ಸಂಸದ ಪ್ರತಾಪ್ ಸಿಂಹಗೆ `ಮಂಗಳಾರತಿ’ ಮಾಡಿದ ವರುಣ ಮತದಾರರು

Date:

  • ‘ನಮ್ಮ ಸಂಸದರು ಈವರೆಗೂ ಕ್ಷೇತ್ರಕ್ಕೆ ಬಂದೇ ಇಲ್ಲ’
  • ಮತದಾರರ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಪ್ರತಾಪ್ ಸಿಂಹ

ವರುಣ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಹೋದ ಕಡೆಗಳಲ್ಲೆಲ್ಲ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಯುವಕರು ಸಚಿವ ಸೋಮಣ್ಣ ಅವರಿಗೆ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಇದೀಗ ಸಂಸದ ಪ್ರತಾಪ್ ಸಿಂಹ ಅವರಿಗೆ ಕ್ಷೇತ್ರದ ಜನತೆ ‘ಮಂಗಳಾರತಿ’ ಮಾಡಿದೆ.

ಹೌದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ವಿ ಸೋಮಣ್ಣ ಅವರನ್ನು ಅಖಾಡಕ್ಕಿಳಿಸಿದೆ. ಪ್ರತಾಪ್ ಸಿಂಹ ಜೊತೆಗೂಡಿದ ನಾಯಕರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದರೆ, ಪ್ರಚಾರದ ವೇಳೆ ಬಿಜೆಪಿ ನಾಯಕರು ಸ್ಥಳೀಯರಿಂದ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ, ಮುಖಭಂಗ ಅನುಭವಿಸುತ್ತಿದ್ದಾರೆ.

ಸೋಮಣ್ಣ ಪರ ಮತಯಾಚನೆಗೆ ತೆರಳಿದ್ದ ಪ್ರತಾಪ್ ಸಿಂಹ ಅವರಿಗೆ ಕ್ಷೇತ್ರದ ಗ್ರಾಮವೊಂದರ ಜನರು ‘ಫುಲ್ ಕ್ಲಾಸ್‌’ ತೆಗೆದುಕೊಂಡಿದ್ದಾರೆ. “ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನು ಅಂತೀರಲ್ವಾ..? ಸಿದ್ದರಾಮಯ್ಯ ಹತ್ರ ಕುಳಿತುಕೊಳ್ಳಿ ಆಗ ನಿಮಗೆ ತಿಳಿಯುತ್ತೆ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವರುಣ ಜನರ ಪ್ರಶ್ನೆಗೆ ಪ್ರತಾಪ್ ಸಿಂಹ ಕಕ್ಕಾಬಿಕ್ಕಿಯಾಗಿದ್ದಾರೆ. ಎಲ್ಲರಿಗೂ ಸಮಜಾಯಿಷಿ ಕೊಡಲು ಪ್ರತಾಪ್ ಸಿಂಹ ವರುಣ ಜನರ ಮುಂದೆ ಪರದಾಡಿದ್ದಾರೆ.

“ಅಕ್ಕಿ ನಮ್ಮದು ಚೀಲ ಮಾತ್ರ ಸಿದ್ದರಾಮಯ್ಯ ಅವ್ರದ್ದು ಅಂತೀರಾ. ಈಗ ಯಾಕೆ ಅಕ್ಕಿ ಕಡಿಮೆ ಕೊಡ್ತಿದ್ದೀರಾ. ಸಂಸದ ಶ್ರೀನಿವಾಸ್ ಪ್ರಸಾದ್ ಇದುವರೆಗೂ ಕ್ಷೇತ್ರಕ್ಕೆ ಬಂದೇ ಇಲ್ಲ” ಎಂದು ತರಾಟೆ ತೆಗೆದುಕೊಂಡಿದ್ದಾರೆ.

“ಮಹದೇವಪ್ಪ ವಿರುದ್ಧ ಮಾತಾಡ್ತೀರಾ. ರಸ್ತೆಗಳ ರಾಜ ಅಂತೀರಾ..ಬರೀ ಸುಳ್ಳು ಹೇಳ್ತೀರಾ ನಿಮ್ಮ ಕೊಡುಗೆ ಏನ್ರಿ?” ಎಂದು ಮತದಾರರು ಪ್ರಶ್ನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ವರುಣಾದಲ್ಲಿ ಸೋಮಣ್ಣಗೆ ಬಿಜೆಪಿ ಯುವಕರ ಕ್ಲಾಸ್‌; ಸಂಧಾನಕ್ಕೆ ನಿಂತ ಪ್ರತಾಪ್‌ ಸಿಂಹಗೂ ತರಾಟೆ

ಈ ಮೊದಲೂ ಛೀಮಾರಿ ಹಾಕಿಸಿಕೊಂಡಿದ್ದ ಪ್ರತಾಪ್ ಸಿಂಹ

ಕ್ಷೇತ್ರದೊಳಗೆ ಪ್ರಚಾರ ಕಾರ್ಯಕ್ಕೆ ತೆರಳಿದ್ದ ಸಚಿವ ಸೋಮಣ್ಣರನ್ನು ಅಡ್ಡಗಟ್ಟಿದ ಸ್ಥಳೀಯ ಬಿಜೆಪಿ ಯುವಕರ ಗುಂಪೊಂದು ಮೂಲಸೌಕರ್ಯದ ಬೇಡಿಕೆ ಇಟ್ಟು ಮುಜುಗರಕ್ಕೀಡು ಮಾಡಿತ್ತು.

ಯುವಕರ ಮಾತಿನಿಂದ ಸಚಿವರು ಕಸಿವಿಸಿಗೊಂಡ ವೇಳೆ ಮಧ್ಯೆ ಪ್ರವೇಶಿಸಿದ ಸಂಸದ ಪ್ರತಾಪ್ ಸಿಂಹ ಇವೆಲ್ಲದರ ಬಗ್ಗೆ ಮಾತನಾಡೋಣ ಎಂದು ಹೇಳುವ ವೇಳೆ ಮತ್ತೆ ಅವರನ್ನೂ ಪ್ರಶ್ನಿಸಿದ ಯುವಕರು ನಮ್ಮ ಸಂಸದರು ಎನಿಸಿಕೊಂಡ ನೀವು ನಮಗೆ ಮಾಡಿಕೊಟ್ಟಿರುವ ಸಾಧನೆಗಳೇನು ಅನ್ನೋದನ್ನ ಹೇಳ್ತಿರಾ ಎಂದು ಕೇಳಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿಯವರ ‘ಚಾರ್‌ ಸವ್ ಪಾರ್’ ಘೋಷಣೆ ಹಿಂದಿನ ಉದ್ದೇಶವೇನು? ಅರಿತಿದ್ದಾರೆಯೇ ‘ಒಬಿಸಿ’ಗಳು!

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದಿಲ್ಲ. ಮೀಸಲಾತಿಯನ್ನು...

ಭಯಗೊಂಡಿರುವ ಪ್ರಧಾನಿ ವೇದಿಕೆಯಲ್ಲೇ ಕಣ್ಣೀರು ಹಾಕಬಹುದು: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ನಡೆಸಿರುವ ವಾಗ್ದಾಳಿಗೆ ತಿರುಗೇಟು ನೀಡಿರುವ...

ರಣಹೇಡಿ ನಾನಲ್ಲ, ಗಿಫ್ಟ್ ಕೂಪನ್ ಕೊಡುವವರು ರಣಹೇಡಿಗಳು: ಡಿಕೆಶಿಗೆ ಕುಮಾರಸ್ವಾಮಿ ತಿರುಗೇಟು

ರಣಹೇಡಿ ನಾನಲ್ಲ, ನೇರವಾಗಿ ಚುನಾವಣೆ ಎದುರಿಸಲಾಗದೆ ರಾತ್ರೋರಾತ್ರಿ ಮತದಾರರಿಗೆ QR ಕೋಡ್...

ಸತ್ಯ ಹರಿಶ್ಚಂದ್ರನ ಮೊಮ್ಮಗ ತರ ಕುಮಾರಸ್ವಾಮಿ ಮಾತಾಡ್ತಾರೆ: ಡಿ ಕೆ ಶಿವಕುಮಾರ್ ವಾಗ್ದಾಳಿ

ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದೆಯೇ?, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯವರು...