ಸಮುದಾಯದ ಕೆಲವು ವ್ಯಕ್ತಿಗಳು ತಮ್ಮ ಸ್ವ ಹಿತಾಸಕ್ತಿಗಾಗಿ ಜನವಿರೋಧಿ, ಪ್ರಜಾಪ್ರಭುತ್ವ ಸಂವಿಧಾನ ವಿರೋಧಿ, ಬೆಲೆ ಏರಿಕೆ ಮೂಲಕ ಜನಸಾಮಾನ್ಯರನ್ನು ಸುಲಿಗೆ ಮಾಡುವ ಬಿಜೆಪಿ ಪಕ್ಷದ ಪರವಾಗಿ ವೋಟ್ ಮಾಡಿ ಎಂದು ರಾಜ್ಯಾದ್ಯಂತ ಪತ್ರಿಕಾ ಹೇಳಿಕೆ ನೀಡಿದ್ದು ಪಕ್ಷಪಾತದಿಂದ ಕೂಡಿದೆ.
ರಾಜ್ಯದಲ್ಲಿ ಮಾದಿಗ ಸಮುದಾಯದ ಕೆಲವು ಮುಖಂಡರು ಈ ವಿಧಾನಸಭೆ ಚುನಾವಣೆಯಲ್ಲಿ “ಕಾಂಗ್ರೆಸ್ ಸೋಲಿಸಿ ಬಿಜೆಪಿ ಗೆಲ್ಲಿಸಿ” ಎಂದು ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ರಾಜ್ಯಾದ್ಯಂತ ಸಮಾಜದ ನಾಯಕರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಇತರೆ ಪಕ್ಷಗಳಲ್ಲಿ ಸ್ಥಾನಮಾನ ಹೊಂದಿದ್ದಾರೆ. ಹಲವು ಪಕ್ಷಗಳಲ್ಲಿ ಸಮಾಜದ ಮುಖಂಡರು ಇಂದಿಗೂ ಕೂಡ ರಾಜಕೀಯವಾಗಿ ಸಕ್ರಿಯವಾಗಿ ಪಕ್ಷಗಳ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಕೆಲವು ವ್ಯಕ್ತಿಗಳು ತಮ್ಮ ಸ್ವ ಹಿತಾಸಕ್ತಿಗಾಗಿ ಜನವಿರೋಧಿ ಪ್ರಜಾಪ್ರಭುತ್ವ ಸಂವಿಧಾನ ವಿರೋಧಿ ಬೆಲೆ ಏರಿಕೆ ಮೂಲಕ ಜನಸಾಮಾನ್ಯರನ್ನು ಸುಲಿಗೆ ಮಾಡುವ ಜನತಂತ್ರ ವಿರೋಧಿ ಬಿಜೆಪಿ ಪಕ್ಷದ ಪರವಾಗಿ ವೋಟ್ ಮಾಡಿ ಎಂದು ರಾಜ್ಯಾದ್ಯಂತ ಪತ್ರಿಕೆ ಹೇಳಿಕೆ ನೀಡಿದ್ದು ಪಕ್ಷಪಾತವಾಗಿದೆ. ಇಂತಹ ಹೇಳಿಕೆಗಳನ್ನು ಸಮುದಾಯವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಮ್ಮ ತಮ್ಮ ವೈಯಕ್ತಿಕ ಲಾಭಕ್ಕಾಗಿ ಸ್ಥಾನಮಾನಕ್ಕಾಗಿ ಅಧಿಕಾರಕ್ಕಾಗಿ ರಾಜಕೀಯವಾಗಿ ತಾವು ತೊಡಗಿಸಿಕೊಂಡ ಬಿಜೆಪಿ ಪಕ್ಷದ ಸಿದ್ಧಾಂತ ವಿಚಾರಧಾರೆ ಸಮುದಾಯದ ತಲೆಗೆ ಅಂಟಿಸುವುದು ತಪ್ಪು. ತಮ್ಮ ವೈಯಕ್ತಿಕ ಅಭಿಪ್ರಾಯ ಭಾವನೆಗಳನ್ನು ಸಮುದಾಯದ ಅಭಿಪ್ರಾಯ ಎಂದು ಸಾರ್ವಜನಿಕವಾಗಿ ಬಿಂಬಿಸುವ ಇಂತಹ ಕೃತ್ಯವನ್ನು ಸಮುದಾಯ ವಿರೋಧ ಮಾಡುತ್ತದೆ. ಸಂಘಟಿತ ಬಲಾಢ್ಯ ಸಮುದಾಯಗಳ ಎಲ್ಲ ಪಕ್ಷಗಳಲ್ಲಿಯೂ ಇವೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೆ ಸ್ಥಾನಮಾನ ಅನುಭವಿಸುತ್ತದೆ ಎಲ್ಲಿಯೂ ಕೂಡ ಒಂದು ಪಕ್ಷದ ಪರವಾಗಿ ತಮ್ಮ ಇಡೀ ಸಮುದಾಯ ಇದೆ ಎಂದು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ ಮಾದಿಗ ಸಮುದಾಯ ಅಸಂಘಟಿತ ಸಮುದಾಯವಾಗಿದ್ದು ನಾವು ಇಂತಹ ಪಕ್ಷದ ಪರವಾಗಿ ಇದ್ದೇವೆ ಎಂದು ಕೇಳುವುದು ಸರಿಯಲ್ಲ, ರಾಜಕೀಯವಾಗಿ ಈ ತರಹದ ಹೇಳಿಕೆಗಳು ಸಮುದಾಯಕ್ಕೆ ಪ್ರಯೋಜನ ಆಗುವುದಿಲ್ಲ. ರಾಜ್ಯದಲ್ಲಿ ಈಗಾಗಲೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರ್ಕಾರವು ದಲಿತರಿಗೆ ಅವಕಾಶ ಅನುಕೂಲ ಕಲ್ಪಿಸಿದ್ದು ದಲಿತ ಸಮುದಾಯ ಎಂದಿಗೂ ಮರೆಯುವಂತಿಲ್ಲ ಬಿಜೆಪಿ ಪಕ್ಷದ ಸರ್ಕಾರದಲ್ಲಿಯೂ ಕೂಡ ಅನುಕೂಲವಾಗಿದೆ. ಹಾಗಂತ ಇಡೀ ಮಾದಿಗ ಸಮುದಾಯ ಏಕಪಕ್ಷಿಯವಾಗಿ ಒಂದು ಪಕ್ಷದ ಪರವಾಗಿ ಇದೆ ಎಂದು ಬಿಂಬಿಸುವ ತಮ್ಮ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಸಮುದಾಯದ ಹೆಸರನ್ನು ಬಳಸಿಕೊಂಡು ಸಾರ್ವಜನಿಕವಾಗಿ ಇಂತಹ ಪಕ್ಷದ ಪರ ಇಂತಹ ಪಕ್ಷದ ವಿರುದ್ಧ ಎಂದು ಹೇಳುವ ನೈತಿಕ ಹಕ್ಕು ಯಾವುದೇ ವ್ಯಕ್ತಿಗತವಾಗಿ ಇರುವುದಿಲ್ಲ. ಸಮುದಾಯವು ರಾಜಕೀಯವಾಗಿ ಎಲ್ಲ ಪಕ್ಷಗಳ ಕೆಲಸ ಕಾರ್ಯಗಳನ್ನು ಸಕ್ರಿಯವಾಗಿ ಮಾಡುತ್ತಲೇ ಬರುತ್ತದೆ ಅದು ಪ್ರಜಾಪ್ರಭುತ್ವದ ಸೌಂದರ್ಯ ಕೂಡ ಮುಂದಿನ ದಿನಗಳಲ್ಲಿ ಇಂತಹ ವೈಯಕ್ತಿಕ ಹೇಳಿಕೆಗಳನ್ನು ಸಮುದಾಯದ ಹೇಳಿಕೆಗಳೆಂದು ಯಾವುದೇ ಪಕ್ಷಗಳು ಭಾವಿಸಬಾರದು ಎಂದು ಈ ಮೂಲಕ ತಿಳಿಸುತ್ತದೆ.