ಈ ದಿನ ಸಂಪಾದಕೀಯ | SIRಗೆ ಅವಧಿ ವಿಸ್ತರಣೆ ಅಗತ್ಯ

Date:

SIR- ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಗಡುವಿನೊಳಗೆ ತರಾತುರಿಯಲ್ಲಿ ಮಾಡಿ ಮುಗಿಸುವ ಆಡಳಿತಾತ್ಮಕ ಕಸರತ್ತಲ್ಲ. ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕನ್ನು ಖಾತರಿಪಡಿಸುವ ಸಂವಿಧಾನಾತ್ಮಕ ಜವಾಬ್ದಾರಿ. SIRನಲ್ಲಿ ಅವಸರಕ್ಕಿಂತ ನಿಖರತೆ ಮತ್ತು ವಿಶ್ವಾಸಕ್ಕೆ ಆದ್ಯತೆ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ಎನ್ಯುಮರೇಷನ್ ಅವಧಿಯನ್ನು ವಿಸ್ತರಿಸುವುದೂ ಅಷ್ಟೇ ಮುಖ್ಯ.

- Advertisement -

ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ದಾಖಲೆಯೆಂದರೆ ಮತದಾರರ ಪಟ್ಟಿ. ಅದರ ಶುದ್ಧೀಕರಣದ ಉದ್ದೇಶ ಎಷ್ಟೇ ಉದಾತ್ತವಾಗಿದ್ದರೂ, ಅದಕ್ಕಾಗಿ ಅನುಸರಿಸುವ ಪ್ರಕ್ರಿಯೆ ಪಾರದರ್ಶಕ, ಸಮರ್ಪಕ ಮತ್ತು ಎಲ್ಲರನ್ನೂ ಒಳಗೊಳ್ಳುವಂತಿರಬೇಕು. ಇಂದು ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಹಾಗೂ ಎನ್ಯುಮರೇಷನ್ ಫಾರ್ಮ್ ಭರ್ತಿ ಪ್ರಕ್ರಿಯೆ ಇದೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಡಿಮೆ ಗಡುವು, ತಾಂತ್ರಿಕ ಸಮಸ್ಯೆಗಳು, ಬಿಎಲ್‌ಒಗಳ ಮೇಲಿನ ಒತ್ತಡ ಮತ್ತು ಮತದಾರರಲ್ಲಿರುವ ಗೊಂದಲಗಳೆಲ್ಲವೂ ಈಗ ಅವಧಿ ವಿಸ್ತರಣೆಯ ಅಗತ್ಯವನ್ನು ಒತ್ತಿ ಹೇಳುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಸದ್ಯ ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಕಾರ್ಯ ನಡೆಯುತ್ತಿದ್ದು, ಬಿಎಲ್‌ಒಗಳು (ಬೂತ್ ಮಟ್ಟದ ಅಧಿಕಾರಿಗಳು) ಮನೆ-ಮನೆಗೆ ಭೇಟಿ ನೀಡಿ ಎನ್ಯುಮರೇಷನ್ (ಮತದಾರರ ಮಾಹಿತಿ ಸಂಗ್ರಹ) ಕಾರ್ಯದಲ್ಲಿ ನಿರತರಾಗಿದ್ದಾರೆ. ಜೂನ್ 30ರಿಂದ ಪ್ರಾರಂಭವಾದ ಈ ಪ್ರಕ್ರಿಯೆಯು ಜುಲೈ 29ಕ್ಕೆ ಕೊನೆಗೊಳ್ಳಲಿದೆ. ಆದರೆ, ಈ ಕಾರ್ಯದ ಗಡುವು ಮತ್ತು ಅದಕ್ಕೆ ಪೂರಕವಾದ ವ್ಯವಸ್ಥೆಗಳ ಕುರಿತು ಈಗ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.

ಮತದಾರರ ಹೆಸರುಗಳನ್ನು ಸೇರಿಸುವುದು ಸಂವಿಧಾನದ ಮೂಲತತ್ವ ಆಗಬೇಕೇ ವಿನಾ, ಹೊರಗಿಡುವುದಲ್ಲ. ಈಗ ನಡೆಯುತ್ತ ಬಂದಿರುವ ಎಸ್‌ಐಆರ್ ಪ್ರಕ್ರಿಯೆಗಳನ್ನು ನೋಡಿದರೆ ಲಕ್ಷಾಂತರ, ಕೋಟ್ಯಂತರ ಮತದಾರರನ್ನು ಹೊರಗಿಡುವ ಹು‌ನ್ನಾರವೇ ಒಡೆದು ತೋರುತ್ತಿದೆ.‌‌ ದೇಶದ ಹಲವು ರಾಜ್ಯಗಳಲ್ಲಿ ನಡೆದಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲೂ ಆಗಿರುವುದು ಅದೇ.

ಜುಲೈ 29ರವರೆಗೆ ಅಂದರೆ ಕೇವಲ ಒಂದು ತಿಂಗಳ ಅವಧಿಯನ್ನು ಮಾತ್ರ ಈ ಬೃಹತ್ ಕಾರ್ಯಕ್ಕೆ ನೀಗದಿಗೊಳಿಸಲಾಗಿದೆ. ರಾಜ್ಯದಾದ್ಯಂತ ಇರುವ ಕೋಟ್ಯಂತರ ಕುಟುಂಬಗಳನ್ನು ಭೇಟಿ ಮಾಡಿ, ನಿಖರ ಮಾಹಿತಿ ಪಡೆಯುವುದು ಈ ಅಲ್ಪಾವಧಿಯಲ್ಲಿ ಎಷ್ಟು ಪ್ರಾಯೋಗಿಕ ಎಂಬುದನ್ನು ಸಂಬಂಧಪಟ್ಟವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ತಕ್ಷಣದ ಚುನಾವಣೆ ಇಲ್ಲದಿರುವಾಗ, ಈ ಅವಸರ ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ರಾಜ್ಯದ ಹಲವೆಡೆ ಬಿಎಲ್‌ಒಗಳು ಮನೆಮನೆಗೆ ಭೇಟಿ ನೀಡಿ ಫಾರ್ಮ್‌ಗಳನ್ನು ಸಂಗ್ರಹಿಸುವಲ್ಲಿ ಭಾರೀ ಒತ್ತಡ ಎದುರಿಸುತ್ತಿದ್ದಾರೆ ಎಂಬ ವರದಿಗಳಾಗುತ್ತಿವೆ. ಒಂದೆಡೆ ಸಾವಿರಾರು ಮನೆಗಳಿಗೆ ಭೇಟಿ, ಮತ್ತೊಂದೆಡೆ ದಾಖಲೆಗಳ ಪರಿಶೀಲನೆ, ಫಾರ್ಮ್‌ಗಳ ಸ್ವೀಕೃತಿ, ಆನ್‌ಲೈನ್‌ನಲ್ಲಿ ಮಾಹಿತಿ ದಾಖಲಿಸುವ ಹೊಣೆ.. ಇವೆಲ್ಲವನ್ನೂ ಕೇವಲ ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕಾಗಿದೆ. ಬಹುತೇಕ ಬಿಎಲ್‌ಒಗಳು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿಗಳು, ಪ್ರಾಥಮಿಕ ಶಿಕ್ಷಕರು ಅಥವಾ ಇತರೆ ಸರ್ಕಾರಿ ನೌಕರರಾಗಿದ್ದು, ತಮ್ಮ ನಿಯಮಿತ ಕರ್ತವ್ಯಗಳ ಜೊತೆಗೆ ಈ ಹೆಚ್ಚುವರಿ ಹೊಣೆಗಾರಿಕೆಯನ್ನು ನಿರ್ವಹಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಪ್ಪುಗಳಾಗುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗದು.

ಕ್ಷೇತ್ರ ಮಟ್ಟದಲ್ಲಿ ಬಿಎಲ್‌ಒಗಳು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳು ಈ ಪ್ರಕ್ರಿಯೆಯ ವೇಗ ಮತ್ತು ಗುಣಮಟ್ಟಕ್ಕೆ ದೊಡ್ಡ ಅಡ್ಡಿಯಾಗಿವೆ. ಆ್ಯಪ್‌ಗಳಲ್ಲಿನ ದೋಷಗಳು, ಸರ್ವರ್ ಸಮಸ್ಯೆ ಮತ್ತು ನಮೂನೆಗಳ ಭರ್ತಿಯಲ್ಲಿ ಉಂಟಾಗುತ್ತಿರುವ ಗೊಂದಲಗಳಿಂದಾಗಿ ಅಧಿಕಾರಿಗಳು ಹೈರಾಣಾಗಿದ್ದಾರೆ. ಅನೇಕ ಬಿಎಲ್‌ಒಗಳಿಗೆ ತಾಂತ್ರಿಕ ತರಬೇತಿಯ ಕೊರತೆ ಮತ್ತು ನಿಯಮಗಳ ಬಗ್ಗೆ ಇರುವ ಅಸ್ಪಷ್ಟತೆಯಿಂದಾಗಿ ಈ ಪ್ರಕ್ರಿಯೆ ಅಕ್ಷರಶಃ ಗೊಂದಲದ ಗೂಡಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಒತ್ತಾಯಪೂರ್ವಕವಾಗಿ ಅವಸರದ ಕಾರ್ಯಗಳನ್ನು ಮಾಡಿಸುವುದರಿಂದ ಪಟ್ಟಿಯಲ್ಲಿ ತಪ್ಪುಗಳು ಉಳಿಯುವ ಸಾಧ್ಯತೆಯೇ ಹೆಚ್ಚು. ಅಂತಿಮವಾಗಿ ಇಂತಹ ತಪ್ಪುಗಳು ಪ್ರಜಾಪ್ರಭುತ್ವದ ಕಗ್ಗೊಲೆಗೆ ಕಾರಣವಾಗುತ್ತವೆ.

ಇನ್ನೊಂದೆಡೆ ಮತದಾರರಲ್ಲಿಯೂ ಗೊಂದಲ ಕಡಿಮೆಯಿಲ್ಲ. ಯಾರಿಗೆ ಫಾರ್ಮ್ ತುಂಬುವುದು ಕಡ್ಡಾಯ? ಯಾವೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು? ಆನ್‌ಲೈನ್‌ನಲ್ಲಿ ಸಲ್ಲಿಸಬಹುದೇ? ಬಿಎಲ್‌ಒ ಮನೆಗೆ ಬಂದಿಲ್ಲದಿದ್ದರೆ ಏನು ಮಾಡಬೇಕು? ಅದಕ್ಕಿಂತ ಹೆಚ್ಚಾಗಿ ಫಾರ್ಮ್‌ನ ಯಾವ ಭಾಗದಲ್ಲಿ ಹೇಗೆ ಮಾಹಿತಿ ತುಂಬಬೇಕು? ಎಂಬುದೇ ಇನ್ನೂ ಸರಿಯಾಗಿ ತಿಳಿದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಬ್ಬೊಬ್ಬರು ಒಂದೊಂದು ನೀಡುತ್ತಿರುವ ಮಾಹಿತಿಯಿಂದಲೇ ಗೊಂದಲ ಮತ್ತಷ್ಟು ಹೆಚ್ಚುತ್ತಿದೆ. ಯಾವುದೇ ಪ್ರಕ್ರಿಯೆ ಜನರಲ್ಲಿ ವಿಶ್ವಾಸ ಮೂಡಿಸಬೇಕೇ ಹೊರತು ಆತಂಕ ಸೃಷ್ಟಿಸಬಾರದು.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಸೋನಂ ವಾಂಗ್ಚುಕ್ ನಿರಶನ ಮತ್ತು ಮೋದಿ ಮೌನ

ಕರ್ನಾಟಕದಲ್ಲಿ ಚುನಾವಣೆ ಇನ್ನೂ ದೂರವಿರುವಾಗ ಇಷ್ಟೊಂದು ಆತುರ ಏಕೆ? ಎಂಬುದೇ ಅರ್ಥವಾಗುತ್ತಿಲ್ಲ. ಚುನಾವಣೆ ಸಮೀಪದಲ್ಲಿದ್ದರೆ ವೇಗದ ಅಗತ್ಯವನ್ನು ಅರ್ಥಮಾಡಿಕೊಳ್ಳಬಹುದಿತ್ತು. ಆದರೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿರುವಾಗ ಕೆಲ ದಿನಗಳ ಅಥವಾ ಅಗತ್ಯವಿದ್ದರೆ ಕೆಲವು ವಾರಗಳ ಅವಧಿ ವಿಸ್ತರಣೆ ಮಾಡುವುದರಿಂದ ಯಾವ ಅನಾಹುತ ಸಂಭವಿಸುತ್ತದೆ? ಬದಲಾಗಿ ಅದು ಹೆಚ್ಚು ಜನರನ್ನು ಒಳಗೊಳ್ಳಲು, ತಪ್ಪುಗಳನ್ನು ತಿದ್ದಲು ಮತ್ತು ಪ್ರಕ್ರಿಯೆಯ ಮೇಲಿನ ವಿಶ್ವಾಸವನ್ನು ಬಲಪಡಿಸಲು ನೆರವಾಗಬಹುದಲ್ಲವೇ? ಕೆಲವರು, ‘ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ’ ಎಂದು ವಾದಿಸುತ್ತಿದ್ದಾರೆ. ಅದು ಸರಿ. ಆದರೆ ಆರಂಭಿಕ ಹಂತದಲ್ಲಿಯೇ ಸಾಧ್ಯವಾದಷ್ಟು ನಿಖರ ಮಾಹಿತಿ ಸಂಗ್ರಹವಾದರೆ ನಂತರದ ವಿವಾದಗಳು ಮತ್ತು ಆಕ್ಷೇಪಣೆಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಪ್ರತಿ ನಾಗರಿಕನಿಗೂ ಮತ್ತೆ ಮತ್ತೆ ಕಚೇರಿಗಳ ಸುತ್ತಾಟ ತಪ್ಪುತ್ತದೆ. ಆಡಳಿತಕ್ಕೂ ಕೆಲಸ ಸುಲಭವಾಗುತ್ತದೆ.

ಇಲ್ಲಿ ಯಾರ ಪರ ಅಥವಾ ವಿರುದ್ಧ ಎನ್ನುವುದಲ್ಲ ಪ್ರಶ್ನೆ. ಪ್ರಶ್ನೆಯಿರುವುದು ಎಸ್‌ಐಆರ್‌ ಪ್ರಕ್ರಿಯೆಯ ಗುಣಮಟ್ಟದ ಬಗ್ಗೆ. ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ಮತದಾರನ ಹೆಸರು ಕೈತಪ್ಪಿದರೂ ಅದು ಅವನ ಹಕ್ಕನ್ನು ಕಸಿದುಕೊಂಡಂತೆಯೇ. ಹಾಗಾಗಿ ಚುನಾವಣಾ ಆಯೋಗವು ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ. ಬಿಎಲ್‌ಒಗಳ ಅನುಭವ, ಸಾರ್ವಜನಿಕರಿಂದ ಬರುತ್ತಿರುವ ದೂರುಗಳು ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರ ಮತ್ತು ಆಯೋಗವು ಈ ಅವಸರದ ಧೋರಣೆಯನ್ನು ಕೈಬಿಟ್ಟು, ಎನ್ಯುಮರೇಷನ್ ಅವಧಿಯನ್ನು ವಿಸ್ತರಿಸಬೇಕು. ಪ್ರಜಾಪ್ರಭುತ್ವದಲ್ಲಿ ವೇಗಕ್ಕಿಂತ ವಿಶ್ವಾಸ ಮುಖ್ಯ. ಗಡುವು ಪಾಲಿಸುವುದಕ್ಕಿಂತ ಪ್ರತಿಯೊಬ್ಬ ಅರ್ಹ ಮತದಾರನನ್ನು ಪಟ್ಟಿಯಲ್ಲಿರುವಂತೆ ನೋಡಿಕೊಳ್ಳುವುದು ಮುಖ್ಯ. ಈ ದೇಶದ ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸುವುದು ಮುಖ್ಯ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಂತರ್ ಮಂತರ್ ಪ್ರತಿಭಟನಾ ಸ್ಥಳ ರದ್ದು: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಅಧಿಕೃತವಾಗಿ...

ಔರಾದ್‌ | ನೀರು, ಆರೋಗ್ಯ ಸೇವೆ ಪರಿಶೀಲನೆ; ಕಾರ್ಮಿಕರ ಸಮಸ್ಯೆ ಆಲಿಸಿದ ಸಿಇಒ

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಸೇವೆ ಹಾಗೂ ಅಭಿವೃದ್ಧಿ...

ರಾಜ್ಯದ 12 ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ: ಹವಾಮಾನ ಇಲಾಖೆ

ತೀವ್ರ ಮಳೆ ಕೊರತೆಯಿಂದ ಕೂಡಿದ್ದ ಮುಂಗಾರು ಹಂಗಾಮು ಕೊನೆಗೊಂಡಿದೆ. ಹಿಂಗಾರು ಆರಂಭವಾಗಿದೆ....