ಸೋನಿಯಾ ಆತ್ಮಕಥನ ‘ಬಿಲಾಂಗಿಂಗ್’ ಬಿಡುಗಡೆ: ರಾಜೀವ್-ಇಂದಿರಾ ಹತ್ಯೆ, ಮೋದಿ ರಾಜಕಾರಣ, ಮಹತ್ವದ ಸಂಗತಿಗಳ ಅನಾವರಣ

Date:

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥನ ‘Belonging: A Journey of Love’ (ಬಿಲಾಂಗಿಂಗ್: ಎ ಜರ್ನಿ ಆಫ್ ಲವ್) ಮಂಗಳವಾರ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಒಟ್ಟು 544 ಪುಟಗಳ ಈ ಬೃಹತ್ ಕೃತಿಯನ್ನು ಭಾರತದಲ್ಲಿ ಪ್ರಸಿದ್ಧ ಪ್ರಕಾಶನ ಸಂಸ್ಥೆ ‘ಹಾರ್ಪರ್‌ಕಾಲಿನ್ಸ್ ಇಂಡಿಯಾ’ ಪ್ರಕಟಿಸಿದ್ದು, ಅಮೆರಿಕದಲ್ಲಿ ‘ಆಲ್ಫ್ರೆಡ್ ಎ. ನಾಫ್’ ಸಂಸ್ಥೆಯ ಮೂಲಕ ಲೋಕಾರ್ಪಣೆಗೊಂಡಿದೆ.

- Advertisement -

ಇಟಲಿಯ ಸಣ್ಣ ಪಟ್ಟಣವೊಂದರಲ್ಲಿ ಸಾಧಾರಣ ಯುವತಿಯಾಗಿ ಬೆಳೆದ ಸೋನಿಯಾ ಅವರು, ಭಾರತದ ಪ್ರಭಾವಿ ನೆಹರೂ–ಗಾಂಧಿ ಕುಟುಂಬದ ಸೊಸೆಯಾಗಿ ಹೆಜ್ಜೆ ಇಟ್ಟಾಗಿನಿಂದ ಹಿಡಿದು, ನಂತರದ ದಿನಗಳಲ್ಲಿ ಭಾರತೀಯ ರಾಜಕಾರಣದ ಅತ್ಯಂತ ಪ್ರಭಾವಿ ನಾಯಕಿಯಾಗಿ ರೂಪುಗೊಂಡ ಬದುಕಿನ ರೋಚಕ ಪಯಣವನ್ನು ಈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಯ ದುರಂತಗಳು, 1975ರ ತುರ್ತುಪರಿಸ್ಥಿತಿಯ ಕರಾಳ ದಿನಗಳು, ಕಾಂಗ್ರೆಸ್ ಅಧ್ಯಕ್ಷೆಯಾಗುವ ಜವಾಬ್ದಾರಿಯನ್ನು ಹೊತ್ತುಕೊಂಡ ಹಾದಿ, 2004ರಲ್ಲಿ ಪ್ರಧಾನಿ ಹುದ್ದೆಯನ್ನು ಸ್ವೀಕರಿಸಲು ನಿರಾಕರಿಸಿದ ಅಚ್ಚರಿಯ ನಿರ್ಧಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸೇರಿದಂತೆ ಹಲವು ಮಹತ್ವದ ಸಂಗತಿಗಳನ್ನು ವಿಸ್ತೃತವಾಗಿ ವಿವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

GMPL ಘಟಕದಿಂದ ಪರಿಸರಕ್ಕೆ ಕುತ್ತು: ಜನವಸತಿ ಪ್ರದೇಶದಲ್ಲಿ ವಿಷ...

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಜ್ಪೆ ಶಾಂತಿಗುಡ್ಡೆ ಪರಿಸರದ ಜನರು ಕೆಲವು ದಿನಗಳಿಂದ ಆತಂಕದಿಂದಲೇ ಬದುಕನ್ನು ಸಾಗಿಸುವಂತಾಗಿದೆ. ತಮ್ಮ ಪರಿಸರ ವಿಶೇಷ ಆರ್ಥಿಕ ವಲಯವಾಗಿದ್ದರೂ, ಪರಿಸರದ ಮನೆಗಳ ಅಂಗಳ, ಬಾವಿಗಳ ನೀರಿಗೂ...

“ತಮ್ಮ ಈ ಆತ್ಮಕಥನವು ಕೇವಲ ರಾಜಕೀಯ ವಿಶ್ಲೇಷಣೆಗಳ ಕತೆಯಲ್ಲ, ಬದಲಿಗೆ ತಮ್ಮ ವೈಯಕ್ತಿಕ ಬದುಕಿನ ಆಳವಾದ ಅನುಭವಗಳ ಸರಮಾಲೆ” ಎಂದು ಪುಸ್ತಕ ಬಿಡುಗಡೆಗೂ ಮುನ್ನ ‘ದಿ ಹಿಂದು’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸೋನಿಯಾ ಗಾಂಧಿ ಹೇಳಿದ್ದಾರೆ.

ಗಾಂಧಿ ಕುಟುಂಬದಿಂದಲೇ ಹೊರಬಂದಿರುವ ಈ ಕೃತಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಯಾಕೆಂದರೆ, ಗಾಂಧಿ ಕುಟುಂಬದ ಕುರಿತು ಈಗಾಗಲೇ ಹಲವಾರು ಪುಸ್ತಕಗಳು ಪ್ರಕಟವಾಗಿದ್ದರೂ, ಕುಟುಂಬದ ಸದಸ್ಯರೊಬ್ಬರು ಬರೆದಿರುವ ಪುಸ್ತಕ ಇದಾಗಿದೆ. “ಕುಟುಂಬದ ಸದಸ್ಯರು ನಿಜ ಜೀವನದಲ್ಲಿ ಹೇಗಿದ್ದರು, ಅವರ ಆಲೋಚನೆಗಳು ಏನು, ಅವರ ವೈಯಕ್ತಿಕ ಸಂಘರ್ಷಗಳು ಮತ್ತು ದೌರ್ಬಲ್ಯಗಳು ಯಾವುವು ಎಂಬುದನ್ನು ಅತಿ ಹತ್ತಿರದಿಂದ ಮತ್ತು ಆಪ್ತವಾಗಿ ವಿವರಿಸುವ ಪ್ರಯತ್ನ ಮಾಡಿದ್ದೇನೆ” ಎಂದು ಸ್ವತಃ ಸೋನಿಯಾ ಗಾಂಧಿ ಅವರೇ ಹೇಳಿಕೊಂಡಿದ್ದಾರೆ.

ರಾಜೀವ್ ಗಾಂಧಿ ಅವರೊಂದಿಗಿನ ಅಚ್ಚಳಿಯದ ಪ್ರೇಮ, ಭಾರತಕ್ಕೆ ಬಂದಾಗ ಎದುರಾದ ಸಾಂಸ್ಕೃತಿಕ ಸವಾಲುಗಳು, ಇಂದಿರಾ ಗಾಂಧಿ ಅವರೊಂದಿಗೆ ಬೆಸೆದ ಬಾಂಧವ್ಯ ಹಾಗೂ ಕುಟುಂಬದೊಳಗಿನ ಅನಿರೀಕ್ಷಿತ ಸಂತೋಷ ಮತ್ತು ದುಃಖದ ಛಾಯೆಗಳು, ಇಟಲಿಯಲ್ಲಿ ಬೆಳೆದ ತಮಗೆ ಭಾರತವೇ ಅಂತಿಮವಾಗಿ ಸ್ವಂತ ಮನೆಯಾಗಿ ಮತ್ತು ತಮ್ಮ ಅಸ್ತಿತ್ವದ ಅವಿಭಾಜ್ಯ ಅಂಗವಾಗಿ ಹೇಗೆ ರೂಪಾಂತರಗೊಂಡಿತು ಎಂಬುದನ್ನು ಪುಸ್ತಕದಲ್ಲಿ ಸೋನಿಯಾ ಗಾಂಧಿ ವಿವರಿಸಿದ್ದಾರೆ.

ಗಮನಾರ್ಹವಾಗಿ, 1975ರ ತುರ್ತುಪರಿಸ್ಥಿತಿ ಕುರಿತು ಸೋನಿಯಾ ಗಾಂಧಿ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. “ಅಲಹಾಬಾದ್ ಹೈಕೋರ್ಟ್ ತೀರ್ಪಿನ ನಂತರ ಇಂದಿರಾ ಗಾಂಧಿ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಸ್ವತಃ ರಾಜೀವ್ ಗಾಂಧಿ ಅವರು ಸಲಹೆ ನೀಡಿದ್ದರು. ಆದರೆ, ತಾವು ರಾಜೀನಾಮೆ ನೀಡಿದರೆ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ವಿಭಜನೆಯಾಗುವ ಅಪಾಯವಿತ್ತು ಮತ್ತು ಅದು ಆರ್‌ಎಸ್‌ಎಸ್‌ಗೆ ರಾಜಕೀಯವಾಗಿ ಲಾಭ ತಂದುಕೊಡಬಹುದು ಎಂಬ ತೀವ್ರ ಆತಂಕ ಇಂದಿರಾ ಗಾಂಧಿ ಅವರಿಗಿತ್ತು” ಎಂಬ ಸ್ವರಸ್ಯರ ಸಂಗತಿಯನ್ನು ವಿವರಿಸಿದ್ದಾರೆ.

ಮಾತ್ರವಲ್ಲದೆ, ತುರ್ತುಪರಿಸ್ಥಿತಿಯ ಸಮದಯಲ್ಲಿ, ನಾಗರಿಕ ಸ್ವಾತಂತ್ರ್ಯಗಳ ಮೇಲಿನ ನಿರ್ಬಂಧ, ಪ್ರಮುಖ ವಿರೋಧ ಪಕ್ಷದ ನಾಯಕರ ದಿಢೀರ್ ಬಂಧನ, ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಸೆನ್ಸಾರ್‌ಶಿಪ್, ಬಲವಂತದ ಸಂತಾನಹರಣ ಹಾಗೂ ಕೊಳೆಗೇರಿಗಳ ತೆರವು ಕಾರ್ಯಾಚರಣೆಯಂತಹ ನೋವಿನ ಸಂಗತಿಗಳನ್ನೂ ಪುಸ್ತಕವು ಮುಕ್ತವಾಗಿ ಪ್ರಸ್ತಾಪಿಸಿದೆ. ವಿಶೇಷವಾಗಿ ಸಂಜಯ್ ಗಾಂಧಿ ಅವರ ಅತಿ ಹೆಚ್ಚಿನ ಪ್ರಭಾವ ಮತ್ತು ಅಧಿಕಾರದ ದುರುಪಯೋಗದ ಬಗ್ಗೆಯೂ ಉಲ್ಲೇಖಿಸಲಾಗಿದ್ದು, ಆ ಕಾಲಘಟ್ಟದ ಘಟನೆಗಳ ನೈಜ ಗಂಭೀರತೆಯನ್ನು ತಾವು ತದನಂತರದ ದಿನಗಳಲ್ಲಿ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ.

ಅಂತೆಯೇ, ಭಾರತೀಯ ರಾಜಕಾರಣದ ದಿಕ್ಕನ್ನೇ ಬದಲಿಸಿದ 2004ರ ಲೋಕಸಭಾ ಚುನಾವಣೆಯ ಪ್ರಮುಖ ಬೆಳವಣಿಗೆಗಳನ್ನೂ ಸೋನಿಯಾ ಉಲ್ಲೇಖಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅನಿರೀಕ್ಷಿತವಾಗಿ ಅಧಿಕಾರಕ್ಕೆ ಬಂದಾಗ, ಸೋನಿಯಾ ಗಾಂಧಿ ಸ್ವತಃ ಪ್ರಧಾನಿ ಹುದ್ದೆಯನ್ನು ಅಲಂಕರಿಸದೆ ಡಾ. ಮನಮೋಹನ್ ಸಿಂಗ್ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿದರು. ಆ ಐತಿಹಾಸಿಕ ನಿರ್ಧಾರದ ಹಿಂದಿನ ತೀವ್ರ ವೈಯಕ್ತಿಕ ಸಂಘರ್ಷಗಳನ್ನು ಅವರು ಇಲ್ಲಿ ಮೊದಲ ಬಾರಿಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಚುನಾವಣೆಗೆ ಕೆಲವು ತಿಂಗಳುಗಳ ಮುನ್ನವೇ ತಮ್ಮ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಅವರೊಂದಿಗೆ ಪ್ರಧಾನಿ ಹುದ್ದೆಯ ಸಾಧ್ಯತೆಗಳ ಕುರಿತು ಚರ್ಚೆ ನಡೆಸಿದ್ದಾಗಿ ತಿಳಿಸಿರುವ ಅವರು, ಅಂದೇ ತಾವು ಪ್ರಧಾನಿಯಾಗುವುದಿಲ್ಲ ಎಂಬ ಗಟ್ಟಿ ನಿರ್ಧಾರಕ್ಕೆ ಬಂದಿದೆ. ಆದರೂ, ಚುನಾವಣಾ ಫಲಿತಾಂಶದ ಬಳಿಕ ಮೈತ್ರಿಕೂಟದ ಹಿರಿಯ ನಾಯಕರು ಪ್ರಧಾನಿ ಹುದ್ದೆ ಸ್ವೀಕರಿಸುವಂತೆ ಒತ್ತಡ ಹೇರಿದಾಗ ವೈಯಕ್ತಿಕ ನಿರ್ಧಾರ ಮತ್ತು ಸಾರ್ವಜನಿಕ ಜವಾಬ್ದಾರಿಯ ನಡುವೆ ತೀವ್ರ ದ್ವಂದ್ವ ಎದುರಾಗಿತ್ತು. ಆ ಸಂದರ್ಭದಲ್ಲಿ ತಮ್ಮ ಪತಿ ರಾಜೀವ್ ಗಾಂಧಿ ಬದುಕಿದ್ದಿದ್ದರೆ ಅವರ ಮಾರ್ಗದರ್ಶನ ಪಡೆಯಬಹುದಿತ್ತು ಎಂಬ ಹಂಬಲ ಕಾಡಿದ್ದನ್ನು ಅವರು ಸ್ಮರಿಸಿದ್ದಾರೆ.

ವಿಶೇಷವಾಗಿ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರು ತಮ್ಮ ತಾಯಿ ಪ್ರಧಾನಿ ಹುದ್ದೆ ಸ್ವೀಕರಿಸುವುದನ್ನು ತೀವ್ರವಾಗಿ ವಿರೋಧಿಸಿದ್ದರು; ಏಕೆಂದರೆ ಇಂದಿರಾ ಮತ್ತು ರಾಜೀವ್ ಅವರ ಭೀಕರ ಹತ್ಯೆಗಳ ಕಹಿ ನೆನಪುಗಳ ಹಿನ್ನೆಲೆಯಲ್ಲಿ ಕುಟುಂಬದ ಒಟ್ಟಾರೆ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಮಕ್ಕಳಿಗೆ ತೀವ್ರ ಭಯವಿತ್ತು. ಅಂತಿಮವಾಗಿ ಎಲ್ಲ ಒತ್ತಡಗಳನ್ನು ಮೀರಿ ಪ್ರಧಾನಿ ಹುದ್ದೆ ನಿರಾಕರಿಸಿದ ಸೋನಿಯಾ, ಅತ್ಯುತ್ತಮ ಆಡಳಿತ ಜ್ಞಾನ ಮತ್ತು ಅಚಲ ಪ್ರಾಮಾಣಿಕತೆ ಹೊಂದಿದ್ದ ಮನಮೋಹನ್ ಸಿಂಗ್ ದೇಶವನ್ನು ಮುನ್ನಡೆಸಲು ಅತ್ಯಂತ ಸೂಕ್ತ ವ್ಯಕ್ತಿ ಎಂದು ಭಾವಿಸಿ, ಅವರನ್ನು ಆಯ್ಕೆ ಮಾಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಕುಟುಂಬವು ಎದುರಿಸಿದ ಮಹಾ ದುರಂತಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಗಳು ತಮ್ಮ ಇಡೀ ಬದುಕಿನ ದಿಕ್ಕನ್ನೇ ಬುಡಮೇಲು ಮಾಡಿದವು ಎಂದು ಸೋನಿಯಾ ಮೆಲುಕುಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಇಂದಿನ ರಾಜಕೀಯ ಭಿನ್ನಾಭಿಪ್ರಾಯಗಳ ಬಗ್ಗೆ ಮುಕ್ತವಾಗಿ ಬರೆದಿರುವ ಸೋನಿಯಾ, “ಮೋದಿ ಜೊತೆಗಿನ ಭಿನ್ನಾಭಿಪ್ರಾಯಗಳು ಕೇವಲ ವೈಯಕ್ತಿಕ ಮುಸುಕು ಗುದ್ದಾಟವಲ್ಲ, ಬದಲಿಗೆ ಭಾರತವನ್ನು ನೋಡುವ ಎರಡು ತದ್ವಿರುದ್ಧ ಮತ್ತು ಭಿನ್ನ ಸೈದ್ಧಾಂತಿಕ ದೃಷ್ಟಿಕೋನಗಳ ನಡುವಿನ ಸಂಘರ್ಷ” ಎಂದು ಅವರು ಬಣ್ಣಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಗಡ್ಕರಿ-ಮೋಶಾ ಆಡಳಿತದಲ್ಲಿ ‘ವೋಟ್‌ ಚೋರಿ’ ಬೆನ್ನಲ್ಲೇ ‘ಪೆಟ್ರೋಲ್ ಚೋರಿ’: ₹62,000 ಕೋಟಿ ದೋಚುವ ಹುನ್ನಾರ!

“ನೆಹರೂ–ಗಾಂಧಿ ಕುಟುಂಬದ ತತ್ವಗಳಿಂದ ತಾವು ರೂಢಿಸಿಕೊಂಡ ಭಾರತದ ಪರಿಕಲ್ಪನೆಗೂ ಮತ್ತು ಆರ್‌ಎಸ್‌ಎಸ್ ಸಿದ್ಧಾಂತದಿಂದ ಮೋದಿ ಅವರು ರೂಪಿಸಿಕೊಂಡಿರುವ ಭಾರತದ ಪರಿಕಲ್ಪನೆಗೂ ಮೂಲಭೂತ ವ್ಯತ್ಯಾಸಗಳಿವೆ. ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಜೊತೆಗಿನ ಸಂವಹನವು ತೀರ ಕನಿಷ್ಠ ಮಟ್ಟದಲ್ಲಿದೆ. ಸಂಸತ್ ಭವನದಲ್ಲಿ ಅಥವಾ ಅಧಿಕೃತ ಶಿಷ್ಟಾಚಾರದ ಕಾರ್ಯಕ್ರಮಗಳಲ್ಲಿ ಎದುರಾದಾಗ ಪರಸ್ಪರ ನಮಸ್ಕರಿಸುವುದನ್ನು ಬಿಟ್ಟರೆ ಬೇರೆ ಮಾತುಕತೆಗಳು ನಡೆಯುವುದಿಲ್ಲ. ಹಳೆಯ ಕಾಲದ ರಾಜಕಾರಣಿಗಳ ನಡುವೆ ರಾಜಕೀಯ ಭೇದವಿದ್ದರೂ ಸೌಹಾರ್ದತೆ ಉಳಿದಿತ್ತು. ಆದರೆ, ಮೋದಿ ಆಡಳಿತದಲ್ಲಿ ಅದೆಲ್ಲವೂ ಕಣ್ಮರೆಯಾಗಿದೆ” ಎಂದು ಹೇಳಿದ್ದಾರೆ.

ಈ ಎಲ್ಲ ರೋಚಕ ಮತ್ತು ಗಂಭೀರ ಸಂಗತಿಗಳ ನಡುವೆ, ಪುಸ್ತಕ ಪ್ರಕಟಣೆಗೂ ಮುನ್ನವೇ ಇದು ದೊಡ್ಡ ಮಟ್ಟದ ಚರ್ಚೆ ಮತ್ತು ಪ್ರಕಾಶಕರ ಬದಲಾವಣೆಯ ವಿವಾದ ಎದುರಾಗಿತ್ತು. ಮೂಲತಃ ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ಸಂಸ್ಥೆಯು ಈ ಪುಸ್ತಕವನ್ನು ಪ್ರಕಟಿಸಲು ಒಪ್ಪಂದ ಮಾಡಿಕೊಂಡಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಸಂಪಾದಕೀಯ ಹಸ್ತಕ್ಷೇಪ ಮತ್ತು ಪುಸ್ತಕದ ಕೆಲವು ಭಾಗಗಳನ್ನು, ವಿಶೇಷವಾಗಿ ಪ್ರಧಾನಿ ಮೋದಿ ಮತ್ತು ಇತರೆ ರಾಜಕೀಯ ಸೂಕ್ಷ್ಮ ಸಂಗತಿಗಳಿಗೆ ಸಂಬಂಧಿಸಿದ ಅಂಶಗಳನ್ನು ತಿದ್ದುಪಡಿ ಮಾಡುವ ಅಥವಾ ತೆಗೆದುಹಾಕುವ ವಿಷಯದಲ್ಲಿ ಸೋನಿಯಾ ಮತ್ತು ಪ್ರಕಾಶಕರ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಬಳಿಕ, ಪ್ರಕಟಣೆಯಿಂದ ಪೆಂಗ್ವಿನ್ ಇಂಡಿಯಾ ಹಿಂದೆ ಸರಿಯಿತು. ಅಂತಿಮವಾಗಿ ಹಾರ್ಪರ್‌ಕಾಲಿನ್ಸ್ ಇಂಡಿಯಾ ಸಂಸ್ಥೆಯು ಸೆಪ್ಟೆಂಬರ್ 4ರಂದು ಪುಸ್ತಕ ಪ್ರಕಟಣೆಯ ಜವಾಬ್ದಾರಿ ಹೊತ್ತುಕೊಂಡಿತು. ಇದೀಗ, ಪುಸ್ತಕವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ದೆಹಲಿಯ ಖಾನ್ ಮಾರ್ಕೆಟ್ ಸೇರಿದಂತೆ ದೇಶದ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಕರ್ನಾಟಕದ ಆಯ್ದ ಬುಕ್ ಸ್ಟೋರ್‌ಗಳಲ್ಲಿಯೂ ಪುಸ್ತಕ ಲಭ್ಯವಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್ ಭರವಸೆ ಈಡೇರಿಕೆಗೆ ಆಗ್ರಹ: ನ. 12ರಂದು ಬೆಂಗಳೂರಿನಲ್ಲಿ ‘ಅಲ್ಪಸಂಖ್ಯಾತರು ಹಾಗೂ ಶೋಷಿತರ ಧ್ವನಿ’ ಸಮಾವೇಶ

ಕಳೆದ 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ನೀಡಿದ್ದ ಪ್ರಮುಖ ಭರವಸೆಗಳನ್ನು...

ವಿಜಯಪುರ | ಹಜರತ್ ಟಿಪ್ಪು ಸುಲ್ತಾನರ 276ನೇ ಜಯಂತಿ ಆಚರಣೆ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಹಜರತ್ ಟಿಪ್ಪು ಸುಲ್ತಾನ್ ರವರ 276ನೇ...

“ವಾಯುಮಾಲಿನ್ಯದಲ್ಲಿ ನಾವು ‘ವಿಶ್ವಗುರು’ ಆಗುತ್ತಿರುವುದು ಏಕೆ”: ಮೋದಿ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ವಾಯುಮಾಲಿನ್ಯ ಮಿತಿಮೀರಿರುವ ಹಿನ್ನೆಲೆಯಲ್ಲಿ...

ಬಳ್ಳಾರಿ | ಸಿಮೆಂಟ್ ಲಾರಿ ಹರಿದು 80ಕ್ಕೂ ಹೆಚ್ಚು ಕುರಿಗಳ ಸಾವು

ರಸ್ತೆಬದಿಯಲ್ಲಿ ಸಾಗುತ್ತಿದ್ದ ಕುರಿಗಳ ಹಿಂಡಿನ ಮೇಲೆ ಸಿಮೆಂಟ್ ತುಂಬಿದ ಲಾರಿಯೊಂದು ಹರಿದ...