ಶೆಟ್ಟರ್-ಸವದಿ ಜೋಡಿ ಹಣಿಯುವ ಹೊಣೆ ಬಿಎಸ್‌ವೈ ಹೆಗಲಿಗೆ; ಫಲ ನೀಡಬಹುದೇ ಬಿಜೆಪಿ ತಂತ್ರ?

Date:

Advertisements
  • ಶೆಟ್ಟರ್- ಸವದಿ ಜೋಡಿ ಹಣಿಯುವ ಹೊಣೆ ಬಿಎಸ್ ವೈ ಹೆಗಲಿಗೇರಿಸಿದ ವಿಘ್ನ ಸಂತೋಷಿ
  • ಮಾತು ತಪ್ಪಿದ ಪಕ್ಷದ ವಿರುದ್ಧ ಗೆದ್ದು ಬೀಗುವರೇ ಜಗದೀಶ್ ಶೆಟ್ಟರ್- ಲಕ್ಷ್ಮಣ ಸವದಿ

ಬಿಜೆಪಿಯ ‘ವಿಘ್ನ ಸಂತೋಷಿ’ಗಳ ರಣತಂತ್ರದೊಳಗೆ ಸಿಲುಕಿರುವ ಬಿ ಎಸ್ ಯಡಿಯೂರಪ್ಪನವರಿಗೆ ಇದೀಗ ಮರ ಮತ್ತು ಕೊಡಲಿ ಹಿಡಿಕೆಯ ಸಂಬಂಧ ಸನ್ನಿವೇಶ ಎದುರಾಗಿದೆ.

ವೃಕ್ಷ ಸಂಕುಲಕ್ಕೆ ಕೊಡಲಿ ಕಾವೇ ಕಂಟಕವಾದಂತೆ ಲಿಂಗಾಯತ ಸಮುದಾಯದ ಶೆಟ್ಟರ್ –ಸವದಿ ಜೋಡಿ ಹಣಿಯಲು ಬಿ ಎಲ್ ಸಂತೋಷ್ ಬಳಗ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಬಿಎಎಸ್ವೈ ಅವರನ್ನು ಮುಂದೆ ಬಿಟ್ಟಿದೆ.

ಒಂದು ಕಾಲಕ್ಕೆ ತಾನೇ ಬದಿಗೆ ಸರಿಸಿದ್ದ ಯಡಿಯೂರಪ್ಪ ಅವರನ್ನು ಮತ್ತೆ ಮುನ್ನೆಲೆ ಸಂತೋಷ್ ಬಳಗ ಕರೆತಂದಿದ್ದು ಇದೇ ಲಿಂಗಾಯತ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಎನ್ನುವುದು ಈಗ ಜಗಜ್ಜಾಹೀರಾಗಿರುವ ಸತ್ಯ.

Advertisements

ಮಗ ವಿಜಯೇಂದ್ರರ ರಾಜಕೀಯ ಭವಿಷ್ಯ ಭದ್ರಗೊಳಿಸಲು ತಾನೇ ತ್ಯಾಗಕ್ಕೆ ಸಿದ್ದನಾಗಿ, ವರುಣಾದ ಬಲಿಪೀಠದಿಂದ ಅವರನ್ನು ರಕ್ಷಿಸಿ ಶಿಕಾರಿಪುರದಲ್ಲಿ ಸೇಫ್ ಮಾಡಲು ತೆಗೆದುಕೊಂಡ ಸಹಾಯಕ್ಕಾಗಿ ಈಗ ಯಡಿಯೂರಪ್ಪ ಬಿಜೆಪಿ ಮತ್ತು ಸಂತೋಷ್ ಪಾಲಿಗೆ ಜೀ ಹುಜೂರ್ ಪಾಲಕ.

ಈ ಲಾಭದ ಲೆಕ್ಕಾಚಾರವನ್ನೇ ತಮ್ಮ ದಾಳವಾಗಿಸಿಕೊಂಡಿರುವ ಸಂತೋಷ್ ಮತ್ತವರ ಬಳಗ, ಪಕ್ಷ ಬಿಟ್ಟ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಯವರನ್ನು ಮಟ್ಟ ಹಾಕಲು ಬಳಸಿಕೊಳ್ಳುತ್ತಿದೆ.

ಲಿಂಗಾಯತರನ್ನು ಹಣಿಯಲು ಲಿಂಗಾಯರತನ್ನೇ ಮುಂದೆ ಬಿಡುವ ರಣತಂತ್ರ ಇವರದ್ದು. ಅಂದರೆ ಇದರ ಲಾಭ ನಷ್ಟದ ಹೊಣೆ ಎರಡೂ ಬಿಜೆಪಿಯ ಹಿರಿಯ ಲಿಂಗಾಯತ ನಾಯಕ ಯಡಿಯೂರಪ್ಪ ಹೆಗಲಿಗೆ ಹೋಗುವಂತೆ ಮಾಡುವುದು ಅವರ ಸ್ಪಷ್ಟ ಉದ್ದೇಶ.

ಈ ಪ್ರತಿಷ್ಠೆಯ ಹೋರಾಟದಲ್ಲಿ ಗೆದ್ದು ಬಂದರೆ ನಾವು ತೆಗೆದುಕೊಂಡ ನಿರ್ಧಾರಕ್ಕೆ ಸಿಕ್ಕ ಜಯ ಎನ್ನುವುದು, ಸೋತರೆ ಜಾತಿ ಪ್ರೇಮಕ್ಕೆ ಕಟ್ಟು ಬಿದ್ದು ಯಡಿಯೂರಪ್ಪನವರೇ ಪಕ್ಷಕ್ಕೆ ಕಳಂಕ ತಂದರು ಎಂದು ಹೇಳಿ ಮರಳಿ ಅವರನ್ನು ಪಕ್ಷದಿಂದ ದೂರ ಸರಿಸುವುದು ಸಂತೋಷ ಕೂಟದ ಲೆಕ್ಕಾಚಾರ.

ಹೀಗಾಗಿ ಪಕ್ಷ ಬಿಟ್ಟ ಇಬ್ಬರು ಲಿಂಗಾಯತ ನಾಯಕರನ್ನು ಕಟ್ಟಿ ಹಾಕಲು ಬಿಜೆಪಿ ಈಗ ಪ್ರತ್ಯೇಕ ಪಡೆಯೊಂದನ್ನು ರೂಪಿಸಿ ರಣಕಣದಲ್ಲಿ ಅವರನ್ನು ಕಟ್ಟಿ ಹಾಕಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಸಾಲು ಸಾಲು ಸಭೆ ನಡೆಸಲು ಆದೇಶ ನೀಡಿರುವ ಸಂತೋಷ ಪಡೆ ಸಿಕ್ಕಸಿಕ್ಕಲ್ಲಿ ಈ ಇಬ್ಬರೂ ನಾಯಕರ ವಿರುದ್ದ ವಾಗ್ದಾಳಿ ನಡೆಸುವಂತೆ ಸೂಚಿಸಿದೆ. ಜೊತೆಗೆ ಈ ಜವಾಬ್ದಾರಿಯನ್ನು ಪಕ್ಷದ ಲಿಂಗಾಯತ ಹಾಗೂ ರಾಷ್ಟ್ರೀಯ ನಾಯಕರ ಹೆಗಲಿಗೇರಿಸಿದೆ.

ಕಳೆದೆರಡು ದಿನಗಳಿಂದ ಸವದಿ ಹಾಗೂ ಶೆಟ್ಟರ್ ಕ್ಷೇತ್ರಗಳಲ್ಲಿ ಸರಣಿ ಸಭೆ ನಡೆಸಿರುವ ಬಿಜೆಪಿ, ಅಲ್ಲಿನ ಲಿಂಗಾಯತ ಸಮುದಾಯವನ್ನೇ ಗುರಿಯಾಗಿಸಿಕೊಂಡು ಪಕ್ಷಕ್ಕೆ ಶೆಟ್ಟರ್ -ಸವದಿ ಜೋಡಿ ಮಾಡಿರುವ ದ್ರೋಹದ ಬಗ್ಗೆ ತಿಳಿವಳಿಕೆ ಮೂಡಿಸಿ ಅವರನ್ನು ಎತ್ತಿಕಟ್ಟುತ್ತಿದೆ.

ಹಾಗೆಯೇ ಈ ನಾಯಕರಿಬ್ಬರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಮ್ಮ ಮೇಲೆ ಬರುವ ಆರೋಪಗಳಿಗೆ ಉತ್ತರ ಕೊಡುವುದರಲ್ಲೇ ಕಾಲಹರಣ ಮಾಡುವಂತೆ ಮಾಡುವ ಪ್ರಯೋಗವನ್ನೂ ಸಂತೋಷ ಪಡೆ ಮಾಡಿದೆ.

ಇವಿಷ್ಟು ಸಾಲದು ಎನ್ನುವಂತೆ ಯಡಿಯೂರಪ್ಪನವರ ಬಾಯಿಯಿಂದಲೇ ಶೆಟ್ಟರ್ ಸೋಲಿಸುವ ಜವಾಬ್ದಾರಿ ನನ್ನದು ಎಂದು ಹೇಳಿಸಿದೆ. ಇದಿಷ್ಟೂ ಸಾಲದು ಎನ್ನುವಂತೆ ಇವರಿಬ್ಬರ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದ್ದ ಕಾರಣದಿಂದ ಅವರಿಗೆ ಟಿಕೆಟ್ ಕೊಡಲಿಲ್ಲ. ಇವರು ಕ್ಷೇತ್ರವನ್ನು ಸರಿಯಾಗ ನೋಡಿಕೊಳ್ಳಲಿಲ್ಲ ಎಂದು ಬಿಂಬಿಸುವ ಪ್ರಯತ್ನವನ್ನೂ ಬಿಜೆಪಿ ಮಾಡುತ್ತಿದೆ.

ಈ ಸುದ್ದಿ ಓದಿದ್ದೀರಾ? :ಜಗದೀಶ್ ಶೆಟ್ಟರ್ ಗೆಲ್ಲುವುದು ಶತಸಿದ್ಧ : ರಕ್ತದಲ್ಲಿ ಪತ್ರ…

ಇದರ ಜೊತೆಜೊತೆಗೆ ದೆಹಲಿ ನಾಯಕರಿಂದಲೂ ಇಬ್ಬರ ಬಗ್ಗೆ ವಾಗ್ದಾಳಿ ನಡೆಸುವ ಹೇಳಿಕೆಗಳನ್ನು ಕೊಡಿಸಿ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಸುಶೀಲಕುಮಾರ ಮೋದಿ ಇವರಿಬ್ಬರ ವಿರುದ್ಧ ಕಿಡಿಕಾರಿದ್ದಾರೆ.

‘ವರಿಷ್ಠರ ಮಾತು ಧಿಕ್ಕರಿಸಿ ಇವರಿಬ್ಬರೂ ಕಾಂಗ್ರೆಸ್‌ಗೆ ಹೋಗಿದ್ದಾರೆ. ಬಿಜೆಪಿಯಿಂದ ಬಂಡಾಯವೆದ್ದು ಹೊರಹೋದವರು ಯಾರೂ ಗೆದ್ದಿಲ್ಲ. ಬೇರೆಯವರ ಮುಂದೆ ಇವರು ನೀರಿನಿಂದ ಹೊರತೆಗೆದ ಮೀನಿನಂತಾಗುತ್ತಾರೆ. ನೋಡಿ’ ಎಂದು ಹೇಳಿದ್ದಾರೆ.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನವ ಬಿಜೆಪಿ ಮತ್ತು ಸಂತೋಷ ಕೂಟದ ತಂತ್ರ ಹೇಗೆ ವರ್ಕ್ ಆಗುತ್ತದೆ? ಮತ್ತು ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈ ತಂತ್ರಗಳಿಗೆ ಪ್ರತಿತಂತ್ರ ಹೆಣೆದು, ಹೇಗೆ ಗೆದ್ದು ತೋರಿಸುತ್ತಾರೆ ಎಂಬುದು ಸದ್ಯದ ಕುತೂಹಲ.

bfe5ebf00de2b670976597f37a6d2b77?s=150&d=mp&r=g
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X