ಈ ದಿನ ಸಂಪಾದಕೀಯ | ಆಟೋ ಚಾಲಕರ ಸಂಕಟಕ್ಕೆ ಸರ್ಕಾರ ಸ್ಪಂದಿಸಲಿ

Date:

ಇದೇ ಪರಿಸ್ಥಿತಿ ಮುಂದುವರಿದರೆ ಆಟೋ ಚಾಲಕರ ಕುಟುಂಬಗಳ ಪರಿಸ್ಥಿತಿ ಚಿಂತಾಜನಕವಾಗಲಿದೆ. ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಕ್ಕೆ ಮುಂದಾದರೂ ಅಚ್ಚರಿಯಿಲ್ಲ. ಚುನಾವಣೆಯಲ್ಲಿ ಹಣ ಹಂಚುವ ರಾಜಕಾರಣಿಗೆ ತಮ್ಮ ಕ್ಷೇತ್ರದ ಮತದಾರರು ಸಂಕಷ್ಟದಲ್ಲಿರುವಾಗ ಸ್ಪಂದಿಸುವ ಮೂಲಕ ನಿಜ ನಾಯಕರಾಗಬೇಕಿದೆ. ಸರ್ಕಾರ ತಕ್ಷಣ ಆಟೋ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯವಿದೆ.

- Advertisement -

ಫೆಬ್ರವರಿ 28ರಂದು ಶುರುವಾದ ಮಧ್ಯಪ್ರಾಚ್ಯ ಯುದ್ಧ ಹಲವು ದೇಶಗಳ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಯುದ್ಧ ನಡೆದ ದೇಶಗಳಲ್ಲಿ ಜೀವಹಾನಿ, ಆಸ್ತಿಪಾಸ್ತಿ ನಷ್ಟ ಒಂದು ಕಡೆಯಾದರೆ, ಯುದ್ಧದಲ್ಲಿ ಭಾಗಿಯಾಗದ ದೇಶಗಳ ಜನರೂ ಪರೋಕ್ಷವಾಗಿ ಕಷ್ಟ ನಷ್ಟಗಳಿಗೆ ತುತ್ತಾಗಿದ್ದಾರೆ. ಒಂದು ಕಡೆ ವಿಪರೀತ ಬೆಲೆ ಏರಿಕೆ, ಮತ್ತೊಂದು ಕಡೆ ಇಂಧನದ ಅಭಾವ. ಇವೆಲ್ಲದರ ಮಧ್ಯೆ ಹೋಟೆಲ್‌ ಉದ್ಯಮ, ಖಾಸಗಿ ಸಾರಿಗೆ ವ್ಯವಸ್ಥೆ ನೆಲಕಚ್ಚಿದೆ. ಸಾವಿರಾರು ಹೋಟೆಲ್‌ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಆಟೋ ಓಡಿಸಿ ಬದುಕುತ್ತಿದ್ದ ಕುಟುಂಬಗಳ ಸಂಕಟ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಗನಕ್ಕೇರಿದ ಅಕ್ಕಿ ಬೆಲೆ: ತತ್ತರಿಸಿದ ಬಡ, ಮಧ್ಯಮ ವರ್ಗದ...

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಕರಿಛಾಯೆ ಕೃಷಿ ಕ್ಷೇತ್ರವನ್ನು ತತ್ತರಿಸುವಂತೆ ಮಾಡಿದೆ. ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ನೂಕಿದ್ದ ಈ ಬರಗಾಲದ ಬಿಸಿ ಇದೀಗ ನೇರವಾಗಿ ಜನಸಾಮಾನ್ಯರ ತಟ್ಟೆಗೆ ತಟ್ಟಿದ್ದು, ಅಕ್ಕಿಯ...

ಬೆಳಗಾವಿ | ಬಿಸಿಲಿಗೂ ಕುಗ್ಗದೆ ಕಬ್ಬಿಗೆ ₹5500 ಬೆಲೆಗಾಗಿ...

ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕು, ಸಕ್ಕರೆಗೆ ಪ್ರತಿ ಕೆ.ಜಿ.ಗೆ ₹60 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕು ಹಾಗೂ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲೆಯ...

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ ಜಯಂತ್ ಪರ್ಮಾರ್ ಅವರ ಒಂದು ಉರ್ದು ಕವನದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ ಬೇವಿನ...

ಯುದ್ಧ ಆರಂಭವಾದ ಒಂದೇ ವಾರದಲ್ಲಿ ಆಟೋ ಗ್ಯಾಸ್‌ ಕೊರತೆ ಉಂಟಾಗಿತ್ತು. ಕರ್ನಾಟಕದಲ್ಲೂ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಲೂ ಆಟೋ ಗ್ಯಾಸ್‌ ಬಂಕ್‌ಗಳ ಮುಂದೆ ಮೈಲಿಗಟ್ಟಲೆ ಆಟೋಗಳು ಮಧ್ಯರಾತ್ರಿಯವರೆಗೆ ಸಾಲುಗಟ್ಟಿ ನಿಂತ ದೃಶ್ಯ ಸರ್ವೇಸಾಮಾನ್ಯವಾಗಿದೆ. ಅದರ ಜೊತೆಗೆ ದರ ಹೆಚ್ಚಳದ ಬಿಸಿಯೂ ಸೇರಿ ಆಟೋ ಚಾಲಕರ ಹೊಟ್ಟೆ ಮೇಲೆ ಹೊಡೆತ ಬಿದ್ದಿದೆ. ಯುದ್ಧ ಆರಂಭವಾಗುವುದಕ್ಕೂ ಮುನ್ನ ರೂ.69ರ ಆಸುಪಾಸು ಇದ್ದ ಗ್ಯಾಸ್‌ ದರ ಏಕಾಏಕಿ ಮನಬಂದಂತೆ ಏರಿಕೆ ಮಾಡಲಾಗಿದೆ. ರೂ.120ರವರೆಗೂ ಮಾರಾಟ ಮಾಡಲಾಗುತ್ತಿದೆ. ಇದು ನಿಜಕ್ಕೂ ಅಡಿಗೆ ಬಿದ್ದವನ ಮೇಲೆ ಆಳಿಗೊಂದು ಕಲ್ಲು ಎಂಬಂತಾಗಿದೆ. ಮೊದಲೇ ಗ್ಯಾಸ್‌ ಸಿಗದೇ ದಿನದ ದುಡಿಮೆ ಕಳೆದುಕೊಂಡಿದ್ದ ಚಾಲಕರಿಗೆ ಮತ್ತಷ್ಟು ಹೊರೆಯಾಗಿದೆ.

ಬೆಂಗಳೂರಿನಲ್ಲಿ ಮೆಟ್ರೋ ಶುರುವಾದಾಗ ಆಟೋ ಚಾಲಕರಿಗೆ ಹೊಡೆತ ಬೀಳಲಿದೆ ಎಂಬ ಆತಂಕ ಸೃಷ್ಟಿಯಾಗಿತ್ತು. ಮೂರು ವರ್ಷದ ಹಿಂದೆ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಶುರುವಾದಾಗ ಮತ್ತಷ್ಟು ಆತಂಕ ಶುರುವಾಗಿತ್ತು. ಆ ನಂತರ “ಬೈಕ್‌ ಟ್ಯಾಕ್ಸಿ ನಮ್ಮ ದುಡಿಮೆಗೆ ಕಲ್ಲು ಹಾಕಿದೆ” ಎಂಬ ಆರೋಪ ಕೇಳಿ ಬಂದಿತ್ತು. ಆದರೂ ಹೇಗೋ ಆಟೋ ಓಡಿಸಿ ಬದುಕು ನಡೆಸಿರುವ ವರ್ಗಕ್ಕೆ ಹೊಸ ಸವಾಲು ಎದುರಾಗಿದೆ. ಆದರೆ, ಚುನಾವಣೆಯ ಸಮಯದಲ್ಲಿ ಆಮಿಷವೊಡ್ಡಿ ಹಣ, ಸರಕುಗಳನ್ನು ಹಂಚುವ ರಾಜಕಾರಣಿಗಳು, ಶಾಸಕರು, ಸಂಸದರು ಮಂತ್ರಿಗಳು ಆಟೋ ಚಾಲಕರ ನೋವಿಗೆ ಸ್ಪಂದಿಸುತ್ತಿಲ್ಲ ಎಂಬುದು ನಿಜಕ್ಕೂ ದುಃಖದ ಸಂಗತಿ. ಗ್ಯಾಸ್‌ ಕೊರತೆಗೆ ರಾಜ್ಯ ಸರ್ಕಾರವಾಗಲಿ ಅಥವಾ ಜನ ಪ್ರತಿನಿಧಿಗಳಾಗಲಿ ಬದಲಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಆದರೆ, ಅವರ ಬದುಕಿಗೆ ನೆರವಾಗುವ ಮಾನವೀಯತೆ ತೋರುವ ಅಗತ್ಯವಿದೆ.

ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು, ಸಾಲ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿರುವ ಆಟೋ ಕುಟುಂಬಗಳು ಲಕ್ಷಾಂತರ ಇವೆ. ದಿನಕ್ಕೆ ಸಾವಿರ ರೂಪಾಯಿ ದುಡಿದರೆ ಅದರಲ್ಲಿ ಅರ್ಧದಷ್ಟು ಸಾಲಕ್ಕೆ, ಮನೆ ಖರ್ಚಿಗೆ ವ್ಯಯವಾಗುತ್ತದೆ. ಅದರ ಮಧ್ಯೆ ಕುಟುಂಬದ ನಿರ್ವಹಣೆ, ಮಕ್ಕಳ ಶಿಕ್ಷಣ ಮದುವೆ ಹೀಗೆ ನೂರೆಂಟು ಕರ್ತವ್ಯಗಳಿರುತ್ತವೆ. ಈಗ ದುಡಿಮೆ ನೆಲಕಚ್ಚಿದ ದುಃಸ್ಥಿತಿ ಬಂದೊದಗಿದೆ. ಮುಂದಿನ ತಿಂಗಳು ಮಕ್ಕಳಿಗೆ ಶಾಲೆಗಳಿಗೆ ದಾಖಲಾತಿ, ಪುಸ್ತಕ ಖರೀದಿ, ಫೀಸು ಹೀಗೆ ಹಣ ಹೊಂದಿಸಬೇಕಾದ ಅಗತ್ಯ. ದುಡಿಮೆಗೆ ಕಲ್ಲು ಬಿದ್ದ ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ಆಟೋ ಕುಟುಂಬಗಳ ನೆರವಿಗೆ ಧಾವಿಸಬೇಕಿದೆ. ಆ ಕುಟುಂಬಗಳ ಹಸಿವು ನೀಗಿಸುವ ಕೆಲಸವನ್ನಾದರೂ ಸರ್ಕಾರ ಮಾಡಬೇಕಿದೆ. ದಿನಸಿ ಕಿಟ್‌ಗಳನ್ನು ನೀಡುವ ಮೂಲಕ ಅಥವಾ ಹಣಕಾಸಿನ ಸಬ್ಸಿಡಿ ನೀಡುವ ಮೂಲಕ ಬಡ ಕುಟುಂಬಗಳ ರಕ್ಷಣೆಗೆ ಮುಂದಾಗಬೇಕಿದೆ. ಈಗಾಗಲೇ ಕೆಲವು ಖಾಸಗಿ ಸಂಸ್ಥೆಗಳು ವ್ಯಕ್ತಿಗಳು, ಸಿನಿಮಾ ನಟರು ಕೆಲವು ಕಡೆ ಕಿಟ್‌ ವಿತರಣೆ ಮಾಡಿದ್ದಾರೆ.

ಯುದ್ಧ ಆರಂಭಕ್ಕೂ ಮುನ್ನ ಬೆಂಗಳೂರು ನಗರವೊಂದಕ್ಕೆ ನಾಲ್ಕು ಟನ್‌ ಎಲ್‌ಪಿಜಿ ಪೂರೈಕೆಯಾಗುತ್ತಿತ್ತು. ಅದೀಗ ಎರಡು ಟನ್‌ಗೆ ಇಳಿದಿದೆ. ಪೂರೈಕೆ ಇಲ್ಲದ ಕಾರಣ ನಗರದಲ್ಲಿ ಅರ್ಧದಷ್ಟು ಬಂಕ್‌ಗಳು ಮುಚ್ಚಿವೆ. ಬಂಕ್‌ಗಳು ಸರ್ಕಾರ ನಿಗದಿ ಮಾಡಿದ ಬೆಲೆಗೆ ಮಾರಾಟ ಮಾಡುತ್ತಿಲ್ಲ. ದುಪ್ಪಟ್ಟು ಬೆಲೆಗೆ ಗ್ಯಾಸ್‌ ಹಾಕಿಸಿಕೊಂಡ ಚಾಲಕರು ಸಹಜವಾಗಿಯೇ ಪ್ರಯಾಣಿಕರಿಂದ ಹೆಚ್ಚು ಹಣ ನಿರೀಕ್ಷೆ ಮಾಡುತ್ತಾರೆ. ಹೆಚ್ಚು ಹಣ ತೆರಲಾಗದ ಮಂದಿ ಆಟೋ ಪ್ರಯಾಣವನ್ನು ತಗ್ಗಿಸಿದ್ದಾರೆ. ಗ್ಯಾಸ್‌ ಸಿಕ್ಕರೂ, ಗ್ರಾಹಕರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿಗದಿತ ದರಕ್ಕಿಂತ ಹೆಚ್ಚಿಗೆ ವಸೂಲಿ ಮಾಡುತ್ತಿರುವವರ ವಿರುದ್ಧ ಸರ್ಕಾರ ಯಾವ ಕ್ರಮವನ್ನೂ ಜರುಗಿಸುತ್ತಿಲ್ಲ. ಇತ್ತ ಆಟೋ ಚಾಲಕರ ನೆರವಿಗೂ ಬರುತ್ತಿಲ್ಲ. ಇದು ನಿಜಕ್ಕೂ ಅನ್ಯಾಯ.

ಯುದ್ಧ ಯಾವಾಗ ನಿಲ್ಲುತ್ತದೆ, ಯಾವಾಗ ಇಂಧನ ಪೂರೈಕೆ ಸಹಜ ಸ್ಥಿತಿಗೆ ಬರಲಿದೆ ಎಂಬುದು ಖಾತ್ರಿ ಇಲ್ಲ. ಸಹಜ ಸ್ಥಿತಿಗೆ ಬಂದರೂ ದುಡಿಮೆ ಇಲ್ಲದ ಈ ದಿನಗಳಲ್ಲಿ ಆದ ನಷ್ಟ ಸಾಲದ ರೂಪದಲ್ಲಿ ಕಾಡಲಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಆಟೋ ಚಾಲಕರ ಪರಿಸ್ಥಿತಿ ಚಿಂತಾಜನಕವಾಗಲಿದೆ. ಆತ್ಮಹತ್ಯೆಗಳಂತಹ ದುರಂತಗಳು ನಡೆಯಕೂಡದು. ಚುನಾವಣೆಯಲ್ಲಿ ಹಣ ಹಂಚುವ ರಾಜಕಾರಣಿಗೆ ತಮ್ಮ ಕ್ಷೇತ್ರದ ಮತದಾರರು ಸಂಕಷ್ಟದಲ್ಲಿರುವಾಗ ಸ್ಪಂದಿಸುವ ಮೂಲಕ ನಿಜ ನಾಯಕರಾಗಬೇಕಿದೆ. ಸರ್ಕಾರ ತಕ್ಷಣ ಆಟೋ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯವಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣ ವಚನ ಸ್ವೀಕಾರ

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅವರು ಶುಕ್ರವಾರ ಅಧಿಕಾರ...

ಅಂಟಾರ್ಕ್ಟಿಕದಲ್ಲಿ ಪೆಂಗ್ವಿನ್ ಎಣಿಸುವ ಅಪರೂಪದ ಉದ್ಯೋಗ: ಲಕ್ಷಗಳ ಸಂಭಾವನೆ, ಹೇಗಿರುತ್ತದೆ ಹಿಮದ ನಾಡಿನ ಬದುಕು?

ಜನಜಂಗುಳಿ, ಟ್ರಾಫಿಕ್ ಕಿರಿಕಿರಿ ಹಾಗೂ ದೈನಂದಿನ ಯಾಂತ್ರಿಕ ಬದುಕಿನಿಂದ ದೂರ ಸರಿದು,...

ಲಡಾಖ್ ನಾಯಕರ ಜೊತೆ ಕೇಂದ್ರದ ಮಾತುಕತೆ ಅಪೂರ್ಣ: ಅಕ್ಟೋಬರ್ 22ಕ್ಕೆ ಮುಂದಿನ ಸಭೆ

ಕೇಂದ್ರ ಗೃಹ ಸಚಿವಾಲಯ ಹಾಗೂ ಲಡಾಖ್‌ನ ಪ್ರಾತಿನಿಧಿಕ ಸಂಸ್ಥೆಗಳ ನಡುವೆ ಲೇಹ್‌ನಲ್ಲಿ...