ಯೋಗಿ ಕೈತಪ್ಪಿದ ʼರೋಸಿʼ ಟೈಟಲ್‌

Date:

ವಿವಾದಿತ ಟೈಟಲ್‌ ಅರ್ಜುನ್‌ ಜನ್ಯ ಪಾಲು

- Advertisement -

ಶಿವಣ್ಣನ ಚಿತ್ರಕ್ಕೆ ʼರೋಸಿ 45ʼ ಟೈಟಲ್‌ ಫಿಕ್ಸ್‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಸ್ಯಾಂಡಲ್‌ವುಡ್‌ನ ಖ್ಯಾತ ನಟ ಲೂಸ್‌ ಮಾದ ಯೋಗಿ ಇತ್ತೀಚೆಗೆ ತಮ್ಮ 50ನೇ ಚಿತ್ರವನ್ನು ಘೋಷಣೆ ಮಾಡಿದ್ದರು. ಚಿತ್ರಕ್ಕೆ ʼರೋಸಿʼ ಎಂದು ಹೆಸರಿಡಲಾಗಿತ್ತು. ಏಪ್ರಿಲ್‌ 9ರಂದು ಚಿತ್ರದ ಮುಹೂರ್ತ ಕೂಡ ಅದ್ದೂರಿಯಾಗಿ ಜರುಗಿತ್ತು. ಆದರೆ, ಇದೀಗ ಚಿತ್ರದ ಟೈಟಲ್‌ ವಿವಾದಕ್ಕೆ ಕಾರಣವಾಗಿದೆ.

ಯೋಗಿ ನಟನೆಯ ಚಿತ್ರಕ್ಕೆ ʼರೋಸಿʼ ಎಂದು ಹೆಸರಿಟ್ಟಿರುವುದನ್ನು ಪ್ರಶ್ನಿಸಿ ನಿರ್ಮಾಪಕ ರಮೇಶ್‌ ರೆಡ್ಡಿ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದಾರೆ. ಅರ್ಜುನ್‌ ಜನ್ಯ ಮತ್ತು ಶಿವರಾಜ್‌ ಕುಮಾರ್‌ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ರಮೇಶ್‌ ರೆಡ್ಡಿ ಬಂಡವಾಳ ಹೂಡಿದ್ದು, ʼ45ʼ ಹೆಸರಿನಲ್ಲಿ ಈಗಾಗಲೇ ಜನಪ್ರಿಯಗೊಂಡಿರುವ ಈ ಚಿತ್ರಕ್ಕಾಗಿ ʼರೋಸಿ 45ʼ ಎಂಬ ಟೈಟಲ್‌ ಅನ್ನು ಕಳೆದ ಏಪ್ರಿಲ್‌ 6ರಂದು ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದರು ಎನ್ನಲಾಗಿದೆ.

ಯೋಗಿ ನಟಿಸುತ್ತಿರುವ ಚಿತ್ರಕ್ಕೂ ʼರೋಸಿʼ ಹೆಸರಿನ ಟೈಟಲ್‌ ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ರಮೇಶ್‌ ರೆಡ್ಡಿ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದರು. ಟೈಟಲ್‌ ವಿವಾದಕ್ಕೆ ಸಂಬಂಧಿಸಿ ಇದೀಗ ತೀರ್ಮಾನ ಪ್ರಕಟಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್‌, “ರಮೇಶ್‌ ರೆಡ್ಡಿ ಅವರು ತಮ್ಮ ಸೂರಜ್‌ ಪ್ರೊಡಕ್ಷನ್‌ ಮೂಲಕ ಮೊದಲು ʼರೋಸಿ 45ʼ ಟೈಟಲ್‌ ಅನ್ನು ನೋಂದಣಿ ಮಾಡಿಸಿದ್ದಾರೆ. ಅದಾದ ನಂತರ ಯೋಗಿ ಅವರ ಚಿತ್ರಕ್ಕೆ ʼರೋಸಿʼ ಎಂದು ಹೆಸರಿಡಲಾಗಿದೆ. ಈಗಾಗಲೇ ನೋಂದಣಿ ಆಗಿರುವ ಟೈಟಲ್‌ ಅನ್ನು ಸಂಬಂಧಪಟ್ಟವರ ಅನುಮತಿ ಇಲ್ಲದೆ ಮತ್ತೊಬ್ಬರು ಬಳಸುವ ಹಾಗಿಲ್ಲ. ನೋಂದಣಿಯಾಗಿರುವ ಟೈಟಲ್‌ನ ಹಿಂದೆ ಅಥವಾ ಮುಂದೆ ಬೇರೆ ಹೆಸರು ಸೇರಿಸಿಯೂ ಹೊಸದಾಗಿ ನೋಂದಣಿ ಮಾಡುವ ನಿಯಮವಿಲ್ಲ” ಎಂದಿದ್ದಾರೆ. ಹೀಗಾಗಿ ಯೋಗಿ ಅವರ ನೂತನ ಚಿತ್ರಕ್ಕೆ ʼರೋಸಿʼ ಹೆಸರಿನ ಟೈಟಲ್‌ ಬಳಸದಂತೆ ಸೂಚಿಸಿದ್ದಾರೆ.

ಏಪ್ರಿಲ್‌ 9ರಂದು ಯೋಗಿ ನಟನೆಯ 50ನೇ ಚಿತ್ರ ಸೆಟ್ಟೇರಿತ್ತು. ಖ್ಯಾತ ನಟ ಡಾಲಿ ಧನಂಜಯ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ʼಹೆಡ್‌ ಬುಷ್‌ʼ ಖ್ಯಾತಿಯ ನಿರ್ದೇಶಕ ಶೂನ್ಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಿನಿ ರಸಿಕರ ಗಮನ ಸೆಳೆಯುತ್ತಿದೆ ʼರಾಘುʼ ಟ್ರೈಲರ್‌

ಅರ್ಜುನ್‌ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಈ ಹಿಂದೆ ʼ45ʼ ಎಂದಷ್ಟೇ ಹೆಸರಿಡಲಾಗಿತ್ತು. ಇದೀಗ ʼರೋಸಿ 45ʼ ಎಂದು ಬದಲಿಸಲಾಗಿದೆ. ಈ ಚಿತ್ರದಲ್ಲಿ ಹಿರಿಯ ನಟ ಶಿವರಾಜ್‌ ಕುಮಾರ್‌, ಉಪೇಂದ್ರ ಮತ್ತು ರಾಜ್‌ ಬಿ ಶೆಟ್ಟಿ ಜೊತೆಯಾಗಿ ನಟಿಸಲಿದ್ದಾರೆ. ಸದ್ಯದಲ್ಲೇ ಚಿತ್ರದ ಶೂಟಿಂಗ್‌ ಪ್ರಾರಂಭವಾಗಲಿದೆ.

971ebeff7523e71323fef3c7b5b2eb494a70a04dcd51867b0c522de0b1aa64b7?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಲಯಾಳಂ ‘ಅಮ್ಮ’ ಸಂಘಟನೆಯಲ್ಲಿ ಬದಲಾವಣೆ ಗಾಳಿ: ಉಪಾಧ್ಯಕ್ಷರಾಗಿ ನಟ ಸಿಜೋಯ್ ವರ್ಗೀಸ್, ನಟಿ ಆಶಾ ಅರವಿಂದ್ ನೇಮಕ

ಸಾಲು ಸಾಲು ವಿವಾದಗಳು ಮತ್ತು ರಾಜೀನಾಮೆಗಳಿಂದ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಮಲಯಾಳಂ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು...