ಅವಳ ಕಣ್ಣೋಟ | ‘ಉಯರೆ’- ಸುಟ್ಟದ್ದು ಮುಖವಷ್ಟೇ, ಬದುಕಿನ ಮೇಲಿನ ಹಕ್ಕಲ್ಲ…

Date:

ಒಬ್ಬ ಮಹಿಳೆ ತನ್ನನ್ನು ನಿರಾಕರಿಸಿದಳೆಂಬ ಕಾರಣಕ್ಕೆ ಆಕೆಯ ಬದುಕನ್ನೇ ನಾಶಮಾಡುವ ಹಕ್ಕು ತನಗಿದೆ ಎಂದು ಪುರುಷನೊಬ್ಬ ಭಾವಿಸುವುದಾದರೂ ಹೇಗೆ? ಇದು ಒಬ್ಬ ವ್ಯಕ್ತಿಯ ವಿಕೃತ ಮನಸ್ಥಿತಿಯ ಪ್ರಶ್ನೆಯಷ್ಟೇ ಅಲ್ಲ. ಪ್ರೀತಿಯ ಹೆಸರಿನಲ್ಲಿ ಮಹಿಳೆಯ ಮೇಲೆ ನಿಯಂತ್ರಣ ಸಾಧಿಸುವುದನ್ನು ಸಹಜವೆಂದು ಒಪ್ಪಿಕೊಳ್ಳುವ ಪುರುಷಪ್ರಧಾನ ಸಮಾಜದ ಮನಸ್ಥಿತಿಯ ಪ್ರಶ್ನೆಯೂ ಹೌದು. ಮನು ಅಶೋಕನ್ ನಿರ್ದೇಶನದ ಮಲಯಾಳಂ ಚಿತ್ರ ‘ಉಯರೆ’ (2019) ಈ ಮನಸ್ಥಿತಿಯನ್ನು ಪ್ರಶ್ನಿಸುತ್ತಲೇ ಮಹಿಳೆಯ ಕನಸು, ಸ್ವಾತಂತ್ರ್ಯ ಮತ್ತು ಘನತೆಯ ಕುರಿತು ಮಾತನಾಡುತ್ತದೆ.

- Advertisement -

ಒಬ್ಬ ಮಹಿಳೆ ತನ್ನನ್ನು ನಿರಾಕರಿಸಿದಳೆಂಬ ಕಾರಣಕ್ಕೆ ಆಕೆಯ ಬದುಕನ್ನೇ ನಾಶಮಾಡುವ ಹಕ್ಕು ತನಗಿದೆ ಎಂದು ಪುರುಷನೊಬ್ಬ ಭಾವಿಸುವುದಾದರೂ ಹೇಗೆ? ಇದು ಒಬ್ಬ ವ್ಯಕ್ತಿಯ ವಿಕೃತ ಮನಸ್ಥಿತಿಯ ಪ್ರಶ್ನೆಯಷ್ಟೇ ಅಲ್ಲ. ಪ್ರೀತಿಯ ಹೆಸರಿನಲ್ಲಿ ಮಹಿಳೆಯ ಮೇಲೆ ನಿಯಂತ್ರಣ ಸಾಧಿಸುವುದನ್ನು ಸಹಜವೆಂದು ಒಪ್ಪಿಕೊಳ್ಳುವ ಪುರುಷಪ್ರಧಾನ ಸಮಾಜದ ಮನಸ್ಥಿತಿಯ ಪ್ರಶ್ನೆಯೂ ಹೌದು. ಮನು ಅಶೋಕನ್ ನಿರ್ದೇಶನದ ಮಲಯಾಳಂ ಚಿತ್ರ ‘ಉಯರೆ’ (2019) ಈ ಮನಸ್ಥಿತಿಯನ್ನು ಪ್ರಶ್ನಿಸುತ್ತಲೇ ಮಹಿಳೆಯ ಕನಸು, ಸ್ವಾತಂತ್ರ್ಯ ಮತ್ತು ಘನತೆಯ ಕುರಿತು ಮಾತನಾಡುತ್ತದೆ. ಆದರೆ ಚಿತ್ರದ ಪ್ರಗತಿಪರ ನಿಲುವಿನ ಜೊತೆಗೆ ಅದರ ಮಿತಿಗಳನ್ನೂ ಗುರುತಿಸುವುದು ಅಗತ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಪಾರ್ವತಿ ತಿರುವೋತ್ತು ʼಪಲ್ಲವಿ ರವೀಂದ್ರನ್ʼ ಪಾತ್ರದಲ್ಲಿ, ಆಸಿಫ್ ಅಲಿ ʼಗೋವಿಂದ್ ಬಾಲಕೃಷ್ಣನ್ʼ ಪಾತ್ರದಲ್ಲಿ ಮತ್ತು ಟೊವಿನೊ ಥಾಮಸ್ ʼವಿಶಾಲ್ ರಾಜಶೇಖರನ್ʼ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಪೈಲಟ್ ಆಗಬೇಕೆಂಬ ಕನಸು ಹೊತ್ತ ಪಲ್ಲವಿ, ತನ್ನನ್ನು ನಿಯಂತ್ರಿಸಲು ಯತ್ನಿಸುವ ಗೋವಿಂದ್‌ನ ಹಿಂಸಾತ್ಮಕ ವರ್ತನೆಯನ್ನು ಎದುರಿಸುತ್ತಾಳೆ. ಸಂಬಂಧದಿಂದ ಹೊರಬರಲು ಆಕೆ ನಿರ್ಧರಿಸಿದಾಗ, ಗೋವಿಂದ್ ಆಸಿಡ್ ದಾಳಿಯ ಮೂಲಕ ಆಕೆಯ ಮುಖವನ್ನೂ ಭವಿಷ್ಯವನ್ನೂ ನಾಶಮಾಡಲು ಪ್ರಯತ್ನಿಸುತ್ತಾನೆ.

ಗೋವಿಂದ್‌ನ ಹಿಂಸೆ ಆಸಿಡ್ ದಾಳಿಯೊಂದಿಗೆ ಆರಂಭವಾಗುವುದಿಲ್ಲ. ಪಲ್ಲವಿಯ ಆಯ್ಕೆಗಳು ಮತ್ತು ಸ್ವತಂತ್ರ ನಿರ್ಧಾರಗಳನ್ನು ನಿಯಂತ್ರಿಸಲು ಯತ್ನಿಸುವ ಅವನ ವರ್ತನೆಯಲ್ಲೇ ಅದರ ಬೇರುಗಳಿವೆ. ಪ್ರೀತಿಯನ್ನು ತನ್ನ ಹಕ್ಕು ಎಂದು ಭಾವಿಸುವ ಅವನು, ಪಲ್ಲವಿಯ ನಿರಾಕರಣೆಯನ್ನು ಒಪ್ಪಿಕೊಳ್ಳಲಾರ. ಹೀಗಾಗಿ ಆಸಿಡ್ ದಾಳಿ ಕ್ಷಣಿಕ ಕೋಪದ ಅಭಿವ್ಯಕ್ತಿಯಷ್ಟೇ ಅಲ್ಲ. ಇದು ಮಹಿಳೆಯ ಸ್ವಾತಂತ್ರ್ಯವನ್ನು ಶಿಕ್ಷಿಸುವ ಪುರುಷಾಹಂಕಾರದ ಕ್ರೂರ ರೂಪ. ವೈಯಕ್ತಿಕ ಸಂಬಂಧಗಳೊಳಗೆ ಸಹಜವೆಂದು ಒಪ್ಪಿಕೊಳ್ಳಲಾಗುವ ನಿಯಂತ್ರಣದ ರಾಜಕಾರಣವನ್ನು ಗೋವಿಂದ್‌ನ ಪಾತ್ರದ ಮೂಲಕ ಚಿತ್ರ ಬಯಲಿಗೆಳೆಯುತ್ತದೆ.

ಜನಪ್ರಿಯ ಸಿನಿಮಾಗಳು ಪ್ರೀತಿಯ ಹೆಸರಿನಲ್ಲಿ ಹೆಣ್ಣನ್ನು ಹಿಂಬಾಲಿಸುವುದನ್ನು ಮತ್ತು ಆಕೆಯ ಪ್ರತಿ ಹೆಜ್ಜೆಯನ್ನು ನಿಯಂತ್ರಿಸುವುದನ್ನು ಆಕರ್ಷಕವಾಗಿ ತೋರಿಸುವ ಮೂಲಕ ಇಂತಹ ಅಪರಾಧಗಳಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತವೆ. ತೆರೆಯ ಮೇಲೆ ದೌರ್ಜನ್ಯವನ್ನು ಗಂಡಸ್ತನದ ಗುಣವೆಂದು ಬಿಂಬಿಸುವ ಸಂಸ್ಕೃತಿ ಜೀವಂತವಿರುವವರೆಗೆ ಗೋವಿಂದ್‌ನಂತಹ ಪಾತ್ರಗಳು ಹುಟ್ಟುತ್ತಲೇ ಇರುತ್ತವೆ. ಚಿತ್ರವು ಈ ದೊಡ್ಡ ಸಾಮಾಜಿಕ ಸಮಸ್ಯೆಯನ್ನು ಸಂಪೂರ್ಣವಾಗಿ ಬಿಡಿಸಿಡದಿದ್ದರೂ, ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಕೇವಲ ಪ್ರೇಮ ವೈಫಲ್ಯವೆಂದು ಹಗುರವಾಗಿ ನೋಡುವ ಮನಸ್ಥಿತಿಯನ್ನು ಪ್ರಶ್ನಿಸುತ್ತದೆ.

ಪಲ್ಲವಿಯ ಮುಖವನ್ನೇ ಗುರಿಯಾಗಿಸುವುದರಲ್ಲಿಯೂ ಸಾಮಾಜಿಕ ಅರ್ಥವಿದೆ. ಮಹಿಳೆಯ ಸೌಂದರ್ಯವನ್ನು ಆಕೆಯ ಮೌಲ್ಯಕ್ಕೆ ಸಮೀಕರಿಸುವ ಸಮಾಜದಲ್ಲಿ ಮುಖದ ಮೇಲಿನ ದಾಳಿಯು ದೇಹವನ್ನು ಗಾಯಗೊಳಿಸುವುದಷ್ಟೇ ಅಲ್ಲ, ಆಕೆಯ ಸಾಮಾಜಿಕ ಅಸ್ತಿತ್ವವನ್ನೂ ಅಳಿಸಲು ಯತ್ನಿಸುತ್ತದೆ. ಸೌಂದರ್ಯಕ್ಕೆ ಧಕ್ಕೆಯಾದಾಗ ಮಹಿಳೆಯ ಬದುಕಿನ ಮೌಲ್ಯವೂ ಕುಸಿದಂತೆ ವರ್ತಿಸುವ ಸಮಾಜದ ದೃಷ್ಟಿಕೋನವನ್ನು ಚಿತ್ರ ಪ್ರಶ್ನಿಸುತ್ತದೆ. ಪಲ್ಲವಿಯ ಹೋರಾಟವು ಈ ದೃಷ್ಟಿಕೋನವನ್ನು ಒಪ್ಪಿಕೊಳ್ಳದ ಬದುಕಿನ ಹಕ್ಕಿನ ಹೋರಾಟವೂ ಹೌದು.

ಪಾರ್ವತಿ ತಿರುವೋತ್ತು ಪಲ್ಲವಿಯ ನೋವು, ಆಘಾತ ಮತ್ತು ಚೇತರಿಕೆಯ ಪ್ರಯತ್ನವನ್ನು ಅತಿರೇಕದ ಭಾವನಾತ್ಮಕತೆಯಿಲ್ಲದೆ ಕಟ್ಟಿಕೊಡುತ್ತಾರೆ. ಮುಖಭಾವ, ಮೌನ ಮತ್ತು ಮಾತುಗಳ ನಡುವಿನ ವಿರಾಮಗಳು ಆಕೆಯ ಒಳಸಂಘರ್ಷವನ್ನು ವ್ಯಕ್ತಪಡಿಸುತ್ತವೆ. ದಾಳಿಯ ನಂತರದ ಬದುಕನ್ನು ಕೇವಲ ದುರಂತವಾಗಿ ನಿರೂಪಿಸದೆ, ತನ್ನನ್ನು ತಾನು ಮರುಕಟ್ಟಿಕೊಳ್ಳಬೇಕಾದ ವ್ಯಕ್ತಿಯ ಅನುಭವವಾಗಿ ತೋರಿಸುವುದು ಅವರ ಅಭಿನಯದ ಶಕ್ತಿ. ವಿಮಾನಯಾನಕ್ಕೆ ಸಂಬಂಧಿಸಿದ ದೃಶ್ಯಗಳು ಪಲ್ಲವಿಯ ಕನಸನ್ನು ನೆನಪಿಸಿದರೆ, ದಾಳಿಯ ನಂತರದ ಹೋರಾಟ ಆ ಕನಸಿನ ಹಾದಿಯಲ್ಲಿ ಎದುರಾಗುವ ಅಡೆತಡೆಗಳನ್ನು ಮುಂದಿಡುತ್ತದೆ.

Uyare ೧

ಇದೇ ವಿಷಯವನ್ನು ಆಧರಿಸಿದ ಮೇಘನಾ ಗುಲ್ಜಾರ್ ನಿರ್ದೇಶನದ ‘ಚಪಾಕ್’ (2020) ಚಿತ್ರವು ಆಸಿಡ್ ದಾಳಿಯಿಂದ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಅವರ ಬದುಕಿನಿಂದ ಪ್ರೇರಣೆ ಪಡೆದಿದೆ. ಆಸಿಡ್ ದಾಳಿಯ ನಂತರದ ನ್ಯಾಯದ ಹೋರಾಟ, ಕಾನೂನು ವ್ಯವಸ್ಥೆ ಮತ್ತು ಪುನರ್ವಸತಿಯ ಪ್ರಶ್ನೆಗಳಿಗೆ ‘ಚಪಾಕ್’ ಹೆಚ್ಚು ಒತ್ತು ನೀಡಿದರೆ, ‘ಉಯರೆ’ ಪ್ರೀತಿಯ ಹೆಸರಿನಲ್ಲಿ ಮಹಿಳೆಯ ಮೇಲೆ ಹಕ್ಕು ಸಾಧಿಸುವ ಪುರುಷಪ್ರಧಾನ ಮನಸ್ಥಿತಿಯನ್ನು ಹಾಗೂ ತನ್ನ ಕನಸಿನ ಮೇಲಿನ ಹಕ್ಕನ್ನು ಉಳಿಸಿಕೊಳ್ಳುವ ಮಹಿಳೆಯ ಹೋರಾಟವನ್ನು ಕೇಂದ್ರವಾಗಿಟ್ಟುಕೊಳ್ಳುತ್ತದೆ. ಎರಡೂ ಚಿತ್ರಗಳು ಮಹಿಳೆಯ ಘನತೆಯನ್ನು ಸೌಂದರ್ಯದೊಂದಿಗೆ ಸಮೀಕರಿಸುವ ಸಾಮಾಜಿಕ ದೃಷ್ಟಿಕೋನವನ್ನು ಪ್ರಶ್ನಿಸುತ್ತವೆ. ಆದರೆ ಮಹಿಳೆಯ ಬದುಕನ್ನು ಮರುಕಟ್ಟಿಕೊಳ್ಳುವ ಹೋರಾಟವನ್ನು ವೈಯಕ್ತಿಕ ಧೈರ್ಯಕ್ಕೆ ಮಾತ್ರ ಸೀಮಿತಗೊಳಿಸದೆ, ಅದಕ್ಕೆ ಅಗತ್ಯವಾದ ಸಾಮಾಜಿಕ ಮತ್ತು ಸಾಂಸ್ಥಿಕ ಬೆಂಬಲದ ಪ್ರಶ್ನೆಯನ್ನೂ ಮುನ್ನೆಲೆಗೆ ತರುವುದು ಮುಖ್ಯ.

ಪಲ್ಲವಿಯ ಬದುಕನ್ನು ಮರುಕಟ್ಟಿಕೊಳ್ಳುವ ಪ್ರಯಾಣದಲ್ಲಿ ವಿಶಾಲ್‌ನ ಪಾತ್ರವೂ ಮಹತ್ವದ ಸ್ಥಾನ ಪಡೆಯುತ್ತದೆ. ಗೋವಿಂದ್ ಆಕೆಯನ್ನು ನಿಯಂತ್ರಿಸಲು ಯತ್ನಿಸಿದರೆ, ವಿಶಾಲ್ ಆಕೆಗೆ ಬೆಂಬಲ ನೀಡುತ್ತಾನೆ. ಆದರೆ ಇದನ್ನು ಕೆಟ್ಟ ಪುರುಷ ಮತ್ತು ಒಳ್ಳೆಯ ಪುರುಷ ಎಂಬ ಸರಳ ವಿಭಜನೆಗೆ ಇಳಿಸಲಾಗದು. ಮಹಿಳೆಗೆ ಅವಕಾಶ ನೀಡುವ ಉದಾರವಾದಿ ಪುರುಷನ ಚಿತ್ರಣವೂ ಪಿತೃಪ್ರಭುತ್ವದ ಮಿತಿಗಳಿಂದ ಸಂಪೂರ್ಣವಾಗಿ ಹೊರತಾಗಿಲ್ಲ. ಮಹಿಳೆಯ ಸ್ವಾತಂತ್ರ್ಯವು ಪುರುಷನ ಸಹಾನುಭೂತಿ ಅಥವಾ ಮಧ್ಯಸ್ಥಿಕೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿಯನ್ನೇ ಪ್ರಶ್ನಿಸಬೇಕಿದೆ. ವಿಶಾಲ್ ಪಲ್ಲವಿಗೆ ಬೆಂಬಲವಾಗುತ್ತಾನೆ, ಆದರೆ ಆಕೆಯ ಸ್ವಾತಂತ್ರ್ಯದ ಮೂಲ ಆಕೆಯದೇ ಹಕ್ಕು ಮತ್ತು ಸಾಮರ್ಥ್ಯವಾಗಿರಬೇಕು. ಈ ಅಂಶವನ್ನು ಚಿತ್ರ ಸಂಪೂರ್ಣವಾಗಿ ವಿಮರ್ಶಿಸುವುದಿಲ್ಲ.

ಇಲ್ಲಿ ಚಿತ್ರದ ವರ್ಗಮಿತಿಯೂ ಮುಖ್ಯವಾಗುತ್ತದೆ. ಪಲ್ಲವಿಯ ಕನಸನ್ನು ಮುಂದುವರಿಸಲು ಶಿಕ್ಷಣ, ತರಬೇತಿ, ಆರ್ಥಿಕ ಸಂಪನ್ಮೂಲ ಮತ್ತು ಕೌಟುಂಬಿಕ ಬೆಂಬಲದ ಅಗತ್ಯವಿದೆ. ಆದರೆ ಇಂತಹ ಅವಕಾಶಗಳು ಎಲ್ಲ ಮಹಿಳೆಯರಿಗೂ ಸಮಾನವಾಗಿ ಲಭ್ಯವಿಲ್ಲ. ಆಸಿಡ್ ದಾಳಿಗೆ ಒಳಗಾದ ಬಡ ಮತ್ತು ದಲಿತ ಮಹಿಳೆಯರು ಎದುರಿಸಬಹುದಾದ ಆರ್ಥಿಕ ಅಭದ್ರತೆ, ಚಿಕಿತ್ಸೆಯ ಅಲಭ್ಯತೆ, ಉದ್ಯೋಗದ ಅನಿಶ್ಚಿತತೆ ಹಾಗೂ ಸಾಮಾಜಿಕ ತಾರತಮ್ಯಗಳು ಚಿತ್ರದ ಕಥನದ ಕೇಂದ್ರಕ್ಕೆ ಬರುವುದಿಲ್ಲ. ಬದುಕನ್ನು ಮರುಕಟ್ಟಿಕೊಳ್ಳುವ ಅವಕಾಶಗಳೇ ಇಲ್ಲದ ಮಹಿಳೆಯರ ವಾಸ್ತವವನ್ನು ಚಿತ್ರ ಸಾಕಷ್ಟು ಪರಿಶೀಲಿಸುವುದಿಲ್ಲ.

ಹೀಗಾಗಿ ‘ಉಯರೆ’ಯನ್ನು ಆಸಿಡ್ ದಾಳಿಯಿಂದ ಬದುಕುಳಿದ ಎಲ್ಲ ಮಹಿಳೆಯರ ಅನುಭವದ ಪ್ರತಿನಿಧಿಯಾಗಿ ನೋಡಲಾಗದು. ಅದು ತನ್ನ ಕನಸನ್ನು ಮತ್ತೆ ಸಾಧಿಸಲು ಪ್ರಯತ್ನಿಸುವ ಮಹಿಳೆಯ ಕಥೆ. ಆದರೆ ಮಹಿಳೆಯರ ಮೇಲಿನ ಹಿಂಸೆಯನ್ನು ಅರ್ಥಮಾಡಿಕೊಳ್ಳಲು ವೈಯಕ್ತಿಕ ಧೈರ್ಯದ ಆಚೆಗೂ ನೋಡಬೇಕಾಗುತ್ತದೆ. ಜಾತಿ ಮತ್ತು ವರ್ಗದ ಅಸಮಾನತೆಗಳು ಚಿಕಿತ್ಸೆ, ಪುನರ್ವಸತಿ ಮತ್ತು ಉದ್ಯೋಗದ ಅವಕಾಶಗಳನ್ನು ನಿರ್ಧರಿಸುತ್ತವೆ. ಇವುಗಳನ್ನು ಚಿತ್ರ ಗಂಭೀರವಾಗಿ ಪರಿಗಣಿಸದಿರುವುದು ಅದರ ದೊಡ್ಡ ಮಿತಿಯಾಗಿದೆ.

ಚಿತ್ರದ ಅಂತ್ಯವು ಈ ವಿಮರ್ಶೆಗೆ ಮತ್ತೊಂದು ಆಯಾಮವನ್ನು ಸೇರಿಸುತ್ತದೆ. ಪಲ್ಲವಿ ಮತ್ತೆ ವಿಮಾನ ಹಾರಿಸುವ ಮೂಲಕ ತನ್ನ ಕನಸಿನತ್ತ ಮರಳುತ್ತಾಳೆ. ಇದು ಭರವಸೆ ಮೂಡಿಸುವ ಕ್ಷಣವಾದರೂ, ಹಿಂಸೆಯಿಂದ ಬದುಕುಳಿದ ಮಹಿಳೆ ತನ್ನ ಬದುಕಿನ ಮೌಲ್ಯವನ್ನು ಸಾಬೀತುಪಡಿಸಲು ಅಸಾಧಾರಣ ಸಾಧನೆ ಮಾಡಬೇಕಿಲ್ಲ ಎಂಬ ನಿಲುವಿನೊಂದಿಗೆ ವಿರೋಧಾಭಾಸವನ್ನೂ ಸೃಷ್ಟಿಸುತ್ತದೆ. ಪಲ್ಲವಿಯ ಗೆಲುವನ್ನು ವಿಮಾನ ಹಾರಿಸುವ ಸಾಧನೆಯ ಮೂಲಕವೇ ದೃಢಪಡಿಸುವಾಗ, ಚಿತ್ರವು ತಾನೇ ಪ್ರಶ್ನಿಸಬೇಕಾದ ‘ನೋವನ್ನು ಗೆದ್ದು ಅಸಾಧಾರಣ ಸಾಧನೆ ಮಾಡಿದ ಮಹಿಳೆ’ ಎಂಬ ಕಥನದತ್ತ ಮರಳುತ್ತದೆ.

ಪಲ್ಲವಿ ತನ್ನ ಕನಸನ್ನು ಸಾಧಿಸುವುದು ಆಕೆಯ ಹಕ್ಕು. ಆದರೆ ಆಕೆ ಪೈಲಟ್ ಆಗಲು ಸಾಧ್ಯವಾಗದಿದ್ದರೆ ಆಕೆಯ ಹೋರಾಟದ ಮೌಲ್ಯ ಕಡಿಮೆಯಾಗುವುದಿಲ್ಲ. ಬದುಕುಳಿಯುವುದು, ಚಿಕಿತ್ಸೆಯಿಂದ ಚೇತರಿಸಿಕೊಳ್ಳುವುದು, ತನ್ನ ಬದುಕಿನ ಕುರಿತು ನಿರ್ಧಾರ ತೆಗೆದುಕೊಳ್ಳುವುದು ಮತ್ತು ತನಗೆ ಸಾಧ್ಯವಾದ ರೀತಿಯಲ್ಲಿ ಬದುಕುವುದು ಕೂಡ ಗೆಲುವೇ. ಮಹಿಳೆಯ ಘನತೆಯನ್ನು ಸಾಧನೆಯಿಂದ ಪ್ರತ್ಯೇಕಿಸಬೇಕೆಂಬ ಆಶಯಕ್ಕೂ ಚಿತ್ರದ ಅಂತ್ಯದ ವಿಜಯೋತ್ಸವಕ್ಕೂ ನಡುವಿನ ಸಂಘರ್ಷವೇ ಅದರ ಗಮನಾರ್ಹ ಮಿತಿಯಾಗಿದೆ.

ನ್ಯಾಯದ ಪ್ರಶ್ನೆಯೂ ಕೇವಲ ಅಪರಾಧಿಗೆ ಶಿಕ್ಷೆಯಾಗುವುದಕ್ಕೆ ಸೀಮಿತವಾಗುವುದಿಲ್ಲ. ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಗುಣಮಟ್ಟದ ಚಿಕಿತ್ಸೆ, ಮಾನಸಿಕ ಆರೋಗ್ಯದ ಆರೈಕೆ, ಶಿಕ್ಷಣ, ಉದ್ಯೋಗ ಮತ್ತು ದೀರ್ಘಕಾಲೀನ ಪುನರ್ವಸತಿ ದೊರೆಯಬೇಕು. ಇವು ಸಹಾನುಭೂತಿಯ ದಾನಗಳಲ್ಲ; ಬದುಕುವ ಹಕ್ಕಿನ ಭಾಗಗಳು. ಇಂತಹ ನೆರವನ್ನು ಖಚಿತಪಡಿಸುವುದು ಕುಟುಂಬದಷ್ಟೇ ಸಮಾಜ ಮತ್ತು ಸರ್ಕಾರದ ಹೊಣೆಗಾರಿಕೆಯೂ ಹೌದು. ಮಹಿಳೆಯೊಬ್ಬಳು ತನ್ನ ಬದುಕನ್ನು ಮರುಕಟ್ಟಿಕೊಳ್ಳಲು ಅಸಾಧಾರಣ ಧೈರ್ಯ ಪ್ರದರ್ಶಿಸಬೇಕಾದ ಪರಿಸ್ಥಿತಿಯೇ ವ್ಯವಸ್ಥೆಯ ವೈಫಲ್ಯವನ್ನು ಸೂಚಿಸುತ್ತದೆ.

‘ಉಯರೆ’ ಪ್ರೀತಿಯ ಹೆಸರಿನಲ್ಲಿ ನಡೆಯುವ ನಿಯಂತ್ರಣವನ್ನು ಪ್ರಶ್ನಿಸುತ್ತದೆ, ಮಹಿಳೆಯ ನಿರಾಕರಣೆಯ ಹಕ್ಕನ್ನು ಎತ್ತಿಹಿಡಿಯುತ್ತದೆ ಹಾಗೂ ಸೌಂದರ್ಯವನ್ನೇ ಆಕೆಯ ಮೌಲ್ಯವೆಂದು ಪರಿಗಣಿಸುವ ಸಮಾಜದ ದೃಷ್ಟಿಕೋನವನ್ನು ಅಲುಗಾಡಿಸುತ್ತದೆ. ಆದರೆ ವರ್ಗ ಮತ್ತು ಜಾತಿಯ ಅಸಮಾನತೆಗಳನ್ನು ಪ್ರತಿನಿಧಿಸುವಲ್ಲಿ, ಪುರುಷನ ಬೆಂಬಲದ ಅಗತ್ಯವನ್ನು ಪ್ರಶ್ನಿಸುವಲ್ಲಿ ಮತ್ತು ಸಾಧನೆಯನ್ನೇ ಗೆಲುವಿನ ಅಂತಿಮ ಸಂಕೇತವಾಗಿಸುವ ಕಥನದಿಂದ ಹೊರಬರುವಲ್ಲಿ ಚಿತ್ರಕ್ಕೆ ಮಿತಿಗಳಿವೆ. ಈ ಮಿತಿಗಳನ್ನು ಗುರುತಿಸುವುದರಿಂದ ಚಿತ್ರದ ಮಹತ್ವ ಕಡಿಮೆಯಾಗುವುದಿಲ್ಲ. ಬದಲಿಗೆ ಅದರ ರಾಜಕೀಯ ಆಶಯವನ್ನು ಹೆಚ್ಚು ಗಂಭೀರವಾಗಿ ನೋಡಲು ಸಾಧ್ಯವಾಗುತ್ತದೆ.

ಸುಟ್ಟದ್ದು ಮುಖವಷ್ಟೇ ಹೊರತು ಮಹಿಳೆಯ ಬದುಕಿನ ಮೇಲಿನ ಹಕ್ಕಲ್ಲ. ಆದರೆ ಆ ಹಕ್ಕನ್ನು ಮರಳಿ ಪಡೆಯಲು ಪ್ರತಿಯೊಬ್ಬ ಮಹಿಳೆಯೂ ಅಸಾಧಾರಣ ಸಾಧನೆ ಮಾಡಬೇಕಾದ ಅಗತ್ಯವಿಲ್ಲ. ಮಹಿಳೆಯ ಘನತೆ ಆಕೆಯ ಸೌಂದರ್ಯದಲ್ಲಿಲ್ಲ, ಪುರುಷನ ಪ್ರೀತಿಯಲ್ಲಿಲ್ಲ, ಸಮಾಜ ಮೆಚ್ಚುವ ಗೆಲುವಿನಲ್ಲಿಯೂ ಇಲ್ಲ. ತನ್ನ ಬದುಕನ್ನು ತನ್ನ ಇಚ್ಛೆಯಂತೆ ಬದುಕುವ ಆಕೆಯ ಹಕ್ಕಿನಲ್ಲಿದೆ.

ಒಬ್ಬ ಮಹಿಳೆ ತನ್ನನ್ನು ನಿರಾಕರಿಸಿದಳೆಂಬ ಕಾರಣಕ್ಕೆ ಆಕೆಯ ಬದುಕನ್ನೇ ನಾಶಮಾಡುವ ಹಕ್ಕು ತನಗಿದೆ ಎಂದು ಪುರುಷನೊಬ್ಬ ಭಾವಿಸುವುದಾದರೂ ಹೇಗೆ? ಇದು ಒಬ್ಬ ವ್ಯಕ್ತಿಯ ವಿಕೃತ ಮನಸ್ಥಿತಿಯ ಪ್ರಶ್ನೆಯಷ್ಟೇ ಅಲ್ಲ. ಪ್ರೀತಿಯ ಹೆಸರಿನಲ್ಲಿ ಮಹಿಳೆಯ ಮೇಲೆ ನಿಯಂತ್ರಣ ಸಾಧಿಸುವುದನ್ನು ಸಹಜವೆಂದು ಒಪ್ಪಿಕೊಳ್ಳುವ ಪುರುಷಪ್ರಧಾನ ಸಮಾಜದ ಮನಸ್ಥಿತಿಯ ಪ್ರಶ್ನೆಯೂ ಹೌದು. ಮನು ಅಶೋಕನ್ ನಿರ್ದೇಶನದ ಮಲಯಾಳಂ ಚಿತ್ರ ‘ಉಯರೆ’ (2019) ಈ ಮನಸ್ಥಿತಿಯನ್ನು ಪ್ರಶ್ನಿಸುತ್ತಲೇ ಮಹಿಳೆಯ ಕನಸು, ಸ್ವಾತಂತ್ರ್ಯ ಮತ್ತು ಘನತೆಯ ಕುರಿತು ಮಾತನಾಡುತ್ತದೆ. ಆದರೆ ಚಿತ್ರದ ಪ್ರಗತಿಪರ ನಿಲುವಿನ ಜೊತೆಗೆ ಅದರ ಮಿತಿಗಳನ್ನೂ ಗುರುತಿಸುವುದು ಅಗತ್ಯ.

Uyare clipping

ಪಾರ್ವತಿ ತಿರುವೋತ್ತು ಪಲ್ಲವಿ ರವೀಂದ್ರನ್ ಪಾತ್ರದಲ್ಲಿ, ಆಸಿಫ್ ಅಲಿ ಗೋವಿಂದ್ ಬಾಲಕೃಷ್ಣನ್ ಪಾತ್ರದಲ್ಲಿ ಮತ್ತು ಟೊವಿನೊ ಥಾಮಸ್ ವಿಶಾಲ್ ರಾಜಶೇಖರನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಪೈಲಟ್ ಆಗಬೇಕೆಂಬ ಕನಸು ಹೊತ್ತ ಪಲ್ಲವಿ, ತನ್ನನ್ನು ನಿಯಂತ್ರಿಸಲು ಯತ್ನಿಸುವ ಗೋವಿಂದ್‌ನ ಹಿಂಸಾತ್ಮಕ ವರ್ತನೆಯನ್ನು ಎದುರಿಸುತ್ತಾಳೆ. ಸಂಬಂಧದಿಂದ ಹೊರಬರಲು ಆಕೆ ನಿರ್ಧರಿಸಿದಾಗ, ಗೋವಿಂದ್ ಆಸಿಡ್ ದಾಳಿಯ ಮೂಲಕ ಆಕೆಯ ಮುಖವನ್ನೂ ಭವಿಷ್ಯವನ್ನೂ ನಾಶಮಾಡಲು ಪ್ರಯತ್ನಿಸುತ್ತಾನೆ.

ಗೋವಿಂದ್‌ನ ಹಿಂಸೆ ಆಸಿಡ್ ದಾಳಿಯೊಂದಿಗೆ ಆರಂಭವಾಗುವುದಿಲ್ಲ. ಪಲ್ಲವಿಯ ಆಯ್ಕೆಗಳು ಮತ್ತು ಸ್ವತಂತ್ರ ನಿರ್ಧಾರಗಳನ್ನು ನಿಯಂತ್ರಿಸಲು ಯತ್ನಿಸುವ ಅವನ ವರ್ತನೆಯಲ್ಲೇ ಅದರ ಬೇರುಗಳಿವೆ. ಪ್ರೀತಿಯನ್ನು ತನ್ನ ಹಕ್ಕು ಎಂದು ಭಾವಿಸುವ ಅವನು, ಪಲ್ಲವಿಯ ನಿರಾಕರಣೆಯನ್ನು ಒಪ್ಪಿಕೊಳ್ಳಲಾರ. ಹೀಗಾಗಿ ಆಸಿಡ್ ದಾಳಿ ಕ್ಷಣಿಕ ಕೋಪದ ಅಭಿವ್ಯಕ್ತಿಯಷ್ಟೇ ಅಲ್ಲ. ಇದು ಮಹಿಳೆಯ ಸ್ವಾತಂತ್ರ್ಯವನ್ನು ಶಿಕ್ಷಿಸುವ ಪುರುಷಾಹಂಕಾರದ ಕ್ರೂರ ರೂಪ. ವೈಯಕ್ತಿಕ ಸಂಬಂಧಗಳೊಳಗೆ ಸಹಜವೆಂದು ಒಪ್ಪಿಕೊಳ್ಳಲಾಗುವ ನಿಯಂತ್ರಣದ ರಾಜಕಾರಣವನ್ನು ಗೋವಿಂದ್‌ನ ಪಾತ್ರದ ಮೂಲಕ ಚಿತ್ರ ಬಯಲಿಗೆಳೆಯುತ್ತದೆ.

ಜನಪ್ರಿಯ ಸಿನಿಮಾಗಳು ಪ್ರೀತಿಯ ಹೆಸರಿನಲ್ಲಿ ಹೆಣ್ಣನ್ನು ಹಿಂಬಾಲಿಸುವುದನ್ನು ಮತ್ತು ಆಕೆಯ ಪ್ರತಿ ಹೆಜ್ಜೆಯನ್ನು ನಿಯಂತ್ರಿಸುವುದನ್ನು ಆಕರ್ಷಕವಾಗಿ ತೋರಿಸುವ ಮೂಲಕ ಇಂತಹ ಅಪರಾಧಗಳಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತವೆ. ತೆರೆಯ ಮೇಲೆ ದೌರ್ಜನ್ಯವನ್ನು ಗಂಡಸ್ತನದ ಗುಣವೆಂದು ಬಿಂಬಿಸುವ ಸಂಸ್ಕೃತಿ ಜೀವಂತವಿರುವವರೆಗೆ ಗೋವಿಂದ್‌ನಂತಹ ಪಾತ್ರಗಳು ಹುಟ್ಟುತ್ತಲೇ ಇರುತ್ತವೆ. ಚಿತ್ರವು ಈ ದೊಡ್ಡ ಸಾಮಾಜಿಕ ಸಮಸ್ಯೆಯನ್ನು ಸಂಪೂರ್ಣವಾಗಿ ಬಿಡಿಸಿಡದಿದ್ದರೂ, ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಕೇವಲ ಪ್ರೇಮ ವೈಫಲ್ಯವೆಂದು ಹಗುರವಾಗಿ ನೋಡುವ ಮನಸ್ಥಿತಿಯನ್ನು ಪ್ರಶ್ನಿಸುತ್ತದೆ.

ಪಲ್ಲವಿಯ ಮುಖವನ್ನೇ ಗುರಿಯಾಗಿಸುವುದರಲ್ಲಿಯೂ ಸಾಮಾಜಿಕ ಅರ್ಥವಿದೆ. ಮಹಿಳೆಯ ಸೌಂದರ್ಯವನ್ನು ಆಕೆಯ ಮೌಲ್ಯಕ್ಕೆ ಸಮೀಕರಿಸುವ ಸಮಾಜದಲ್ಲಿ ಮುಖದ ಮೇಲಿನ ದಾಳಿಯು ದೇಹವನ್ನು ಗಾಯಗೊಳಿಸುವುದಷ್ಟೇ ಅಲ್ಲ, ಆಕೆಯ ಸಾಮಾಜಿಕ ಅಸ್ತಿತ್ವವನ್ನೂ ಅಳಿಸಲು ಯತ್ನಿಸುತ್ತದೆ. ಸೌಂದರ್ಯಕ್ಕೆ ಧಕ್ಕೆಯಾದಾಗ ಮಹಿಳೆಯ ಬದುಕಿನ ಮೌಲ್ಯವೂ ಕುಸಿದಂತೆ ವರ್ತಿಸುವ ಸಮಾಜದ ದೃಷ್ಟಿಕೋನವನ್ನು ಚಿತ್ರ ಪ್ರಶ್ನಿಸುತ್ತದೆ. ಪಲ್ಲವಿಯ ಹೋರಾಟವು ಈ ದೃಷ್ಟಿಕೋನವನ್ನು ಒಪ್ಪಿಕೊಳ್ಳದ ಬದುಕಿನ ಹಕ್ಕಿನ ಹೋರಾಟವೂ ಹೌದು.

ಪಾರ್ವತಿ ತಿರುವೋತ್ತು ಪಲ್ಲವಿಯ ನೋವು, ಆಘಾತ ಮತ್ತು ಚೇತರಿಕೆಯ ಪ್ರಯತ್ನವನ್ನು ಅತಿರೇಕದ ಭಾವನಾತ್ಮಕತೆಯಿಲ್ಲದೆ ಕಟ್ಟಿಕೊಡುತ್ತಾರೆ. ಮುಖಭಾವ, ಮೌನ ಮತ್ತು ಮಾತುಗಳ ನಡುವಿನ ವಿರಾಮಗಳು ಆಕೆಯ ಒಳಸಂಘರ್ಷವನ್ನು ವ್ಯಕ್ತಪಡಿಸುತ್ತವೆ. ದಾಳಿಯ ನಂತರದ ಬದುಕನ್ನು ಕೇವಲ ದುರಂತವಾಗಿ ನಿರೂಪಿಸದೆ, ತನ್ನನ್ನು ತಾನು ಮರುಕಟ್ಟಿಕೊಳ್ಳಬೇಕಾದ ವ್ಯಕ್ತಿಯ ಅನುಭವವಾಗಿ ತೋರಿಸುವುದು ಅವರ ಅಭಿನಯದ ಶಕ್ತಿ. ವಿಮಾನಯಾನಕ್ಕೆ ಸಂಬಂಧಿಸಿದ ದೃಶ್ಯಗಳು ಪಲ್ಲವಿಯ ಕನಸನ್ನು ನೆನಪಿಸಿದರೆ, ದಾಳಿಯ ನಂತರದ ಹೋರಾಟ ಆ ಕನಸಿನ ಹಾದಿಯಲ್ಲಿ ಎದುರಾಗುವ ಅಡೆತಡೆಗಳನ್ನು ಮುಂದಿಡುತ್ತದೆ.

ಇದೇ ವಿಷಯವನ್ನು ಆಧರಿಸಿದ ಮೇಘನಾ ಗುಲ್ಜಾರ್ ನಿರ್ದೇಶನದ ‘ಚಪಾಕ್’ (2020) ಚಿತ್ರವು ಆಸಿಡ್ ದಾಳಿಯಿಂದ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಅವರ ಬದುಕಿನಿಂದ ಪ್ರೇರಣೆ ಪಡೆದಿದೆ. ಆಸಿಡ್ ದಾಳಿಯ ನಂತರದ ನ್ಯಾಯದ ಹೋರಾಟ, ಕಾನೂನು ವ್ಯವಸ್ಥೆ ಮತ್ತು ಪುನರ್ವಸತಿಯ ಪ್ರಶ್ನೆಗಳಿಗೆ ‘ಚಪಾಕ್’ ಹೆಚ್ಚು ಒತ್ತು ನೀಡಿದರೆ, ‘ಉಯರೆ’ ಪ್ರೀತಿಯ ಹೆಸರಿನಲ್ಲಿ ಮಹಿಳೆಯ ಮೇಲೆ ಹಕ್ಕು ಸಾಧಿಸುವ ಪುರುಷಪ್ರಧಾನ ಮನಸ್ಥಿತಿಯನ್ನು ಹಾಗೂ ತನ್ನ ಕನಸಿನ ಮೇಲಿನ ಹಕ್ಕನ್ನು ಉಳಿಸಿಕೊಳ್ಳುವ ಮಹಿಳೆಯ ಹೋರಾಟವನ್ನು ಕೇಂದ್ರವಾಗಿಟ್ಟುಕೊಳ್ಳುತ್ತದೆ. ಎರಡೂ ಚಿತ್ರಗಳು ಮಹಿಳೆಯ ಘನತೆಯನ್ನು ಸೌಂದರ್ಯದೊಂದಿಗೆ ಸಮೀಕರಿಸುವ ಸಾಮಾಜಿಕ ದೃಷ್ಟಿಕೋನವನ್ನು ಪ್ರಶ್ನಿಸುತ್ತವೆ. ಆದರೆ ಮಹಿಳೆಯ ಬದುಕನ್ನು ಮರುಕಟ್ಟಿಕೊಳ್ಳುವ ಹೋರಾಟವನ್ನು ವೈಯಕ್ತಿಕ ಧೈರ್ಯಕ್ಕೆ ಮಾತ್ರ ಸೀಮಿತಗೊಳಿಸದೆ, ಅದಕ್ಕೆ ಅಗತ್ಯವಾದ ಸಾಮಾಜಿಕ ಮತ್ತು ಸಾಂಸ್ಥಿಕ ಬೆಂಬಲದ ಪ್ರಶ್ನೆಯನ್ನೂ ಮುನ್ನೆಲೆಗೆ ತರುವುದು ಮುಖ್ಯ.

ಪಲ್ಲವಿಯ ಬದುಕನ್ನು ಮರುಕಟ್ಟಿಕೊಳ್ಳುವ ಪ್ರಯಾಣದಲ್ಲಿ ವಿಶಾಲ್‌ನ ಪಾತ್ರವೂ ಮಹತ್ವದ ಸ್ಥಾನ ಪಡೆಯುತ್ತದೆ. ಗೋವಿಂದ್ ಆಕೆಯನ್ನು ನಿಯಂತ್ರಿಸಲು ಯತ್ನಿಸಿದರೆ, ವಿಶಾಲ್ ಆಕೆಗೆ ಬೆಂಬಲ ನೀಡುತ್ತಾನೆ. ಆದರೆ ಇದನ್ನು ಕೆಟ್ಟ ಪುರುಷ ಮತ್ತು ಒಳ್ಳೆಯ ಪುರುಷ ಎಂಬ ಸರಳ ವಿಭಜನೆಗೆ ಇಳಿಸಲಾಗದು. ಮಹಿಳೆಗೆ ಅವಕಾಶ ನೀಡುವ ಉದಾರವಾದಿ ಪುರುಷನ ಚಿತ್ರಣವೂ ಪಿತೃಪ್ರಭುತ್ವದ ಮಿತಿಗಳಿಂದ ಸಂಪೂರ್ಣವಾಗಿ ಹೊರತಾಗಿಲ್ಲ. ಮಹಿಳೆಯ ಸ್ವಾತಂತ್ರ್ಯವು ಪುರುಷನ ಸಹಾನುಭೂತಿ ಅಥವಾ ಮಧ್ಯಸ್ಥಿಕೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿಯನ್ನೇ ಪ್ರಶ್ನಿಸಬೇಕಿದೆ. ವಿಶಾಲ್ ಪಲ್ಲವಿಗೆ ಬೆಂಬಲವಾಗುತ್ತಾನೆ, ಆದರೆ ಆಕೆಯ ಸ್ವಾತಂತ್ರ್ಯದ ಮೂಲ ಆಕೆಯದೇ ಹಕ್ಕು ಮತ್ತು ಸಾಮರ್ಥ್ಯವಾಗಿರಬೇಕು. ಈ ಅಂಶವನ್ನು ಚಿತ್ರ ಸಂಪೂರ್ಣವಾಗಿ ವಿಮರ್ಶಿಸುವುದಿಲ್ಲ.

ಇಲ್ಲಿ ಚಿತ್ರದ ವರ್ಗಮಿತಿಯೂ ಮುಖ್ಯವಾಗುತ್ತದೆ. ಪಲ್ಲವಿಯ ಕನಸನ್ನು ಮುಂದುವರಿಸಲು ಶಿಕ್ಷಣ, ತರಬೇತಿ, ಆರ್ಥಿಕ ಸಂಪನ್ಮೂಲ ಮತ್ತು ಕೌಟುಂಬಿಕ ಬೆಂಬಲದ ಅಗತ್ಯವಿದೆ. ಆದರೆ ಇಂತಹ ಅವಕಾಶಗಳು ಎಲ್ಲ ಮಹಿಳೆಯರಿಗೂ ಸಮಾನವಾಗಿ ಲಭ್ಯವಿಲ್ಲ. ಆಸಿಡ್ ದಾಳಿಗೆ ಒಳಗಾದ ಬಡ ಮತ್ತು ದಲಿತ ಮಹಿಳೆಯರು ಎದುರಿಸಬಹುದಾದ ಆರ್ಥಿಕ ಅಭದ್ರತೆ, ಚಿಕಿತ್ಸೆಯ ಅಲಭ್ಯತೆ, ಉದ್ಯೋಗದ ಅನಿಶ್ಚಿತತೆ ಹಾಗೂ ಸಾಮಾಜಿಕ ತಾರತಮ್ಯಗಳು ಚಿತ್ರದ ಕಥನದ ಕೇಂದ್ರಕ್ಕೆ ಬರುವುದಿಲ್ಲ. ಬದುಕನ್ನು ಮರುಕಟ್ಟಿಕೊಳ್ಳುವ ಅವಕಾಶಗಳೇ ಇಲ್ಲದ ಮಹಿಳೆಯರ ವಾಸ್ತವವನ್ನು ಚಿತ್ರ ಸಾಕಷ್ಟು ಪರಿಶೀಲಿಸುವುದಿಲ್ಲ.

ಹೀಗಾಗಿ ‘ಉಯರೆ’ಯನ್ನು ಆಸಿಡ್ ದಾಳಿಯಿಂದ ಬದುಕುಳಿದ ಎಲ್ಲ ಮಹಿಳೆಯರ ಅನುಭವದ ಪ್ರತಿನಿಧಿಯಾಗಿ ನೋಡಲಾಗದು. ಅದು ತನ್ನ ಕನಸನ್ನು ಮತ್ತೆ ಸಾಧಿಸಲು ಪ್ರಯತ್ನಿಸುವ ಮಹಿಳೆಯ ಕಥೆ. ಆದರೆ ಮಹಿಳೆಯರ ಮೇಲಿನ ಹಿಂಸೆಯನ್ನು ಅರ್ಥಮಾಡಿಕೊಳ್ಳಲು ವೈಯಕ್ತಿಕ ಧೈರ್ಯದ ಆಚೆಗೂ ನೋಡಬೇಕಾಗುತ್ತದೆ. ಜಾತಿ ಮತ್ತು ವರ್ಗದ ಅಸಮಾನತೆಗಳು ಚಿಕಿತ್ಸೆ, ಪುನರ್ವಸತಿ ಮತ್ತು ಉದ್ಯೋಗದ ಅವಕಾಶಗಳನ್ನು ನಿರ್ಧರಿಸುತ್ತವೆ. ಇವುಗಳನ್ನು ಚಿತ್ರ ಗಂಭೀರವಾಗಿ ಪರಿಗಣಿಸದಿರುವುದು ಅದರ ದೊಡ್ಡ ಮಿತಿಯಾಗಿದೆ.

ಚಿತ್ರದ ಅಂತ್ಯವು ಈ ವಿಮರ್ಶೆಗೆ ಮತ್ತೊಂದು ಆಯಾಮವನ್ನು ಸೇರಿಸುತ್ತದೆ. ಪಲ್ಲವಿ ಮತ್ತೆ ವಿಮಾನ ಹಾರಿಸುವ ಮೂಲಕ ತನ್ನ ಕನಸಿನತ್ತ ಮರಳುತ್ತಾಳೆ. ಇದು ಭರವಸೆ ಮೂಡಿಸುವ ಕ್ಷಣವಾದರೂ, ಹಿಂಸೆಯಿಂದ ಬದುಕುಳಿದ ಮಹಿಳೆ ತನ್ನ ಬದುಕಿನ ಮೌಲ್ಯವನ್ನು ಸಾಬೀತುಪಡಿಸಲು ಅಸಾಧಾರಣ ಸಾಧನೆ ಮಾಡಬೇಕಿಲ್ಲ ಎಂಬ ನಿಲುವಿನೊಂದಿಗೆ ವಿರೋಧಾಭಾಸವನ್ನೂ ಸೃಷ್ಟಿಸುತ್ತದೆ. ಪಲ್ಲವಿಯ ಗೆಲುವನ್ನು ವಿಮಾನ ಹಾರಿಸುವ ಸಾಧನೆಯ ಮೂಲಕವೇ ದೃಢಪಡಿಸುವಾಗ, ಚಿತ್ರವು ತಾನೇ ಪ್ರಶ್ನಿಸಬೇಕಾದ ‘ನೋವನ್ನು ಗೆದ್ದು ಅಸಾಧಾರಣ ಸಾಧನೆ ಮಾಡಿದ ಮಹಿಳೆ’ ಎಂಬ ಕಥನದತ್ತ ಮರಳುತ್ತದೆ.

ಪಲ್ಲವಿ ತನ್ನ ಕನಸನ್ನು ಸಾಧಿಸುವುದು ಆಕೆಯ ಹಕ್ಕು. ಆದರೆ ಆಕೆ ಪೈಲಟ್ ಆಗಲು ಸಾಧ್ಯವಾಗದಿದ್ದರೆ ಆಕೆಯ ಹೋರಾಟದ ಮೌಲ್ಯ ಕಡಿಮೆಯಾಗುವುದಿಲ್ಲ. ಬದುಕುಳಿಯುವುದು, ಚಿಕಿತ್ಸೆಯಿಂದ ಚೇತರಿಸಿಕೊಳ್ಳುವುದು, ತನ್ನ ಬದುಕಿನ ಕುರಿತು ನಿರ್ಧಾರ ತೆಗೆದುಕೊಳ್ಳುವುದು ಮತ್ತು ತನಗೆ ಸಾಧ್ಯವಾದ ರೀತಿಯಲ್ಲಿ ಬದುಕುವುದು ಕೂಡ ಗೆಲುವೇ. ಮಹಿಳೆಯ ಘನತೆಯನ್ನು ಸಾಧನೆಯಿಂದ ಪ್ರತ್ಯೇಕಿಸಬೇಕೆಂಬ ಆಶಯಕ್ಕೂ ಚಿತ್ರದ ಅಂತ್ಯದ ವಿಜಯೋತ್ಸವಕ್ಕೂ ನಡುವಿನ ಸಂಘರ್ಷವೇ ಅದರ ಗಮನಾರ್ಹ ಮಿತಿಯಾಗಿದೆ.

ಇದನ್ನೂ ಓದಿ ಅವಳ ಕಣ್ಣೋಟ | ‘ಪ್ರೇಮದ ಊರಲಿ’ ಶೀಲದ ಟೆಸ್ಟ್!

ನ್ಯಾಯದ ಪ್ರಶ್ನೆಯೂ ಕೇವಲ ಅಪರಾಧಿಗೆ ಶಿಕ್ಷೆಯಾಗುವುದಕ್ಕೆ ಸೀಮಿತವಾಗುವುದಿಲ್ಲ. ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಗುಣಮಟ್ಟದ ಚಿಕಿತ್ಸೆ, ಮಾನಸಿಕ ಆರೋಗ್ಯದ ಆರೈಕೆ, ಶಿಕ್ಷಣ, ಉದ್ಯೋಗ ಮತ್ತು ದೀರ್ಘಕಾಲೀನ ಪುನರ್ವಸತಿ ದೊರೆಯಬೇಕು. ಇವು ಸಹಾನುಭೂತಿಯ ದಾನಗಳಲ್ಲ; ಬದುಕುವ ಹಕ್ಕಿನ ಭಾಗಗಳು. ಇಂತಹ ನೆರವನ್ನು ಖಚಿತಪಡಿಸುವುದು ಕುಟುಂಬದಷ್ಟೇ ಸಮಾಜ ಮತ್ತು ಸರ್ಕಾರದ ಹೊಣೆಗಾರಿಕೆಯೂ ಹೌದು. ಮಹಿಳೆಯೊಬ್ಬಳು ತನ್ನ ಬದುಕನ್ನು ಮರುಕಟ್ಟಿಕೊಳ್ಳಲು ಅಸಾಧಾರಣ ಧೈರ್ಯ ಪ್ರದರ್ಶಿಸಬೇಕಾದ ಪರಿಸ್ಥಿತಿಯೇ ವ್ಯವಸ್ಥೆಯ ವೈಫಲ್ಯವನ್ನು ಸೂಚಿಸುತ್ತದೆ.

‘ಉಯರೆ’ ಪ್ರೀತಿಯ ಹೆಸರಿನಲ್ಲಿ ನಡೆಯುವ ನಿಯಂತ್ರಣವನ್ನು ಪ್ರಶ್ನಿಸುತ್ತದೆ, ಮಹಿಳೆಯ ನಿರಾಕರಣೆಯ ಹಕ್ಕನ್ನು ಎತ್ತಿಹಿಡಿಯುತ್ತದೆ ಹಾಗೂ ಸೌಂದರ್ಯವನ್ನೇ ಆಕೆಯ ಮೌಲ್ಯವೆಂದು ಪರಿಗಣಿಸುವ ಸಮಾಜದ ದೃಷ್ಟಿಕೋನವನ್ನು ಅಲುಗಾಡಿಸುತ್ತದೆ. ಆದರೆ ವರ್ಗ ಮತ್ತು ಜಾತಿಯ ಅಸಮಾನತೆಗಳನ್ನು ಪ್ರತಿನಿಧಿಸುವಲ್ಲಿ, ಪುರುಷನ ಬೆಂಬಲದ ಅಗತ್ಯವನ್ನು ಪ್ರಶ್ನಿಸುವಲ್ಲಿ ಮತ್ತು ಸಾಧನೆಯನ್ನೇ ಗೆಲುವಿನ ಅಂತಿಮ ಸಂಕೇತವಾಗಿಸುವ ಕಥನದಿಂದ ಹೊರಬರುವಲ್ಲಿ ಚಿತ್ರಕ್ಕೆ ಮಿತಿಗಳಿವೆ. ಈ ಮಿತಿಗಳನ್ನು ಗುರುತಿಸುವುದರಿಂದ ಚಿತ್ರದ ಮಹತ್ವ ಕಡಿಮೆಯಾಗುವುದಿಲ್ಲ. ಬದಲಿಗೆ ಅದರ ರಾಜಕೀಯ ಆಶಯವನ್ನು ಹೆಚ್ಚು ಗಂಭೀರವಾಗಿ ನೋಡಲು ಸಾಧ್ಯವಾಗುತ್ತದೆ.

ಸುಟ್ಟದ್ದು ಮುಖವಷ್ಟೇ ಹೊರತು ಮಹಿಳೆಯ ಬದುಕಿನ ಮೇಲಿನ ಹಕ್ಕಲ್ಲ. ಆದರೆ ಆ ಹಕ್ಕನ್ನು ಮರಳಿ ಪಡೆಯಲು ಪ್ರತಿಯೊಬ್ಬ ಮಹಿಳೆಯೂ ಅಸಾಧಾರಣ ಸಾಧನೆ ಮಾಡಬೇಕಾದ ಅಗತ್ಯವಿಲ್ಲ. ಮಹಿಳೆಯ ಘನತೆ ಆಕೆಯ ಸೌಂದರ್ಯದಲ್ಲಿಲ್ಲ, ಪುರುಷನ ಪ್ರೀತಿಯಲ್ಲಿಲ್ಲ, ಸಮಾಜ ಮೆಚ್ಚುವ ಗೆಲುವಿನಲ್ಲಿಯೂ ಇಲ್ಲ. ತನ್ನ ಬದುಕನ್ನು ತನ್ನ ಇಚ್ಛೆಯಂತೆ ಬದುಕುವ ಆಕೆಯ ಹಕ್ಕಿನಲ್ಲಿದೆ.

a71d07b5bd5d836dcc8d9f6e0431618b502c4dbb6bb3f88fc7df55ead8b958a2?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | SIR ವಿರುದ್ಧ ಮೊಳಗಿದ ಘೋಷ; ಪ್ರಜಾತಂತ್ರದ ಉಳಿವಿಗಾಗಿ ‘ಜನತಾ ಮೆರವಣಿಗೆ’

ದೇಶದ ಮತದಾರರ ಮೇಲೆ ಗ್ಯಾನೇಶ್ ಕುಮಾರ್ (ಚುನಾವಣಾ ಆಯೋಗ) ಹೇರಿರುವ ಎಸ್‌ಐಆರ್...

ಗಾಯದ ಗುರುತುಗಳಿಲ್ಲವೆಂದು ಪೋಕ್ಸೋ ಸಂತ್ರಸ್ತೆಗೆ ಪರಿಹಾರ ನಿರಾಕರಿಸುವಂತಿಲ್ಲ: ಅಲಹಾಬಾದ್‌ ಹೈಕೋರ್ಟ್

ಲೈಂಗಿಕ ದೌರ್ಜನ್ಯ ಪ್ರಕರಣದ ವೈದ್ಯಕೀಯ ವರದಿಯಲ್ಲಿ ದೈಹಿಕ ಗಾಯಗಳ ಗುರುತುಗಳು ದಾಖಲಾಗಿಲ್ಲ...

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...