷಿಸಿದೆ. ದಮನಿತ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ವ್ಯಕ್ತಿಗಳಿಗೆ ತಮಿಳುನಾಡು ಸರ್ಕಾರ ಘೋಷಿಸಿರುವ ಪ್ರಶಸ್ತಿ ಇದಾಗಿದೆ. ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ...

ಮುಂಬೈನಲ್ಲಿ ಭೀಕರ ಅಪಘಾತ | ಮೃತರ ಸಂಖ್ಯೆ 6ಕ್ಕೆ ಏರಿಕೆ, 29 ಮಂದಿಗೆ ಗಾಯ

ಮುಂಬೈನ ಕುರ್ಲಾ ರೈಲು ನಿಲ್ದಾಣದ ಬಳಿ ಸೋಮವಾರ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. 29 ಮಂದಿ ಗಾಯಗೊಂಡಿದ್ದಾರೆ. ಜನದಟ್ಟಣೆಯ ಮಾರುಕಟ್ಟೆಯ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬೆಸ್ಟ್ ಬಸ್...

ಹಿರಿಯ ರಾಜಕಾರಣಿ, ಕರ್ನಾಟಕದ ಮಾಜಿ‌ ಸಿಎಂ ಎಸ್‌ಎಂ ಕೃಷ್ಣ ನಿಧನ

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ದೇಶದ ಮಾಜಿ ವಿದೇಶಾಂಗ ಸಚಿವ, ಹಿರಿಯ ರಾಜಕಾರಣಿ ಎಸ್​ಎಂ ಕೃಷ್ಣ ಅವರು ನಿಧನ ಹೊಂದಿದ್ದಾರೆ. 92 ವರ್ಷ ವಯಸ್ಸಿನ ಎಸ್‌ಎಂ ಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ...

2024ರಲ್ಲಿ 11 ತಿಂಗಳುದ್ದಕ್ಕೂ ಭಾರತದ ತಾಪಮಾನ ಕನಿಷ್ಠ ಸರಾಸರಿ ಮೀರಿತ್ತು!

ಭಾರತದ ತಾಪಮಾನ ಜುಲೈ, ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ನಲ್ಲಿ 123 ವರ್ಷಗಳ ದಾಖಲೆ ಮುರಿದು ಬಿದ್ದಿದೆ ಎಂದು ‘ಡೌನ್ ಟು ಆರ್ತ್’ ನಿಯತಕಾಲಿಕ ವರದಿ ಮಾಡಿದೆ. ಅಕ್ಟೋಬರ್ ತಿಂಗಳಿನಲ್ಲಿ ಕಳೆದ 123 ವರ್ಷಗಳ...

ಸಂಜಯ್‌ ಮಲ್ಹೋತ್ರಾ ನೂತನ ಆರ್‌ಬಿಐ ಗವರ್ನರ್‌

ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಕಂದಾಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ 1990ನೇ ಸಾಲಿನ ರಾಜಸ್ಥಾನ ಕೇಡರ್‌ನ ಐಎಎಸ್‌ ಅಧಿಕಾರಿ ಸಂಜಯ್‌ ಮಲ್ಹೋತ್ರಾ ಅವರನ್ನು ನೂತನ ಆರ್‌ಬಿಐ ಗವರ್ನರ್‌ ಆಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ....

ಈ ಹೊತ್ತಿನ ಪ್ರಮುಖ ಸುದ್ದಿ