ಈ ದಿನ ಸಂಪಾದಕೀಯ | ದೇಶಕ್ಕೆ ದೇಶವೇ ಎದ್ದು ನಿಂತು ಮೋದಿಯವರಿಗೆ ಚಪ್ಪಾಳೆ ತಟ್ಟುವಂತಾಗಲಿ!

Date:

ಜಗತ್ತಿನಲ್ಲಿ ಬದಲಾವಣೆಯೊಂದೇ ಶಾಶ್ವತ ಎಂಬ ಮಾತಿದೆ. ಉಳಿದಂತೆ ಯಾವುದೂ ಶಾಶ್ವತ ಅಲ್ಲ, ಯಾರೂ ಚಿರಂಜೀವಿ ಅಲ್ಲ. ‘ಅಬ್ದುಲ್ಲನ ರಿಪೇರಿ’ ಎಂಬ ಈ ಭ್ರಾಂತಿಯ ಪರದೆಯೂ ಒಂದು ದಿನ ಹರಿಯಲೇಬೇಕು. ತಿರುವಿ ಮೆರೆಯುತ್ತಿರುವ ಮೀಸೆಗಳು ಮಣ್ಣಾಗಲೇಬೇಕು.

- Advertisement -

ಕಳೆದ ವಾರ ಮೋಶಾ ಬತ್ತಳಿಕೆಯಿಂದ ಹೊಸ ರಾಜಕೀಯ ಅಸ್ತ್ರವೊಂದು ದೇಶದ ರಾಜಕೀಯ ಚರ್ಚಾವಲಯವನ್ನು ಅಪ್ಪಳಿಸಿತು. ಲೋಕಸಭೆ-ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆಯ ಈ ಒಳ ಉದ್ದೇಶ ಮಹಿಳಾ ಮೀಸಲಾತಿಯ ಹೊರ ರೂಪ ಧರಿಸಿತ್ತು. ಸಂವಿಧಾನ ತಿದ್ದುಪಡಿಯ ಈ ಮಸೂದೆ ಲೋಕಸಭೆಯಲ್ಲಿ ಬಹುಮತವಿಲ್ಲದೆ ಬಿದ್ದು ಹೋಯಿತು. ಮೋದಿ ಸರ್ಕಾರದ ಉದ್ದೇಶ ಈಡೇರಿತು. ಮಸೂದೆಯ ಗೆಲುವು ಮತ್ತು ಸೋಲು ಎರಡರಲ್ಲಿ ಯಾವುದು ಒದಗಿದರೂ ಅದನ್ನು ತನ್ನ ಪರವಾಗಿ ತಿರುಗಿಸಿಕೊಳ್ಳುವ ಮೋದಿ ಸರ್ಕಾರದ ತಂತ್ರ ಫಲಿಸಿದೆ. ಚಿಮ್ಮಿಸಿದ ನಾಣ್ಯ ನೆಲ ಮುಟ್ಟಿದ ನಂತರ ರಾಣಿ ಬಿದ್ದರೇನಂತೆ, ರಾಣಿ ಎದ್ದರೇನಂತೆ ಎರಡೂ ಬದಿಯಲ್ಲಿ ಗೆಲುವು ತನ್ನದೇ ಎಂದು ಮೋಶಾ ಹೆಣೆದಿದ್ದ ಶಕುನಿ ತಂತ್ರವಿದು. ಗೆದ್ದಿದ್ದರೆ ಮಹಿಳಾ ಮೀಸಲಾತಿ ತಂದ ಮಹಾನ್ ಪ್ರತಿಪಾದಕನೆಂದು ಮೋದಿಯವರನ್ನು ದೇಶದ ತುಂಬ ಮೆರೆಸಲಾಗುತ್ತಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಇದೀಗ ಸೋಲಿಸಿದ ಅಪಕೀರ್ತಿಯನ್ನು ಪ್ರತಿಪಕ್ಷಗಳ ಕೊರಳಿಗೆ ಕಟ್ಟುವ ಕುಟಿಲ ಉಪಾಯ ವ್ಯವಸ್ಥಿತವಾಗಿ ಜಾರಿಯಾಗಿದೆ. ಗೆಲ್ಲುವ ಇಲ್ಲವೇ ಸೋಲುವ ‘ಪ್ಲ್ಯಾನ್ ಎ’ ಮತ್ತು ‘ಪ್ಲ್ಯಾನ್ ಬಿ’ ಎರಡಕ್ಕೂ ಪೂರ್ವಸಿದ್ಧತೆಗಳು ಬಹು ಮೊದಲೇ ನಡೆದಿದ್ದವು. ಹಠಾತ್ತನೆ ಕರೆದ ಸಂಸತ್ ಅಧಿವೇಶನ, ಅಧಿವೇಶನದ ಹೊಸ್ತಿಲಿನಲ್ಲಿ ನಾರೀಶಕ್ತಿ ವಂದನ ಕುರಿತು ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾದ ಪ್ರಧಾನಿ ಮೋದಿ ಲೇಖನಗಳು, ಮಹಿಳಾ ಮೀಸಲಿನ ಮುಖವಾಡ ಹೊತ್ತು ಮಂಡಿತವಾದ ಮರುವಿಂಗಡಣೆ ಮಸೂದೆ, ಮಸೂದೆಯ ವಿವರಗಳನ್ನು ಕಡೆಯ ಗಳಿಗೆಯ ತನಕ ಗುಟ್ಟಾಗಿ ಇಟ್ಟದ್ದು, ಮರುವಿಂಗಡಣೆಯ ಗುಪ್ತ ಕಾರ್ಯಸೂಚಿಗೆ ಪ್ರತಿಪಕ್ಷಗಳಿಂದ ಸಿಡಿದ ಪ್ರತಿರೋಧ, ಕಡೆಯಲ್ಲಿ ನಡೆದ ಮತದಾನದಲ್ಲಿ ಮಸೂದೆಗೆ ಒದಗಿದ ಸೋಲು, ಸೋತ ತಕ್ಷಣವೇ ಸದನದ ಹೊರಗೆ ಶುರುವಾದ ಪ್ರತಿಭಟನೆಗಳು, ನಿಂದನೆಗಳು ಬಿಜೆಪಿಯಿಂದ ದೇಶಾದ್ಯಂತ  ಪ್ರತಿಪಕ್ಷಗಳನ್ನು ನಿಂದಿಸುವ ಸುಸಜ್ಜಿತ ಕಾರ್ಯಕ್ರಮಗಳೆಲ್ಲ ಈ ಪೂರ್ವನಿಯೋಜಿತ ಶಕುನಿ ತಂತ್ರದತ್ತಲೇ ಬೆರಳು ಮಾಡಿ ತೋರುತ್ತಿವೆ. ಮೋಶಾ ಸರ್ಕಾರ ಮೊದಲೇ ಬರೆಯಲಾಗಿದ್ದ ಚಿತ್ರಕತೆಯಿದು. ದೈತ್ಯ ಚುನಾವಣಾ ಯಂತ್ರದ ರೂಪ ತಳೆದು ನಿಂತಿರುವ ಬಿಜೆಪಿ, ಅದರ ಹಿಂದೆ ಹಬ್ಬಿರುವ ಆರೆಸ್ಸೆಸ್ ಹಾಗೂ ಬಿಜೆಪಿ ಕೇಂದ್ರ-ರಾಜ್ಯ ಸರ್ಕಾರಗಳ ಆಡಳಿತ ಯಂತ್ರಗಳು, ಮೋಶಾ ತಾಳಕ್ಕೆ ಕುಣಿಯುವ ಗೋದಿ ಮೀಡಿಯಾ ನರ್ತಕ ಸಮೂಹ ಎಲ್ಲವೂ ಸೇರಿಕೊಂಡು ಸುಳ್ಳೊಂದನ್ನು ಸತ್ಯವಾಗಿಸಲು ಶ್ರಮಿಸಿವೆ. ಲೋಕಸಭೆಯಲ್ಲಿ ಸೋತಿದ್ದು, ಕ್ಷೇತ್ರ ಮರುವಿಂಗಡಣೆಯ ಹುನ್ನಾರ ಎಂಬುದೂ, ಮಹಿಳಾ ಮೀಸಲು ಮಸೂದೆ ಅಲ್ಲ ಎಂಬುದೂ ಬೆಳಕಿನಷ್ಟೇ ವಾಸ್ತವ. ರಾಜ ಬೆತ್ತಲಾಗಿದ್ದಾನೆ. ಅಂಧಭಕ್ತಿಯಲ್ಲಿ ‘ಕಣ್ಣು’ ಕಳೆದುಕೊಂಡಿರುವವರ ವಿನಾ ಉಳಿದೆಲ್ಲರಿಗೂ ಈ ಬೆತ್ತಲು ಗೋಚರಿಸಿದೆ.

ಸುಳ್ಳೊಂದನ್ನು ಮತ್ತೆ ಮತ್ತೆ ನೂರು ಬಾರಿ ಹೇಳಿದರೆ ಅದು ಸತ್ಯವಾಗಿಬಿಡುತ್ತದೆ ಎಂಬುದು ಹಿಟ್ಲರ್ ಶಾಹಿಯ ಗೆಬೆಲ್ಸ್ ತಂತ್ರ. ನೂರು ಸಲವೇಕೆ, ಸಾವಿರಾರು ನಾಲಗೆಗಳಲ್ಲಿ ಲಕ್ಷಾಂತರ ಸಲ ಹೇಳಿ ಅದನ್ನೇ ನಿಜ ಮಾಡುತ್ತೇವೆಂದು ಹೊರಟಿದೆ ಮೋಶಾ ಪ್ರಭುತ್ವ. ಕಳೆದ ಹನ್ನೆರಡು ವರ್ಷಗಳಲ್ಲಿ ಈ ತಂತ್ರ ಹತ್ತಾರು ಸಲ ಯಶಸ್ವಿಯಾಗಿದೆ. ‘ಅಬ್ದುಲ್ಲನನ್ನು ರಿಪೇರಿ’ ಮಾಡುತ್ತೇವೆಂಬ ದ್ವೇಷದ ಪರದೆಯನ್ನು ಹೆಣೆದು ಜನರ ಕಣ್ಣುಗಳಿಗೆ ಕಟ್ಟಲಾಗಿದೆ. ಜಗತ್ತಿನಲ್ಲಿ ಬದಲಾವಣೆಯೊಂದೇ ಶಾಶ್ವತ ಎಂಬ ಮಾತಿದೆ. ಉಳಿದಂತೆ ಯಾವುದೂ ಶಾಶ್ವತ ಅಲ್ಲ, ಯಾರೂ ಚಿರಂಜೀವಿ ಅಲ್ಲ. ‘ಅಬ್ದುಲ್ಲನ ರಿಪೇರಿ’ ಎಂಬ ಈ ಭ್ರಾಂತಿಯ ಪರದೆಯೂ ಒಂದು ದಿನ ಹರಿಯಲೇಬೇಕು. ತಿರುವಿ ಮೆರೆಯುತ್ತಿರುವ ಮೀಸೆಗಳು ಮಣ್ಣಾಗಲೇಬೇಕು. ಆಗಿಯೇ ತೀರುತ್ತದೆ. ಅಲ್ಲಿಯ ತನಕ ಛಿದ್ರವಾಗುತ್ತಲೇ ಇರುವ ಸಾಮಾಜಿಕ ಹಂದರ, ಸೃಷ್ಟಿಯಾಗುತ್ತಲೇ ಇರುವ ಹುಸಿ ಇತಿಹಾಸ, ಬಲಗೊಳ್ಳುತ್ತಲೇ ಸಾಗುವ ಬ್ರಾಹ್ಮಣ್ಯ ಉಂಟು ಮಾಡುವ ಆಳದ ಗಾಯಗಳು ಸುಲಭಕ್ಕೆ ಮಾಯಲಾರವು. ದಶಕಗಳೇ ಬೇಕಿದ್ದೀತು.

ಜನತಂತ್ರಕ್ಕೆ ತೆರಬೇಕಾದೇ ಬೆಲೆ ನಿರಂತರ ಜನಜಾಗೃತಿ ಎಂಬುದು ಹಳೆಯ ಮಾತು ನಿಜ. ಆದರೆ, ಅದು ನಿತ್ಯ ನೂತನವೇ ವಿನಾ ಸವಕಲು ಅಲ್ಲ. ನಮ್ಮದು ಪ್ರಧಾನವಾಗಿ ಚುನಾವಣಾ ಜನತಂತ್ರ. ಐದು ವರ್ಷಗಳಿಗೊಮ್ಮೆ ವೋಟು ಹಾಕುವುದಕ್ಕಷ್ಟೇ ಸೀಮಿತ. ವೋಟು ಹಾಕಿಸಿಕೊಂಡವರು ಐದು ವರ್ಷ ಕಳೆಯುವ ತನಕ ತಿರುಗಿ ನೋಡುವುದಿಲ್ಲ. ಅಂತಹ ನಿರೀಕ್ಷೆಯನ್ನು ಬಹುತೇಕ ಮತದಾರರು ಇಟ್ಟುಕೊಂಡಿಲ್ಲ. ಉತ್ತರದಾಯಿ ಆಗಿರುವ ಜನಪ್ರಾತಿನಿಧ್ಯವನ್ನು ಕಟ್ಟಿ ನಿಲ್ಲಿಸುವ ಸಂಪೂರ್ಣ ಕ್ರಾಂತಿಯೊಂದು ಹುಸಿಯಾಗಿ ಹೋಯಿತು. ಈ ಕ್ರಾಂತಿಯ ಹಿಂದಿದ್ದ ಶಕ್ತಿಗಳು ಈಗ ಅಧಿಕಾರ ಹಿಡಿದಿರುವ ಪ್ರತಿಗಾಮಿ ಶಕ್ತಿಗಳೇ ಆಗಿದ್ದವು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ಇತ್ತೀಚಿನ ದಿನಗಳಲ್ಲಿ ಪ್ರಧಾನಿಯವರ ಚಾರಿತ್ರ್ಯ ಕುರಿತು ಪುಕಾರುಗಳು ಎದ್ದಿವೆ. ಅವರ ಕಟ್ಟರ್ ಸಮರ್ಥಕಿ ಆಗಿದ್ದ ಮಧು ಪೂರ್ಣಿಮಾ ಕಿಶ್ವರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಲವಾದ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ಈ ಪ್ರಯತ್ನದಲ್ಲಿ ಅವರು ಒಂಟಿಯಲ್ಲ ಎಂಬುದು ದಿನದಿಂದ ದಿನಕ್ಕೆ ನಿಚ್ಚಳವಾಗತೊಡಗಿದೆ.

ಮೋದಿಯವರ ಪಕ್ಷ ಪರಿವಾರಗಳಲ್ಲಿರುವ ಕೆಲವು ಅಗೋಚರ ಶಕ್ತಿಗಳು ಕಿಶ್ವರ್ ಬೆನ್ನಿಗೆ ಇದ್ದಂತಿವೆ. ಈವರೆಗೆ ಕಂಡು ಕೇಳಿ ಅರಿಯದ ಆರೋಪಗಳನ್ನು ಕಿಶ್ವರ್ ಮಾಡತೊಡಗಿದ್ದಾರೆ. ದೇಶದ ಪ್ರಧಾನಿಯವರ ಚಾರಿತ್ರ್ಯಹನನ ಹಗುರ ಸಂಗತಿಯಲ್ಲ. ಇದು ಪ್ರಧಾನಿಯವರ ಖಾಸಗಿ ಸಂಗತಿಯಾಗಿ ಉಳಿದಿಲ್ಲ. ಆ ಗಡಿ ರೇಖೆಗಳನ್ನು ಹೊರದಾಟಿ ಬಹಳ ದಿನಗಳೇ ಉರುಳಿವೆ. ಈ ಆಪಾದನೆಗಳು ಸುಳ್ಳೆಂದು ಪ್ರಧಾನಿ ತಾವಾಗಿ ಜನತೆಗೆ ಹೇಳಬೇಕು. ಈ ಆಯ್ದ ಮೌನವು, ಪರಮವಾಚಾಳಿ ಪ್ರಧಾನಿಯವರಿಗೆ ಶೋಭಿಸುವುದಿಲ್ಲ.  

ಕಿಶ್ವರ್ ಎಬ್ಬಿಸಿರುವ ಬಿರುಗಾಳಿ ಮಾತ್ರವಲ್ಲ, ಎಪ್ಸ್ಟೀನ್ ಫೈಲ್ ಗಳ ಕುರಿತು ಎದ್ದಿರುವ ಭುಗಿಲು ಕೂಡ ನಿಜವಲ್ಲ ಎಂದು ಪ್ರಧಾನಿ ಬಹಿರಂಗವಾಗಿ ಸಾರಬೇಕಿದೆ.

ಕಿಶ್ವರ್ ಮತ್ತು ಎಪ್ಸ್ಟೀನ್ ನಿಂದ ದೇಶದ ಗಮನವನ್ನು ಬೇರೆಡೆ ತಿರುಗಿಸಲು ಮತ್ತು ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಅಲ್ಲಿನ ಮಹಿಳಾ ಮತದಾರರ ಮುಂದೆ ಟಿಎಂಸಿಯನ್ನು ಬೀಳುಗಳೆಯಲು ಸಂಸತ್ ಅಧಿವೇಶನ ಕರೆಯಲಾಯಿತು ಎಂಬ ಕಥಾನಕ ಕೂಡ ಆಧಾರವಿಲ್ಲದ್ದು ಎಂದು ಆಶ್ವಾಸನೆ ನೀಡಬೇಕಿರುವುದು ಪ್ರಧಾನಿಯವರ ಕರ್ತವ್ಯ.

ಮಹಿಳೆಯರ ಪರ ಪರಮಸಹಾನುಭೂತಿಯ ಪ್ರದರ್ಶನ ನಡೆಸಿರುವ ಮೋದಿಯವರು ತಮ್ಮ ಪಕ್ಷ ಮತ್ತು ಸರ್ಕಾರದ ಪರಮೋಚ್ಚ ನಾಯಕರು. ಅವರು ಹಾಕಿದ ಗೆರೆಯನ್ನು ದಾಟುವ ಎದೆಗಾರಿಕೆ ಯಾರಿಗೂ ಇಲ್ಲ. ಹೀಗಿದ್ದಾಗ ಚುನಾವಣೆಗಳಲ್ಲಿ ಮೂರನೆಯ ಒಂದರಷ್ಟು ಮಹಿಳಾ ಅಭ್ಯರ್ಥಿಗಳನ್ನು ಹೂಡುವಂತೆ ಅವರು ಆಜ್ಞಾಪಿಸಬೇಕು. ತಮ್ಮ ಪಕ್ಷ ಮತ್ತು ಸರ್ಕಾರದ ಎಲ್ಲ ವಲಯಗಳಲ್ಲಿ ಮೀಸಲು ನೀಡಿ ತಾವೇ ಮೇಲ್ಪಂಕ್ತಿ ಹಾಕಿಕೊಡಬೇಕು.

ಎಲ್ಲಕ್ಕಿಂತ ಹೆಚ್ಚಾಗಿ ತಾವೇ ಮುಂದೆ ನಿಂತು 2023ರಲ್ಲಿ ಲೋಕಸಭಾ ಚುನಾವಣೆಗಳೇ ಹೊಸ್ತಿಲಿನಲ್ಲಿ ಪಾಸು ಮಾಡಿಸಿದ ಮಹಿಳಾ ಮೀಸಲಾತಿಯನ್ನು ಬೇಷರತ್ತಾಗಿ ಜಾರಿಗೆ ಕೊಡಬೇಕು. ಆ ಮೀಸಲಾತಿಯ ಕಾಲಿಗೆ ತೊಡಿಸಿರುವ ಜನಗಣತಿ- ಕ್ಷೇತ್ರ ಮರುವಿಂಗಡಣೆಯ ಸಂಕೋಲೆಗಳನ್ನು ಕೈಯಾರೆ ಕಳಚಬೇಕು.

ಆಗ ದೇಶಕ್ಕೆ ದೇಶವೇ ಎದ್ದು ನಿಂತು ಮೋದಿಯವರಿಗೆ ಚಪ್ಪಾಳೆ ತಟ್ಟೀತು. ಪ್ರತಿಪಕ್ಷಗಳು ಬಾಲ ಮುದುರಿ ಮೂಲೆಗೆ ಸರಿದಾವು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ವಿದೇಶಿ ಪ್ರವಾಸದ ದಾಖಲೆ ಬಹಿರಂಗಕ್ಕೆ ದೆಹಲಿ ಹೈಕೋರ್ಟ್ ನಕಾರ

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ...

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ ಸರ್ಕಾರಗಳು!

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ...

ಈ ದಿನ ಸಂಪಾದಕೀಯ | ʼಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರೂ ಇದ್ಯಾ ಈ ಪ್ರಪಂಚದಲ್ಲಿ?ʼ

ಸೌದಿ ಅರೇಬಿಯಾದ ಮರಣದಂಡನೆ ಪ್ರಕರಣದಿಂದ ಚಿಂತನೆಗೆ ಹಚ್ಚುವ ಸಂಗತಿ ಎಂದರೆ, ಧಾರ್ಮಿಕ...

ಶಿವಮೊಗ್ಗ ಜಂಬೂ ಸವಾರಿ ವೇಳೆ ಭಾರೀ ಅನಾಹುತ: ಅಂಬಾರಿ ಹೊತ್ತು ಅಡ್ಡಾದಿಡ್ಡಿ ಓಡಿದ ಆನೆ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಅದ್ಧೂರಿ ಚಾಲನೆ ಸಿಕ್ಕು ಅಲ್ಲಿನ...