ಸಿನಿ ಪಯಣಕ್ಕೆ ದಶಕದ ಸಂಭ್ರಮ : ಡಾಲಿ ಧನಂಜಯ್‌ಗೆ ತಾರೆಯರ ಶುಭಾಶಯ

Date:

ಧನಂಜಯ ಬಹಳ ಮುಗ್ದ ಎಂದ ದುನಿಯಾ ವಿಜಯ್‌

ಅರಸಿಕೆರೆ ಅಣ್ಣನಿಗೆ ಶುಭಹಾರೈಸಿದ ನೀರ್‌ ದೋಸೆ ನಿರ್ದೆಶಕ

ನಟ ಧನಂಜಯ ಸ್ಯಾಂಡಲ್‌ವುಡ್‌ನಲ್ಲಿ 10 ವರ್ಷಗಳನ್ನು ಪೂರೈಸಿದ್ದಾರೆ. ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ʼಡೈರೆಕ್ಟರ್‌ ಸ್ಪೆಷಲ್‌ʼ ಚಿತ್ರ ತೆರೆಕಂಡು ಮೇ 31ಕ್ಕೆ 10 ವರ್ಷಗಳು ಕಳೆದಿವೆ. ಈ ಹಿನ್ನೆಲೆ ಧನಂಜಯ ಅವರ ಅಭಿಮಾನಿಗಳು ದಶಮಾನೋತ್ಸವ ಆಚರಿಸುತ್ತಿದ್ದು, ಸರಳ ವ್ಯಕ್ತಿತ್ವದ ಈ ನಟನಿಗೆ ಆಪ್ತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚಿತ್ರರಂಗದಲ್ಲಿ 10 ವರ್ಷಗಳನ್ನು ಪೂರೈಸಿರುವ ಧನಂಜಯ ಅವರ ಬಗ್ಗೆ ಟ್ವೀಟ್‌ ಮಾಡಿರುವ ನಿರ್ದೇಶಕ ಕೆ.ಎಂ ಚೈತನ್ಯ, “ಜನಪ್ರಿಯ ನಟನೊಬ್ಬ ಅನೇಕ ಹೊಸ ಪ್ರಯತ್ನಗಳಿಗೆ ಪ್ರೇರಣೆ ಆಗಬಲ್ಲ. ಚಿತ್ರರಂಗದಲ್ಲಿ ಯಾವ ಹಿನ್ನೆಲೆ ಇಲ್ಲ. ಅದರ ಬಗ್ಗೆ ಅಪಾರ ಪ್ರೀತಿ. ಬಡವರ ಮನೆ ಹುಡುಗ ಎಂದು ಗುರುತಿಸಿಕೊಂಡ ಗೆಳೆಯ ಡಾಲಿ ಧನಂಜಯ ಚಿತ್ರರಂಗ ಪ್ರವೇಶಿಸಿ ಈಗ ಒಂದು ದಶಕ. ಅದರಲ್ಲಿ ಅನೇಕ ಯಶಸ್ಸು, ಸೋಲಿನ ನಡುವೆ ಎದೆಗುಂದದೆ ತಾನೂ ಬೆಳೆದು, ಇತರರನ್ನೂ ಬೆಳೆಯಲು ಏಣಿ ಹಾಕಲು ಹೊರಟ ಸಹಜ, ಸರಳ ಧೀಮಂತ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೆಲ್ಫೀ ವಿಡಿಯೋ ಹಂಚಿಕೊಂಡು ಧನಂಜಯ್‌ ಅವರಿಗೆ ಶುಭ ಕೋರಿರುವ ಸ್ಟಾರ್‌ ನಟ ದುನಿಯಾ ವಿಜಯ್‌, “ಧನು ನೀನು ಚಿತ್ರರಂಗಕ್ಕೆ ಬಂದು 10 ವರ್ಷ ಆಗಿದೆ. ಹೀಗೆ ನೂರು ವರ್ಷಗಳನ್ನು ಪೂರೈಸು ಎಂದು ಒಬ್ಬ ಅಣ್ಣನಾಗಿ, ಸ್ನೇಹಿತನಾಗಿ ಸದಾ ಒಳ್ಳೆಯದನ್ನು ಬಯಸುತ್ತಿರುತ್ತೇನೆ. ದೂರದ ಅರಸಿಕೆರೆಯಿಂದ ಬಂದು ತುಂಬಾ ಕಷ್ಟಪಟ್ಟು ನಾಯಕ ನಟನಾಗಿ, ನಿರ್ಮಾಪಕನಾಗಿ ಬೆಳೆದು ಸುಮಾರು ಜನ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದೀಯಾ. ನೀನು ಎಷ್ಟೇ ದೊಡ್ಡ ಹೀರೋ ಆದರೂ, ನಿನ್ನಲ್ಲಿರುವ ಮುಗ್ದತೆ ಹಾಗೇ ಇರಲಿ ಎಂದು ನಿರೀಕ್ಷಿಸುತ್ತೀನಿ” ಎಂದಿದ್ದಾರೆ.

ನೀರ್‌ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್‌ ಪ್ರಸಾದ್‌, ಧನಂಜಯ ಅವರಿಗೆ ಆತ್ಮೀಯವಾಗಿ ಶುಭ ಹಾರೈಸಿದ್ದಾರೆ. “ಚಿತ್ರರಂಗದಲ್ಲಿ ಒಂದು ದಶಕದ ಪ್ರಯಾಣ ಮಾಡಿರುವ ಅರಸಿಕೆರೆ ಅಣ್ಣ ನಿಮಗೆ ತುಂಬು ಹೃದಯದ ಅಭಿನಂದನೆಗಳು. ಹೊಸ ಆಯಾಮಗಳನ್ನು ಹೊಂದಿರುವ ಕಥೆ ಮತ್ತು ಪಾತ್ರಗಳನ್ನು ಆಯ್ದುಕೊಂಡು ನಟಿಸಿದೀರಿ. ಜೊತೆಗೆ ಒಳ್ಳೊಳ್ಳೆಯ ಪ್ರಯತ್ನಗಳನ್ನು ಮಾಡಿದ್ದೀರಿ. ಈ ಪ್ರಯಾಣದಲ್ಲಿ ನೀವು ನಟನಾಗಿ, ನಿರ್ಮಾಪಕನಾಗಿ, ಹಂಚಿಕೆದಾರರಾಗಿ ಬೆಳೆದಿದ್ದೀರಿ. ನಿಮ್ಮ ಈ ಸಿನಿಪಯಣ ಸುಖಕರವಾಗಿರಲಿ” ಎಂದಿದ್ದಾರೆ.

ಧನಂಜಯ ಅವರ ಸಿನಿ ಪಯಣವನ್ನು ಮೆಲುಕು ಹಾಕಿರುವ ನಟ ಪೂರ್ಣಚಂದ್ರ ಮೈಸೂರು, “ಧನಂಜಯನ ಸಿನಿಮಾ ಪಯಣ ಶುರುವಾಗಿ 10 ವರ್ಷಗಳಾಗಿವೆ. 10 ವರ್ಷಗಳಲ್ಲಿ 25 ಸಿನಿಮಾಗಳನ್ನು ಮಾಡಿದ್ದಾನೆ. ಮೊನ್ನೆಯಷ್ಟೇ ಆತನನ್ನು ಮೈಸೂರಿನಿಂದ ಬೆಂಗಳೂರಿಗೆ ಟ್ರೈನ್‌ ಹತ್ತಿಸಿದೆನೇನೊ ಎಂಬಂತಿದೆ. ಇಷ್ಟು ವರ್ಷಗಳಲ್ಲಿ ಎದುರಾದ ಎಲ್ಲ ಅಡೆತಡೆಗಳನ್ನು ದಾಟಿ ಚಿತ್ರರಂಗದಲ್ಲಿ ನಟ, ಸಾಹಿತಿ, ನಿರ್ಮಾಪಕನಾಗಿ ಬೆಳೆದು ನಿಂತಿದ್ದಾನೆ. ಹತಾಶೆಯನ್ನು ಕೂಡ ಹೇಗೆ ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂಬುದನ್ನು ಆತನಿಂದ ಕಲಿಯಬೇಕು. ಹತಾಶೆಗಳು ಸಕಾರಾತ್ಮಕ ಪರಿಣಾಮ ಬೀರಿದಾಗ ʼಜಯನಗರ ಫೋರ್ತ್‌ ಬ್ಲಾಕ್‌ʼ, ʼಬಡವ ರಾಸ್ಕಲ್‌ʼ, ʼಹೆಡ್‌ ಬುಷ್‌ʼ ರೀತಿಯ ಸಿನಿಮಾಗಳು ಹುಟ್ಟುತ್ತವೆ ಎಂಬುದನ್ನು ತೋರಿಸಿ ಕೊಟ್ಟಿದ್ದಾನೆ” ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ʼರಾಮಾ ರಾಮಾ ರೇʼ ಖ್ಯಾತಿಯ ನಿರ್ದೇಶಕ ಡಿ ಸತ್ಯ ಪ್ರಕಾಶ್‌ ಕೂಡ ಧನಂಜಯ ಬಗ್ಗೆ ಮಾತನಾಡಿದ್ದು, “ಧನು ನೀವು ಚಿತ್ರರಂಗಕ್ಕೆ ಬಂದು 10 ವರ್ಷ ಕಳೆದಿವೆ. ನಿಮಗೆ ಅಭಿನಂದನೆಗಳು. ನಾವೆಲ್ಲ ಜಯನಗರ ಪೋರ್ತ್‌ ಬ್ಲಾಕ್‌ನಲ್ಲಿ ಸಿನಿಮಾ ಕಥೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದದ್ದು, ಜಯನಗರ ಪೋರ್ತ್‌ ಬ್ಲಾಕ್‌ ಕಿರುಚಿತ್ರದ ತಯಾರಿ ನಡೆಸಿದ್ದು, ನಮ್ಮ ಕನಸುಗಳ ಬಗ್ಗೆ ಮಾತನಾಡುತ್ತಿದ್ದದ್ದು ಎಲ್ಲವೂ ನೆನ್ನೆ, ಮೊನ್ನೆಯ ಹಾಗಿದೆ. ಈ ಹತ್ತು ವರ್ಷಗಳಲ್ಲಿ ತುಂಬಾ ಕೆಲಸ ಮಾಡಿದ್ದೀರಿ. ಹಲವು ಭಾಷೆಗಳಲ್ಲಿ, ಹಲವು ನಟರ ಜೊತೆ ಸಿನಿಮಾ ಮಾಡಿದ್ದೀರಿ. ನೀವು ಕೆಲಸ ಮಾಡಿರುವ ವೇಗವನ್ನು ನೋಡಿದರೆ ಖುಷಿಯಾಗುತ್ತದೆ. ಇನ್ನೂ ಒಳ್ಳೆಯ ಸಿನಿಮಾಗಳನ್ನು ಮಾಡಿ, ನಿಮ್ಮ ಎಲ್ಲ ಕನಸುಗಳ ಈಡೇರಲಿ” ಎಂದು ಶುಭ ಹಾರೈಸಿದ್ದಾರೆ.

ಧನುಂಜಯ ಅವರಿಗೆ ವಿಡಿಯೋ ಮೂಲಕ ಶುಭ ಹಾರೈಸಿರುವ ನಟ ನವೀನ್‌ ಶಂಕರ್‌, “ಧನು ಎಂದರೆ ನನಗೆ ಆತನಲ್ಲಿರುವ ಅತ್ಯದ್ಭುತವಾದ ಕಲಾವಿದನಿಗಿಂತ ಆತನ ಹೃದಯ ವೈಶಾಲ್ಯತೆ ನೆನಪಾಗುತ್ತದೆ. ಯಾವುದೇ ಸಿನಿಮಾ ಹಿನ್ನೆಲೆ, ಹಣದ ಪ್ರಬಾಲ್ಯ, ಯಾರ ಪ್ರಭಾವಳಿಯೂ ಇಲ್ಲದೆ ಕೇವಲ ಪ್ರತಿಭೆಯನ್ನು ನಂಬಿಕೊಂಡು ಎಲ್ಲ ಸವಾಲುಗಳನ್ನು ಎದುರಿಸಿ, ಧನು ನಟನಿಂದ ಸ್ಟಾರ್‌ ನಟನಾಗಿ ಬೆಳೆದು ಬಂದ ಹಾದಿ ಜೊತೆಗಿರುವ ನಮಗೆ ಎಷ್ಟು ಸ್ಫೂರ್ತಿ ನೀಡಿದೆಯೋ ಅದಕ್ಕಿಂತ ಹೆಚ್ಚು ಪರೋಕ್ಷವಾಗಿ ಹಲವರಿಗೆ ಸ್ಫೂರ್ತಿ ತುಂಬಿದೆ. ಆತನ ಸಿನಿ ಪಯಣ ಹಲವರು ಕನಸು ಕಾಣಲು ಸ್ಫೂರ್ತಿಯಾಗಿದೆ. ಕಂಡ ಕನಸನ್ನು ಗಟ್ಟಿಯಾಗಿ ನಂಬಿಕೊಂಡು ಮುನ್ನುಗಲು ಪ್ರೇರಣೆಯಾಗಿದೆ” ಎಂದು ಗೆಳೆಯನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯರಾದ ಶೃತಿ ಹರಿಹರನ್‌, ಸಪ್ತಮಿ ಗೌಡ, ಜನಪ್ರಿಯ ಚಿತ್ರ ಕಲಾವಿದ ಬಾದಲ್‌ ನಂಜುಂಡಸ್ವಾಮಿ, ನಟರಾದ ವಸಿಷ್ಠ ಸಿಂಹ, ಯೋಗಿ, ಪೃಥ್ವಿ ಅಂಬಾರ್‌, ತಮಿಳಿನ ಖ್ಯಾತ ನಿರ್ದೇಶಕ ವಿಜಯ್‌ ಮಿಲ್ಟನ್‌ ಮುಂತಾದವರು ಸೆಲ್ಫೀ ವಿಡಿಯೋಗಳನ್ನು ಹಂಚಿಕೊಂಡು ಡಾಲಿ ಧನಂಜಯ ಅವರಿಗೆ ಶುಭಾಶಯ ಕೋರಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಕ್ಷೇಪಾರ್ಹ ದೃಶ್ಯಗಳಿದ್ದರೆ ಬಿಗ್‌ಬಾಸ್‌ ಪ್ರಸಾರ ನಿಲ್ಲಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

ಮಲಯಾಳಂ ರಿಯಾಲಿಟಿ ಶೋ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಪ್ರಸಾರದ ನಿಯಮಾವಳಿಗಳನ್ನು ಉಲ್ಲಂಘಿಸುವ ಆಕ್ಷೇಪಾರ್ಹ...

ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್‌ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...