ಈ ದಿನ ಸಂಪಾದಕೀಯ | ಹಳಿ ತಪ್ಪಿದ ಕೇಂದ್ರದ ಉದ್ಯಮ ನೀತಿ

Date:

ಕೇಂದ್ರ ಸರ್ಕಾರಕ್ಕೆ ಹನ್ನೆರಡು ವರ್ಷದ ಸುದೀರ್ಘ ಅವಧಿಯ ಆಡಳಿತದ ನಂತರ ತನ್ನ ಕೈಗಾರಿಕೋದ್ಯಮ ನೀತಿಯ ಬಗ್ಗೆ ಅಪನಂಬಿಕೆ ಬಂದಂತೆ ಕಾಣಿಸುತ್ತಿದೆ. ಆಡಳಿತಾರೂಢ ವ್ಯವಸ್ಥೆಯು ತನ್ನ ಲೋಪವನ್ನು ತಾನೇ ಒಪ್ಪಿಕೊಳ್ಳುವಂತಾಗಿದೆ. ಹಾಗೆಯೇ ತನ್ನ ನೀತಿಯ ಬಗ್ಗೆ ಮರುಚಿಂತನೆ ನಡೆಸುವ ಸ್ಥಿತಿ ಎದುರಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಸ್ತಿತ್ವಕ್ಕೆ ಬಂದ ಮೇಲೆ ಕೈಗಾರಿಕೋದ್ಯಮಿಗಳ ಪರವಾದ ನಿಲುವು ತಳೆದದ್ದು ಗುಟ್ಟಿನ ಸಂಗತಿಯೇನಲ್ಲ. ಬೃಹತ್ ಪ್ರಮಾಣದ ತೆರಿಗೆ ವಿನಾಯತಿಯೂ ಸೇರಿದಂತೆ ಹಲವು ಬಗೆಯಲ್ಲಿ ನೆರವಾಗುವ ನೀತಿ ನಿಯಮಾವಳಿಗಳನ್ನು ರೂಪಿಸಿ ಜಾರಿಗೆ ತಂದಿತು. ಪಡೆಯುವದನ್ನು ಮಾತ್ರ ಅರಿತಿರುವ ಭಾರತೀಯ ಉದ್ಯಮಿಗಳಿಗೆ ಮರಳಿ ನೀಡುವ ಅರಿವು – ಹೊಣೆಗಾರಿಕೆ ಇಲ್ಲ ಎಂಬುದು ಸರ್ಕಾರಕ್ಕೆ ತಡವಾಗಿಯಾದರೂ ಗೊತ್ತಾಗಿದೆ. ಪ್ರಧಾನಿ ಮೋದಿ ಅವರಿಗೆ ಆಗಿರುವ ಈ ‘ಜ್ಞಾನೋದಯ’ ಅವರು ಆಡಿರುವ ಮಾತುಗಳಿಂದ ಸ್ಪಷ್ಟವಾಗುತ್ತಿದೆ. ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳ ಒಕ್ಕೂಟ (FICCI -Federation of Indian Chamber of Commerce and Industry)ದ ಸಭೆಯಲ್ಲಿ ಆಡಿರುವ ಮಾತುಗಳು ಮೇಲ್ನೋಟಕ್ಕೆ ‘ತರಾಟೆ’ ತೆಗೆದುಕೊಳ್ಳುವ ರೀತಿಯವು ಅನ್ನಿಸಿದರೂ ವಾಸ್ತವವಾಗಿ ಅವು ಹತಾಶೆ ಮತ್ತು ತಪ್ಪೊಪ್ಪಿಗೆಯ ಮಾತುಗಳೇ ಆಗಿವೆ.

- Advertisement -

ಉದ್ಯಮಗಳ ಅಭಿವೃದ್ಧಿಗಾಗಿ ತೆರಿಗೆಯ ದರವನ್ನು 30%ನಿಂದ 22%ಗೆ ಇಳಿಸಿದ ಕೇಂದ್ರ ಸರ್ಕಾರವು ಕೈಗಾರಿಕಾ ಸಾಮರ್ಥ್ಯ ವಿಸ್ತರಣೆ ಮತ್ತು ಜಾಗತಿಕ ಉತ್ಪಾದನಾ ತಾಣವಾಗಿ ಭಾರತವನ್ನು ಬಲಪಡಿಸುವ ಉದ್ದೇಶದಿಂದ ಹೊಸ ಉತ್ಪಾದನಾ ಕಂಪೆನಿಗಳಿಗೆ 15%ರಷ್ಟು ತೆರಿಗೆ ವಿನಾಯತಿ ಘೋಷಿಸಿತ್ತು. ಅದರ ಜೊತೆಗೆ ಹನ್ನೆರಡು ಲಕ್ಷ ರೂಪಾಯಿಗಳವರೆಗೆ ಗಳಿಸುವ ಉದ್ಯಮಿಗಳಿಗೆ ಶೂನ್ಯ ತೆರಿಗೆ ಅಥವಾ ತೆರಿಗೆ ವಿನಾಯತಿ ನೀಡಲಾಗಿತ್ತು. ಹಾಗೆಯೇ ಹಲವು ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿನಾಯತಿ ನೀಡುವುದು ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿತ್ತು. ಕೈಗಾರಿಕೋದ್ಯಮಿಗಳಿಗೆ ನೆರವು ನೀಡುವ ಮೂಲಕ ಉದ್ಯಮ ಕ್ಷೇತ್ರ ಬಲವಾದರೆ ಅದರ ಲಾಭ ದೇಶಕ್ಕೆ ಮರಳಿ ಬರುತ್ತದೆ ಎಂದು ಸರ್ಕಾರ ಭಾವಿಸಿತ್ತು. ಉದ್ಯಮಗಳು ದುಡಿಯುವ ಕೈಗಳಿಗೆ ಕೆಲಸ ನೀಡುವುದು ಹಾಗೂ ಕೆಲಸಗಾರರ ವೇತನ ಹೆಚ್ಚಿಸುವ ಮೂಲಕ ಪರೋಕ್ಷವಾಗಿ ದೇಶದ ಆರ್ಥಿಕತೆ ಬಲಪಡಿಸಲು ನೆರವಾಗಬಹುದು ಎಂದು ಸರ್ಕಾರ ಅಂದಾಜಿಸಿತ್ತು. ಆದರೆ, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯು ಸರ್ಕಾರವು ಆತಂಕ ಪಡುವ ಹಂತಕ್ಕೆ ಬೆಳೆದು ನಿಂತಿದೆ. ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಉದ್ಯಮಿಗಳು ಹಾಗೂ ಸರ್ಕಾರಗಳು ವಿಫಲವಾಗಿವೆ. ಹೊಸ ಕೆಲಸ ಹುಟ್ಟಿಸುವುದಿರಲಿ ಇರುವ ಕೆಲಸಗಳೇ ಇಲ್ಲವಾಗುತ್ತಿರುವ ಸ್ಥಿತಿ ಬಂದಿರುವುದು ಸಹಜವಾಗಿಯೇ ಸರ್ಕಾರ ಕಂಗೆಡುವಂತೆ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಸವಣ್ಣನವರಿಂದ ಗಾಂಧಿಯವರೆಗೆ: ಆಯ್ದ ಕಥನಗಳ ಮೂಲಕ ಇತಿಹಾಸವನ್ನು ತಿರುಚುವ...

ಇತಿಹಾಸವನ್ನು ವಿಮರ್ಶಿಸುವ ಹಕ್ಕು ಎಲ್ಲರಿಗೂ ಇದೆ; ಆದರೆ ಇತಿಹಾಸವನ್ನು ತಿರುಚುವ ಹಕ್ಕು ಯಾರಿಗೂ ಇಲ್ಲ. ಬಸವಣ್ಣನವರನ್ನು ವೈದಿಕ ಚೌಕಟ್ಟಿಗೆ ಸೀಮಿತಗೊಳಿಸುವುದಾಗಲಿ, ಗಾಂಧಿಯವರ ಹತ್ಯೆಯನ್ನು ಗೋಡ್ಸೆಯ ಸಮರ್ಥನೆಯ ಮೂಲಕ ನ್ಯಾಯೀಕರಿಸುವುದಾಗಲಿ ಇತಿಹಾಸದ ಸಮಗ್ರ ಅಧ್ಯಯನಕ್ಕೆ...

ಕೋಲಾರ ಕ್ಲಾಕ್ ಟವರ್ ವಿವಾದ: ಜಿಲ್ಲಾಡಳಿತದ ನಿರ್ಧಾರದತ್ತ ಜನರ...

ಕೋಲಾರ ನಗರದ ಇತಿಹಾಸ ಪ್ರಸಿದ್ಧ ಕ್ಲಾಕ್‌ ಟವರ್‌ನಲ್ಲಿ ಸಂಸದರ ಅನುದಾನದಲ್ಲಿ ಅಳವಡಿಸಲಾಗುತ್ತಿರುವ ಎಚ್‌ಎಂಟಿ ಗಡಿಯಾರದಲ್ಲಿ ಸಂಸದ ಮಲ್ಲೇಶ್‌ ಬಾಬು ಹೆಸರಿರಬೇಕೋ, ಬೇಡವೋ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಚರ್ಚೆ ಈಗ ವಿವಾದದ...

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಹಾಗೆಯೇ, ಈಗಾಗಲೇ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ವೇತನ ಪ್ರಮಾಣದಲ್ಲಿ ಬದಲಾವಣೆ – ಬೆಳವಣಿಗೆ ಆಗದಿರುವುದು ಕೂಡ ಸರ್ಕಾರವು ಉದ್ಯಮಿಗಳೆಡೆಗೆ ಹತಾಶೆಯಿಂದ ಮುಖ ಮಾಡುವಂತೆ ಮಾಡಿದೆ.

ಕೋವಿಡ್ ದಿನಗಳಲ್ಲಿ ಕುಸಿದಿದ್ದ ಉದ್ಯಮ ಕ್ಷೇತ್ರವು ನಂತರದ ದಿನಗಳಲ್ಲಿ ಚೇತರಿಕೆ ಕಂಡಿದೆ. 2024ರ ಆರ್ಥಿಕ ವರ್ಷದಲ್ಲಿ ಕಾರ್ಪೋರೇಟ್ ಲಾಭವು 22.3%ರಷ್ಟು ಹೆಚ್ಚಿದರೂ ಉದ್ಯೋಗವು ಕೇವಲ 1.5%ರಷ್ಟು ಮಾತ್ರ ಹೆಚ್ಚಿದೆ ಎನ್ನುವುದು ಪ್ರಧಾನಿಗಳ ಆತಂಕ -ಆಕ್ಷೇಪಗಳಿಗೆ ಕಾರಣವಾಗಿದೆ.

ಈ ಲೇಖನ ಓದಿದ್ದೀರಾ?: ಕರ್ನಾಟಕದ ಮತಪಟ್ಟಿಯಿಂದ ಒಬ್ಬ ಅರ್ಹ ಮತದಾರನನ್ನೂ ಕೈಬಿಟ್ಟಿಲ್ಲವೇ? ವಾಸ್ತವ ಬೇರೆಯೇ ಇದೆ

ದೊಡ್ಡ ಉದ್ಯಮಿಗಳ ಪರವಾದ ಸರ್ಕಾರದ ನಿಲುವು ಮತ್ತು ನೀತಿಗಳು ಸಣ್ಣ ಉದ್ಯಮಗಳ ಬೆಳವಣಿಗೆಗೆ ಅಡ್ಡಿಯಾಯಿತು. ಅದರ ಜೊತೆಯಲ್ಲಿಯೇ ಪ್ರಧಾನಿಯವರ ಸಂಜೆ ಎಂಟರ ಸಾರ್ವಜನಿಕ ಘೋಷಣೆಯ ಮೂಲಕ ಹೇರಿದ ನೋಟು ಅಮಾನ್ಯೀಕರಣ ಕೂಡ ಸಣ್ಣ ಮತ್ತು ಮಧ್ಯಮಗಾತ್ರದ ಉದ್ಯಮಗಳ ಬೆನ್ನುಮೂಳೆ ಮುರಿಯಲು ಕಾರಣವಾಯಿತು.

ಸರ್ಕಾರದ ನೆರವು ಪಡೆಯಲು ಆಸಕ್ತಿ ತೋರಿದ ಉದ್ಯಮಿಗಳು, ಅದರಿಂದ ಪಡೆದ ಲಾಭವನ್ನು ದುಡಿದ ಸಿಬ್ಬಂದಿಗಳ ವೇತನ ಹೆಚ್ಚಳ ಮಾಡಲು ಬಳಸಲಿಲ್ಲ. ಹಾಗೆಯೇ ಹೊಸ ಉದ್ಯೋಗಗಳ ಸೃಷ್ಟಿ ಕೂಡ ಸಾಧ್ಯವಾಗಲಿಲ್ಲ. ಇದೆಲ್ಲದರ ಒಟ್ಟು ಪರಿಣಾಮವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಆರ್ಥಿಕ ಬೆಳವಣಿಗೆ ಸಾಧ್ಯವಾಗಲಿಲ್ಲ. ‘ಊರು ಕೊಳ್ಳೆ ಹೋದಮೇಲೆ ದಿಡ್ಡಿ ಬಾಗಿಲು ಹಾಕಿದಂತೆ’ ಈಗ ಪ್ರಧಾನಿಗಳು ಮಾತನಾಡುತ್ತಿದ್ದಾರೆ. ದೂರದೃಷ್ಟಿಯಿಲ್ಲದ, ಆರ್ಥಿಕ ಬೆಳವಣಿಗೆಯನ್ನ ಗಮನದಲ್ಲಿಟ್ಟುಕೊಳ್ಳದ ಕೇಂದ್ರದ ನೀತಿಗಳೇ ಇದಕ್ಕೆ ಕಾರಣ.

‘ಎಲ್ಲ ನಾನೇ ಮಾಡಿದರೆ ನೀವೇನು ಮಾಡುವಿರಿ?’ ಎಂದು ಪ್ರಧಾನಿಗಳು ಉದ್ಯಮಿಗಳನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ಬೆಯಲ್ಲಿ ಹುರುಳಿಲ್ಲದೇ ಇಲ್ಲ. ಸರ್ಕಾರದ ನೆರವು ಪಡೆದ ಉದ್ಯಮಿಗಳು ಅದಕ್ಕೆ ಪ್ರತಿಕ್ರಿಯೆಯಾಗಿ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ರೀತಿಯಲ್ಲಿ ವರ್ತಿಸಬೇಕು ಎಂದು ನಿರೀಕ್ಷಿಸುವುದರಲ್ಲಿ ತಪ್ಪೇನಿಲ್ಲ. ಈ ಎಚ್ಚರಿಕೆಯನ್ನು ಪ್ರಧಾನಿಯವರು ಮುಂಚಿತವಾಗಿಯೇ ವಹಿಸಿದ್ದರೆ ಒಳ್ಳೆಯದಿತ್ತು. ಪ್ರಧಾನಿಯವರ ಮಾತುಗಳು ಉದ್ಯಮ ಕ್ಷೇತ್ರದ ಬಗ್ಗೆ ಸರ್ಕಾರ ತಳೆದ ಧೋರಣೆಯ ಬಗೆಗಿನ ತಪ್ಪೊಪ್ಪಿಗೆಯಂತೆ ಕೇಳಿಸುವ – ಕಾಣಿಸುವ ಪ್ರಸಂಗ ಎದುರಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಈಗ ಕಳೆದುಹೋಗಿರುವ ಕಾಲದ ಅವಧಿಯನ್ನೇ ಉತ್ತಮ ಪಡಿಸುವ ಅವಕಾಶ ವಂಚಿತರಾಗ ಬೇಕಾಯಿತು. ಅದಕ್ಕಿಂತ ಹೆಚ್ಚಾಗಿ ಸರ್ಕಾರದ ಲೋಪದಿಂದಾಗಿ ಪ್ರಜೆಗಳು ಲಾಭ ವಂಚಿತರಾಗಬೇಕಾಯಿತು. ಮೊದಲು ನಿರ್ಣಯ, ಆ ನಂತರ ಅದಕ್ಕೆ ಅನುಗುಣವಾದ ನೀತಿ ನಿರೂಪಣೆ ಎಂಬ ಧೋರಣೆಯು ಪ್ರಜೆಗಳಿಗೆ ಸಂಕಷ್ಟವನ್ನೇ ತಂದಿದೆ-ತರುತ್ತಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾ; ಶರಣಾಗಲು ಸುಪ್ರೀಂ ಸೂಚನೆ

ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ ಅವರಿಗೆ...

ಚಾಮರಾಜನಗರ |ನ. 26ರಂದು ಸಂವಿಧಾನ ದಿನಾಚರಣೆ : ಜನರ ಧ್ವನಿ ಕಾರ್ಯಕ್ರಮ

ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಹೋರಾಟ ಚಾಲನಾ ಸಮಿತಿ ಮತ್ತು...

ಹಾವೇರಿ | ಶಾಸಕರಿಂದ ವರ್ದಿ ಗ್ರಾಮದ ಸರ್ಕಾರಿ ಶಾಲೆಗೆ ₹2.8 ಲಕ್ಷದ ಸಾಮಗ್ರಿ ವಿತರಣೆ

ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಶ್ರೀನಿವಾಸ ಮಾನೆ ಅವರ...

ಪಶ್ಚಿಮ ಬಂಗಾಳ | ಮತಪಟ್ಟಿಯಲ್ಲಿ ತಂದೆ ಹೆಸರಿಲ್ಲವೆಂದು ಹಸುಗೂಸಿಗೆ ಜನನ ಪ್ರಮಾಣಪತ್ರ ನಿರಾಕರಣೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ತಂದೆಯ ಹೆಸರು...