ಈ ದಿನ ಸಂಪಾದಕೀಯ | ಸೋನಂ ವಾಂಗ್ಚುಕ್ ನಿರಶನ ಮತ್ತು ಮೋದಿ ಮೌನ

Date:

ಪ್ರಜಾಪ್ರಭುತ್ವದ ರೀತಿ-ನೀತಿಗಳನ್ನೇ ಅರಿಯದ, ಕಳೆದ 12 ವರ್ಷಗಳಿಂದ ದೇಶ ಕಂಡ ಹಲವಾರು ಗಂಭೀರ ಸಮಸ್ಯೆಗಳಿಗೆ ಮೌನವನ್ನೇ ಉತ್ತರವಾಗಿಸಿದ, ಪ್ರಧಾನಿ ಮೋದಿಯವರ ಮೌನ ಈಗ ಜಗತ್ಪ್ರಸಿದ್ಧ. ಆದರೆ ನಮ್ಮ ಮಕ್ಕಳ ಭವಿಷ್ಯ ಉರಿದು ಬೂದಿಯಾಗುತ್ತಿದ್ದರೂ, ನಾವೇಕೆ ಮೌನವಾಗಿದ್ದೇವೆ?

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಮತ್ತು ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ಕಾಕ್ರೋಚ್ ಜನತಾ ಪಾರ್ಟಿಯು(ಸಿಜೆಪಿ) ದೆಹಲಿಯ ಜಂತರ್ ಮಂತರ್‍‌ನಲ್ಲಿ ಪ್ರತಿಭಟನೆ ಆರಂಭಿಸಿ 25 ದಿನಗಳಾದವು.

- Advertisement -

ಪ್ರಜಾಪ್ರಭುತ್ವದಲ್ಲಿ ಒಂದು ಸಮಾಜದ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ವ್ಯವಸ್ಥೆ ಶಿಕ್ಷಣ. ಶಿಕ್ಷಣದ ಹೃದಯವೇ ಪರೀಕ್ಷಾ ವ್ಯವಸ್ಥೆ. ಆ ವ್ಯವಸ್ಥೆಯ ಮೇಲಿನ ವಿಶ್ವಾಸ ಕುಸಿದರೆ, ಕೇವಲ ವಿದ್ಯಾರ್ಥಿಗಳ ಭವಿಷ್ಯವಲ್ಲ, ಇಡೀ ಸಮಾಜವೇ ಕುಸಿಯುತ್ತದೆ. ನ್ಯಾಯಬದ್ಧತೆ ಮತ್ತು ಸಮಾನ ಅವಕಾಶಗಳ ಕಲ್ಪನೆಯೇ ಪ್ರಶ್ನಾರ್ಥಕವಾಗುತ್ತದೆ. ಆದ್ದರಿಂದ ಪರೀಕ್ಷಾ ಅಕ್ರಮಗಳು ಕೇವಲ ಆಡಳಿತಾತ್ಮಕ ದೋಷಗಳಲ್ಲ, ಅವು ಪ್ರಜಾಪ್ರಭುತ್ವದ ನೈತಿಕತೆಯ ಮೇಲಿನ ದಾಳಿಯೂ ಹೌದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇದನ್ನರಿತ ಪರಿಸರ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಅವರು, ಕಾಕ್ರೋಚ್ ಪಾರ್ಟಿಯ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೂತಿದ್ದಾರೆ. ಅದು ಇಂದಿಗೆ 17 ದಿನಗಳನ್ನು ಪೂರೈಸಿದೆ. ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ನಾಸಿರುದ್ದೀನ್ ಶಾ, ಜೀನತ್ ಅಮಾನ್‌ರಂತಹ ಕೆಲವರು ಅವರ ಆರೋಗ್ಯದ ಕುರಿತು ಕಾಳಜಿ ವ್ಯಕ್ತಪಡಿಸಿ, ನಿರಶನ ನಿಲ್ಲಿಸಲು ಕೇಳಿಕೊಳ್ಳುತ್ತಿದ್ದಾರೆ.

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಉಪವಾಸ ಸತ್ಯಾಗ್ರಹ ಎನ್ನುವುದು ಕೇವಲ ಪ್ರತಿಭಟನೆಯ ವಿಧಾನವಾಗಿರಲಿಲ್ಲ, ಅದು ಅಧಿಕಾರಸ್ಥರನ್ನು ಅಲ್ಲಾಡಿಸುವ ನೈತಿಕ ಅಸ್ತ್ರವಾಗಿತ್ತು. ಮಹಾತ್ಮ ಗಾಂಧಿಯಿಂದ ಹಿಡಿದು ಅನೇಕ ಸಾಮಾಜಿಕ ಹೋರಾಟಗಾರರು ಈ ಮಾರ್ಗವನ್ನು ಅನುಸರಿಸಿದ ಉದಾಹರಣೆಗಳಿವೆ. ಪ್ರಜಾಪ್ರಭುತ್ವದಲ್ಲಿ ಜನರ ಧ್ವನಿಗೆ ಸರ್ಕಾರ ಕಿವಿಗೊಡದಾಗ, ಉಪವಾಸವು ಅಂತಿಮ ಅಸ್ತ್ರವಾಗಿ ರೂಪುಗೊಳ್ಳುತ್ತದೆ.

ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಸೋನಂ ವಾಂಗ್ಚುಕ್, ಆರಾಮದಾಯಕ ಜೀವನವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಬದಲಿಗೆ, ಇಂದಿನ ಯುವಕರು ಮತ್ತು ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಆದರೆ ನಾವು, ಸುಮ್ಮನೆ ನೋಡುವ ಪ್ರೇಕ್ಷಕರಾಗಿದ್ದೇವೆ. 

ಸುಮ್ಮನಾಗದ ಕಾಕ್ರೋಚ್ ಜನತಾ ಪಾರ್ಟಿ, ಸೋನಂ ವಾಂಗ್ಚುಕ್ ಅವರನ್ನು ಬೆಂಬಲಿಸಲು ಮತ್ತು ಅವರ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು, ಜುಲೈ 20ರಂದು ಸಂಸತ್ ಭವನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ಸೋನಂ ವಾಂಗ್ಚುಕ್ ಅವರ ನಿರಶನವನ್ನು ಬೆಂಬಲಿಸಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ‘ಅವರು ಕೈಗೊಂಡಿರುವ ಉಪವಾಸ ಸತ್ಯಾಗ್ರಹವು ದೇಶದ ಯುವಜನರ ಆತಂಕ ಮತ್ತು ಆಕ್ರೋಶದ ಪ್ರತೀಕವಾಗಿದೆ’ ಎಂದಿರುವುದು ಸೂಕ್ತವಾಗಿದೆ.

ವಿಪರ್ಯಾಸವೆಂದರೆ, ಕಾಕ್ರೋಚ್ ಜನತಾ ಪಾರ್ಟಿಯಂತಹ ಸಂಘಟನೆ, ಸೋನಂ ವಾಂಗ್ಚುಕ್, ಪ್ರಕಾಶ್ ರಾಜ್ ಮತ್ತು ಬಿ.ಕೆ. ಹರಿಪ್ರಸಾದ್ ರಂತಹ ಕೆಲವು ಗಣ್ಯರು ವಿದ್ಯಾರ್ಥಿಗಳ ಪರವಾಗಿ ನಿಂತಿದ್ದಾರೆ. ಸಮಸ್ಯೆ ಸರಿಪಡಿಸಬೇಕಾದ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಜನರ ಪರವಾಗಿ ದನಿ ಎತ್ತಬೇಕಾದ, ಪ್ರಶ್ನಿಸಬೇಕಾದ ಮಾಧ್ಯಮಗಳು, ಪ್ರಭುತ್ವದೊಂದಿಗೆ ಶಾಮೀಲಾಗಿ ತಮ್ಮ ಜವಾಬ್ದಾರಿಯನ್ನೇ ಮರೆತಿವೆ. 

ಪ್ರಜಾಪ್ರಭುತ್ವದಲ್ಲಿ ಯಾವುದೇ ರಾಜಕೀಯ ಪಕ್ಷ, ನಾಗರಿಕ ಸಂಘಟನೆ ಅಥವಾ ವಿದ್ಯಾರ್ಥಿ ಸಮೂಹವು ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಗಳನ್ನು ಎತ್ತುವುದು ಸಂವಿಧಾನಾತ್ಮಕ ಹಕ್ಕು. ಸಾರ್ವಜನಿಕ ಶಿಕ್ಷಣ, ಪರೀಕ್ಷಾ ವ್ಯವಸ್ಥೆ ಮತ್ತು ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರವು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ಪ್ರತಿಕ್ರಿಯಿಸುವುದು ಉತ್ತಮ ಆಡಳಿತದ ಪ್ರಮುಖ ಲಕ್ಷಣ.

ಪ್ರತಿಭಟನೆ ನಡೆಸುತ್ತಿರುವ ಸಂಘಟನೆ ಯಾವುದೇ ಆಗಿರಲಿ, ಅದನ್ನು ಬೆಂಬಲಿಸುವ ವ್ಯಕ್ತಿಗಳು ಯಾವುದೇ ಸಿದ್ಧಾಂತಕ್ಕೆ ಸೇರಿರಲಿ, ಅವರು ಎತ್ತುವ ಪ್ರಶ್ನೆಗಳು ಮುಖ್ಯ. ಆ ಪ್ರಶ್ನೆಗಳು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದವಾಗಿದ್ದರೆ, ಸರ್ಕಾರವು ಸಂವಾದ ನಡೆಸುವುದು, ತನ್ನ ನಿಲುವು ಸ್ಪಷ್ಟಪಡಿಸುವುದು ಮತ್ತು ಅಗತ್ಯವಿದ್ದಲ್ಲಿ ತನಿಖೆ ನಡೆಸಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದು ಪ್ರಜಾಪ್ರಭುತ್ವದ ಆಡಳಿತದ ಮೂಲಭೂತ ಕರ್ತವ್ಯ.

ಪರೀಕ್ಷಾ ಪದ್ಧತಿ, ಪ್ರಶ್ನೆಪತ್ರಿಕೆ ಸೋರಿಕೆ, ಮೌಲ್ಯಮಾಪನದ ದೋಷಗಳು, ನೇಮಕಾತಿ ಪರೀಕ್ಷೆಗಳಲ್ಲಿನ ಭ್ರಷ್ಟಾಚಾರ ಅಥವಾ ಪರೀಕ್ಷಾ ಸಂಸ್ಥೆಗಳ ಮೇಲಿನ ವಿಶ್ವಾಸ ಕುಸಿತ ಇವು ಕೇವಲ ರಾಜಕೀಯ ವಿಷಯಗಳಲ್ಲ. ಇವು ಶಿಕ್ಷಣ ವ್ಯವಸ್ಥೆಯ ಗುಣಮಟ್ಟಕ್ಕೆ ಸಂಬಂಧಿಸಿದ ವಿಷಯಗಳು. ಲಕ್ಷಾಂತರ ವಿದ್ಯಾರ್ಥಿಗಳ ಜೀವನದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳು. ಹಾಗಾಗಿ ಗಂಭೀರವಾಗಿ ಪರಿಗಣಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳು, ಪರೀಕ್ಷೆಗಳ ರದ್ದತಿ ಮತ್ತು ಮರುಪರೀಕ್ಷೆಗಳಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ವರ್ಷಗಟ್ಟಲೆ ಶ್ರಮ ಹಾಕಿದ ಅಭ್ಯರ್ಥಿಗಳ ಅಪೂರ್ವ ಸಮಯ, ಹಣ ಮತ್ತು ಮಾನಸಿಕ ಆರೋಗ್ಯ ಹಾಳಾಗುತ್ತದೆ. ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳ ಮೇಲೆ ಇದರ ಪರಿಣಾಮ ಇನ್ನಷ್ಟು ಗಂಭೀರವಾಗಿರುತ್ತದೆ.

ಇಂತಹ ಸಂದರ್ಭದಲ್ಲಿ ಸಾರ್ವಜನಿಕ ವ್ಯಕ್ತಿಯೊಬ್ಬರು ಶಾಂತಿಯುತ ನಿರಶನದ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರೆ, ಪ್ರತಿಕ್ರಿಯಿಸುವುದು ಸರ್ಕಾರದ ಜವಾಬ್ದಾರಿ. ಮೌನ ಅಥವಾ ನಿರ್ಲಕ್ಷ್ಯವು ಉತ್ತರವಲ್ಲ, ಉತ್ತರವಾಗಲೂಬಾರದು. ಸರ್ಕಾರ ಈಗಾಗಲೇ ಕೆಲವು ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡಿದ್ದರೂ, ಅವು ಪರಿಣಾಮಕಾರಿಯಾಗಿ ಜಾರಿಯಾದ ಬಗ್ಗೆ ಸಮಾಜದಲ್ಲಿ ಇನ್ನೂ ಪ್ರಶ್ನೆಗಳಿವೆ. ಆದ್ದರಿಂದ ಕೇವಲ ಕಾನೂನು ರೂಪಿಸುವುದಷ್ಟೇ ಸಾಕಾಗುವುದಿಲ್ಲ; ಅದರ ಅನುಷ್ಠಾನದಲ್ಲಿ ಪಾರದರ್ಶಕತೆ ಅಗತ್ಯವಾಗಿದೆ.

ಒಂದು ರಾಷ್ಟ್ರದ ನಿಜವಾದ ಶಕ್ತಿ ಯುವಜನರಿಗೆ ನ್ಯಾಯಯುತ ಅವಕಾಶಗಳನ್ನು ಒದಗಿಸುವ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಇರುತ್ತದೆ. ಆ ವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರ, ಶಿಕ್ಷಣ ಸಂಸ್ಥೆಗಳು ಮತ್ತು ಸಮಾಜದ ಸಮಾನ ಜವಾಬ್ದಾರಿಯಾಗಿದೆ. ಜೊತೆಗೆ ಪ್ರಜಾಪ್ರಭುತ್ವದ ಆರೋಗ್ಯವನ್ನು ಅಳೆಯುವುದು ಸರ್ಕಾರ ಎಷ್ಟು ಪ್ರತಿಭಟನೆಗಳನ್ನು ತಡೆಯಿತು ಎಂಬುದರಿಂದಲ್ಲ; ವಿರೋಧದ ಧ್ವನಿಗಳನ್ನು ಎಷ್ಟು ಜವಾಬ್ದಾರಿಯುತವಾಗಿ ಆಲಿಸಿತು ಮತ್ತು ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಗಳಿಗೆ ಎಷ್ಟು ಪಾರದರ್ಶಕವಾಗಿ ಪ್ರತಿಕ್ರಿಯಿಸಿತು ಎಂಬುದರ ಮೇಲೆ ನಿಂತಿರುತ್ತದೆ.

ಪ್ರಜಾಪ್ರಭುತ್ವದ ಈ ರೀತಿ-ನೀತಿಗಳನ್ನೇ ಅರಿಯದ, ಕಳೆದ 12 ವರ್ಷಗಳಿಂದ ದೇಶ ಕಂಡ ಇಂತಹ ಹಲವಾರು ಗಂಭೀರ ಸಮಸ್ಯೆಗಳಿಗೆ ಮೌನವನ್ನೇ ಉತ್ತರವಾಗಿಸಿದ, ಪ್ರಧಾನಿ ಮೋದಿಯವರ ಮೌನ ಈಗ ಜಗತ್ಪ್ರಸಿದ್ಧ. ಆದರೆ ನಮ್ಮ ಮಕ್ಕಳ ಭವಿಷ್ಯ ಉರಿದು ಬೂದಿಯಾಗುತ್ತಿದ್ದರೂ, ನಾವೇಕೆ ಮೌನವಾಗಿದ್ದೇವೆ?

2013-14ರಲ್ಲಿ ಯುಪಿಎ ಸರ್ಕಾರದ ದುರಾಡಳಿತದ ವಿರುದ್ಧ ಇದೇ ಜಂತರ ಮಂತರ್‍‌ನಲ್ಲಿ ಅಣ್ಣಾ ಹಜಾರೆ ಎಂಬ ನಕಲಿ ಗಾಂಧಿಯನ್ನು ಬೆಂಬಲಿಸಿದ ನಾವು, ಅಂದಿನ ಪ್ರಧಾನಿ ಮನಮೋಹನ್ ಸಿಂಗ್‌ರನ್ನು ಮೌನಿಬಾಬಾ ಎಂದು ಕರೆದು ಜರೆದವಲ್ಲವೇ? ಈಗಿನ ಮೋದಿಯ ಮೌನ ಕುರಿತು ನಾವೇಕೆ ಪ್ರಶ್ನಿಸುವ, ಪ್ರತಿಭಟಿಸುವ ಕೆಚ್ಚನ್ನು ಕಳೆದುಕೊಂಡಿದ್ದೇವೆ? ಗಾಂಧಿ ನಾಡು ಗೋಡ್ಸೆ ನಾಡಾಗಿ ಪರಿವರ್ತನೆ ಹೊಂದಿದೆಯೇ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಈ ದಿನ ಸಂಪಾದಕೀಯ | ಏರಿದ ಬೆಲೆ; ಇಳಿದ ಜೀವನಮಟ್ಟ; ಇದೇನಾ ಮೋದಿಯವರ ಆರ್ಥಿಕ ಅಭಿವೃದ್ಧಿ?

ಬ್ಲೂಮ್‌ಬರ್ಗ್ ವೇದಿಕೆ ಮೇಲೆ ನಿಂತು ಪ್ರಧಾನಿ ಮೋದಿಯವರು, ಜಿಡಿಪಿ ಶೇ.7.8ರಷ್ಟು ಜಿಗಿದಿದೆ,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...