ದೇಶ

ದೆಹಲಿ, ಯುಪಿ ಪೊಲೀಸರ ಕಿರುಕುಳ; ಕರ್ನಾಟಕ ಸರ್ಕಾರದ ನಿಷ್ಕ್ರಿಯತೆಗೆ ಖಂಡನೆ

ವಕೀಲರು, ಹೋರಾಟಗಾರರು, ವಿದ್ಯಾರ್ಥಿಗಳು ಸೇರಿದ ನಿಯೋಗದಿಂದ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ನಾಗರಿಕ ಹಕ್ಕುಗಳ ರಕ್ಷಣೆ ಸಂಘಟನೆಯ (ಎಪಿಸಿಆರ್‌) ರಾಷ್ಟ್ರೀಯ ಕಾರ್ಯದರ್ಶಿ ನದೀಂ ಖಾನ್‌ ಅವರ ವಿಚಾರವಾಗಿ ದೆಹಲಿ ಪೊಲೀಸರು, ಆಲ್ಟ್‌ ನ್ಯೂಸ್...

ಯಾವುದೇ ವಿವಾದಿತ ಧಾರ್ಮಿಕ ಸ್ಥಳಗಳ ಸಮೀಕ್ಷೆಗೆ ಅವಕಾಶ ನೀಡುವಂತಿಲ್ಲ: ನ್ಯಾಯಾಲಯಗಳಿಗೆ ಸುಪ್ರೀಂ ನಿರ್ದೇಶನ

ಪೂಜಾ ಸ್ಥಳಗಳ ವಿಚಾರದಲ್ಲಿ ಧಾರ್ಮಿಕ ಸ್ವರೂಪವನ್ನು ಮುನ್ನೆಲೆಗೆ ತಂದು ವಿವಾದ ಎಬ್ಬಿಸಿರುವ ಯಾವುದೇ ಧಾರ್ಮಿಕ ಸ್ಥಳಗಳ ಸಮೀಕ್ಷೆಗೆ ಆದೇಶಿಸದಂತೆ ವಿಚಾರಣಾ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಧಾರ್ಮಿಕ ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು)...

ಅಚ್ಛೇ ದಿನಗಳು ಮುಗಿದವು! ಗುಜರಾತ್ ವಜ್ರಗಳ ಉದ್ಯಮ ಭಾರೀ ಹಿಂಜರಿತದಲ್ಲಿ ತತ್ತರ!

ಗುಜರಾತಿನ ವಜ್ರಗಳ ಉದ್ಯಮವು ತೀವ್ರ ಹಿಂಜರಿತದಲ್ಲಿ ತತ್ತರಿಸಿದೆ. ಸುಮಾರು ಎರಡು ಸಾವಿರ ಫ್ಯಾಕ್ಟರಿಗಳು ಮುಚ್ಚಿ ಹೋಗಿವೆ. ಈ ವರ್ಷ ಇಲ್ಲಿಯವರೆಗೆ 60ಕ್ಕೂ ಹೆಚ್ಚು ವಜ್ರ ಕಾರ್ಮಿಕರು ಹಣಕಾಸಿನ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ...

‘ಒಂದು ದೇಶ- ಒಂದು ಚುನಾವಣೆ’ಗೆ ಕೇಂದ್ರ ಸಚಿವ ಸಂಪುಟ ಅಸ್ತು

'ಒಂದು ದೇಶ- ಒಂದು ಚುನಾವಣೆ' ಶಿಫಾರಸಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಡಿಸೆಂಬರ್ 12ರಂದು ಕೇಂದ್ರ ಸಚಿವ ಸಂಪುಟವು ಒಂದು ರಾಷ್ಟ್ರ, ಒಂದು ಚುನಾವಣೆ ಶಿಫಾರಸನ್ನು ಅಂಗೀಕರಿಸಿದ್ದು...

ಪುಷ್ಪಾ 2 ಕಾಲ್ತುಳಿತ ಪ್ರಕರಣ | ಎಫ್‌ಐಆರ್ ರದ್ದು ಕೋರಿ ಅಲ್ಲು ಅರ್ಜುನ್ ಹೈಕೋರ್ಟ್ ಮೊರೆ

ಪುಷ್ಪಾ 2 ಪ್ರದರ್ಶನದ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನಟ ಅಲ್ಲು ಅರ್ಜುನ್ ತೆಲಂಗಾಣ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಡಿಸೆಂಬರ್ 4ರಂದು ಹೈದರಾಬಾದ್‌ನ...

ಕೇಂದ್ರ – ಆರ್‌ಬಿಐ ನಡುವೆ ನಿರಂತರ ಸಂಘರ್ಷ: ಆರ್ಥಿಕ ಭದ್ರತೆಗಾಗಿ ಆರ್‌ಬಿಐ ಗಟ್ಟಿ ನಿಲುವು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಚುಕ್ಕಾಣಿ ಹಿಡಿದಿರುವ ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿಯು ಡಿಸೆಂಬರ್ 10ರಂದು ಕೊನೆಗೊಂಡಿದೆ. ಎರಡು ಅವಧಿಗಳಿಗೆ ಆರ್‌ಬಿಐ ಗವರ್ನರ್ ಆಗಿದ್ದ ದಾಸ್, ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಅವರ...

ಜಾಮೀನು ಪಡೆದು ಹೊರಬಂದು ಸಂತ್ರಸ್ತೆಯನ್ನು ಹತ್ಯೆಗೈದ ಅತ್ಯಾಚಾರ ಆರೋಪಿ

ಅತ್ಯಾಚಾರ ಆರೋಪಿಯೊಬ್ಬ ಜಾಮೀನು ಪಡೆದು, ಜೈಲಿನಿಂದ ಹೊರಬಂದು ಸಂತ್ರಸ್ತೆಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಸುಂದರ್‌ಘಡ್‌ ಜಿಲ್ಲೆಯಲ್ಲಿ ಅಪ್ತಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕುನು ಕಿಸಾನ್...

ತಮಿಳುನಾಡಿನಲ್ಲಿ ಮಳೆ ಅಬ್ಬರ; ಕರ್ನಾಟಕದ 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌: ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ನಿರಂತರವಾಗಿ ವಾಯುಭಾರ ಕುಸಿತವಾಗುತ್ತಿದ್ದು, ಒಂದಾದ ನಂತರ ಮತ್ತೊಂದು ಚಂಡಮಾರುತಗಳು ರೂಪಗೊಳ್ಳುತ್ತಿವೆ. ಇತ್ತೀಚೆಗೆ ಫೆಂಗಲ್‌ ಚಂಡಮಾರುತವು ತಮಿಳುನಾಡು, ಆಂಧ್ರಪ್ರದೇಶದಲ್ಲಿ ಭಾರೀ ಅವಾಂತರ ಸೃಷ್ಟಿಸಿತ್ತು. ಇದೀಗ, ಮತ್ತೊಂದು ಚಂಡಮಾರುತ ರೂಪುಗೊಳ್ಳುತ್ತಿದ್ದು, ಗುರುವಾರ, ತಮಿಳುನಾಡಿನಲ್ಲಿ ಮಳೆಯಾಗುತ್ತಿದೆ....

ಮೂವರು ಪಿಎಫ್‌ಐ ಸದಸ್ಯರಿಗೆ ಜಾಮೀನು; ಇಡಿ ‘ಕುದುರೆಯ ಮುಂದೆ ಬಂಡಿ ಇರಿಸಿದೆ’ ಎಂದ ದೆಹಲಿ ಹೈಕೋರ್ಟ್

ದೆಹಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ, ಹಾಗೆಯೇ 2022ರಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಾಯಕರಿಗೆ ದೆಹಲಿ...

ರಾಜಸ್ಥಾನ | ಮೂರು ದಿನ ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಮಗು; ರಕ್ಷಣಾ ಕಾರ್ಯಾಚರಣೆಯ ನಂತರ ಸಾವು

ರಾಜಸ್ಥಾನದ ದೌಸಾದಲ್ಲಿ ಸುಮಾರು 150 ಅಡಿ ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಐದು ವರ್ಷದ ಬಾಲಕ ಸುಮಾರು ಮೂರು ದಿನಗಳ ಕಾಲ ನಡೆಸಿದ ರಕ್ಷಣಾ ಕಾರ್ಯಾಚರಣೆ ಬಳಿಕ ಸಾವನ್ನಪ್ಪಿದ್ದಾನೆ. ಅಧಿಕಾರಿಗಳು ಮೂರು ದಿನಗಳಿಗೂ ಹೆಚ್ಚು ಕಾಲ ರಕ್ಷಣಾ...

ಮೊಬೈಲ್ ಲೋನ್ ಆ್ಯಪ್ ಸುಳಿ: ಪತ್ನಿಯ ‘ಅಶ್ಲೀಲ’ ಫೋಟೋ ವೈರಲ್; ಪತಿ ಆತ್ಮಹತ್ಯೆ

ಮೊಬೈಲ್ ಲೋನ್ ಆ್ಯಪ್ ಮೂಲಕ ಪಡೆದುಕೊಂಡ ಎರಡು ಸಾವಿರ ರೂಪಾಯಿ ಮೊತ್ತದ ಸಾಲ, ಪ್ರೀತಿಸಿ ಮದುವೆಯಾಗಿದ್ದ ಯುವ ದಂಪತಿಯ ಪೈಕಿ ಪತಿಯ ಬಲಿ ಪಡೆದಿದೆ. ಆಂಧ್ರಪ್ರದೇಶದಲ್ಲಿ ನಡೆದಿರುವ ದಾರುಣ ಪ್ರಕರಣವಿದು. 21 ವರ್ಷದ ನರೇಂದ್ರ...

ರಕ್ಷಣಾ ಸಚಿವರಿಗೆ ಗುಲಾಬಿ, ತ್ರಿವರ್ಣ ಧ್ವಜ ನೀಡಿದ ರಾಹುಲ್ ಗಾಂಧಿ; ವಿಪಕ್ಷಗಳ ವಿನೂತನ ಪ್ರತಿಭಟನೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೆಂಪು ಗುಲಾಬಿ ಮತ್ತು ತ್ರಿವರ್ಣ ಧ್ವಜವನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಂಸತ್ತಿನಲ್ಲಿ ವಿಪಕ್ಷಗಳು ಮತ್ತು ಬಿಜೆಪಿ ನಡುವೆ ಸಂಘರ್ಷ ನಡೆಯುತ್ತಿರುವ...

ಈ ಹೊತ್ತಿನ ಪ್ರಮುಖ ಸುದ್ದಿ