ತಮಿಳುನಾಡು ಚುನಾವಣೆ | ಅಭಿಮಾನದ ಅಲೆಯಷ್ಟೇ ʼವಿಜಯʼಕ್ಕೆ ಸಾಕೆ?

Date:

ತಮಿಳುನಾಡಿನಲ್ಲಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷ 2026ರ ವಿಧಾನಸಭಾ ಚುನಾವಣೆಗೆ ಧುಮುಕಿರುವುದು ಈಗ ಸಿನೆಮಾ ನಂಟಿಗೆ ಮರುಜೀವ ನೀಡಿದೆ. ಡಿಎಂಕೆ ಪಕ್ಷಕ್ಕೆ ಉದಯನಿಧಿ ಸ್ಟ್ಯಾಲಿನ್ ಅವರನ್ನು ವಿಜಯ್ ಗೆ ಸರಿಸಾಟಿ ಎಂಬಂತೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಆದರೇ, ಅದು ನಿರೀಕ್ಷೆಯ ಮಟ್ಟ ತಲುಪಲಿಲ್ಲ.  ವಿಜಯ್ ನೇತೃತ್ವದ ಟಿವಿಕೆ ಸುಮಾರು ಶೇ. 10 ರಿಂದ 15ರಷ್ಟು ಮತ ಹಂಚಿಕೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದು ʼವಿಜಯʼಕ್ಕೆ ಸಾಕಾಗದೇ ಇರಬಹುದು, ಆದರೆ ʼಕಿಂಗ್ ಮೇಕರ್ʼ ಆಗಲು ಸಾಕಷ್ಟಾಯ್ತು.

ತಮಿಳುನಾಡಿನ ರಾಜಕೀಯ ತಮಿಳು ಅಸ್ಮಿತೆ, ಭಾಷಾಭಿಮಾನ, ಸಾಮಾಜಿಕ ಸಮಾನತೆ, ಜಾತಿ ಪದ್ಧತಿಯ ನಿರ್ಮೂಲನೆ ಮತ್ತು ಸಿನೆಮಾದೊಂದಿಗೆ ದಶಕಗಳ ನಂಟನ್ನು ಹೊಂದಿದೆ. ಇವೇ ತಮಿಳುನಾಡಿನ ರಾಜಕೀಯವನ್ನು ಪೊರೆಯುತ್ತಾ ಬಂದಿದೆ.

- Advertisement -

ತಮಿಳುನಾಡಿನ ರಾಜಕೀಯ ರಂಗಕ್ಕೆ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ 2026ರ ವಿಧಾನಸಭಾ ಚುನಾವಣೆಗೆ ಧುಮುಕಿರುವುದು ಈಗ ಸಿನೆಮಾ ನಂಟಿಗೆ ಮರುಜೀವ ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಗಗನಕ್ಕೇರಿದ ಅಕ್ಕಿ ಬೆಲೆ: ತತ್ತರಿಸಿದ ಬಡ, ಮಧ್ಯಮ ವರ್ಗದ...

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಕರಿಛಾಯೆ ಕೃಷಿ ಕ್ಷೇತ್ರವನ್ನು ತತ್ತರಿಸುವಂತೆ ಮಾಡಿದೆ. ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ನೂಕಿದ್ದ ಈ ಬರಗಾಲದ ಬಿಸಿ ಇದೀಗ ನೇರವಾಗಿ ಜನಸಾಮಾನ್ಯರ ತಟ್ಟೆಗೆ ತಟ್ಟಿದ್ದು, ಅಕ್ಕಿಯ...

ರಜನಿಕಾಂತ್ ಕೂಡ 2021ರಲ್ಲಿ ರಾಜಕೀಯಕ್ಕೆ ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಮನಸ್ಸು ಮಾಡಿರಲಿಲ್ಲ. 2016 ರಲ್ಲಿ ಜೆ. ಜಯಲಲಿತಾ ಮತ್ತು 2018ರಲ್ಲಿ ಎಂ. ಕರುಣಾನಿಧಿ ಅವರ ನಿಧನದ ಬಳಿಕ, ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳನ್ನು ಸಿನಿಮಾ ರಂಗದೊಂದಿಗೆ ಬಹಳ ದೊಡ್ಡ ನಂಟು ಇಲ್ಲದವರೇ ಮುನ್ನಡೆಸುತ್ತಿದ್ದಾರೆ. ಇದೇ ಕಾರಣದಿಂದ ವಿಜಯ್ ರಾಜಕೀಯ ಪ್ರವೇಶ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿತ್ತು. ಅವರ ರಾಜಕೀಯ ಪ್ರವೇಶದ ಪ್ರಾಥಮಿಕ ಹೆಜ್ಜೆಗಳಲ್ಲೇ ಅನೇಕ ಸವಾಲಗಳನ್ನು ಎದುರಿಸಬೇಕಾಯಿತು ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ.

ತಮಿಳು ಸಿನಿಮಾರಂಗದಲ್ಲಿ ಚಿತ್ರಕಥೆಗಾರರಾಗಿ ಸಿ.ಎನ್. ಅಣ್ಣಾದೊರೈ ಹಾಗೂ ಕರುಣಾನಿಧಿ ಅವರು, ಖ್ಯಾತಿ ಗಳಿಸಿದವರು. ಎಂಜಿಆರ್ ಎಂದೇ ಜನಪ್ರಿಯರಾಗಿದ್ದ ಎಂ.ಜಿ. ರಾಮಚಂದ್ರನ್ ಅವರೂ 1972ರ ವರೆಗೆ ಡಿಎಂಕೆ ಪಕ್ಷದಲ್ಲೇ ಇದ್ದವರು.

ಸಿನೆಮಾ ಖ್ಯಾತಿಯ ಜೊತೆಗೆ ತಮಿಳು ಅಸ್ಮಿತೆಗಾಗಿ ಧ್ವನಿ ಎತ್ತುವಲ್ಲೂ ಪ್ರಮುಖ ಪಾತ್ರವಹಿಸಿದರು. ಈ ಮೂಲಕವೇ ಸಾರ್ವಜನಿಕರಿಗೆ ಹತ್ತಿರವಾದರು. ಕರುಣಾನಿಧಿ ಅವರು, ಶಿವಾಜಿ ಗಣೇಶನ್, ಎಂಜಿಆರ್ ಅವರಂತಹ ನಟರನ್ನು ರಾಜಕೀಯ ನಾಯಕರನ್ನಾಗಿಸುವ ಪ್ರಭಾವಶಾಲಿ ಭಾಷಣ, ಸಂಭಾಷಣೆಗಳನ್ನು ಬರೆಯುವ ಕೆಲಸ ಮಾಡಿದ್ದರು.

ಜಯಲಲಿತ ಮತ್ತು ಕರುಣಾನಿಧಿ ಬಳಿಕ ಸಿನೆಮಾದ ನಂಟು ಕಳೆದುಕೊಂಡ ತಮಿಳು ರಾಜಕೀಯದಲ್ಲಿ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸಲು ಯತ್ನಿಸಿ ವಾಪಾಸ್ ಮರಳಿದರು, ಕಮಲ್ ಹಾಸನ್ ಯಶಸ್ಸು ಕಾಣಲಿಲ್ಲ.  ನಟರಾದ ವಿಜಯಕಾಂತ್, ಶರತ್ ಕುಮಾರ್, ಸೀಮನ್ ಅವರೂ ರಾಜಕೀಯದಲ್ಲಿ ಛಾಪು ಮೂಡಿಸಲು ಪ್ರಯತ್ನಿಸಿದ್ದರು. ಈ ಪೈಕಿ, ವಿಜಯಕಾಂತ್ ಅವರಷ್ಟೇ ಅಲ್ಪಮಟ್ಟಿನ ಯಶಸ್ಸು ಸಾಧಿಸಿದ್ದರು. ಅವರ ‘ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ’ (ಡಿಎಂಡಿಕೆ), ಆರಂಭದಲ್ಲಿ ಅಲ್ಪ ಮಟ್ಟಿಗೆ ಯಶಸ್ಸು ಕಂಡಿತ್ತು. ವಿಜಯಕಾಂತ್ ನಿಧನದ ನಂತರ (2023ರಲ್ಲಿ) ಪಕ್ಷದ ಹೊಣೆ ಹೊತ್ತುಕೊಂಡಿರುವ ಅವರ ಪತ್ನಿ ಪ್ರೇಮಲತಾ, ಡಿಎಂಕೆಗೆ ಬೆಂಬಲ ಘೋಷಿಸಿದ್ದಾರೆ. ಸೀಮನ್ ಅವರ ಎನ್ಟಿಕೆ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುತ್ತಿದೆ. ಆದರೇ, ವಿಜಯ್ ಸದ್ದು ಮಾಡಿದಷ್ಟು ಮಾಡುತ್ತಿಲ್ಲ. ಡಿಎಂಕೆ ಪಕ್ಷಕ್ಕೆ ಉದಯನಿಧಿ ಸ್ಟ್ಯಾಲಿನ್ ಅವರನ್ನು ವಿಜಯ್ ಗೆ ಸರಿಸಾಟಿ ಎಂಬಂತೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಆದರೇ, ಅದು ನಿರೀಕ್ಷೆಯ ಮಟ್ಟ ತಲುಪಲಿಲ್ಲ. 

ವಿಜಯ್ ಅನೇಕ ಏಳುಬೀಳುಗಳ ನಡುವೆ ರಾಜಕೀಯದಲ್ಲಿ ಸಾಧಿಸಿಯೇ ತಿರುತ್ತೇನೆ ಎಂದು ದ್ರಾವಿಡ ಪಕ್ಷಗಳ ಮುಂದೆ ತೊಡೆ ತಟ್ಟಿ ನಿಂತಿದ್ದರೂ, ತಮಿಳು ಅಸ್ಮಿತೆಯ ಧ್ವನಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ರಾಜಕೀಯದಲ್ಲಿ ಉಳಿದ ಪಕ್ಷಗಳು ಮಾಡುತ್ತಿರುವ ತೀರಾ ಸಾಮಾನ್ಯ ತಂತ್ರಗಾರಿಕೆಯಂತೆಯೇ ವಿಜಯ್ ಅವರ ಟಿವಿಕೆ ಕೂಡ ಮಾಡುತ್ತಿದೆ.

ಮಹಿಳೆಯರ ಓಲೈಕೆಗೆ ಯತ್ನ

ಟಿವಿಕೆ ಪಕ್ಷದ ಪ್ರಣಾಳಿಕೆಯಲ್ಲಿ ಮಹಿಳೆಯರಿಗಾಗಿ ಆರ್ಥಿಕ ನೆರವು ಮತ್ತು ಸುರಕ್ಷತೆಯ ಭರವಸೆಗಳನ್ನು ನೀಡಲಾಗಿದೆ. ಸರ್ಕಾರಿ ಶಾಲಾ ಮಕ್ಕಳ ತಾಯಂದಿರಿಗೆ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ವಾರ್ಷಿಕ 15,000 ರೂ. ಸಹಾಯಧನ. 60 ವರ್ಷದ ಒಳಗಿನ ಅರ್ಹ ಮಹಿಳೆಯರಿಗೆ (ಸರ್ಕಾರಿ ನೌಕರರ ಕುಟುಂಬ ಹೊರತುಪಡಿಸಿ) ಪ್ರತಿ ತಿಂಗಳು 2,500 ರೂ. ಆರ್ಥಿಕ ಸಹಾಯ. ತಮಿಳುನಾಡಿನಾದ್ಯಂತ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣ. ಬಡ ಕುಟುಂಬದ ಹೆಣ್ಣುಮಕ್ಕಳ ಮದುವೆಗೆ 8 ಗ್ರಾಂ ಚಿನ್ನ ಮತ್ತು ಗುಣಮಟ್ಟದ ರೇಷ್ಮೆ ಸೀರೆಯನ್ನು ನೀಡುವ ಭರವಸೆ. ಮಹಿಳಾ ಸ್ವಸಹಾಯ ಸಂಘಗಳಿಗೆ  5 ಲಕ್ಷದವರೆಗೆ ಬಡ್ಡಿರಹಿತ ಸಾಲ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 6 ಉಚಿತ ಎಲ್ಪಿಜಿ ಸಿಲಿಂಡರ್ ವಿತರಣೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ‘ರಾಣಿ ವೇಲು ನಾಚಿಯಾರ್ ಪಡೆ’ ಎಂಬ ವಿಶೇಷ ಮಹಿಳಾ ಪೊಲೀಸ್ ಪಡೆಯ ರಚನೆ ಮತ್ತು ತುರ್ತು ಸಂದರ್ಭಗಳಿಗಾಗಿ ‘ಸ್ಮಾರ್ಟ್ ಪ್ಯಾನಿಕ್ ಬಟನ್’ ಅಳವಡಿಕೆಯಂತಹ ಭರವಸೆಗಳನ್ನು ನೀಡಲಾಗಿದೆ. ಇವೆಲ್ಲಾ ಇತರೆ ಪಕ್ಷಗಳ ನಕಲಿ ಎಂದೇ ಕಾಣಿಸುತ್ತಿದೆ ಹೊರತು, ಹೊಸತನ ಕಾಣಿಸುತ್ತಿಲ್ಲ. ಸಣ್ಣ ಮತ ಪ್ರಮಾಣವನ್ನು ಸೆಳೆಯಬಹುದು ವಿನಃ ದೊಡ್ಡ ಬದಲಾವಣೆಗೆ ಇದು ಸಾಕ್ಷಿಯಾಗುತ್ತದೆ ಎನ್ನುವ ವಾತಾವರಣ ಕಾಣಿಸುತ್ತಿಲ್ಲ. ಇಷ್ಟಾಗ್ಯೂ, ಟಿವಿಕೆ ಸೆಳೆಯುವ ಶೇ. 8-10ರಷ್ಟು ಮತಪ್ರಮಾಣವೂ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ಹೊಡೆತ ನೀಡಬಹುದು ಎನ್ನುವುದರಲ್ಲಿ ಅನುಮಾನವಿಲ್ಲ.

ಸಿನೆಮಾ ಅಭಿಮಾನ ಮತ್ತು ಸಂಘಟನೆಗಳು

ವಿಜಯ್ ಅವರ ರಾಜಕೀಯ ಯಶಸ್ಸಿನಲ್ಲಿ ಅವರ ಅಭಿಮಾನಿ ಸಂಘಟನೆಯಾದ ವಿಜಯ್ ಮಕ್ಕಳ್ ಇಯಕ್ಕಂ (VMI) ಪಾತ್ರ ಬಹಳ ದೊಡ್ಡದಿದೆ.  ವಿಜಯ್ ಅವರಿಗೆ ರಾಜ್ಯದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇವರು ಕೇವಲ ಅಭಿಮಾನಿಗಳಾಗಿ ಉಳಿಯದೆ, ಮನೆಮನೆಗೆ ಭೇಟಿ ನೀಡಿ ಪಕ್ಷದ ಸಿದ್ಧಾಂತ ಮತ್ತು ಗ್ಯಾರಂಟಿಗಳನ್ನು ತಲುಪಿಸುವ ‘ಕಾರ್ಯಕರ್ತರಾಗಿ’ ದುಡಿಯುತ್ತಿದ್ದಾರೆ.

ಈಗಾಗಲೇ ಟಿವಿಕೆ ಪಕ್ಷ ಡಿಜಿಟಲ್ ಸದಸ್ಯತ್ವ ಅಭಿಯಾನದ ಮೂಲಕ ಕೋಟ್ಯಂತರ ಜನರನ್ನು ತಲುಪಿದೆ. ಇದಕ್ಕೆ ಅಭಿಮಾನಿ ಸಂಘಗಳೇ ಬೆನ್ನೆಲುಬಾಗಿ ನಿಂತಿವೆ. ಮೊದಲ ಬಾರಿಗೆ ಮತದಾನ ಮಾಡುವ ಯುವಕರಲ್ಲಿ ವಿಜಯ್ ಮೇಲೆ ಇರುವ ಕ್ರೇಜ್ ಅನ್ನು ಮತಗಳಾಗಿ ಪರಿವರ್ತಿಸಲು ಈ ಸಂಘಟನೆಗಳು ಕೆಲಸ ಮಾಡುತ್ತಿವೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಮತದಾರರ (18-19 ವರ್ಷದವರು) ಸಂಖ್ಯೆ ಸರಿಸುಮಾರು 12.5 ಲಕ್ಷ. ಸರಿಸುಮಾರು 1 ಕೋಟಿಯಷ್ಟು 20-29ರ ವಯಸ್ಸಿನ ಮತದಾರರಿದ್ದಾರೆ.  2.89 ಕೋಟಿಯಷ್ಟು ಮಹಿಳಾ ಮತದಾರರಿದ್ದಾರೆ.  ತಮಿಳುನಾಡಿನಲ್ಲಿರುವ ಒಟ್ಟು 5.67 ಕೋಟಿಯಷ್ಟಿರುವ ನೋಂದಾಯಿತ ಮತದಾರರಲ್ಲಿ ಕನಿಷ್ಟ ಶೇ. 5-8 ಮತ ಸೆಳೆದರೂ ಡಿಎಂಕೆ, ಎಐಎಡಿಎಂಕೆ ಪಕ್ಷಗಳಿಗೆ ಹೊಡೆತ ನೀಡಬಹುದು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ, ವಿಜಯ್ ನೇತೃತ್ವದ ಪಕ್ಷಕ್ಕೆ ಸ್ಪಷ್ಟ ಸಿದ್ಧಾಂತ, ನಿಲುವು ಇಲ್ಲದಿರುವುದು ಮತ್ತು ಕ್ಷೇತ್ರ ಮರುವಿಂಗಡಣೆಯಂತಹ ವಿಷಯಗಳ ಬಗ್ಗೆ ಧ್ವನಿ ಎತ್ತದೆ ಇರುವುದು ತಮಿಳಿಗರಲ್ಲಿ ನಂಬಿಕೆ ಹುಟ್ಟಿಸುತ್ತಿಲ್ಲ ಎನ್ನುವ ಅಭಿಪ್ರಾಯವೂ ಇದೆ.

ಇದನ್ನೂ ಓದಿ : ನಗೆಮೊಗದಿಂದಲೇ ಎದುರಾಳಿಗಳನ್ನು ಕಟ್ಟಿಹಾಕುವ ಪ್ರಿಯಾಂಕಾ ಗಾಂಧಿ; ಲೋಕಸಭೆಯಲ್ಲಿ ಇರಿದ ‘ಮಧುರ ಚೂರಿ’ಯ ವಾಗ್ದಾಳಿ!

ಇನ್ನು, ಅಭಿಮಾನದ ಅಲೆಯನ್ನು ‘ಮತ’ಗಳಾಗಿ ಪರಿವರ್ತಿಸುವುದು ಅವರಿಗೆ ಇರುವ ದೊಡ್ಡ ಸವಾಲು. ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು ಹಲವು ಯೋಜನೆಗಳನ್ನು ಮುಂದಿಟ್ಟಿದ್ದಾರೆ. ತಮ್ಮ ಅಭಿಮಾನಿ ಸಂಘಟನೆಯನ್ನೇ ರಾಜಕೀಯ ಶಕ್ತಿಯನ್ನಾಗಿ ಬಳಸುತ್ತಿದ್ದಾರೆ. ಆದರೇ, ಸಂಘಟನೆಯಲ್ಲಿರುವವರು ಯಾರು ಕ್ಷೇತ್ರವಾರು ಪಕ್ಷದ ಕಾರ್ಯಕರ್ತರಲ್ಲ. ಹಾಗಾಗಿ ರಾಜಕೀಯದ ಕಾರ್ಯಕರ್ತರ ಕೊರತೆ ಟಿವಿಕೆ ಎದುರಿಸುತ್ತಿದೆ.

ಈ ನಡುವೆ ವಿಜಯ್ ಅವರ ಭರವಸೆಗಳನ್ನು ತಮಿಳುನಾಡಿನ ಜನರು ಎಷ್ಟು ಮಟ್ಟಿಗೆ ಒಪ್ಪುತ್ತಾರೆ ಎಂಬುದು 2026ರ ಚುನಾವಣೆಯ ಅತ್ಯಂತ ಕುತೂಹಲಕಾರಿ ಪ್ರಶ್ನೆ. ತಮಿಳುನಾಡು ಈಗಾಗಲೇ ಸಾಲದ ಸುಳಿಯಲ್ಲಿದೆ(9.52 ಲಕ್ಷ ಕೂಟಿ ರೂ.). ವಿಜಯ್ ಘೋಷಿಸಿರುವ ಈ ಭಾರಿ ಪ್ರಮಾಣದ ಉಚಿತ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂಬ ತಾಂತ್ರಿಕ ಪ್ರಶ್ನೆ ಸುಶಿಕ್ಷಿತ ಮತದಾರರಲ್ಲಿರುತ್ತದೆ.

ಇನ್ನು, ಡಿಎಂಕೆ ಮತ್ತು ಎಐಎಡಿಎಂಕೆ ತಳಮಟ್ಟದಲ್ಲಿ ಅತ್ಯಂತ ಬಲಿಷ್ಠವಾದ ಸಂಘಟನಾ ಶಕ್ತಿಯನ್ನು ಹೊಂದಿವೆ. ಕೇವಲ ‘ಅಭಿಮಾನ’ ಮತಗಳಾಗಿ ಬದಲಾಗುತ್ತದೆಯೇ ಎಂಬುದು ದೊಡ್ಡ ಪ್ರಶ್ನೆ. ತಮಿಳು ಜನರು ಸಿನಿಮಾ ತಾರೆಗಳನ್ನು ದೇವರೆಂದು ಆರಾಧಿಸುತ್ತಾರೆ ನಿಜ, ಆದರೆ ಮತ ಹಾಕುವಾಗ ಅವರು ಬಹಳ ಪ್ರಾಯೋಗಿಕವಾಗಿ ಯೋಚಿಸುತ್ತಾರೆ. ಎಂಜಿಆರ್ ಮತ್ತು ಜಯಲಲಿತಾ ಅವರು ಯಶಸ್ವಿಯಾಗಿದ್ದು ಕೇವಲ ನಟರಾಗಿದ್ದಕ್ಕಷ್ಟೇ ಅಲ್ಲ, ಜನಪರ ಧ್ವನಿಯಾಗಿ, ತಮಿಳು ಅಸ್ಮಿತೆಗಾಗಿ ಕೆಲಸ ಮಾಡಿದ್ದಕ್ಕಾಗಿ ಎನ್ನುವುದು ಇಲ್ಲಿ ಉಲ್ಲೇಖನೀಯ. 

ಒಟ್ಟಿನಲ್ಲಿ, ಕೆಲವು ಸಮೀಕ್ಷೆಗಳ ಪ್ರಕಾರ, ವಿಜಯ್ ನೇತೃತ್ವದ ಟಿವಿಕೆ ಸುಮಾರು ಶೇ. 10 ರಿಂದ 15ರಷ್ಟು ಮತ ಹಂಚಿಕೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದು ʼವಿಜಯʼಕ್ಕೆ ಸಾಕಾಗದೇ ಇರಬಹುದು, ಆದರೆ ʼಕಿಂಗ್ ಮೇಕರ್ʼ ಆಗಲು ಸಾಕಷ್ಟಾಯ್ತು ಎನ್ನುವುದು ಇಲ್ಲಿ ಮುಖ್ಯಾಂಶ.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ ಮೋದಿ ಪ್ರಚಾರ ನಡೆಸಿದರೆ ಶಿಷ್ಟಾಚಾರವೇ?

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...